ವಾಹ್‌ ! ದುಬಾರಿ ಫೋನ್‌ನ ಫೀಚರ್ಸ್ ಇನ್ನು ಬಜೆಟ್ ಫೋನ್‌ನಲ್ಲೂ

By Shwetha
|

ನಿಮ್ಮ ಬಜೆಟ್‌ಗೆ ನಿಲುಕುವ ಬೆಸ್ಟ್ ಫೋನ್‌ನ ಅನ್ವೇಷಣೆಯಲ್ಲಿ ನೀವಿದ್ದೀರಾ? ಆದರೆ ಫೋನ್ ಖರೀದಿಸುವಾಗ ಬೆಲೆ ಮಾತ್ರ ಗಮನಿಸದೇ ಪೋನ್‌ನ ಉತ್ತಮತೆಗೆ ಪೂರಕವಾಗಿರುವ ಇತರ ಅಂಶಗಳತ್ತ ಕೂಡ ನೀವು ಗಮನ ಹರಿಸುವುದು ಹೆಚ್ಚು ಮುಖ್ಯವಾಗಿದೆ.

ಓದಿರಿ: ವಾಟ್ಸಾಪ್‌ನಲ್ಲಿ ಬಳಕೆದಾರರಿಗಿಲ್ಲ ಸುರಕ್ಷೆ

ಇಂದಿನ ಲೇಖನದಲ್ಲಿ ನಿಮ್ಮ ಬಯಕೆಯ ಬಜೆಟ್ ಫೋನ್ ಹೇಗಿರಬೇಕು ಖರೀದಿಸುವಾಗ ಏನೆಲ್ಲಾ ಅಂಶಗಳತ್ತ ಗಮನ ಹರಿಸಬೇಕು ಎಂಬುದನ್ನು ಕುರಿತು ಅರಿತುಕೊಳ್ಳೋಣ. ಕ್ಯಾಮೆರಾ, ಫೀಚರ್‌ಗಳು, ಡಿಸ್‌ಪ್ಲೇ, ಬ್ಯಾಟರಿ ಹೀಗೆ ಪ್ರತಿಯೊಂದು ಅಂಶಗಳತ್ತ ಗಮನ ಹರಿಸಿ ನೀವು ನಿಮ್ಮ ಕೈಗೆಟಕುವ ದೀರ್ಘ ಬಾಳ್ವಿಕೆಯ ಫೋನ್‌ನ ಖರೀದಿಯನ್ನು ಮಾಡಬೇಕಾಗುತ್ತದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ದುಬಾರಿ ಫೋನ್‌ನೊಂದಿಗೆ ಹೋಲಿಕೆ ಮಾಡದಿರಿ

ದುಬಾರಿ ಫೋನ್‌ನೊಂದಿಗೆ ಹೋಲಿಕೆ ಮಾಡದಿರಿ

ನೀವು ಬಜೆಟ್ ಫೋನ್ ಅನ್ನು ಖರೀದಿಸುತ್ತೀರಿ ಎಂದಾದಲ್ಲಿ ದುಬಾರಿ ಫೋನ್‌ನಲ್ಲಿರಬೇಕಾದ ಫೀಚರ್‌ಗಳನ್ನು ನಿಮ್ಮ ಫೋನ್‌ನಲ್ಲಿ ಬಯಸದಿರಿ. ಶ್ಯೋಮಿ ಇಲ್ಲವೇ ವೈಯು ಯುರೇಕಾ ಬಜೆಟ್‌ಗೆ ನಿಲುಕುವ ಅಂತೆಯೇ ಉತ್ತಮ ಫೀಚರ್‌ಗಳನ್ನೊಳಗೊಂಡಿರುವ ಫೋನ್‌ಗಳಾಗಿವೆ.

ಫೀಚರ್‌ಗಳನ್ನು ಎರಡು ಬಾರಿ ಪರಿಶೀಲಿಸಿ

ಫೀಚರ್‌ಗಳನ್ನು ಎರಡು ಬಾರಿ ಪರಿಶೀಲಿಸಿ

ಇನ್ನು 4ಜಿಬಿ ಆಂತರಿಕ ಸಂಗ್ರಹಣೆಯಲ್ಲಿ ನಿಮಗೆ 2 ಜಿಬಿ ಮಾತ್ರವೇ ಬಳಸಲು ದೊರಕುತ್ತದೆ ಎಂಬುದು ನೆನಪಿನಲ್ಲಿರಲಿ. ಜೊತೆಗೆ ಸ್ಕ್ರೀನ್ ಗಾತ್ರ, ಸಂಪರ್ಕ, ವೈಫೈ, ಬ್ಲ್ಯೂಟೂತ್ ಇವುಗಳ ಪರಿಶೀಲನೆಯನ್ನು ಮಾಡಿ. ಕ್ಯಾಮೆರಾ ಅಂಶವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.

ಹಾರ್ಡ್‌ವೇರ್‌ನತ್ತ ಗಮನ ಹರಿಸಿ

ಹಾರ್ಡ್‌ವೇರ್‌ನತ್ತ ಗಮನ ಹರಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನ ಆಯ್ಕೆಮಾಡುವಾಗ ಹಾರ್ಡ್‌ವೇರ್ ಪರಿಶೀಲಿಸಿಕೊಳ್ಳಿ. ಬಜೆಟ್ ಫೋನ್‌ ಎಂದ ಕೂಡಲೇ ಅದರಲ್ಲಿ ಕಡಿಮೆ ಗುಣಮಟ್ಟದ ಹಾರ್ಡ್‌ವೇರ್ ಚಾಲನೆಯಾಗಬೇಕೆಂಬ ನಿಯಮವೇನೂ ಇಲ್ಲ. ಇನ್ನು ಗಾತ್ರ, ರೆಸಲ್ಯೂಶನ್, ಕನೆಕ್ಟಿವಿಟಿ ಆಯ್ಕೆಗಳು, ಬ್ಯಾಟರಿ ಸಾಮರ್ಥ್ಯ ಇವುಗಳನ್ನು ಪರಿಶೀಲಿಸಿ.

ಓಎಸ್ ಆವೃತ್ತಿ ಪರಿಶೀಲಿಸಿ

ಓಎಸ್ ಆವೃತ್ತಿ ಪರಿಶೀಲಿಸಿ

ನಿಮ್ಮ ಫೋನ್ ಯಾವ ಅವೃತ್ತಿಯನ್ನು ಹೊಂದಿದೆ ಎಂಬುದನ್ನು ಗಮನಿಸಿಕೊಳ್ಳಿ. ನಿಮ್ಮ ಫೋನ್ ಓಎಸ್ ಅನ್ನು ಆಧರಿಸಿ ನಿಮ್ಮ ಫೋನ್‌ನ ಕಾರ್ಯನಿರ್ವಹಣೆ ಸಾಧ್ಯ ಎಂಬುದು ನೆನಪಿರಲಿ.

ಮಾರಾಟ ಬೆಂಬಲ

ಮಾರಾಟ ಬೆಂಬಲ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತವೆ. ಸರ್ವೀಸ್ ಸೆಂಟರ್‌ ಅನ್ನು ನಿಮ್ಮ ಫೋನ್ ಹೊಂದಿಲ್ಲ ಎಂದಾದಲ್ಲಿ ವಾರಂಟಿ ದಂಡ. ಕಂಪೆನಿಯ ವೆಬ್‌ಸೈಟ್ ಅನ್ನು ಪರಿಶೀಲಿಸಿ ಸರ್ವೀಸ್ ಸೆಂಟರ್ ಅನ್ನು ಪತ್ತೆ ಮಾಡಿ.

ಎಚ್‌ಡಿ ಡಿಸ್‌ಪ್ಲೇ

ಎಚ್‌ಡಿ ಡಿಸ್‌ಪ್ಲೇ

ಬಜೆಟ್ ಬೆಲೆಯಲ್ಲಿ ಉತ್ತಮ ಎಚ್‌ಡಿ ಫೋನ್‌ಗಳು ಈಗ ಲಭ್ಯವಿದ್ದು ನೀವು ಇಂತಹ ಡಿಸ್‌ಪ್ಲೇ ಇರುವ ಫೋನ್‌ಗೆ ಹೆಚ್ಚು ಮಹತ್ವವನ್ನು ನೀಡಿ. ನಿಮ್ಮ ಫೋನ್ ಪರದೆ ಗಾತ್ರ 6 ರಿಂದ 6.8 ಇರಬೇಕು.

2ಜಿಬಿ RAM

2ಜಿಬಿ RAM

2 ಜಿಬಿ RAM ನಿಮ್ಮ ಫೋನ್‌ನ ಉತ್ತಮತೆಗೆ ಹೆಚ್ಚು ಮುಖ್ಯವಾಗಿದೆ. ನೀವು ಭಾರೀ ಅಪ್ಲಿಕೇಶನ್‌ಗಳಾದ ಗೇಮ್ಸ್ ಮೊದಲಾದವನ್ನು ಫೋನ್‌ನಲ್ಲಿ ಅಳವಡಿಸಿಕೊಳ್ಳುತ್ತೀರಿ ಎಂದಾದಲ್ಲಿ 2 ಜಿಬಿ RAM ಹೆಚ್ಚು ಮುಖ್ಯ.

16 ಜಿಬಿ ಆಂತರಿಕ ಸಂಗ್ರಹ

16 ಜಿಬಿ ಆಂತರಿಕ ಸಂಗ್ರಹ

ನಿಮ್ಮ ಫೋನ್ ಕನಿಷ್ಟ ಪಕ್ಷ 16 ಜಿಬಿ ಆಂತರಿಕ ಸಂಗ್ರಹವನ್ನು ಹೊಂದಿರಲಿ. ನಿಮ್ಮ ಫೋನ್‌ನಲ್ಲಿ ಸಾಕಷ್ಟನ್ನು ನೀವು ತುಂಬಿಸಿಕೊಳ್ಳಬಹುದು. ಚಲನ ಚಿತ್ರ, ಹಾಡು, ಗೇಮ್ಸ್, ಫೋಟೋಗಳು ಇತ್ಯಾದಿ.

ಡ್ಯುಯಲ್ ಕೋರ್ ಅಥವಾ ಕ್ವಾಡ್ ಕೋರ್

ಡ್ಯುಯಲ್ ಕೋರ್ ಅಥವಾ ಕ್ವಾಡ್ ಕೋರ್

ಡ್ಯುಯಲ್ ಕೋರ್ ಕ್ವಾಡ್ ಕೋರ್ ಚಿಪ್‌ಸೆಟ್‌ಗಳಿಗಿಂತಲೂ ಹೆಚ್ಚು ಶಕ್ತಿಯುತ ಇಲ್ಲವೇ ಸಮನಾಗಿರುತ್ತದೆ. ಗ್ಯಾಲಕ್ಸಿ ಎಸ್3 ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ನಿಮ್ಮ ಫೋನ್‌ನ ವೇಗ ಈ ಚಿಪ್‌ಸೆಟ್‌ಗಳನ್ನು ಅನುಸರಿಸಿ ಇರುತ್ತದೆ.

ಗ್ಲೋನೆಸ್

ಗ್ಲೋನೆಸ್

ಗ್ಲೋನೆಸ್ ಹೆಚ್ಚು ಮುಖ್ಯವಾದ ಫೀಚರ್ ಆಗಿದೆ. ಹೆಚ್ಚು ಜನಪ್ರಿಯ ಹ್ಯಾಂಡ್‌ಸೆಟ್‌ಗಳು ಗ್ಲೋನೆಸ್ ಅವಲಂಬಿಸಿ ಲಾಂಚ್ ಆಗಿವೆ. ನಿಮ್ಮ ಫೋನ್‌ನ ಸ್ಥಿತಿ ಬದಲಾವಣೆ ಅಂತೆಯೇ ಅಪ್ಲಿಕೇಶನ್‌ಗಳ ನಡುವಿನ ಬದಲಾವಣೆಯಲ್ಲಿ ನಿಮ್ಮ ಫೋನ್ ಸ್ಥಿತಿಯನ್ನು ರಿ ಲಾಕ್ ಮಾಡುವುದು ಗ್ಲೋನೆಸ್‌ನ ಕಾರ್ಯವಾಗಿದೆ.

Most Read Articles
Best Mobiles in India

English summary
You are more focussing to buy a smartphone especially a budget phone means you have to concentrate on some important features. Now a days in phone market we can find more bundle of budget phone with good features. Here we are list out some facts about budget phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more