Subscribe to Gizbot

999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!

Written By:

ಹೆಚ್ಚು ಉಪಯೋಗ ಹೊಂದಿರುವ ಉತ್ತಮ ಗುಣಮಟ್ಟದ ಬ್ಲೂಟೂತ್ ಇಯರ್‌ಫೋನ್ ಖರೀದಿಸುವ ಆಶಯದಲ್ಲಿದ್ದರೆ ಇಂದು ನಾವು ಹೇಳುವ ಬ್ಲೂಟೂತ್ ನಿಮಗೆ ಉತ್ತಮವಾಗಿರಬಹುದು.! ಹೌದು, ಝೆಬ್ರೋನಿಕ್ಸ್ ಕಂಪೆನಿಯು ಅತ್ಯಂತ ಕಡಮೆ ಬೆಲೆ 999 ರೂಪಾಯಿಗಳಿಗೆ ಅತ್ಯುತ್ತಮ ಬ್ಲೂಟೂತ್ ಇಯರ್‌ಫೋನ್ ಬಿಡುಗಡೆ ಮಾಡಿದೆ.!!

ಗುಣಮಟ್ಟ ಮತ್ತು ಕ್ವಾಲಿಟಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಝೆಬ್ರೋನಿಕ್ಸ್ ತನ್ನ ನೂತನ ಝೆಬ್ರೋನಿಕ್ಸ್ ಝೆಡ್ಇಬಿ-ಬಿಇ380ಟಿ ಬ್ಲೂಟೂತ್ ಇಯರ್‌ಫೋನ್ (Zebronics ZEB-BE380T Bluetooth Earphone) ಬಿಡುಗಡೆ ಮಾಡಿದೆ.!! ಹಲವು ವೈಶಿಷ್ಯಗಳ ಮೂಲಕ ಮಾರುಕಟ್ಟೆಗೆ ಈ ಬ್ಲೂಟೂತ್ ಇಯರ್‌ಫೋನ್ ಕಾಲಿಟ್ಟಿದ್ದು, ಇದರ ಫೀಚರ್ಸ್ ಅನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲೂಟೂತ್ ಇಯರ್‌ಫೋನ್ ಸಾಮರ್ಥ್ಯ!!

ಬ್ಲೂಟೂತ್ ಇಯರ್‌ಫೋನ್ ಸಾಮರ್ಥ್ಯ!!

ಬ್ಲೂಟೂತ್ ಆವೃತ್ತಿ - 4.2 ಸ್ಟಿರಿಯೊ ಇಯರ್‌ಫೋನ್ ಝೆಬ್ರೋನಿಕ್ಸ್ ಝೆಡ್ಇಬಿ-ಬಿಇ380ಟಿ 20Hz-20kHz ಕಂಪನಾಂಕ ವ್ಯಾಪ್ತಿ ಸಹಾಯದಿಂದ 10 ಮೀ.ವರೆಗೂ ಅತ್ಯುತ್ತಮ ಗುಣಮಟ್ಟದ ಸಂವೇದಗಳನ್ನು ಸೆರೆಹಿಡಿಯುವ ಡಿವೈಸ್ ಆಗಿದೆ.!! ಜೊತಗೆ 140 mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

ಎಸ್‌ಡಿ ಕಾರ್ಡ್ ಕೂ ಹಾಕಬಹುದು.!!

ಎಸ್‌ಡಿ ಕಾರ್ಡ್ ಕೂ ಹಾಕಬಹುದು.!!

ಬ್ರೋನಿಕ್ಸ್ ಝೆಡ್ಇಬಿ-ಬಿಇ380ಟಿ ಬ್ಲೂಟೂತ್ ಇಯರ್‌ಫೋನ್‌ಗೆ ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯವಿದೆ.! ಮೆಮೊರಿ ಕಾರ್ಡ್‌ಗಳಲ್ಲಿ ಎಂಪಿ3 ಫೈಲ್‌ಗಳಿದ್ದಲ್ಲಿ ಅದೇ ಆಟೋ ಪ್ಲೇ ಮಾಡಲಿದೆ.! ಈ ಇಯರ್‌ಫೋನ್‌ನಲ್ಲಿ ಮೆಮೊರಿ ಕಾರ್ಡ್ ಹಾಕಿದ್ದರೆ ಇದು ಫೋನ್ ಜೊತೆ ಬ್ಲೂಟೂತ್ ಸಂಪರ್ಕ ಹೊಂದುವುದಿಲ್ಲ.!!

ಕಾರ್ಯನಿರ್ವಹಣೆ ಹೇಗಿದೆ?

ಕಾರ್ಯನಿರ್ವಹಣೆ ಹೇಗಿದೆ?

ಹಾಡು ಕೇಳಲು, ಮಾತನಾಡಲು ಉತ್ತಮವಾದ ಬ್ಲೂಟೂತ್ ಇಯರ್‌ಫೋನ್‌ ಇದಾಗಿದೆ.! 6-8 ಗಂಟೆ ಮಾತನಾಡಬಹುದಾದ ಶಕ್ತಿ ಇದಕ್ಕಿದ್ದರೆ 4-6 ಗಂಟೆ ಸಮಯದವರೆಗೂ ಸಂಗೀತ ಆಲಿಸಬಹುದು.! ಇನ್ನು ವಾಯ್ಸ್ ಕ್ಲಿಯರೆನ್ಸ್ ಉತ್ತಮವಾಗಿದೆ.!!

ಹೆಚ್ಚಿನ ವೈಶಿಷ್ಟ್ಯಗಳೇನು?

ಹೆಚ್ಚಿನ ವೈಶಿಷ್ಟ್ಯಗಳೇನು?

ಈ ಇಯರ್‌ಫೋನ್‌ನಲ್ಲಿ ವಾಲ್ಯೂಮ್ ಬಟನ್ ಅನ್ನೇ ಹಾಡು ಬದಲಾವಣೆ ಬಟನ್ ಆಯ್ಕೆಯಾಗಿ ನೀಡಲಾಗಿದೆ. ವೇಗವಾಗಿ ವಾಲ್ಯೂಮ್ ಬಟನ್ ಒತ್ತಿದರೆ ಮುಂದಿನ ಹಾಡಿಗೆ ಹೋಗುತ್ತದೆ. ಅದೇ ರೀತಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಅನ್ನು ಒಮ್ಮೆ ವೇಗವಾಗಿ ಒತ್ತಿದರೆ ಹಿಂದಿನ ಹಾಡಿಗೆ ಹೋಗುತ್ತದೆ.!!

ಓದಿರಿ:3500 ಹಳೆ ಫೋನ್‌ಗಳನ್ನು ಸಂಗ್ರಹಿದ್ದಾನೆ ಈತ!..ಆದರೆ ಒಂದೂ ಸ್ಮಾರ್ಟ್‌ಫೋನ್ ಇಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Zebronics has launched its new Bluetooth module in India. Read to know how to convert your earphones into wireless earphones.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot