Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ 08-12-2019
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
280 ಕೋಟಿಗೆ ಈ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ 'ಗೂಗಲ್'!!
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ತರಹ ಗೂಗಲ್ ಕಾಲಿಡದ ಕ್ಷೇತ್ರವಿಲ್ಲ ಎನ್ನಬಹುದು. ಏಕೆಂದರೆ, ಗೂಗಲ್ ಸಂಸ್ಥೆ ಇದೀಗ ಮತ್ತೊಂದು ಹೊಸ ಪ್ರಯತ್ನದಲ್ಲಿದ್ದು, ಅತೀ ಶೀಘ್ರದಲ್ಲಿಯೇ ಮತ್ತೊಂದು ಪ್ರಮುಖ ತಂತ್ರಜ್ಞಾನ ಕಂಪನಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತಯಾರಾಗಿದೆ. ಹೌದು, ಗೂಗಲ್ ಬರೋಬ್ಬರಿ 280 ಕೋಟಿ ಮೊತ್ತಕ್ಕೆ ಒಂದು ಪ್ರಮುಖ ಕಂಪನಿಯ ತಂತ್ರಜ್ಞಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರೆಡಿಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಕ್ಯಾಲಿಫೊರ್ನಿಯಾದ ಪ್ರಸಿದ್ಢ ಸ್ಮಾರ್ಟ್ವಾಚ್ ತಯಾರಿಕಾ ಕಂಪನಿ ಫ್ಯಾಶನ್ ಮತ್ತು ಆಕ್ಸೆಸರಿ ಸಮೂಹಕ್ಕೆ ಸೇರಿದ 'ಪೊಸಿಲ್' ಒಂದು ಪ್ರಸಿದ್ಢ ಸ್ಮಾರ್ಟ್ವಾಚ್ ಬ್ರ್ಯಾಂಡ್ ಆಗಿದ್ದು, .ಈ ಸ್ಮಾರ್ಟ್ವಾಚ್ನ ತಂತ್ರಜ್ಞಾನವನ್ನು ಗೂಗಲ್ 280 ಕೋಟಿ ಮೊತ್ತಕ್ಕೆ ಖರೀದಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿಯೂ ಸಹ ಗೂಗಲ್ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಜನಪ್ರಿಯವಿರುವ ಪೊಸಿಲ್ ಸ್ಮಾರ್ಟ್ವಾಚ್ನ ಪಾಲುದಾರಿಕೆ ಪಡೆಯುವ ಮೂಲಕ, ಜನಪ್ರಿಯ ಸ್ಮಾರ್ಟ್ವಾಚ್ ಸಂಸ್ಥೆಗಳಾದ ಆಪಲ್, ಫಿಟ್ಬಿಟ್ ಮತ್ತು ಇತರೆ ಕೆಲವು ಪ್ರಮುಖ ಸ್ಮಾರ್ಟ್ವಾಚ್ ಕಂಪನಿಗಳಿಗೆ ಭಾರಿ ಪೈಪೋಟಿ ನೀಡಲು ಗೂಗಲ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೊಸಿಲ್ ಸ್ಮಾರ್ಟ್ವಾಚ್ ಜನರಿಗೆ ಉತ್ತಮ ಉತ್ಪನ್ನವು ಹಾಗೂ ತ್ವರಿತವಾಗಿ ಮಾಹಿತಿ ನೀಡುವ ಸಾಧನಗಳಾಗಿವೆ ಎಂದು ಗೂಗಲ್ ಹೇಳಿದೆ.
ಪೊಸಿಲ್ ಸ್ಮಾರ್ಟ್ವಾಚಿನ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ನಾವು ಈಗ ಹೊಸ ಪಾಲುದಾರ ಆಗಿರುವ ಗೂಗಲ್ ಸಂಸ್ಥೆಯ ಜತೆಗೂಡಿ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಗೊಳಿಸಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತೆವೆ ಎಂದು ಪೊಸಿಲ್ ಸ್ಮಾರ್ಟ್ವಾಚಿನ ತಾಂತ್ರಿಕ ಅಧಿಕಾರಿ ಗ್ರೇಗ್ ಮೆಕ್ವೆವ್ ತಿಳಿಸಿದ್ದಾರೆ. ಈ ಕೆಳಗೆ ಕೆಲವು ಪ್ರಸಿದ್ಢ ಸ್ಮಾರ್ಟ್ವಾಚ್ಗಳ ಬಗ್ಗೆ ಕಿರು ಮಾಹಿತಿ ನೀಡಿದ್ದೇವೆ, ಅವುಗಳ ಬಗ್ಗೆ ಸ್ವಲ್ಪ ತಿಳಿಯಿರಿ.

ಆಪಲ್ ಸ್ಮಾರ್ಟ್ವಾಚ್ 4
ಜನಪ್ರಿಯ ಆಪಲ್ ಸಂಸ್ಥೆಯ ಈ ಸ್ಮಾರ್ಟ್ವಾಚ್ 1.78 ಇಂಚಿನ ಓಎಲ್ಇಡಿ ಡಿಸ್ಪ್ಲೇ ಹೊಂದಿದೆ. 'ವಾಚ್ಸ್OS 5' ಆಪ್ರೇಟಿಂಗ್ ಸಿಸ್ಟಂ ಒಳಗೊಂಡಿರುವ ಈ ಸ್ಮಾರ್ಟ್ವಾಚ್ ವಾಟರ ರೆಸಿಸ್ಟೆನ್ಸ್ ಆಗಿದೆ. ಇದರೊಂದಿಗೆ 16GB ಆನಬೋರ್ಡ್ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಎರಡು ದಿನಗಳವರೆಗೆ ಬ್ಯಾಟರಿ ಬಾಳುವ ಸಾಮರ್ಥ್ಯವನ್ನು ಹೊಂದಿದೆ. ವೈ-ಫೈ, ಬ್ಲೂಟೂತ್ ಕನೆಕ್ಟಿವಿಟಿಗಳನ್ನು ಹೊಂದಿದೆ.

ಫೀಟ್ಬಿಟ್ ವರ್ಸಾ
ಉತ್ತಮ ಗುಣಮಟ್ಟದಿಂದ ಫೀಟ್ಬಿಟ್ ಸ್ಮಾರ್ಟ್ವಾಚ್ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿದ್ದು, ಈ ಫೀಟ್ಬಿಟ್ನ ವರ್ಸಾ ಸ್ಮಾರ್ಟ್ವಾಚ್ ಚಿಕ್ಕದಾದ 'TBC, 1000 nits'ಡಿಸ್ಪ್ಲೇ ಹೊಂದಿದೆ. ಫೀಟ್ಬಿಟ್ OS ಮತ್ತು ಡ್ಯುಯಲ್ ಕೋರ್ 1.0GHz ಸಾಮರ್ಥ್ಯದ ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುತ್ತದೆ. ವಾಟರ್ ರೆಸಿಸ್ಟೆನ್ಸ್ ನೊಂದಿಗೆ, ಮೂರು ದಿನ ಬಾಳುವ ಉತ್ತಮ ಬ್ಯಾಟರಿ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ ಸ್ಮಾರ್ಟ್ವಾಚ್
ಸ್ಯಾಮ್ಸಂಗ್ ಸಂಸ್ಥೆಯ ಈ ಸ್ಮಾರ್ಟ್ವಾಚ್ 1.2 ಇಂಚಿನ ಸೂಪರ್ ಆಮೊಲ್ ಡಿಸ್ಪ್ಲೇ ಹೊಂದಿದ್ದು, ಟೈಜನ್ ಓಎಸ್ ಇದರಲ್ಲಿದೆ. ಜತೆಗೆ ಡ್ಯುಯಲ್ ಕೋರ್ 1.15GHz ಪ್ರೊಸೆಸರ್ ಅನ್ನು ಒಳಗೊಂಡಿದೆ. ನಾಲ್ಕು ದಿನ ಬಾಳಿಕೆ ಬರುವ ಪವರ್ಫುಲ್ ಬ್ಯಾಟರಿ ಹೊಂದಿದ್ದು, ಇದರೊಂದಿಗೆ ವೈಯರ್ಲೆಸ್ ಚಾರ್ಜಿಂಗ್ ಸೌಲಭ್ಯವಿದೆ. ವೈ-ಫೈ, ಬ್ಲೂಟೂತ್ ಕನೆಕ್ಟಿವಿಟಿಗಳನ್ನು ಈ ಸ್ಮಾರ್ಟ್ವಾಚ್ನಲ್ಲಿ ಕಾಣಬಹುದು.

ಟಿಕ್ವಾಚ್ ಪ್ರೋ
ಈ ಸ್ಮಾರ್ಟ್ವಾಚ್ಎರಡು ಡಿಸ್ಪ್ಲೇ ಹೊಂದಿದ್ದು, OLED ಜತೆಗೆ ಮೇಲ್ಬಾಗದಲ್ಲಿ ಟ್ರಾನ್ಸ್ಫರೆಂಟ್ ಎಲ್ಸಿಡಿ ಇದ್ದು, ಇದು ಟೈಮ್ ಮತ್ತು ನಿಮ್ಮ ಹೃದಯ ಬಡಿತದ ರೇಟಿಂಗ್ಸ್ ತಿಳಿಸುತ್ತದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ ವೇರ್2100 ಪ್ರೊಸೆಸರ್ ಹೊಂದಿದೆ. ಎರಡು ದಿನ ಬ್ಯಾಟರಿ ಬಾಳುತ್ತೆ ಮತ್ತು ಎಸೆನ್ಸಿಯಲ್ ಮೋಡ್ ನಿಂದ ಮಾಡುವ ಆಯ್ಕೆಯಿದೆ ಇದರಿಂದ ಬ್ಯಾಟರಿ ಬಾಳಿಗೆ ದೀರ್ಘಕಾಳ ಬರುತ್ತೆ. ಇದರೊಂದಿಗೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಪಿನ್ ನೀಡಿದ್ದಾರೆ.

ಮಿಸ್ಫಿಟ್ ವಪೊರಾ
1.3 ಇಂಚಿನ ಅಮೊಲ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ವಾಚ್ ಡ್ಯುಯಲ್ ಕೋರ್ 1.0GHz ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಇದರ ಆನ್ಬೋರ್ಡ್ ಸಂಗ್ರಹ ಸಾಮರ್ಥ್ಯ 4GB ಆಗಿದ್ದು, ಎರಡು ದಿನ ಬಾಳುವ ಸಾಮರ್ಥ್ಯವನ್ನು ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್ವಾಚ್ ವೈಯರ್ಲೆಸ್ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ. ವೈ-ಫೈ, ಬ್ಲೂಟೂತ್ ಕನೆಕ್ಟಿವಿಟಿಗಳನ್ನು ಫೀಚರ್ಸ್ಗಳನ್ನು ಈ ಸ್ಮಾರ್ಟ್ವಾಚ್ನಲ್ಲಿ ಕಾಣಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090