"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?

By Suneel
|

ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕಾಟಕ್ಕೆ ಹೆಚ್ಚು ಪ್ರಖ್ಯಾತ ವೆಬ್‌ ಬ್ರೌಸರ್‌ "ಗೂಗಲ್‌ ಕ್ರೋಮ್‌" ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಎಲ್ಲಾ ರೀತಿಯ ಅಪ್‌ಡೇಟ್‌ಗಳನ್ನು ನೀಡಿದರು ಸಹ ಕೆಲವೊಮ್ಮೆ ಗೂಗಲ್‌ ಕ್ರೊಮ್‌ನ ಕೆಲವು ಫೀಚರ್‌ಗಳು ಮತ್ತು ಅಪ್ಲಿಕೇಶನ್‌ನಿಂದ ಮಾಹಿತಿ ಹುಡುಕಾಡುವ ವೇಳೆ ಸ್ಲೋ ಆಗುತ್ತದೆ. ಸ್ಮಾರ್ಟ್‌ಪೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಬಳಸುವ ಎಲ್ಲರೂ ಸಹ ಎದುರಿಸುವ ಸಮಸ್ಯೆಯಾಗಿದೆ.

ಓದಿರಿ: ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಡಾಕುಮೆಂಟ್ಸ್‌ ರಿಕವರಿ ಹೇಗೆ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮ್ಮ "ಗೂಗಲ್‌ ಕ್ರೋಮ್‌" ನಿಧಾನವಾಗಿದ್ದಲ್ಲಿ, ವೆಬ್‌ಪೇಜ್‌ ಲೋಡ್‌ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ ಅದಕ್ಕೆ ಪರಿಹಾರವಾಗಿ ಟಾಪ್‌ ಸರಳ ವಿಧಾನಗಳನ್ನು ನಿಮಗೆ ತಿಳಿಸುತ್ತಿದೆ. ಮಾಹಿತಿ ಹುಡುಕಾಟದಲ್ಲಿ ಹೆಚ್ಚು ವೇಗಗೊಳಿಸುವ ಮತ್ತು ವೆಬ್‌ಪೇಜ್‌ ಬಹುಬೇಗ ಲೋಡ್‌ ಆಗಲು ಈ ವಿಧಾನಗಳನ್ನು ಅನುಸರಿಸಿ..

ಗೂಗಲ್‌ ಕ್ರೋಮ್‌ ವೇಗಗೊಳ್ಳಲು ಕೆಲವು ಅನಗತ್ಯ ಫೀಚರ್‌ಗಳನ್ನು ಡಿಸೇಬಲ್‌ ಮಾಡಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ನಿರಾಕರಿಸಿದ ವಿಸ್ತರಣೆಗಳನ್ನು ಡಿಸೇಬಲ್ ಮಾಡಿ

ಗೂಗಲ್‌ ಕ್ರೋಮ್‌ನಲ್ಲಿನ ಕೆಲವು ಕಾರ್ಯಗಳನ್ನು ನಿರ್ವಹಿಸುವ ಟೂಲ್‌ಗಳು ವಿಸ್ತರಣೆಗೊಂಡಲ್ಲಿ ಬ್ಯಾಗ್ರೌಂಡ್‌ನಲ್ಲಿ ಚಾಲ್ತಿಯಲ್ಲಿರುತ್ತವೆ. ಅವುಗಳಿಂದ ಉಪಯೋಗವಿದ್ದರು ಸಹ ಕೋಮ್‌ ಬ್ರೌಸರ್‌ ಮಂದಗತಿಗೆ ಕಾರಣವಾಗುತ್ತವೆ.
* chrome://extensions ಎಂದು ಕ್ರೋಮ್‌ನ ಲೊಕೇಶನ್‌ ಬಾರ್‌ನಲ್ಲಿ ಟೈಪ್‌ ಮಾಡಿ ಎಂಟರ್‌ ಮಾಡಿ ಅಥವಾ ಬಲಭಾಗದಲ್ಲಿ ಆಯ್ಕೆಗಳಿಗೆ ಹೋಗಿ More Tools ಮೇಲೆ ಕ್ಲಿಕ್‌ ಮಾಡಿ ನಂತರದಲ್ಲಿ Extensions ಎಂಬಲ್ಲಿ ಕ್ಲಿಕ್‌ ಮಾಡಿ. ಚಿತ್ರದಲ್ಲಿ ತೋರಿಸಿದಂತೆ ಪೇಜ್‌ ಓಪನ್‌ ಆದಲ್ಲಿ Disable‌ ಮಾಡಲು Enable ಮೇಲೆ ಕ್ಲಿಕ್‌ ಮಾಡಿ.

ಅನಗತ್ಯ ಪ್ಲಗಿನ್‌ಗಳನ್ನು ಡಿಸೇಬಲ್‌ ಮಾಡಿ

ಗೂಗಲ್‌ನಿಂದಲೇ ಕೆಲವು ಪ್ಲಗಿನ್‌ಗಳು ವಿಸ್ತರಣಾ ಆಪ್‌ಗಳಂತೆ ಬಂದಿರುತ್ತವೆ. ಹಾಗೂ ನಿಮ್ಮ ಕಂಪ್ಯೂಟರ್‌ನಲ್ಲಿ ಇನ್ಸ್ಟಾಲ್‌ ಆಗಿರುತ್ತವೆ. ಅವುಗಳು ಕ್ರೋಮ್‌ ವೇಗಕ್ಕೆ ಅಡ್ಡಿಯಾಗಬಹುದು.
* chrome://plugins ಎಂದು ಅಡ್ರೆಸ್‌ ಬಾರ್‌ನಲ್ಲಿ ಟೈಪ್‌ ಮಾಡಿ ಎಂಟರ್‌ ಬಟನ್‌ ಪ್ರೆಸ್‌ ಮಾಡಿ
* ನಿಮಗೆ ಬೇಡವಾದ ಪ್ಲಗಿನ್‌ಗಳನ್ನು ಡಿಸೇಬಲ್‌ ಮಾಡಿ.

ಅನಗತ್ಯ ವೆಬ್‌ ಆಪ್‌ಗಳನ್ನು ತೆಗೆಯಿರಿ (Remove)

ಗೂಗಲ್‌ ಕ್ರೋಮ್‌, ಬ್ರೌಸರ್‌ ಅಲ್ಲದೇ ವೆಬ್‌ ಆಪ್‌ಗಳನ್ನು ಹೊಂದಿರುತ್ತದೆ. HTML, CSS, JavaScript. ಇವುಗಳು ಕೆಲವೊಮ್ಮೆ ವೆಬ್‌ಸೈಟ್‌ಗಳು ಲೋಡ್‌ ಆಗಲು ಅಡ್ಡಿಯಾಗುತ್ತವೆ. ಅಂತವುಗಳು ನಿಮಗೆ ಬೇಡವಾದಲ್ಲಿ ತೆಗೆಯಿರಿ.
* chrome://apps ಎಂದು ಅಡ್ರೆಸ್‌ ಬಾರ್‌ನಲ್ಲಿ ಟೈಪ್‌ ಮಾಡಿ
* ನಿಮಗೆ ಬೇಡವಾದ ಅಪ್ಲಿಕೇಶನ್‌ಗಳ ಮೇಲೆ ಬಲಭಾಗದ (Right) ಬಟನ್‌ ಕ್ಲಿಕ್‌ ಮಾಡಿ. Remove from chrome ಆಯ್ಕೆ ಮಾಡಿ ಕ್ಲಿಕ್‌ ಮಾಡಿ.

ಪೂರ್ವಪಡೆಯುವಿಕೆಯನ್ನು ಮಾಹಿತಿಯನ್ನು ಎನೇಬಲ್‌ ಮಾಡಿ.

ಗೂಗಲ್‌ ಕೆಲವು ಪೂರ್ವ ಮಾಹಿತಿ ನೀಡುವ ಫೀಚರ್‌ಗಳಾದ ನೆಟ್‌ವರ್ಕ್‌ ಭವಿಷ್ಯ, ಸ್ಪೆಲ್ಲಿಂಗ್‌ ಸರಿಪಡಿಸುವ ಫೀಚರ್‌ಗಳಿಂದ ಕೂಡಿದೆ. ಅಂತಹವುಗಳನ್ನು ನೀವು ಇವುಗಳನ್ನು ಎನೇಬಲ್‌ ಮಾಡಬಹುದು.
* ಕ್ರೋಮ್‌ನ ಬಲಭಾಗದಲ್ಲಿ Settings>>Show advanced settings.. ಕ್ಲಿಕ್‌ ಮಾಡಿ
* ನಂತರದಲ್ಲಿ "prefetch resources to load pages more guickly" ಎಂಬುದನ್ನು ಎನೇಬಲ್‌ ಮಾಡಿ.

ಸಿಕ್ರೇಟ್‌ ಹ್ಯಾಕ್ಸ್‌ಗಳನ್ನು ಎನೇಬಲ್‌ ಮಾಡಿ

ಕ್ರೋಮ್‌ ಅಭಿವೃದ್ದಿಗಾರರಿಂದ ಹಲವು ರಹಸ್ಯ ವೈಶಿಷ್ಟಗಳು ಹೊಂದಿಕೆಯಾಗಿವೆ. ಕೆಲವು ಕಂಪ್ಯೂಟರ್‌ಗಳಿಗೆ ಈ ವೈಶಿಷ್ಟಗಳು ಉಪಯೋಗವಿಲ್ಲದಿದ್ದರೂ ಕೆಲವು ಕಂಪ್ಯೂಟರ್‌ಗಳಿಗೆ ಉತ್ತಮವಾಗಿ ಹೊಂದಿಕೆಯಾಗುತ್ತವೆ. ಪ್ರಯತ್ನ ಪಟ್ಟು ನೋಡಬೇಕಷ್ಟೆ. ಈ ಸಿಕ್ರೇಟ್‌ ವೈಶಿಷ್ಟಗಳು ವೆಬ್‌ಪೇಜ್‌ ಅನ್ನು ಬಹುಬೇಗ ಲೋಡ್‌ ಮಾಡುತ್ತವೆ. ರೆಂಡರ್‌ ಅನ್ನು ಸಹ ಶೀರ್ಘವಾಗಿ ನಿರ್ವಹಿಸುತ್ತವೆ.
* chrome://flags ಎಂದು ಟೈಪ್‌ ಮಾಡಿ ಅಲ್ಲಿನ ವೈಶಿಷ್ಟಗಳನ್ನು ಚೆಕ್‌ ಮಾಡಿ.

ಪ್ರಾಯೋಗಿಕ ಕ್ಯಾನ್ವಾಸ್ ವೈಶಿಷ್ಟ್ಯಗಳು

ಈ ಫೀಚರ್ ಮಾಹಿತಿ ಲೋಡ್‌ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಎನೇಬಲ್‌ ಮಾಡಲು..
* chrome://flages/#enable-experimental-canvas-features ಗೆ ಹೋಗಿ.
* Enable ಮೇಲೆ ಕ್ಲಿಕ್‌ ಮಾಡಿ. ನಂತರ Relaunch Now ಬಟನ್‌ ಪ್ರೆಸ್‌ ಮಾಡಿ.

ಫಾಸ್ಟ್‌ ಟ್ಯಾಬ್/ವಿಂಡೋಸ್‌ ಕ್ಲೋಸ್‌

'ಫಾಸ್ಟ್‌ ಟ್ಯಾಬ್/ವಿಂಡೋಸ್‌ ಕ್ಲೋಸ್‌' ಆಯ್ಕೆಯು ಬ್ರೌಸರ್‌ ಪ್ರತಿಕ್ರಿಯೆಯನ್ನು ವೇಗಗೊಳಿಸುತ್ತದೆ. ಇದನ್ನು ಎನೇಬಲ್‌ ಮಾಡಲು
* chrome://flags/#enable-fast-unload ಎಂದು ಟೈಪ್‌ ಮಾಡಿ.
* enable ಎಂಬಲ್ಲಿ ಕ್ಲಿಕ್‌ ಮಾಡಿ Relaunch Now ಬಟನ್‌ ಕ್ಲಿಕ್‌ ಮಾಡಿ.

ಸ್ಕ್ರಾಲ್‌ ಮುನ್ನೋಟ

ಸ್ಕ್ರಾಲ್‌ ಮಾಡಬೇಕಾದರೆ ಈ ಫೀಚರ್‌ ಕ್ರೋಮ್‌ ಬ್ರೌಸರ್‌ಗೆ ಮುಂದಿನ ಫಿಂಗರ್‌ ಭವಿಷ್ಯವನ್ನು ನೀಡುತ್ತದೆ.
* chrome:/flags/#enable-scroll-prediction ಎಂದು ಲೊಕೇಶನ್‌ ಬಾರ್‌ನಲ್ಲಿ ಟೈಪ್‌ ಮಾಡಿ
* enable ಎಂಬಲ್ಲಿ ಕ್ಲಿಕ್‌ ಮಾಡಿ Relaunch Now ಎಂಬಲ್ಲಿ ಕ್ಲಿಕ್‌ ಮಾಡಿ

ಗರಿಷ್ಠ ಟೈಲ್ಸ್

ನಿಮ್ಮ ಬ್ರೌಸಿಂಗ್‌ಆಸಕ್ತ ವಿಷಯಗಳ ಆಧಾರದಲ್ಲಿ ಇತಿಹಾಸದ ಮೇಲೆ ಹೆಚ್ಚು ಟೈಲ್ಸ್‌ಗಳನ್ನು ಕ್ರೋಮ್‌ ಓಪನ್‌ ಮಾಡಲು ಅನುವು ಮಾಡಿಕೊಡುವ ಫೀಚರ್‌ ಇದು. ಇದನ್ನು ಹೆಚ್ಚು ಮಾಡಲು..
* chrome://flags/#max-tiles-for-interest-area ಎಂದು ಬ್ರೌಸರ್‌ ಬಾರ್‌ನಲ್ಲಿ ಟೈಪ್‌ ಮಾಡಿ
* ಡ್ರಾಪ್‌ ಡೌನ್‌ನಲ್ಲಿ 512 ಆಯ್ಕೆ ಮಾಡಿ Relaunch Now ಬಟನ್‌ ಕ್ಲಿಕ್‌ ಮಾಡಿ.

ರಾಸ್ಟರ್‌ ಥ್ರೆಡ್ಸ್‌

ಕ್ರೋಮ್‌ನಲ್ಲಿ ಇಮೇಜ್‌ ರೆಂಡರಿಂಗ್‌ ಕಾರ್ಯ ನಿರ್ವಹಿಸುತ್ತದೆ. ಇದನ್ನು ಹೆಚ್ಚು ಮಾಡಿದಂತೆ ಇಮೇಜ್‌ ರೆಂಡರಿಂಗ್ ಟೈಮ್‌ ಅಧಿಕವಾಗುತ್ತದೆ.
* chrome://flags/#num-raster-threads ಎಂದು ಟೈಪ್‌ ಮಾಡಿ ಓಪನ್‌ ಮಾಡಿ.
* ಡ್ರಾಪ್‌ಡೌನ್‌ನಲ್ಲಿ (Default) ಕ್ಲಿಕ್‌ ಮಾಡಿ 4 ಆಯ್ಕೆ ಮಾಡಿ ರೀಲಾಂಚ್‌ ಮಾಡಿ.

ಉತ್ತರ / ಸಲಹೆಗಳು

ಹಲವು ಸಮಸ್ಯೆಗಳಿಗೆ ಉತ್ತರಗಳನ್ನು ತಿಳಿಯಲು ಅಂದರೆ ಕೆಲವು ವೆಬ್‌ಸೈಟ್‌ಗಳು ಲೋಡ್‌ ಆಗದಿರಲು ಉತ್ತರ ನೇರವಾಗಿ ಬರುತ್ತದೆ. ಇದನ್ನು ಎನೇಬಲ್‌ ಮಾಡಲು
* chrome://flags/#answers-in-suggest ಎಂದು ಟೈಪ್‌ ಮಾಡಿ
* Deafult ಎಂಬಲ್ಲಿ ಕ್ಲಿಕ್‌ ಮಾಡಿ enable ಅನ್ನು ಆಯ್ಕೆ ಮಾಡಿದ ನಂತರ ರೀಲಾಂಚ್ ಬಟನ್‌ ಕ್ಲಿಕ್‌ ಮಾಡಿ.

ಗಿಜ್‌ಬಾಟ್‌

ಗೂಗಲ್‌ ಲೋಗೋ ಬದಲಿಸಿದ ಹಿಂದಿರುವ ರಹಸ್ಯವೇನು
ಆಂಡ್ರಾಯ್ಡ್‌ನಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಿಸುವುದು ಹೇಗೆ?
ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು
ಭಾರತದಲ್ಲಿ 2,500 ಉಚಿತ ವೈಫೈ ಹಾಟ್‌ಸ್ಪಾಟ್‌ ಸ್ಥಳಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
11 Ways to Speed Up Google Chrome. Read more about this in kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more