ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳಲು ಈ 12 ಅಂಶಗಳನ್ನು ನೀವು ತಿಳಿಯಲೇಬೇಕು!!

|

ಆನ್‌ಲೈನ್ ಖದೀಮರಿಗೆ ಕಡಿವಾಣ ಹಾಕಲು ಪೊಲೀಸ್ ವ್ಯವಸ್ಥೆ ವಿಫಲವಾಗುತ್ತಿರುವುದಕ್ಕೆ ಮುಖ್ಯ ಕಾರಣವೇ 'ಸಾರ್ವಜನಿಕರ ಅಮಾಯಕತೆ' ಎನ್ನುತ್ತಾರೆ ನಗರದ ಸೈಬರ್ ತಜ್ಞ ಪೊಲೀಸ್ ಓರ್ವರು.! ಅವರ ಪ್ರಕಾರ, ಸಾರ್ವಜನಿಕರ ಅಮಾಯಕತೆ, ಆಸೆ, ತಂತ್ರಜ್ಞಾನ ಬಳಕೆ ಇತಿಮಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚನೆ ಜಾಲ ಊಹೆಗೆ ನಿಲುಕದ ಸ್ಥಿತಿಗೆ ತಲುಪಿದೆ. ವಂಚನೆಯನ್ನೇ ಕೆಲಸವನ್ನಾಗಿಸಿಕೊಂಡಿರುವ ವಂಚಕರು ನಾನಾ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಹೌದು, ಇತ್ತೀಚಿಗೆ ವಂಚನೆ ನಡೆಸುವ ಜಾಲಗಳಿಗೆ ಸಿಕ್ಕಿರುವ ಅಸ್ತ್ರಗಳು ನೂರಾರಿವೆ. ಫೇಸ್‌ಬುಕ್‌, ಮ್ಯಾಟ್ರಿಮೋನಿಯಲ್, ಓಎಲ್‌ಎಕ್ಸ್‌, ಡೇಟಿಂಗ್ ವೆಬ್‌ಸೈಟ್‌, ಲಾಟರಿ, ಇ-ಮೇಲ್‌ ಸ್ನೂಪಿಂಗ್ ಸೇರಿದಮತೆ ಉದ್ಯೋಗ ಕೊಡಿಸುವ ನೆಪದಲ್ಲಿ ಅಥವಾ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಳ್ಳುವ ಮೂಲಕ ವಂಚನೆಗಳು ನಡೆಯುತ್ತವೆ.ಕಳೆದ ಮೂರು ವರ್ಷದಲ್ಲೇ ಬೆಂಗಳೂರು ಒಂದರಲ್ಲೇ 10 ಸಾವಿರಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದರೆ ಇದರ ಆಳ ಅಗಲಗಳನ್ನು ನೀವು ತಿಳಿಯಬಹುದು.

ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳಲು ಈ 12 ಅಂಶಗಳನ್ನು ನೀವು ತಿಳಿಯಲೇಬೇಕು!!

ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ವಂಚನೆ ಜಾಲದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವು ನಿಮಗೆ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳಿಮದ ನೀವು ಸೈಬರ್ ವಂಚನೆಗನಿಂದ ಪಾರಾಗುವ ವಿಶ್ವಾಸವನ್ನು ನಾವು ಹೊಂದಿದ್ದು, ಹಾಗಾದರೆ, ಸಾರ್ವಜನಿಕರು ಕೂಡ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದಾಗ ಎಚ್ಚರಿಕೆಯಿಂದ ಹೇಗೆ ವ್ಯವಹರಿಸಬೇಕು?, ಖಾತೆಯಲ್ಲಿರುವ ಹಣವನ್ನು ಹೇಗೆ ಸುರಕ್ಷಿತವಾಗಿಡಬೇಕು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

#1

#1

ಫೇಸ್‌ಬುಕ್, ಇನ್‌ಸ್ಟಗಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರನ್ನು ತಕ್ಷಣ ನಂಬಬಾರದು. ವಿದೇಶಿಯರು ಕೂಡ ನಿಮ್ಮನ್ನು ವಂಚಿಸುವ ಸಲುವಾಗಿಯೇ ನಿಮ್ಮನ್ನು ಭೇಟಿ ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಅವರಿಗೆ ಸ್ಪಂದಿಸಬಾರದು ಎಂಬುದನ್ನು ತಿಳಿದಿರಿ.

#2

#2

ನಿಮ್ಮ ಯಾವುದೇ ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದನ್ನು ನಾವೇನು ಹೇಳಬೇಕಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಪರಿಚಯವಾಗುವ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಖಾಸಾಗಿ ಮಾಹಿತಿ ಸಿಗುವಂತೆ ಮಾಡಿಕೊಳ್ಳಬೇಡಿ. ಆದಷ್ಟು ನಿಮ್ಮ ಖಾಸಾಗಿ ಮಾಹಿತಿ ನಿಮ್ಮ ಬಳಿಯೇ ಇರಲಿ.

#3

#3

ನಿಮಗೆ ಕರೆ ಮಾಡುವ ಅಪರಿಚಿತ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ನಿರ್ಲಕ್ಷ್ಯ ತೋರುವುದು ಒಳ್ಳೆಯದು. ಬಹುತೇಕ ವಂಚಕರು ನಿಮಗೆ ತಿಳಿಯದ ಭಾಷೆಯಲ್ಲಿ ಹೆದರಿಸಿ ಅಥವಾ ಆಸೆ ಹುಟ್ಟಿಸಿ ನಿಮ್ಮಿಂದ ಹಣವನ್ನು ಸುಲಿಗೆ ಮಾಡುತ್ತಾರೆ. ಇಂರಹ ಕರೆಗಳನ್ನು ಕಟ್ ಮಾಡಿಬಿಡಿ.

#4

#4

ಬ್ಯಾಂಕ್‌ ಖಾತೆ ವಿವರ ಹಂಚಿಕೊಳ್ಳದಿರುವುದು ನೀವು ತಿಳಿಯಲೇಬೇಕಾದ ವಿಷಯ. ಯಾವ ಬ್ಯಾಂಕ್ ಅಧಿಕಾರಿ ಕೂಡ ನಿಮ್ಮಿಂದ ಯಾವುದೇ ಮಾಹಿತಿಯನ್ನು ಪೋನ್ ಅಥವಾ ಇ ಮೇಲ್ ಮೂಲಕ ಪಡೆಯುವುದಿಲ್ಲ. ಹಾಗಾಗಿ, ನಿಮ್ಮ ಯಾವುದೇ ಚಿಕ್ಕ ಬ್ಯಾಂಕ್ ಮಾಹಿತಿಯನ್ನೂ ಕೂಡ ಇತರರೊಂದಿಗೆ ಹಂಚಿಕೊಳ್ಳಬೇಡಿ.

#5

#5

ದುಬಾರಿ ಮೌಲ್ಯದ ಉಡುಗೊರೆ ನೀಡುವ ಆಮಿಷವು ವಂಚನೆಯ ದಾರಿ ಎಂಬುದು ನಿಮಗೆ ನೆನಪಿರಲಿ. ನಿಮ್ಮ ಮೊಬೈಲ್ ನಂಬರ್‌ಗೆ ಬಹುಮಾನ ಬಂದಿದೆ ಎಂಬುದು ಅಪ್ಪಟ ಸುಳ್ಳು. ಅದು ಕೂಡ ಯಾರೋ ಒಬ್ಬ ನಿಮಗೆ ಬಹುಮಾನ ಬಂದಿದೆ ಎಂದು ಕರೆ ಮಾಡುವುದು ಅಪ್ಪಟ ನಕಲಿ ಎಂಬುದು ನೆನಪಿರಲಿ.

#6

#6

ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮಮ್ಮ ವೈಯಕ್ತಿಕ ಮಾಹಿತಿಗಳನ್ನು ಶೇರ್‌ ಮಾಡಬಾರದು, ತಮ್ಮ ಮೊಬೈಲ್‌ ನಂಬರ್‌ ನೊಂದಾಯಿಸದಿರುವುದು ಸೂಕ್ತ. ಮಹಿಳೆಯರು ಈ ಬಗ್ಗೆ ಮತ್ತಷ್ಟು ಜಾಗೃತರಾಗಿದ್ದರೆ ಒಳ್ಳೆಯದು. ಇದರಿಂದ ನಿಮ್ಮನ್ನು ವಂಚಿಸಲು ಅವರಿಗೆ ಸುಲಭ ದಾರಿ ಸಿಗದು.

#7

#7

ನಿಮ್ಮ ಎಟಿಎಂ ಕಾರ್ಡ್‌ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕಾರ್ಡ್ ಮೇಲಿನ ಯಾವುದೇ ನಂಬರ್ ಅನ್ನು ಇತರರ ಬಳಿ ಹಂಚಿಕೊಳ್ಳಬಾರದು. ಅದರಲ್ಲಿ ಒಟಿಪಿಯನ್ನು ಮಾತ್ರ ಹಂಚಿಕೊಳ್ಳಲೇಬಾರದು. ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರಗಳನ್ನು ಅಳವಡಿಸಿರುವ ಬಗ್ಗೆ ಒಮ್ಮೆ ಚೆಕ್ ಮಾಡಿದರೆ ಒಳಿತು.

#8

#8

ಉದ್ಯೋಗಕಾಂಕ್ಷಿಗಳು ಯಾವುದೇ ಕಾರಣಕ್ಕೂ ಆನ್‌ಲೈನ್‌ ಮೂಲಕ ಅಸಂಬದ್ಧ ಸಂದರ್ಶನಕ್ಕೆ ಆಸ್ಪದ ನೀಡಬಾರದು. ನೀವು ಉದ್ಯೋಗ ಸಂದರ್ಶನಕ್ಕೆ ಹಾಜಾರಾದಾಗ ನಿಮ್ಮಿಂದ ಹಣವನ್ನು ಕೇಳುವ ವಂಚನೆ ಜಾಲಗಳನ್ನು ನಂಬಬಾರದು. ಅದರಲ್ಲೂ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳುವವರನ್ನು ನಂಬಲೇಬೇಡಿ.

9#

9#

ಮೊಬೈಲ್‌ ಹಾಗೂ ಅದರೊಳಗಿರುವ ಆಪ್‌ಗಳ ಬಳಕೆ ಬಗ್ಗೆ ಜಾಗೃತರಾಗಿರಬೇಕು. ಹೆಚ್ಚು ಪರಿಚಿತವಲ್ಲದ ಆಪ್‌ಗಳನ್ನು ಬಳಸುವುದು ಒಳ್ಳೆಯ ಕೆಲಸವಲ್ಲ. ಅದರಲ್ಲೂ ಅಪರಿಚಿತ ಆಪ್‌ಗಳಿಗೆ ನಿಮ್ಮ ಬ್ಯಾಂಕ್ ಮಾಹಿತಿಯನ್ನು ನೀಡಲೇಬೇಡಿ. ಒಮ್ಮೆ ನಿಮ್ಮ ಬ್ಯಾಂಕ್ ಮಾಹಿತಿಗಳು ಅವರ ಕೈಸೇರಿದಂರೆ ವಂಚನೆಯಾಗುವುದು ಖಂಡಿತ.

#10

#10

ಲಾಟರಿ ಹೊಡೆದಿದೆ, ಬಹುಮಾನ ಬಂದಿದೆ ಎಂದು ಹೇಳಿಕೊಂಡು ಬರುವ ಕರೆಗಳನ್ನು ಯಾವುದೇ ಕಾರಣಕ್ಕೂ ನಂಬಲೇಬೇಡಿ. ಹೀಗೆ ಕರೆ ಮಾಡುವವರು ನಿಮ್ಮಿಂದ ಹಣ ಪೀಕಲು ನಾನಾ ತರದ ನಾಟಕಗಳನ್ನು ಆಡುತ್ತಾರೆ. ಸೇಲ್ಸ್ ಟ್ಯಾಕ್ಸ್, ಎಕ್ಸ್‌ಚೇಂಜ್ ಟ್ಯಾಕ್ಸ್, ಪಾವತಿ ಶುಲ್ಕ ಎಂದೆಲ್ಲಾ ಹೇಳಿ ನಿಮ್ಮಿಂದ ಹಣವನ್ನು ದೋಚುವ ಕೆಲಸಕ್ಕೆ ಕೈಹಾಕಿರುತ್ತಾರೆ.

#11

#11

ನಿಮ್ಮ ಬ್ಯಾಂಕ್‌ ವ್ಯವಹಾರದ ಕುರಿತು ಯಾವ ವ್ಯಕ್ತಿ ನಿಮ್ಮನ್ನು ಸಂಪರ್ಕಿಸಿದರೂ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಿ. ಏಕೆಂದರೆ, ನಿಮ್ಮ ಕೆಲ ಬ್ಯಾಂಕ್ ಮಾಹಿತಿಗಳು ಈಗಾಗಲೇ ಅವರ ಕೈ ಸೇರಿರಬಹುದು. ಅದರಿಂದಾಗಿ ಅವರು ನಿಮ್ಮಿಂದ ಒಟಿಪಿ ಪಡೆಯಲು ಪ್ರಯತ್ನಿಸಿರಬಹುದು ಎಂಬುದನ್ನು ಮರೆಯದಿರಿ.

#12

#12

ಸೈಬರ್ ವಂಚಕರ ಕುರಿತು ಸಾರ್ವಜನಿಕರು ನಿರ್ಲಕ್ಷ್ಯಮಾಡುವುದು ಕೂಡ ದೊಡ್ಡ ಅಪರಾಧ ಎಂದು ಹೇಳಬಹುದು. ಇತರರಿಗೆ ವಂಚನೆಯಾದಾಗ ನೀವು ಸುಮ್ಮನಿದ್ದರೆ, ನಿಮಗೂ ಒಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಇಂತಹ ಯಾವುದೇ ಘಟನೆಗಳು ಜರುಗಿದರೂ ಪೊಲೀಸ್ ಠಾಣೆಗೆ ದೂರು ನೀಡುವುದನ್ನು ಮರೆಯದಿರಿ.

Most Read Articles
Best Mobiles in India

English summary
As India is heading towards an Information Technology (IT) age the number of Cyber Crime have also been growing at a geometric proportion. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more