ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಂ ಅಕೌಂಟ್‌ನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ..?

By Gizbot Bureau
|

ಫೇಸ್‌ಬುಕ್‌ ಸಂಸ್ಥೆಯು ತನ್ನ ಗೌಪ್ಯತಾ ನೀತಿಯಲ್ಲಿ ಬಳಕೆದಾರರ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿತ್ತು. ಆದರೆ, ವಾಟ್ಸ್‌ಆಪ್‌ನ ಹೊಸ ಪ್ರೈವೆಸಿ ಪಾಲಿಸಿಯಿಂದ ಇದು ಹದಗೆಟ್ಟಿದೆ. ಆದ್ದರಿಂದ ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂಗೆ ನೀವು ಸಂಪೂರ್ಣವಾಗಿ ಕೊನೆ ಹಾಡಲು ಬಯಸಿದ್ದರೆ, ನೀವು ಉತ್ತಮವಾದ ಸ್ಥಳದಲ್ಲಿಯೇ ಇದ್ದೀರಿ ಎಂಬುದು ಖಚಿತ.

ವಾಟ್ಸ್‌ಆಪ್‌ ಇನ್‌ಸ್ಟಾಗ್ರಾಂ ಅಕೌಂಟ್‌ನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ

ಇಲ್ಲಿ ನಾವು ನಿಮಗೆ ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತೇವೆ. ನಿಮ್ಮ ಯಾವುದೇ ಮಾಹಿತಿ, ಡೇಟಾ ಕಳೆದುಕೊಳ್ಳದೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡಿ. ಹಾಗಿದ್ದರೆ ಏಕೆ ತಡ? ಮುಂದಿನ ಹಂತಗಳನ್ನು ಅನುಸರಿಸಿ.

ವಾಟ್ಸ್‌ಆಪ್‌

ವಾಟ್ಸ್‌ಆಪ್‌

ವಾಟ್ಸ್‌ಆಪ್‌ ಮಾಹಿತಿಯನ್ನು ಹೇಗೆ ಡೌನ್‌ಲೋಡ್‌ ಮಾಡುವುದು..?

ಒಂದೇ ಬಾರಿಗೆ ಎಲ್ಲಾ ಮಾಹಿತಿಯನ್ನು ಡೌನ್‌ಲೋಡ್‌ ಮಾಡಲು ವಾಟ್ಸ್‌ಆಪ್‌ ಅನುಮತಿಸುವುದಿಲ್ಲ. ನಿಮ್ಮ ಫೋಟೋ, ವಿಡಿಯೋ, ಡಾಕ್ಯುಮೆಂಟ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಈಗಾಗಲೇ ಶೇಖರಣೆಯಾಗಿರುತ್ತವೆ. ವಾಟ್ಸ್‌ಆಪ್‌ ಫೋಲ್ಡರ್‌ನ್ನು ಬ್ಯಾಕ್‌ಅಪ್‌ ಮಾಡಿಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಅದಾದ ಬಳಿಕ ನೀವು ಚಾಟ್‌ಗಳನ್ನು ಮಾತ್ರ ಉಳಿಸಿಕೊಳ್ಳಲು ಗಮನಹರಿಸಬೇಕಾಗುತ್ತದೆ. ಆದರೆ, ಒಂದೇ ಬಾರಿಗೆ ಎಲ್ಲಾ ಚಾಟ್‌ಗಳನ್ನು ಸೇವ್‌ ಮಾಡಲು ಆಗುವುದಿಲ್ಲ. ಆದ್ದರಿಂದ ಒಂದೊಂದೆ ಚಾಟ್‌ಗಳನ್ನು ಸೇವ್‌ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನೀವು ವಾಟ್ಸ್‌ಆಪ್‌ ಒಪನ್‌ ಮಾಡಿ > ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ > ಅದರಲ್ಲಿ ಚಾಟ್ಸ್‌ ಆಯ್ಕೆ ಕ್ಲಿಕ್‌ ಮಾಡಿ > ಅಲ್ಲಿ ಚಾಟ್‌ ಇತಿಹಾಸ ಆಯ್ದುಕೊಳ್ಳಿ > ನಂತರ ಎಕ್ಸ್‌ಪೋರ್ಟ್‌ ಚಾಟ್‌ ಕ್ಲಿಕ್‌ ಮಾಡಿ.

ಬಳಿಕ ನಿಮಗೆ ಚಾಟ್‌ ಎಕ್ಸ್‌ಪೋರ್ಟ್‌ ಆಗಬೇಕಾಗಿರುವ ಕಾಂಟ್ಯಾಕ್ಟ್‌ ಮೇಲೆ ಟ್ಯಾಪ್‌ ಮಾಡಿ. ಕೇವಲ ಚಾಟ್‌ ಅಷ್ಟೇ ಅಲ್ಲದೇ ಅಗತ್ಯವಿದ್ದಲ್ಲಿ ಮಲ್ಟಿಮೀಡಿಯಾ ಕಂಟೆಂಟ್‌ನ್ನು ಕೂಡ ನೀವು ಎಕ್ಸ್‌ಪೋರ್ಟ್‌ ಮಾಡಬಹುದು. ಇದನ್ನೇ ಬೇರೆ ಚಾಟ್‌ಗಳಿಗೂ ಅನ್ವಯಿಸಿ, ಅಗತ್ಯವಿರುವ ಚಾಟ್‌ಗಳನ್ನು ಎಕ್ಸ್‌ಪೋರ್ಟ್‌ ಮಾಡಿ.

ವಾಟ್ಸ್‌ಆಪ್‌ನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ..?

ವಾಟ್ಸ್‌ಆಪ್‌ನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ..?

1. ವಾಟ್ಸ್‌ಆಪ್‌ ಒಪನ್‌ ಮಾಡಿ, ಸೆಟ್ಟಿಂಗ್ಸ್‌ ಆಯ್ಕೆ ಕ್ಲಿಕ್‌ ಮಾಡಿ.

2. ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್ಸ್‌ ಮೇಲೆ ಟ್ಯಾಪ್‌ ಮಾಡಿ, ಡಿಲೀಟ್‌ ಮೈ ಅಕೌಂಟ್‌ ಎಂಬುದನ್ನು ಆಯ್ದುಕೊಳ್ಳಿ.

3. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದಿಸುವ ಮೂಲಕ ಪರಿಶೀಲನೆ ನಡೆಸಿ. ಬಳಿಕ ಡಿಲೀಟ್‌ ಮೈ ಅಕೌಂಟ್‌ ಬಟನ್‌ ಕ್ಲಿಕ್‌ ಮಾಡಿ. ನಿಮ್ಮ ವಾಟ್ಸ್‌ಆಪ್‌ ಖಾತೆ ಶಾಶ್ವತವಾಗಿ ಡಿಲೀಟ್‌ ಆಗುತ್ತದೆ.

ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ಮಾಹಿತಿಯನ್ನು ಹೇಗೆ ಡೌನ್‌ಲೋಡ್‌ ಮಾಡುವುದು..?

ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ಮಾಹಿತಿಯನ್ನು ಒಂದೇ ಬಾರಿಗೆ ಡೌನ್‌ಲೋಡ್‌ ಮಾಡಿಕೊಳ್ಳಲು ಆಯ್ಕೆಯನ್ನು ನೀಡಲಾಗಿದೆ. ಇದಕ್ಕಾಗಿ ನೀವು ಇನ್‌ಸ್ಟಾಗ್ರಾಂ ಒಪನ್‌ ಮಾಡಿ > ಸೆಟ್ಟಿಂಗ್ಸ್‌ಗೆ ಹೋಗಿ > ಬಳಿಕ ಅಲ್ಲಿರುವ ಸೆಕ್ಯೂರಿಟಿ ಆಯ್ಕೆ ಕ್ಲಿಕ್‌ ಮಾಡಿ > ಡೌನ್‌ಲೋಡ್‌ ಡೇಟಾ > ಬಳಿಕ ಇಮೇಲ್‌ ಐಡಿಯನ್ನು ನಮೂದಿಸಿ. ಅದಾದ ನಂತರ ರಿಕ್ವೆಸ್ಟ್‌ ಡೌನ್‌ಲೋಡ್‌ ಎಂಬ ಆಯ್ಕೆ ಕ್ಲಿಕ್‌ ಮಾಡಿ. ಬಳಿಕ ಪಾಸ್‌ವರ್ಡ್‌ ನಮೂದಿಸಿ ಪರಿಶೀಲಿಸಿ.

ಇನ್‌ಸ್ಟಾಗ್ರಾಂ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ..?

ತನ್ನ ಆಪ್‌ನಲ್ಲಿ ಅಕೌಂಟ್‌ನ್ನು ಡಿಲೀಟ್‌ ಮಾಡುವ ಆಯ್ಕೆಯನ್ನು ಇನ್‌ಸ್ಟಾಗ್ರಾಂ ನೀಡಿಲ್ಲ. ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ಇನ್‌ಸ್ಟಾಗ್ರಾಂಗೆ ಲಾಗಿನ್‌ ಆಗಿ ಅಕೌಂಟ್‌ ಡಿಲೀಟ್‌ ಮಾಡಬಹುದು.

ಇನ್‌ಸ್ಟಾಗ್ರಾಂ

1. https://www.instagram.com/accounts/login/?next=/accounts/remove/request/permanent/ ಈ ಲಿಂಕ್‌ ಕ್ಲಿಕ್‌ ಮಾಡಿ, ಇನ್‌ಸ್ಟಾಗ್ರಾಂ ಯುಸರ್‌ನೇಮ್‌‌, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗಿ.

2. ಇನ್‌ಸ್ಟಾಗ್ರಾಂ ಅಕೌಂಟ್‌ ಡಿಲೀಟ್‌ ಮಾಡಲು ಕಾರಣ ನೀಡಿ, ಪಾಸ್‌ವರ್ಡ್‌ ಹಾಕಿ ವೆರಿಫೈ ಮಾಡಿ. ಬಳಿಕ ಶಾಶ್ವತ ಡಿಲೀಟ್‌ ಅಕೌಂಟ್‌ ಬಟನ್‌ ಕ್ಲಿಕ್‌ ಮಾಡಿ.

Most Read Articles
Best Mobiles in India

English summary
Here's How To Delete WhatsApp, Instagram Account Without Losing Any Data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X