ಶಿಯೋಮಿಯ 'ಮಿ ಸ್ಮಾರ್ಟ್ ಬ್ಯಾಂಡ್ 5' ಖರೀದಿಗೆ ಯೋಗ್ಯವೇ?

|

ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ ಬ್ಯಾಂಡ್‌/ಸ್ಮಾರ್ಟ್‌ ವಾಚ್‌ ಡಿವೈಸ್‌ಗಳು ಬೇಡಿಕೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಕಂಪನಿಗಳು ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಸಾಗಿವೆ. ಅವುಗಳ ಶಿಯೋಮಿ ಕಂಪನಿಯು ಹಲವು ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳನ್ನು ಲಾಂಚ್ ಮಾಡಿದ್ದು, ಆ ಪೈಕಿ ಮಿ ಬ್ಯಾಂಡ್‌ 5 ಲೆಟೆಸ್ಟ್‌ ಡಿವೈಸ್‌ ಆಗಿದೆ. ಆದರೆ ಈ ಡಿವೈಸ್‌ ಖರೀದಿಗೆ ಉತ್ತಮವೇ?

ಫೀಚರ್ಸ್‌ಗಳ

ಹೌದು, ಭಿನ್ನ ಫೀಚರ್ಸ್‌ಗಳ ತರಹೇವಾರಿ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಖರೀದಿರುವ ಗ್ರಾಹಕರು ಉತ್ತಮ ಬ್ರ್ಯಾಂಡ್‌ನ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ ಬ್ಯಾಂಡ್‌ ಖರೀದಿಗೆ ಮುಂದಾಗುವುದೇ ಹೆಚ್ಚು. ಶಿಯೋಮಿಯ ಹೊಸ ಮಿ ಬ್ಯಾಂಡ್‌ 5 ಡಿವೈಸ್‌ ಹಲವು ಆಕರ್ಷಕ ಫೀಚರ್ಸ್‌ಗಳಿಂದ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್‌ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮಿ ಸ್ಮಾರ್ಟ್ ಬ್ಯಾಂಡ್ 5-ಡಿಸ್‌ಪ್ಲೇ

ಮಿ ಸ್ಮಾರ್ಟ್ ಬ್ಯಾಂಡ್ 5-ಡಿಸ್‌ಪ್ಲೇ

ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್‌ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು ಮಿ ಸ್ಮಾರ್ಟ್ ಬ್ಯಾಂಡ್ 4 ಗಿಂತ ಸುಮಾರು 20% ಹೆಚ್ಚಿನ ಡಿಸ್‌ಪ್ಲೇ ಏರಿಯಾವನ್ನು ಹೊಂದಿದೆ. ಹೀಗಾಗಿ ಡಿಸ್‌ಪ್ಲೇ ಉತ್ತಮ ಅನಿಸಲಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5-ಸ್ಪೆಷಲ್ ಫೀಚರ್ಸ್‌

ಮಿ ಸ್ಮಾರ್ಟ್ ಬ್ಯಾಂಡ್ 5-ಸ್ಪೆಷಲ್ ಫೀಚರ್ಸ್‌

ಮಿ ಸ್ಮಾರ್ಟ್ ಬ್ಯಾಂಡ್ 5 ನಲ್ಲಿ ಔಟ್‌ಡೋರ್‌ ರೇಸ್‌, ವಾಕಿಂಗ್‌, ರೈಡಿಂಗ್‌ ಇನ್‌ಡೋರ್‌ ರನ್ನಿಂಗ್‌, ಇನ್‌ಡೋರ್‌ ಸ್ವಿಮ್ಮಿಂಗ್‌, free exercise, ಯೋಗ, rowing machine, ಇನ್‌ಡೋರ್‌ ರೈಡಿಂಗ್‌, ರೂಪ್‌ ಸ್ಕಿಪ್ಪಿಂಗ್‌, ಸೇರಿದಂತೆ ಸುಮಾರು 11 ವೃತ್ತಿಪರ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಅಲ್ಲದೆ ಹೆಲ್ತ್‌ ಮತ್ತು ಫಿಟ್ನೆಸ್ ಫೀಚರ್ಸ್‌ಗಳಿಗೆ ಸಂಬಂಧಿಸಿದಂತೆ 24x7 ಹೃದಯ ಬಡಿತ ಮೇಲ್ವಿಚಾರಣೆ, ವಿಶ್ರಾಂತಿ ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಗಾಡ ನಿದ್ರೆ, ಲಘು ನಿದ್ರೆ, ಒತ್ತಡ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಮತ್ತು ಗುರಿ ನಿರ್ಧಾರದಂತಹ ಫಿಚರ್ಸ್‌ಗಳನ್ನ ಹೊಂದಿದೆ. ಅಲ್ಲದೆ ಇದು ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5-ಬ್ಯಾಟರಿ

ಮಿ ಸ್ಮಾರ್ಟ್ ಬ್ಯಾಂಡ್ 5-ಬ್ಯಾಟರಿ

ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್‌ ನಿಯಮಿತ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ಮತ್ತು ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಎರಡು ಗಂಟೆಗಳಿಂತ ಕಡಿಮೆ ಅವಧಿಯ ಫುಲ್‌ ಚಾರ್ಜಿಂಗ್ ಟೈಂ ಅನ್ನು ಹೊಂದಿದೆ. ಮಿ ಸರಣಿಯ ಇತರೆ ಬ್ಯಾಂಡ್‌ಗಳಿಗಿಂತ ಇದರ ಬ್ಯಾಟರಿ ಬ್ಯಾಕ್‌ಅಪ್‌ ಸಹ ಆಕರ್ಷಕ ವಾಗಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5-ಬೆಲೆ ಎಷ್ಟು?

ಮಿ ಸ್ಮಾರ್ಟ್ ಬ್ಯಾಂಡ್ 5-ಬೆಲೆ ಎಷ್ಟು?

ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್‌ ಭಾರತದಲ್ಲಿ 2,499 ರೂ. ಬೆಲೆಯನ್ನು ಹೊಂದಿದೆ. ಇದು ಕಪ್ಪು, ನೇವಿ ಬ್ಲೂ, ಟೀಲ್, ಪರ್ಪಲ್ ಮತ್ತು ಆರೆಂಜ್ ಸ್ಟ್ರಾಪ್ ಕಲರ್ ಆಯ್ಕೆಗಳಲ್ಲಿ ಹೊಂದಿದೆ.

ಕೊನೆಯ ಮಾತು

ಕೊನೆಯ ಮಾತು

ಶಿಯೋಮಿಯ ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್‌ ತನ್ನ ವರ್ಗದಲ್ಲಿಯೇ ಬೆಸ್ಟ್‌ ಫಿಟ್ನೆಸ್‌ ಫೀಚರ್ಸ್‌ಗಳನ್ನು ಪಡೆದಿದೆ. ಈ ಡಿವೈಸ್‌ ಬ್ಯಾಟರಿ ಬ್ಯಾಕ್‌ ನಿಂದಲೂ ಹೆಚ್ಚಿನ ಗಮನ ಸೆಳೆದಿದ್ದು, ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಹೀಗಾಗಿ ಬಜೆಟ್‌ ದರದಲ್ಲಿ ಒಂದೊಳ್ಳೆ ಫಿಟ್ನೆಸ್‌ ಡಿವೈಸ್‌ ಖರೀದಿಗೆ ಇದು ಉತ್ತಮ ಆಯ್ಕೆ ಎನ್ನಬಹುದಾಗಿದೆ.

Most Read Articles
Best Mobiles in India

English summary
The Mi Smart Band 5 comes with a larger display than in any of the Mi Smart Bands introduced before.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X