ಟೆಕ್ನೋ ಪೋವಾ 5 ಸರಣಿಗೆ ಅಮೆಜಾನ್‌ನಲ್ಲಿ ಇಷ್ಟೊಂದು ರಿಯಾಯಿತಿಯೇ?... ಬ್ಯಾಂಕ್ ಆಫರ್‌ ಏನೇನಿದೆ?

|

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಟೆಕ್ನೋ ಫೋನ್‌ಗಳು (Tecno Phone) ಸಹ ಭರ್ಜರಿಯಾಗಿ ಸದ್ದು ಮಾಡುತ್ತವೆ. ಈ ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಈ ನಡುವೆ ಟೆಕ್ನೋ ಪೋವಾ 5 ಸರಣಿ (Tecno Pova 5 series) ಫೋನ್‌ಗಳನ್ನು ಭಾರೀ ಅಗ್ಗದ ಬೆಲೆಗೆ ಖರೀದಿ ಮಾಡಲು ಅವಕಾಶ ನೀಡಲಾಗಿದೆ.

ಹೌದು, ಟೆಕ್ನೋ ಈ ತಿಂಗಳ ಆರಂಭದಲ್ಲಿ ಪೋವಾ 5 ಸರಣಿಯನ್ನು ಲಾಂಚ್‌ ಮಾಡಿದ್ದು, ಈ ಶ್ರೇಣಿಯಲ್ಲಿ ಎರಡು ವೇರಿಯಂಟ್‌ ಆಯ್ಕೆ ಇದೆ. ಅಂದರೆ ಟೆಕ್ನೋ ಪೋವಾ 5 (Tecno Pova 5) ಮತ್ತು ಪೋವಾ 5 ಪ್ರೊ(Tecno Pova 5 pro). ಆದರೆ ಈಗ ಅಮೆಜಾನ್ ಪೊವಾ 5 ಸರಣಿಗೆ ಹೊಸ ಬ್ಯಾಂಕ್ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದೆ. ಈ ಆಫರ್‌ ಆಗಸ್ಟ್ 31 ರವರೆಗೆ ಇರಲಿದೆ ಎಂದು ಟೆಕ್ನೋ ಹೇಳಿದೆ. ಹಾಗಿದ್ರೆ, ಏನೆಲ್ಲಾ ಆಫರ್‌ ಇದೆ ಗಮನಿಸೋಣ ಬನ್ನಿ.

ಟೆಕ್ನೋ ಪೋವಾ 5 ಸರಣಿಗೆ ಇಷ್ಟೊಂದು ರಿಯಾಯಿತಿಯೇ?... ಬ್ಯಾಂಕ್ ಆಫರ್‌ ಏನೇನಿದೆ?

ಟೆಕ್ನೋ ಪೋವಾ 5 ಸರಣಿ : ಟೆಕ್ನೋ ಪೋವಾ 5 ಪ್ರೊ ಅನ್ನು ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಾಂಚ್‌ ಮಾಡಲಾಗಿದೆ. ಅಂದರೆ 128GB ಮತ್ತು 256GB ಸ್ಟೋರೇಜ್‌. ಇವು ಕ್ರಮವಾಗಿ 14,999ರೂ.ಗಳು ಹಾಗೂ 15,999 ರೂ.ಗಳ ಬೆಲೆ ಹೊಂದಿದ್ದು, ಟೆಕ್ನೋ ಪೊವಾ 5 ಅನ್ನು 11,999ರೂ.ಗಳಿಗೆ ಲಾಂಚ್ ಮಾಡಲಾಗಿದೆ. ಹಾಗೆಯೇ ಈ ಟೆಕ್ನೋ ಪೋವಾ 5 ಅಂಬರ್ ಗೋಲ್ಡ್, ಮೆಚಾ ಬ್ಲಾಕ್ ಮತ್ತು ಹರಿಕೇನ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಾಂಚ್ ಮಾಡಲಾಗಿದೆ.

ಯಾವೆಲ್ಲಾ ಬ್ಯಾಂಕ್ ಕಾರ್ಡ್‌ಗಳಿಗೆ ಏನೆಲ್ಲಾ ಆಫರ್‌?:
HDFC ಡೆಬಿಟ್ ಕಾರ್ಡ್ ಹೊಂದಿರುವವರು 1000ರೂ.ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, EMI ವಹಿವಾಟಿಗೂ ಸಹ ಅನುಕೂಲ ಮಾಡಿಕೊಡಲಾಗಿದೆ. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ನಲ್ಲಿ ಇಎಮ್‌ಐ ನಲ್ಲಿ ಖರೀದಿ ಮಾಡುವವರು 1000ರೂ.ಗಳ ವರೆಗೆ ಅಥವಾ 10% ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌ನಲ್ಲಿ ನೇರವಾಗಿ 750ರೂ.ಗಳ ಡಿಸ್ಕೌಂಟ್‌ ಪಡೆಯಲಿದ್ದಾರೆ.

ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು ಇಎಮ್‌ಐ ನಲ್ಲಿ ಖರೀದಿ ಮಾಡಿದರೆ 1000ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ನೇರ ಖರೀದಿ ಮಾಡಿದರೆ 750ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಈ ಮೂಲಕ ಟೆಕ್ನೋದ ಹೊಸ ಫೋನ್‌ ಖರೀದಿ ಮಾಡಬೇಕು ಎಂದುಕೊಂಡವರು ಹಣ ಉಳಿತಾಯದ ಮೂಲಕ ಫೋನ್‌ ಕೊಂಡುಕೊಳ್ಳಬಹುದು, ಈ ಆಫರ್‌ ಸೀಮಿತ ಅವಧಿಗೆ ಎಂಬುದು ನೆನಪಿರಲಿ.

ಟೆಕ್ನೋ ಪೋವಾ 5 ಫೀಚರ್ಸ್‌:
ಟೆಕ್ನೋ ಪೋವಾ 5 ಪ್ರೊ 5G ಸ್ಮಾರ್ಟ್‌ಫೋನ್ ಮ್ಯೂಸಿಕ್‌, ಒಳಬರುವ ಕರೆಗಳು, ನೋಟಿಫಿಕೇಶನ್‌ ಮತ್ತು ಕಡಿಮೆ ಬ್ಯಾಟರಿ ವಾರ್ನಿಂಗ್‌ನಂತಹ ವೈವಿಧ್ಯಮಯ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾದ ಆರ್‌ಜಿಬಿ ಎಲ್‌ಇಡಿ ಲೈಟ್‌ ಆಯ್ಕೆ ಬೆಂಬಲಿಸುವ ಆರ್ಕ್ ಇಂಟರ್ಫೇಸ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ 120Hz ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಮೀಡಿಯಾ ಟೆಕ್‌ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಮೂಲ ವೇರಿಯಂಟ್‌ ಹಿಲಿಯೋ G99 SoC ಪ್ರೊಸೆಸರ್‌ ಆಯ್ಕೆ ಪಡೆದುಕೊಂಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 50 ಮೆಗಾಪಿಕ್ಸೆಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿವೆ. ಪ್ರೊ ಮಾದರಿಯು 16MP ಸೆಲ್ಫಿ ಕ್ಯಾಮೆರಾ ಹೊಂದಿದ್ದರೆ ಮೂಲ ಮಾದರಿಯು 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಟೆಕ್ನೋ ಪೋವಾ 5 ಸರಣಿಗೆ ಇಷ್ಟೊಂದು ರಿಯಾಯಿತಿಯೇ?... ಬ್ಯಾಂಕ್ ಆಫರ್‌ ಏನೇನಿದೆ?

ಉಳಿದಂತೆ 68W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಮೂಲ ಮಾದರಿಯು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಸಾಮರ್ಥ್ಯದ ಬ್ಯಾಟರಿ ಮೂಲಕ ಪ್ಯಾಕ್‌ ಆಗಿದೆ. ಈ ಮೂಲಕ ಈ ಫೋನ್‌ಗಳು ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆ ನೀಡಲಿವೆ.

Best Mobiles in India

English summary
Tecno launched the Pova 5 series earlier this month. The series includes the Tecno Pova 5 and Pova 5 Pro phones. Now Amazon Bank has announced discounts and offers for these phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X