ಫೋನಿನಲ್ಲಿ ಬೆಸ್ಟ್ ಫೋಟೊ ಸೆರೆಹಿಡಿಯಬೇಕೆ?..ಹಾಗಿದ್ರೆ ಇಲ್ಲಿವೆ ನೋಡಿ ಟಿಪ್ಸ್!

|

ಫೋಟೊಗ್ರಫಿ ಎಂದರೇ ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಆದರೆ ಕೆಲವರಿಗೆ ಫೋಟೊಗ್ರಫಿ ಅನ್ನೋದು ಹವ್ಯಾಸವಾಗಿದ್ದರೇ. ಇನ್ನೂ ಕೇಲವರಿಗೆ ಅದೇ ವೃತ್ತಿಯಾಗಿರುತ್ತದೆ. ಹವ್ಯಾಸಿ ಫೋಟೊಗ್ರಫರ್‌ಗಳು ಸಹ ಈಗ ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುತ್ತಾರೆ. ಆದರೆ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಫೋಟೊ ಸೆರೆಹಿಡಿಯುವ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿದ್ದು, ಫೋಟೊಗ್ರಫಿಗೆ ಉತ್ತಮ ಪ್ಲಾಟ್‌ಫಾರ್ಮ್ ಒದಗಿಸುತ್ತಿವೆ. ಫೋಟೊ ಸೆರೆಹಿಡಿಯುವವರಲ್ಲಿ ಆಸಕ್ತಿ ಜೊತೆಗೆ ಫೋಟೊ ಕ್ಲಿಕ್ಕಿಸಲು ವಾತಾವರಣದ ಬೇಸಿಕ್ ಟಿಪ್ಸ್‌ ಬಗ್ಗೆ ಗೊತ್ತಿದ್ದರೇ, ಲಭ್ಯ ಇರುವ ಫೋನ್ ಕ್ಯಾಮೆರಾ ಸೆನ್ಸಾರ್‌ಗಳಲ್ಲಿಯೇ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಫೋನಿನಲ್ಲಿ ಫೋಟೊ ಸೆರೆಹಿಡಿಯುವ ಕೆಲವು ಅಗತ್ಯ ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಅಗತ್ಯ ಇದ್ದಾಗ ಮಾತ್ರ ಫ್ಲ್ಯಾಶ್ ಬಳಸಿ

ಅಗತ್ಯ ಇದ್ದಾಗ ಮಾತ್ರ ಫ್ಲ್ಯಾಶ್ ಬಳಸಿ

ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್ ಲೈಟ್ ನೀಡಿರುತ್ತಾರೆ. ಪ್ರತಿ ಬಾರಿ ಫೋಟೊ ಸೆರೆಹಿಡಿಯುವಾಗಲು ಫ್ಲ್ಯಾಶ್ ಲೈಟ್ ಬಳಸುವುದು ಉತ್ತಮವಲ್ಲ. ಡಾರ್ಕ/ಮಂದಬೆಳಕು ಇದ್ದಾಗ ಮತ್ತು ಎಕ್ಸ್‌ಟ್ರಾ ಲೈಟಿಂಗ್ ಬೇಕು ಅಂದಾಗ ಮಾತ್ರ ಫ್ಲ್ಯಾಶ್ ಲೈಟ್ ಬಳಕೆ ಮಾಡಿ. ಅನಗತ್ಯವಾಗಿ ಫ್ಲ್ಯಾಶ್ ಲೈಟ್ ಬಳಸಿದರೇ ಫೋಟೊದಲ್ಲಿ ಲೈಟ್ ಸ್ಪಾಟ್ ಕಾಣಿಸುತ್ತದೆ.

ಜೂಮ್ ಜರೂರಿ ಇಲ್ಲ

ಜೂಮ್ ಜರೂರಿ ಇಲ್ಲ

ಫೋನಿನಲ್ಲಿ ಫೋಟೊ ಕ್ಲಿಕ್ಕಿಸುವಾಗ ಇಮೇಜ್‌ಗಳನ್ನು ಕ್ಲೋಸ್‌ಅಪ್‌ನಲ್ಲಿ ಇರಲಿ ಎಂದು ಜೂಮ್ ಮಾಡುವುದರಿಂದ ಫೋಟೊ ಪಿಕ್ಸಲ್ ಗುಣಮಟ್ಟ ಉತ್ತಮವಾಗಿ ಮೂಡಿಬರುವುದಿಲ್ಲ. ಜೊತೆಗೆ ಫೋಟೊ ಕ್ವಾಲಿಟಿ ಸಹ ಅಷ್ಟೇನು ಗುಣಮಟ್ಟದಲ್ಲಿ ಸೆರೆಯಾಗುವುದಿಲ್ಲ. ಹೀಗಾಗಿ ಫೋಟೊ ಕ್ಲಿಕ್ಕಿಸುವಾಗ ಅನಗತ್ಯವಾಗಿ ಜೂಮ್ ಮಾಡಲೇಬೇಡಿ.

ನೆರಳಿದ್ದರೇ ಬೆಸ್ಟ್

ನೆರಳಿದ್ದರೇ ಬೆಸ್ಟ್

ಮರದ ಅಥವಾ ಕಟ್ಟಡದ ನೆರಳಿನಲ್ಲಿ ನಿಂತು ಫೋಟೊ ಕ್ಲಿಕ್ಕಿಸುವುದು ಉತ್ತಮ. ಹಾಗೇ ಫೋಟೊ ಸೆರೆಹಿಡಿಯುವಾಗ ಮುಖದ ಸುತ್ತಲೂ ಉತ್ತಮ ಬೆಳಕನ್ನು ಇರುವುದನ್ನು ಗಮನಿಸಿ. ಈಗಂತೂ ಫೋನ್ ಕ್ಯಾಮೆರಾಗಳಲ್ಲಿ ಅಗತ್ಯ ಸೆಟ್ಟಿಂಗ್ ಆಯ್ಕೆಗಳು ಲಭ್ಯ ಇದ್ದು, ಅವುಗಳನ್ನು ಅಗತ್ಯತೆಗೆ ಸೆಟ್‌ಮಾಡಿಕೊಂಡು ಫೋಟೊ ಸೆರೆಹಿಡಿಯಿರಿ. ಇಲ್ಲವೇ ಆಟೋ ಮೋಡ್‌ನಲ್ಲಿ ಇಡಿ.

ಫೋಕಸ್‌ ಮಾಡಿ

ಫೋಕಸ್‌ ಮಾಡಿ

ಫೋಟೊ ಸೆರೆಹಿಡಿಯುವಾಗ ಫೋನ್ ಕ್ಯಾಮೆರಾ ತೆರೆದು ತಕ್ಷಣಕ್ಕೆ ಫೋಟೊ ಕ್ಲಿಕ್ ಮಾಡಬೇಡಿ. ನೀವು ಫೋಟೊ ಸೆರೆಹಿಡಿಯುವ ವ್ಯಕ್ತಿ/ಇಮೇಜ್ ಅನ್ನು ಫೋಕಸ್ ಮಾಡಿ. ಇಂದಿನ ಪ್ರತಿ ಫೋನ್‌ಗಳಲ್ಲಿ ಫೋಕಸ್ ಆಯ್ಕೆ ಇರುತ್ತದೆ. ಫೋಕಸ್ ಮಾಡದೇ ಸೆರೆಹಿಡಿದ ಫೋಟೊಗಳು ಸಾಧಾರಣ ಮಟ್ಟದಲ್ಲಿ ಇರುತ್ತವೆ. ಅದೇ ಫೋಕಸ್ ಮಾಡಿದಾಗ ಫೋಟೊ ಅತ್ಯುತ್ತಮವಾಗಿ ಮೂಡಿಬರಲಿದೆ.

ಕ್ಯಾಮೆರಾ ಸ್ಟಡಿ ಇರಲಿ

ಕ್ಯಾಮೆರಾ ಸ್ಟಡಿ ಇರಲಿ

ಫೋನಿನಲ್ಲಿ ಫೋಟೊ ಸೆರೆಹಿಡಿಯುವಾಗ ಫೋಕಸ್ ಮಾಡಿ ಜೊತೆಗೆ ಕ್ಯಾಮೆರಾ ಸ್ಟಡಿಯಾಗಿ ಹಿಡಿದು ಕ್ಲಿಕ್ ಮಾಡಿ. ಫೋಟೊ ಕ್ಲಿಕ್ಕಿಸುವಾಗ ಕೈ ಶೇಕ್ ಮಾಡಿದರೇ ಫೋಟೊಗಳು ಮರ್ಜ/ಮಸಕು ಮಸಕಾಗಿ ಮೂಡಿಬಂದಂತೆ ಕಾಣಿಸುತ್ತವೆ.

Most Read Articles
Best Mobiles in India

English summary
Smartphone photography has improved hugely over the last few years. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X