ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!

|

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಫೋಟೋ ಸೆರೆಹಿಡಿಯಲು ಇನ್ನೊಬ್ಬರ ಮೇಲೆ ಅವಲಂಭಿತವಾಗುವ ಪರಿಸ್ಥಿತಿಯನ್ನು 'ಸೆಲ್ಫಿ ಪೋಟೋ' ಎನ್ನುವುದು ದೂರವಾಗಿಸಿದೆ. ತಮ್ಮ ಫೋಟೋವನ್ನು ಯಾವುದೇ ಸಂದರ್ಭದಲ್ಲಿ ಬೇಕಾದರೂ ತಾವೇ ಕ್ಲಿಕ್ಕಿಸಿಕೊಳ್ಳಲು ಫ್ರಂಟ್‌ ಕ್ಯಾಮೆರಾ ಆಯ್ಕೆ ಅನುಕೂಲಕರವಾಗಿದ್ದು, ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳು ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಅತ್ಯುತ್ತಮ ಸೆಲ್ಫಿ ಸೆರೆಹಿಡಿಯಬಹುದಾಗಿದೆ.

ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!

ಸಾಮಾನ್ಯವಾಗಿ ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳು ಸೆಲ್ಫಿಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಅವುಗಳಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಬ್ಯಾಕ್‌ ರೇರ್‌ ಕ್ಯಾಮೆರಾಗಿಂತ ಸೆಲ್ಫಿಗಾಗಿ ಹೈ-ಮೆಗಾಪಿಕ್ಸಲ್ ಫ್ರಂಟ್ ಕ್ಯಾಮೆರಾ ನೀಡುತ್ತಿವೆ. ಹೀಗಿದ್ದರೂ ಕೇಲವರಿಗೆ ಅದರಲ್ಲೂ ಹುಡುಗಿಯರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ಸರಿಯಾಗಿ ಮೂಡಿಬರ್ತಿಲ್ಲ ಎನ್ನುವ ಮಾತುಗಳನ್ನು ಆಡುತ್ತಿರುತ್ತಾರೆ.

ಸೆಲ್ಫಿ ಫೋಟೊ ಚೆನ್ನಾಗಿ ಬರಬೇಕೆ?..ಹಾಗಿದ್ರೆ ಈ ಟಿಪ್ಸ್‌ಗಳನ್ನು ಗಮನಿಸಿ!

ಆದರೆ ಕೇಲವು ಅಗತ್ಯ ಸೆಟ್ಟಿಂಗ್ ಅನುಸರಿಸುವ ಮೂಲಕ ಇರುವ ಸ್ಮಾರ್ಟ್‌ಫೋನಿನಲ್ಲಿಯೇ ಅತ್ಯುತ್ತಮ ಸೆಲ್ಫಿ ಫೋಟೊ ಸೆರೆಹಿಡಿಯಬಹುದಾಗಿದ್ದು, ಅದರೊಂದಿಗೆ ಕೇಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಸೆಲ್ಫಿ ಮತ್ತಷ್ಟು ಉತ್ತಮವಾಗಿಸಬಹುದು. ಹಾಗಾದರೇ ಇರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಬೆಸ್ಟ್‌ ಸೆಲ್ಫಿ ಫೋಟೊ ಸೆರೆಹಿಡಿಯಲು ಅನುಸರಿಸಬೇಕಾದ ಟಿಪ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಉತ್ತಮ ಬೆಳಕಿರಲಿ

ಉತ್ತಮ ಬೆಳಕಿರಲಿ

ಫೋಟೊ ಅತ್ಯುತ್ತಮವಾಗಿ ಮೂಡಿಬರಲು ಬೆಳಕಿನ ಪಾತ್ರ ತುಂಬಾ ಮಹತ್ವವಾಗಿದ್ದು, ಈ ಅಂಶ ಸೆಲ್ಫಿಗೆ ಅನ್ವಯಿಸುತ್ತದೆ. ಹೀಗಾಗಿ ಸೆಲ್ಫಿ ಸೆರೆಹಿಡಿಯುವಾಗ ಸಾಧ್ಯವಾದಷ್ಟು ಬೆಳಕಿನತ್ತ ಮುಖಮಾಡಿರಿ ಆಗ ಫೋಟೊ ಉತ್ತಮವಾಗಿ ಮೂಡಿಬರುತ್ತದೆ. ಮುಂಜಾನೆಯ ತಿಳಿ ಬಿಸಿಲು ಬೆಸ್ಟ್‌. ಹಾಗಂತ ಹೆಚ್ಚು ಪ್ರಖರವಾದ ಬೆಳಕು, ಹೆಚ್ಚು ಬಿಸಿಲು ಇದ್ದರೂ ಒಳ್ಳೆಯದಲ್ಲ.

ವೈಲ್ಡ್‌ ಆಂಗಲ್‌ ಮೋಡ್‌

ವೈಲ್ಡ್‌ ಆಂಗಲ್‌ ಮೋಡ್‌

ಗ್ರೂಪ್‌ ಸೆಲ್ಫಿ ಫೋಟೊ ಸೆರೆಹಿಡಿಯುವುದಿದ್ದರೇ ವೈಲ್ಡ್‌ ಆಂಗಲ್‌ ಮೋಡ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಆಗ ಅದು ಪರ್ಫೆಕ್ಟ್ ಸೆಲ್ಫಿ ಎಂದೆನಿಸಿಕೊಳ್ಳುತ್ತದೆ. ಪೋರ್ಟಟ್‌ ಆಂಗಲ್‌ನಲ್ಲಿ ಗ್ರೂಪ್‌ ಸೆಲ್ಫಿ ತೆಗೆದರೇ ಸರಿಯಾಗಿ ಕವರ್‌ ಆಗುವುದಿಲ್ಲ. ಇತ್ತೀಚಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿಯೂ ವೈಲ್ಡ್‌ ಆಂಗಲ್ ಮೋಡ್ ಆಯ್ಕೆ ನೀಡಿರುತ್ತಾರೆ.

ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಫ್ಲ್ಯಾಶ್‌ ಲೈಟ್‌ ಬಳಸಿ

ಫ್ಲ್ಯಾಶ್‌ ಲೈಟ್‌ ಬಳಸಿ

ಒಂದು ವೇಳೆ ರಾತ್ರಿ ಸಮಯದಲ್ಲಿ ಅಥವಾ ಮಂದ ಬೆಳಕಿನಲ್ಲಿ ಸೆಲ್ಫಿ ಸೆರೆಹಿಡಿಯಬೇಕಿದ್ದರೇ ಫ್ರಂಟ್‌ ಫ್ಲ್ಯಾಶ್‌ ಲೈಟ್‌ ಬಳಸಿ ಫೋಟೊದ ಗುಣಮಟ್ಟವನ್ನು ಹೆಚ್ಚಿಸಬಹುದು. ಪ್ರಸ್ತುತ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್‌ ಲೈಟ್‌ ಆಯ್ಕೆಯನ್ನು ಹೊಂದಿರುತ್ತವೆ. ಒಂದು ವೇಳೆ ಫ್ಲ್ಯಾಶ್‌ ಲೈಟ್‌ ಇಲ್ಲದಿದ್ದರೇ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿರಿ.

ಸೆಲ್ಫಿ ಆಪ್ಸ್‌ಗಳನ್ನು ಬಳಸಿ

ಸೆಲ್ಫಿ ಆಪ್ಸ್‌ಗಳನ್ನು ಬಳಸಿ

ಸೆಲ್ಫಿ ಫೋಟೋಗಳನ್ನು ಮತ್ತಷ್ಟು ಉತ್ತಮವಾಗಿಸುವ ಸಲುವಾಗಿ ಅನೇಕ ಸೆಲ್ಫಿ ಪೋಟೊ ಆಪ್ಸ್‌ಗಳು ಪ್ಲೇ ಸ್ಟೋರ್‌ಗಳಲ್ಲಿ ಲಭ್ಯ ಇವೆ. ಉತ್ತಮ ಸೆಲ್ಫಿಗೆ ನಿಮ್ಮ ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳು ಅತ್ಯುತ್ತಮ ಸೆಲ್ಫಿ ಫೋಟೊಗೆ ಬೆಂಬಲಿಸದಿದ್ದರೇ, ಸೆಲ್ಫಿ ಆಪ್ಸ್‌ಗಳನ್ನು ಬಳಸಬಹುದಾಗಿದೆ. ಈ ಸೆಲ್ಫಿ ಆಪ್ಸ್‌ಗಳು ಫೋಟೋ ಉತ್ತಮಗೊಳಿಸುವ ಅನೇಕ ಆಯ್ಕೆಗಳನ್ನು ಹೊಂದಿರುತ್ತವೆ.

ಸೆಲ್ಫಿ ಸ್ಟಿಕ್‌ ಬಳಸಿ

ಸೆಲ್ಫಿ ಸ್ಟಿಕ್‌ ಬಳಸಿ

ಸೆಲ್ಫಿ ಫೋಟೊ ಕ್ಲಿಕ್ಕ್ ಮಾಡಲು ಮಾರುಕಟ್ಟೆಯಲ್ಲಿ ಹಲವು ಉಪಕರಣಗಳಿದ್ದು, ಸೆಲ್ಫಿ ಸ್ಟಿಕ್ ಹೆಚ್ಚು ಜನಪ್ರಿಯತೆ ಪಡೆದಿದೆ. ಸೆಲ್ಫಿ ಸ್ಟಿಕ್‌ನಿಂದ ಪೋಟೊ ಸೆರೆಹಿಡಿಯುವಾಗ ನಿಮ್ಮ ಸುತ್ತಲಿನ ಪ್ರದೇಶವನ್ನು ಸಹ ಕವರ್‌ ಮಾಡಬಹುದಾಗಿದೆ. ಹಾಗೂ ಗ್ರೂಪ್‌ ದೊಡ್ಡದಿದ್ದಾಗಲೂ ಈ ಸೆಲ್ಫಿ ಸ್ಟಿಕ್ ಹೆಚ್ಚು ಉತ್ತಮ ಎನಿಸಲಿದೆ.

ಲವಲವಿಕೆಯ ಸ್ಮೈಲ್ ನೀಡಿ

ಲವಲವಿಕೆಯ ಸ್ಮೈಲ್ ನೀಡಿ

ಸೆಲ್ಫಿ ಫೋಟೊವು ಅತ್ಯುತ್ತಮವಾಗಿ ಮೂಡಿಬರಲು ಫೋಟೊದಲ್ಲಿ ನೀವು ಚೆನ್ನಾಗಿ ಕಾಣುವುದು ಅಷ್ಟೇ ಮುಖ್ಯ. ಹೀಗಾಗಿ ಫೋಟೊ ಸೆರೆಹಿಡಿಯುವಾಗ ಸೆಲ್ಫಿಗೆ ಲವಲವಿಕೆಯ ಸ್ಮೈಲ್‌ ನೀಡಿರಿ. ನಗುಮೋಗವು ಫೋಟೊದ ಅಂಧವನ್ನು ಮತ್ತಷ್ಟು ಬ್ಯೂಟಿಫುಲ್‌ ಆಗಿಸುತ್ತದೆ. ಕ್ಯಾಮೆರಾವನ್ನು ನಿಮ್ಮ ಕಣ್ಣುಗಳ ನೇರಕ್ಕಿಂತ ಎತ್ತರದಲ್ಲಿ ಹಿಡಿಯಿರಿ ಮತ್ತು ಕ್ಯಾಮೆರಾ ಲೆನ್ಸ್‌ಗಳತ್ತ ನಿಮ್ಮ ದೃಷ್ಠಿ ಇರಲಿ.

ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!

Most Read Articles
Best Mobiles in India

English summary
here are some tips to Improve Selfies on smartphone. to know more visit to kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more