ನಿಮ್ಮ Aadhaar Card Photo ಸರಿಯಾಗಿಲ್ಲವೇ?..ಬದಲಿಸಲು ಹೀಗೆ ಮಾಡಿ

By Gizbot Bureau
|

ಆಧಾರ್ ಕಾರ್ಡ್ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ನೀಡಲಾದ ಒಂದು ಯುನಿಕ್ ಸಂಖ್ಯೆಯಾಗಿದೆ. ಹಾಗೆಯೇ ಇದು ಯುನಿವರ್ಸಲ್ ಗುರುತಿನ ಸಂಖ್ಯೆಯಾಗಿದ್ದು, ಆಧಾರ್ ಕಾರ್ಡ್ ಒಂದು ಬಯೋಮೆಟ್ರಿಕ್ ದಾಖಲೆಯಾಗಿದೆ. ಈ ಡೇಟಾಬೇಸ್‌ನಲ್ಲಿ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತದೆ ಮತ್ತು ಸಾರ್ವಜನಿಕ ಕಲ್ಯಾಣ ಮತ್ತು ನಾಗರಿಕ ಸೇವೆಗಳಿಗೆ ಸರ್ಕಾರದ ಮೂಲವಾಗಿದೆ.

ನಿಮ್ಮ Aadhaar Card Photo ಸರಿಯಾಗಿಲ್ಲವೇ?..ಬದಲಿಸಲು ಹೀಗೆ ಮಾಡಿ

ಒಬ್ಬ ವ್ಯಕ್ತಿಯು ತನ್ನ ವಿವರಗಳನ್ನು ಆಧಾರ್‌ನಲ್ಲಿ ಅಪಡೆಟ್ ಮಾಡುವ ಸಂದರ್ಭಗಳು ಬರಬಹುದು. ಆಧಾರ್ ಅನ್ನು ಅಪಡೆಟ್ ಮಾಡಲು ಎರಡು ಮಾರ್ಗಗಳಿವೆ, ಒಂದು ಸೆಲ್ಫ್ ಸರ್ವೀಸ್ ಅಪಡೆಟ್ ಪೋರ್ಟಲ್ (SSUP) ಮೂಲಕ ಮತ್ತು ಇನ್ನೊಂದು ಆಧಾರ್ ಎನರೊಲಮೆಂಟ್ ಸೆಂಟರ್‌ ಗೆ ಭೇಟಿ ನೀಡುವ ಮೂಲಕ ಅಪ್‌ಡೆಟ್ ಮಾಡಬಹುದು.

ಆಧಾರ ಹೊಂದಿರುವವರ ಸಾಮಾನ್ಯ ಕರ್ನಸನ್ ಎಂದರೆ ಆಧಾರ ಕಾರ್ಡ್‌ನಲ್ಲಿ ಅವರ ಫೋಟೋವನ್ನು ಅಪಡೆಟ್ ಮಾಡುವುದು. ಅಂತಹ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ, ಯುನಿಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ (UIDAI) ಇದೀಗ ನಿಮ್ಮ ಫೋಟೋವನ್ನು ಕೆಲವೇ ಹಂತಗಳಲ್ಲಿ ಅಪಡೆಟ್ ಮಾಡಲು ಅನುಮತಿಸುತ್ತದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ:

ಹಂತ 1. UIDAI ಅಫಿಶಿಯಲ್ ವೆಬ್‌ಸೈಟ್‌ನಿಂದ ಆಧಾರ್ ಎನರೊಲಮಂಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.

https://uidai.gov.in/images/aadhaar_enrolment_correction_form_version_2.1.pdf

ಹಂತ 2. ಆಧಾರ್ ಎನರೊಲಮಂಟ್ ಫಾರ್ಮ್ ಅನ್ನು ಪ್ರಿಂಟ್ ತೆಗೆದು ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ.

ಹಂತ 3. ಈ ಅಫಿಶಿಯಲ್ ವೆಬ್‌ಸೈಟ್ ಬಳಸಿಕೊಂಡು ಹತ್ತಿರದ ಆಧಾರ್ ಎನರೊಲಮಂಟ್ ಸೆಂಟರ್ / ಆಧಾರ್ ಸೇವಾ ಕೇಂದ್ರವನ್ನು ಸರ್ಚ್ ಮಾಡಿ.

https://appointments.uidai.gov.in/EAcenterSearch.aspx?value=2

ಹಂತ 4. ನಿಮ್ಮ ಅರ್ಜಿಯನ್ನು ಆಧಾರ್ ಎನರೊಲಮಂಟ್ ಎಕ್ಸಿಕ್ಯುಟಿವ್ ಗೆ ಸಬಮಿಟ್ ಮಾಡಿ.

ಹಂತ 5. ಎಕ್ಸಿಕ್ಯುಟಿವರಿಂದ ಬಯೋಮೆಟ್ರಿಕ್ ಬಳಸಿ ನಿಮ್ಮ ವಿವರಗಳನ್ನು ದೃಢೀಕರಿಸಲಾಗುತ್ತದೆ.

ಹಂತ 6. ನಿಮ್ಮ ಹೊಸ ಛಾಯಾಚಿತ್ರವನ್ನು ಆಧಾರ್ ಎನೊರೊಲಮಂಟ್ ಸೆಂಟರ್/ಆಧಾರ್ ಸೇವಾ ಕೇಂದ್ರದಲ್ಲಿ ಎಕ್ಸಿಕ್ಯುಟಿವ್ ತೆಗೆದುಕೊಳ್ಳುತ್ತಾರೆ.

ಹಂತ 7. ಫೋಟೋ ಬದಲಾವಣೆ ಸೇವೆಯನ್ನು ಪಡೆಯಲು ನೀವು GST ಜೊತೆಗೆ ರೂ 25 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಂತ 8. ಎಕ್ಸಿಕ್ಯುಟಿವ್ ಅಪಡೆಟ್ ರಿಕ್ವೆಸ್ಟ ನಂಬರ್ (URN) ನೊಂದಿಗೆ ನಿಮಗೆ ಎಕನೊಲೆಡ್ಜಮೆಂಟ ಸ್ಲಿಪ್ ಅನ್ನು ನೀಡಲಾಗುತ್ತದೆ.

ಹಂತ 9. UIDAI ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪಡೆಟ್ ಸ್ಟೇಟಸ್ ನ್ನು ಚೆಕ್ ಮಾಡಲು ನೀವು URN ಸಂಖ್ಯೆಯನ್ನು ಬಳಸಬಹುದು.

ಹಂತ 10. ಫೋಟೋವನ್ನು ಯಶಸ್ವಿಯಾಗಿ ಅಪಡೆಟ್ ಮಾಡಿದ ನಂತರ ನೀವು ನ್ಯು ಕಾಪಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ UIDAI ನ ಪೋರ್ಟಲ್‌ನಿಂದ ಪಿಸಿಕಲ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.

Most Read Articles
Best Mobiles in India

Read more about:
English summary
Aadhaar Photo: How To Change Photo In Aadhaar?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X