ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?

|

ಪ್ರಸ್ತುತ ನಾವೆಲ್ಲರೂ ಸ್ಮಾರ್ಟ್‌ಫೋನ್‌ ಮೇಲೆ ಹೆಚ್ಚಾಗಿ ಅವಲಂಭಿತವಾಗಿದ್ದು, ಅನೇಕ ಕೆಲಸಗಳನ್ನು ಫೋನ್‌ ಮೂಲಕವೇ ನಡೆಸುತ್ತೆವೆ. ಅಗತ್ಯ ದಾಖಲೆಗಳು, ಪಾಸ್‌ವರ್ಡ್‌ ಮತ್ತು ಖಾಸಗಿ ಮಾಹಿತಿ ಎಲ್ಲವನ್ನು ಫೋನಿನಲ್ಲಿಯೇ ಸ್ಟೋರ್‌ ಮಾಡಿಕೊಂಡಿರುತ್ತೆವೆ, ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಅಚಾನಕಾಗಿ ಸ್ಮಾರ್ಟ್‌ಫೋನ್‌ ಕಳೆದುಹೋದರೇ.?

ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?

ಹೌದು, ಕೆಲಸಗಳಿಗೆ ಅಗತ್ಯವಾಗಿರುವ ಸ್ಮಾರ್ಟ್‌ಫೋನ್‌ ಒಂದು ವೇಳೆ ಕಳೆದುಹೋದರೇ ಒಮ್ಮಿಂದೊಮ್ಮಿಗೆ ಟೆನ್ಷನ್ ಶುರುವಾಗಿಬಿಡುತ್ತದೆ ಅಲ್ಲವೇ. ಆಗ ಪೋಲಿಸ್‌ ಕಂಪ್ಲೇಟ್‌ ಕೊಡಲು ಮುಂದಾಗುತ್ತದೆ. ಆದ್ರೆ ಕಳೆದುಹೋದ ಸ್ಮಾರ್ಟ್‌ಫೋನ್‌ ಹುಡುಕುವಲ್ಲಿ ಟೆಕ್‌ ದೈತ್ಯ ಗೂಗಲ್ ನೆರವಾಗಲಿದ್ದು, ಲೊಕೇಶನ್ ಟ್ರಾಕ್ ಮಾಡಬಹುದು. ಹಾಗಾದರೇ ಗೂಗಲ್‌ನಲ್ಲಿ ಕಳೆದುಹೋದ ಫೋನಿನ ಲೊಕೇಶನ್ ಟ್ರಾಕ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಐಫೋನ್‌ ಫೋಟೊಗ್ರಫಿ ಸ್ಪರ್ಧೆ!..ಭಾರತಕ್ಕೆ ಒಲಿದ ಫಸ್ಟ್‌ ಪ್ರೈಜ್‌!

ಡೆಸ್ಕ್‌ಟಾಪ್‌ನಲ್ಲಿ ರಿಕವರಿ ಹೀಗೆ ಮಾಡಿ

ಡೆಸ್ಕ್‌ಟಾಪ್‌ನಲ್ಲಿ ರಿಕವರಿ ಹೀಗೆ ಮಾಡಿ

* ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ಜಿಮೇಲ್ ಅಕೌಂಟ್‌ನಲ್ಲಿ ಹೋಮ್‌ಪೇಜ್‌ ತೆರೆಯಿರಿ

* ಗೂಗಲ್ ಅಕೌಂಟ್‌ನಲ್ಲಿ ಎಡಬದಿಯಲ್ಲಿನ ಸೆಕ್ಯುರಿಟಿ ಆಯ್ಕೆ ಸೆಲೆಕ್ಟ್‌ ಮಾಡಿ.

* ಯೂವರ್ ಡಿವೈಸ್‌ನಲ್ಲಿ ಫೈಂಡ್‌ ಲಾಸ್ಟ್‌ ಅಥವಾ ಸ್ಟೋಲನ್ ಫೋನ್ ಆಯ್ಕೆ ತೆರೆಯಿರಿ

* ಸೆಲೆಕ್ಟ್‌ ದಿ ಡಿವೈಸ್‌(ನಿಮ್ಮ ಕಳೆದುಹೋದ ಡಿವೈಸ್‌ ಸೆಲೆಕ್ಟ್ ಮಾಡಿರಿ)

ಫೋನಿನಲ್ಲಿ ರಿಕವರಿ ಹೀಗೆ ಮಾಡಿ

ಫೋನಿನಲ್ಲಿ ರಿಕವರಿ ಹೀಗೆ ಮಾಡಿ

* ನಿಮ್ಮದೇ ಇನ್ನೊಂದು ಫೋನಿನಲ್ಲಿ ಅಥವಾ ನಿಮ್ಮ ಪರಿಚಿತರ ಫೋನಿನಲ್ಲಿ ಜಿ-ಮೇಲ್ ಆಪ್ ತೆರೆಯಿರಿ

* ಸೆಕ್ಯುರಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ

* ಯೂವರ್ ಡಿವೈಸ್‌ ಆಯ್ಕೆಯಲ್ಲಿ ಫೈಂಡ್‌ ಲಾಸ್ಟ್‌ ಅಥವಾ ಸ್ಟೋಲನ್ ಫೋನ್ ಆಯ್ಕೆ ಕ್ಲಿಕ್ ಮಾಡಿ

* ಹತ್ತಿರದ ಲೊಕೇಶನ್‌ನಲ್ಲಿ ಫೋನ್‌ ಇದ್ರೇ ಗ್ರೀನ್‌ ಲೈಟ್‌ ತೋರಿಸುತ್ತದೆ. ಅನ್‌ನೌನ್‌ ಲೊಕೇಶನ್ ಆಗಿದ್ದರೇ ಗ್ರೇ ಬಣ್ಣ ತೋರಿಸುತ್ತದೆ.

* ಪೋನ್‌ ಲೊಕೇಶನ್‌ ಹತ್ತಿರವೇ ಇದ್ದಾಗ 'ಪ್ಲೇ ಸೌಂಡ್‌' ಆಯ್ಕೆ ಕ್ಲಿಕ್ ಮಾಡಿ.

* ಆಗ ಫೋನ್‌ ಸೈಲೆಂಟ್‌ ಮೋಡ್‌ನಲ್ಲಿದ್ದರೂ ರಿಂಗ್ ಆಗುತ್ತದೆ.

ಓದಿರಿ : ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

ಮಾಹಿತಿ ಸುರಕ್ಷಿತೆಯ ಆಯ್ಕೆ

ಮಾಹಿತಿ ಸುರಕ್ಷಿತೆಯ ಆಯ್ಕೆ

ಗೂಗಲ್ ಅಕೌಂಟ್ ಪಾಸ್‌ವರ್ಡ್‌ ಇರದಿದ್ದರೇ , ಗೂಗಲ್ ಸೆಕ್ಯುರ್ ಡಿವೈಸ್‌ ಕಳೆದುಹೋದ ಫೋನಿನಲ್ಲಿರುವ ಮಾಹಿತಿಯ ಸುರಕ್ಷತೆಗಾಗಿ ಫೋನ್‌ ಅನ್ನು ಲಾಕ್ ಮಾಡುತ್ತದೆ. ಹಾಗೆಯೇ ಇರೇಜ್‌ ದ ಡಿವೈಸ್‌ ಆಯ್ಕೆ ಸಹ ನೀಡಲಾಗಿದ್ದು, ಎಲ್ಲ ಪ್ರಯತ್ನಗಳು ಮಾಡಿದರೂ ಸ್ಮಾರ್ಟ್‌ಫೋನ್‌ ದೊರೆಯದೆ ಹೋದಾಗ ಈ ಆಯ್ಕೆ ಬಳಸಬಹುದು.

ಓದಿರಿ : ಅಗ್ಗದ ಬೆಲೆಗೆ ಲಭ್ಯವಿರುವ 5 ಫಿಟ್ನೆಸ್‌ ಬ್ಯಾಂಡ್‌ಗಳು!

ಗೂಗಲ್ ಫೈಂಡ್‌ ಮೈ ಡಿವೈಸ್‌ ಆಪ್

ಗೂಗಲ್ ಫೈಂಡ್‌ ಮೈ ಡಿವೈಸ್‌ ಆಪ್

ಫೋನ್‌ ಟ್ರಾಕ್‌ ಮಾಡಲು 'ಗೂಗಲ್ ಫೈಂಡ್ ಮೈ ಡಿವೈಸ್‌ ಆಪ್‌' ಅನ್ನು ಸಹ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಈ ಆಪ್‌ನಲ್ಲಿ ಬಹುತೇಕ ಜಿಮೇಲ್ ರಿಕವರಿ ಮಾಡುವಂತೆ ಆಯ್ಕೆಗಳಿವೆ. ಜೊತೆಗೆ 'ಇನ್‌ಡೋರ್‌ ಗೂಗಲ್ ಮ್ಯಾಪ್‌' ಆಯ್ಕೆ ಇದರ ವಿಶೇಷವಾಗಿದ್ದು, ಮಾಲ್, ಏರ್‌ಪೋರ್ಟ್‌ ಇಂತಹ ಸ್ಥಳಗಳಲ್ಲಿ ಫೋನ್‌ ಕಳೆದಿದ್ದರೇ ಟ್ರಾಕ್ ಮಾಡಲು ಈ ಆಪ್ ಹೆಚ್ಚು ನೆರವಾಗಲಿದೆ.

ಓದಿರಿ : BSNLನಿಂದ ಎರಡು ಹೊಸ ಪ್ಲ್ಯಾನ್‌ ಲಾಂಚ್!.270 ದಿನಗಳ ವ್ಯಾಲಿಡಿಟಿ!

Most Read Articles
Best Mobiles in India

English summary
google settings will enable you to track your smartphone regardless of the location. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more