Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಿಮ್ಮ ಪ್ರೀತಿ ಪಾತ್ರರಿಗೆ ನೀವಿನ್ನೂ ಗಿಫ್ಟ್ ಕೊಟ್ಟಿಲ್ವಾ? ಹಾಗಿದ್ದರೇ ಈ ಸ್ಟೋರಿ ಓದಿ.!
ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಿರಾ? ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಉಡುಗೊರೆ ಕೊಟ್ಟು ಅವರ ಮನಸ್ಸನ್ನು ಖುಷಿ ಪಡಿಸಿದ್ದಿರಾ? ಇನ್ನೂ ಕೊಟ್ಟಿಲ್ವಾ? ಏನಾದರೂ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೇ ನಿಮ್ಮ ಹುಡುಗ ಅಥವಾ ಹುಡಗಿಗೆ ಈ ಗ್ಯಾಜೆಟ್ಗಳನ್ನು ಉಡುಗೊರೆಯಾಗಿ ನೀಡಿ. ಈ ವ್ಯಾಲೆಂಟೈನ್ಸ್ ಡೇ ಅವರಿಗೆ ಇನ್ನಷ್ಟು ಖುಷಿ ಕೊಡಬಹುದು.!
ಹೌದು, ಬೆಳಿಗ್ಗೆ ಸ್ಮಾರ್ಟ್ಫೋನಿನ ಪವರ್ ಬಟನ್ ಆನ್ ಮಾಡುವ ಮೂಲಕ ಗ್ಯಾಜೆಟ್ಗಳ ಬಳಕೆ ಶುರುವಾಗುತ್ತದೆ. ಪ್ರಸ್ತುತ ಗ್ಯಾಜೆಟ್ಗಳು ನಮ್ಮ ದಿನನಿತ್ಯದ ಅಗತ್ಯ ಎಂದೆನಿಸಿಕೊಂಡಿವೆ. ಹೀಗಾಗಿ ಗ್ಯಾಜೆಟ್ಗಳನ್ನು ಬಳಸದೇ ಇರಲು ಆಗದು. ನಿಮ್ಮ ಪ್ರೀತಿಪಾತ್ರರಿಗೆ ಅಗತ್ಯವಾಗುವ ಚಿಕ್ಕ ಪುಟ್ಟ ಗ್ಯಾಜೆಟ್ಗಳನ್ನು ಉಡುಗೊರೆಯಾಗಿ ನೀಡುವುದರೊಂದಿಗೆ ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಿ. ಹಾಗಾದರೇ ಈ ಕೆಳಗಿನ 5 ಗ್ಯಾಜೆಟ್ಗಳನ್ನು ನೀವು ಉಡುಗೊರೆಯಾಗಿ ನೀಡಬಹುದು ಅವು ಯಾವವು ಎಂಬುದನ್ನು ನೋಡೋಣ ಬನ್ನಿ.

ಪೆನ್ ಡ್ರೈವ್
ಪೆನ್ಡ್ರೈವ್ ನೋಡಲು ಅತೀ ಚಿಕ್ಕದಾಗಿದ್ದರು ಅತ್ಯಂತ ಮುಖ್ಯವಾದ ದತ್ತಾಂಶಗಳನ್ನು ತನ್ನಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತದೆ. ಫೋಟೋಗಳನ್ನು, ವಿಡಿಯೋಗಳನ್ನು, ನೋಟ್ಸ್, ಆಫೀಸ್ ಫೈಲ್ಸ್ ಹೀಗೆ ಹಲವು ದತ್ತಾಂಶಗಳನ್ನು ಇರಿಸಿಕೊಳ್ಳಲು ಇದು ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುತ್ತದೆ. ಇದರಲ್ಲಿ 4GB, 8GB, 16GB, 32GB ಇನ್ನೂ ಹೆಚ್ಚಿನ ಸಂಗ್ರಹ ಸಾಮರ್ಥ್ಯದ ಪೆನ್ಡ್ರೈವ್ಗಳು ಸಿಗುತ್ತವೆ. ಮತ್ತು ವಿವಿಧ ಡಿಸೈನ್ಗಳಲ್ಲಿಯೂ ಲಭ್ಯ ಇವೆ.

ಹೆಡ್ಫೋನ್
ಪ್ರವಾಸ ಮಾಡುವಾಗ, ಏಕಾಂತದಲ್ಲಿ ಸಂಗೀತ ಕೇಳಲು ಒಳ್ಳೇಯ ಜತೆಗಾರ ಈ ಹೆಡ್ಫೋನ್. ನಿಮ್ಮ ಪ್ರೀತಿ ಪಾತ್ರರು ಮ್ಯೂಸಿಕ್ ಇಷ್ಟಪಡುವವರಾಗಿದ್ದರೇ ಅವರಿಗೆ ಹೆಡ್ಫೋನ್ ಉಡುಗೊರೆಯಾಗಿ ನೀಡಬಹುದು, ವಿವಿಧ ಬೆಲೆಗಳಲ್ಲಿ, ತರಹೆವಾರಿ ಕಲರ್ಗಳ ಆಯ್ಕೆಗಳಲ್ಲಿ ಹೆಡ್ಫೋನ್ಗಳ ದೊರೆಯುತ್ತವೆ.

ಸ್ಮಾರ್ಟ್ವಾಚ್
ನಿಮ್ಮವರ ಜೇಬಲ್ಲಿ ಅಥವಾ ಬ್ಯಾಗ್ಲ್ಲಿ ಸ್ಮಾರ್ಟ್ಫೋನ್ ಇದ್ದ ಮೇಲೆ ಅವರ ಕೈಗೊಂದು ಸ್ಮಾರ್ಟ್ವಾಚ್ ಇಲ್ಲದಿದ್ದರೇ ಹೇಗೆ. ಸೋ ಸ್ಮಾರ್ಟ್ವಾಚ್ ಅನ್ನು ಸಹ ಗಿಫ್ಟ್ ನೀಡಬಹುದು. ಜನಪ್ರಿಯ ಇ ಕಾಮರ್ಸ್ ಜಾಲತಾಣಗಳಲ್ಲಿ ಕಡಿಮೆ ದರದಲ್ಲಿ ಅನೇಕ ಸ್ಮಾರ್ಟ್ವಾಚ್ ಗಳು ದೊರೆಯುತ್ತವೆ. ಹೀಗಾಗಿ ಸ್ಮಾರ್ಟ್ವಾಚ್ ಉಡುಗೊರೆ ಕೊಡಲು ಒಂದು ಸ್ಮಾರ್ಟ್ ಆಯ್ಕೆ ಎನ್ನಬಹುದು.

ಬ್ಲೂಟೂತ್ ಸ್ಪೀಕರ್
ಇಂದಿನ ಬಹುತೇಕ ಗ್ಯಾಜೆಟ್ಗಳು ವೈಯರ್ ಲೆಸ್ ಆಗಿದ್ದು, ಬ್ಲೂಟೂತ್ ಸಂಪರ್ಕದ ಮೂಲಕ ಕೆಲಸ ಮಾಡುತ್ತವೆ. ಅವುಗಳಲ್ಲಿ ಬ್ಲೂಟೂತ್ ಸ್ಪೀಕರ್ ಕೂಡಾ ಒಂದಾಗಿದ್ದು, ಹೀಗಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಬ್ಲೂಟೂತ್ ಸ್ಪೀಕರ್ ಅನ್ನು ಸಹ ಉಡುಗೊರೆಯಾಗಿ ನೀಡಬಹುದು.

ಪವರ್ ಬ್ಯಾಂಕ್
ನಿಮ್ಮ ಪ್ರೀತಿ ಪಾತ್ರರ ಬಳಿ ಈಗಾಗಲೇ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ, ಆದರೆ ಬಹುಶಃ ಪವರ್ ಬ್ಯಾಂಕ್ ಇರುವುದಿಲ್ಲ ಹೀಗಾಗಿ ಉತ್ತಮ ಪವರ್ ಬ್ಯಾಂಕ್ ಒಂದನ್ನು ಉಡುಗೊರೆಯಾಗಿ ನೀಡಬಹುದು. ಕೆಲವೊಂದು ಪರಿಸ್ಥಿತಿಯಲ್ಲಿ ಅವರ ಸ್ಮಾರ್ಟ್ಫೋನ್ನಲ್ಲಿ ಚಾರ್ಜ್ ಖಾಲಿ ಆದಾಗ ಪವರ್ಬ್ಯಾಂಕ್ ಅವರಿಗೆ ನೆರೆವಾಗಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090