ಸೋನಿ WI-1000XM2 ಹೆಡ್‌ಫೋನ್ ವಿಮರ್ಶೆ: ಸ್ಮಾರ್ಟ್ ನಾಯಿಸ್‌ಲೆಸ್‌ ಹೆಡ್‌ಫೋನ್!

|

ಜನಪ್ರಿಯ ಸೋನಿ ಕಂಪನಿಯು ಹೊಸದಾಗಿ ಮಾರುಕಟ್ಟೆಗೆ WI-1000XM2 ಹೆಸರಿನ ವಾಯರ್‌ಲೆಸ್ ನಾಯಿಸ್‌ ಕ್ಯಾನ್ಸಲೇಷನ್ ಹೆಡ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಸೋನಿ ಹೆಡ್‌ಫೋನ್‌ಗಳಿಗೆ ಡಿಮ್ಯಾಂಡ್ ಇದ್ದೆ ಇದೆ, ಆದ್ರೆ ಇದೀಗ ಈ ಹೊಸ ಹೆಡ್‌ಫೋನ್ ಈಗಾಗಲೇ ಮ್ಯೂಸಿಕ್ ಪ್ರಿಯರ ಗಮನಸೆಳೆದಿದ್ದು, ಈ ಹೆಡ್‌ಫೋನ್ ಮಾರುಕಟ್ಟೆಯಲ್ಲಿ ಸೋನಿಯ ಮತ್ತಷ್ಟು ಸದ್ದು ಮಾಡುವಂತಾಗಿದೆ.

ಸೋನಿ ಆಡಿಯೊ

ಸೋನಿ ಆಡಿಯೊ ಸಂಸ್ಥೆಯ WI-1000XM2 ಹೆಸರಿನ ವಾಯರ್‌ಲೆಸ್ ನಾಯಿಸ್‌ ಕ್ಯಾನ್ಸಲೇಷನ್ ಹೆಡ್‌ಫೋನ್ ಹಲವು ವಿಶೇಷ ಫೀಚರ್ಸ್‌ಗಳನ್ನು ಪಡೆದಿದೆ. ಅವುಗಳಲ್ಲಿ ಅಡ್ವಾನ್ಸ್‌ ನಾಯಿಸ್‌ ಕ್ಯಾನ್ಸಲೇಷನ್ ತಂತ್ರಜ್ಞಾನ, ಜೊತೆಗೆ ಕ್ವಿಕ್ ಚಾರ್ಜಿಂಗ್ ಸೌಲಭ್ಯ ಮತ್ತು ಬ್ಯಾಟರಿ ಬಾಳಿಕೆಯು ಫೀಚರ್ಸ್‌ಗಳು ಹೆಚ್ಚು ಅಟ್ರ್ಯಾಕ್ಟ್‌ ಮಾಡುವಂತಿವೆ. ಇನ್ನು ಈ ಹೆಡ್‌ಫೋನ್ ನೆಕ್‌ಬ್ಯಾಂಡ್‌ ರಚನೆಯನ್ನು ಹೊಂದಿದೆ. ಸೋನಿಯ ಈ ಹೆಡ್‌ಫೋನ್ ಕಾರ್ಯವೈಖರಿ ಹೇಗಿದೆ ಅನ್ನೊದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸೈನ್ ಹೇಗಿದೆ

ಡಿಸೈನ್ ಹೇಗಿದೆ

ಸೋನಿ WI-1000XM2 ಹೆಡ್‌ಫೋನ್ ಬಳಕೆದಾರರಿಗೆ ಅನುಕೂಲಕರವಾಗದ ಸೌಂಡ್ ಅಡ್ಜೆಸ್ಟ್ ಮಾಡುವ ಆಯ್ಕೆಯನ್ನು ಹೊಂದಿದೆ. ಇನ್ನು ಈ ಡಿವೈಸ್ ನೆಕ್‌ಬ್ಯಾಂಡ್ ಡಿಸೈನ್‌ನಲ್ಲಿದ್ದು, ಅತೀ ಹಗುರವಾಗಿದ ರಚನೆಯನ್ನು ಪಡೆದುಕೊಂಡಿದೆ. ಈ ಹೆಡ್‌ಫೋನ್ ಬಡ್ಸ್‌ಗಳು ಬಳಕೆದಾರರ ಕಿವಿಗಳಿಗೆ ಕಂಫರ್ಟ್‌ ಆಗಿ ಫಿಟ್ ಆಗುವಂತಿವೆ. 3.5mm AUX ಫೋರ್ಟ್‌ ಅನುಕೂಲವನ್ನು ಒಳಗೊಂಡಿದೆ. ಹೆಡ್‌ಫೋನ್ ಮೇಲ್ಭಾಗದಲ್ಲಿ ಸಿಲಿಕಾನ್ ಮತ್ತು ರಬ್ಬರ್ ಮೆಟಿರಿಯಲ್‌ ಕಾಣಬಹುದಾಗಿದೆ.

ಸೌಂಡ್ ಗುಣಮಟ್ಟ

ಸೌಂಡ್ ಗುಣಮಟ್ಟ

ಈಗಾಗಲೇ ಸೋನಿ ಸೌಂಡ್‌ಗೆ ಮ್ಯೂಸಿಕ್ ಪ್ರಿಯರು ಫಿದಾ ಆಗಿದ್ದಾರೆ. ಈ ಹೆಡ್‌ಫೋನಿನಲ್ಲಿಯು ಅದೇ ಗುಣಮಮಟ್ಟವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಈ ಉತ್ಪನ್ನವು ಡ್ಯುಯಲ್ ನಾಯಿಸ್‌ ಕ್ಯಾನ್ಸಲೇಷನ್ ತಂತ್ರಜ್ಞಾನ್ ಹೊಂದಿದ್ದು, ಯಾವುದೇ ಬಾಹ್ಯ ಶಬ್ದ ಕೇಳಿಸಿದಂತಹ ರಚನೆಯನ್ನು ಪಡೆದಿದುಕೊಂಡಿದೆ. ಇದುವೇ ಇದರ ಪ್ಲಸ್ ಪಾಯಿಂಟ್ ಆಗಿದೆ. ಆಡಿಯೋ ಔಟ್‌ಪುಟ್‌ ಕೇಳುಗರಿಗೆ ಅತ್ಯುತ್ತಮ ಫೀಲ್ ಒದಗಿಸಲಿದೆ.

ವಾಯಿಸ್ ಅಸಿಸ್ಟಂಟ್ ಫೀಚರ್

ವಾಯಿಸ್ ಅಸಿಸ್ಟಂಟ್ ಫೀಚರ್

ಸೋನಿಯ ಈ ಹೆಡ್‌ಫೋನ್ ಗೂಗಲ್‌ ಅಸಿಸ್ಟಂಟ್, ಅಮೆಜಾನ್ ಅಲೆಕ್ಸಾ, ಮತ್ತು Hi-Res ಆಡಿಯೊ ಸೌಲಭ್ಯಗಳನ್ನು ಇನ್‌ಬಿಲ್ಟ್‌ ಆಗಿ ಪಡೆದಿದೆ. ಹೀಗಾಗಿ ಬಳಕೆದಾರರು ಸುಲಭವಾಗಿ ವಾಯಿಸ್‌ ಮೂಲಕವೇ ಹೆಡ್‌ಫೋನ್‌ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಬಹುದಾಗಿದೆ. ವ್ಯಾಲ್ಯೂಮ್ ನಿಯಂತ್ರಣ, ಹಾಡು ಬದಲಿಸುವುದು, ಪ್ಲೇ, ಸ್ಟಾಪ್ ಆಯ್ಕೆಗಳನ್ನು ಕಂಟ್ರೋಲ್ ಮಾಡಲು ನೆರವಾಗಲಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಈ ಹೆಡ್‌ಫೋನ್ ಬ್ಯಾಟರಿಯು 10 ಗಂಟೆ ಬ್ಯಾಕ್‌ಅಪ್ ಒದಗಿಸುವ ಸಾಮರ್ಥ್ಯದಲ್ಲಿದ್ದು, ಕೇವಲ ಹತ್ತು ನಿಮಿಷದ ಚಾರ್ಜ್ ಸುಮಾರು 80 ನಿಮಿಷಗಳ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುತ್ತದೆ. ಇದರೊಂದಿಗೆ ಯುಎಸ್‌ಬಿ ಸಿ ಪೋರ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು ಪ್ರಮುಖ ಅಂಶವಾಗಿದೆ. ಇತರೆ ಹೆಡ್‌ಫೋನ್‌ಗಳಿಗೆ ಹೋಲಿಸಿದರೇ ಬ್ಯಾಟರಿ ಲೈಫ್ ಉತ್ತಮ ಎಂದು ಹೇಳಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿಯ ಈ ಹೊಸ WI-1000XM2 ಹೆಡ್‌ಫೋನ್ ಕೇವಲ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಈ ಡಿವೈಸ್ ಬೆಲೆಯು 21,990ರೂ. ಆಗಿದೆ. ಅಧಿಕೃತ ಸೋನಿ ಸೆಂಟರ್‌ಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದ್ದು, ಅಲ್ಲದೇ ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿಯೂ ಸಹ ಖರೀದಿಗೆ ಲಭ್ಯವಿದೆ.

ಕೊನೆಯ ಮಾತು

ಕೊನೆಯ ಮಾತು

ಸೋನಿ ಸಂಸ್ಥೆಯು ಈ ಹೆಡ್‌ಫೋನ್ ಉತ್ತಮ ನಾಯಿಸ್‌ಲೆಸ್‌ ಹೆಡ್‌ಫೋನ್ ಅನ್ನಬಹುದು. ಇನ್ನು ಸೋನಿಯ ಸೌಂಡ್ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಈ ಹೆಡ್‌ಫೋನ್‌ ಸೌಂಡ್‌ ಸಹ ಬೆಸ್ಟ್‌ ಆಗಿದ್ದು, ಮ್ಯೂಸಿಕ್ ಪ್ರಿಯರನ್ನು ಬಹುಬೇಗನೆ ಆಕರ್ಷಿಸಲಿದೆ. ಆದರೆ ಬೆಲೆ ಸ್ಪಲ್ಪ ಹೆಚ್ಚು ಅನಿಸುವುದನ್ನು ಹೊರತುಪಡಿಸಿದರೇ ಸೋನಿಯ ಈ ಹೆಡ್‌ಫೋನ್ ಉತ್ತಮ ಎಂದು ಹೇಳಬಹುದು.

Most Read Articles
Best Mobiles in India

English summary
Sony WI-1000XM2 is made of some soft flexible silicone. It feels very sturdy and built with no compromises in strength. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X