ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ?

|

ಭಾರತದ ನಾಗರಿಕರು ಹೊಂದಿರಲೇಬೇಕಾದ ಪ್ರಮುಖ ದಾಖಲೆಗಳಲ್ಲಿ ವೋಟರ್‌ ಐಡಿ ಕೂಡ ಒಂದಾಗಿದೆ. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಕೂಡ ವೋಟರ್‌ ಐಡಿ ಪಡೆಯುವುದಕ್ಕೆ ಅರ್ಹರಾಗಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮುಂದಿನ ತಿಂಗಳು ಮೇ 10 ಕ್ಕೆ ಮತದಾನ ನಿಗದಿಯಾಗಿದೆ. ಈ ಸಂದರ್ಭಲ್ಲಿ ನಿಮ್ಮ ವೋಟರ್‌ ಐಡಿಯನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ?

ಹೌದು, ವೋಟರ್‌ ಐಡಿ ಕೇವಲ ಮತ ಚಲಾಯಿಸುವುದಕ್ಕೆ ಮಾತ್ರವಲ್ಲ ನಿಮ್ಮ ಗುರುತಿನ ಚೀಟಿಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಹದಿನೆಂಟು ವರ್ಷ ತುಂಬಿದ ನಂತರ ಪ್ರತಿಯೊಬ್ಬರು ಕೂಡ ವೋಟರ್‌ ಐಡಿ ಪಡೆಯಲು ಬಯಸುತ್ತಾರೆ. ಸದ್ಯ ಟೆಕ್ನಾಲಜಿ ಮುಂದುವರೆದಂತೆ ವೋಟರ್‌ ಐಡಿಯನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ಅಷ್ಟೇ ಯಾಕೆ ನಿಮ್ಮ ವೋಟರ್‌ ಐಡಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಸ್ತುತ ದಿನಗಳಲ್ಲಿ ನೀವು https://eci.gov.in/e-epic/ ವೆಬ್‌ಸೈಟ್‌ಗೆ ಬೇಟಿ ನೀಡುವ ಮೂಲಕ ವೋಟರ್‌ ಐಡಿಯನ್ನು ಡೌನ್‌ಲೋಡ್‌ ಮಾಡಬಹುದು. ಅಲ್ಲದೆ ಈ ವೆಬ್‌ಸೈಟ್‌ಗೆ ಪ್ರವೇಶಿಸುವ ಮೂಲಕ ನಿಮ್ಮ ವೋಟರ್‌ ಐಡಿಯಲ್ಲಿ ಅ್ರಡೆಸ್‌ ಚೇಂಜ್‌ ಮಾಡಬಹುದು, ಅಲ್ಲದೆ ಡಿಜಿಟಲ್‌ ವೋಟರ್‌ ಐಡಿಯನ್ನು ಕೂಡ ಮಾಡಬಹುದಾಗಿದೆ. ಇನ್ನು ನೀವು https://eci.gov.in/e-epic/ ವೆಬ್‌ಸೈಟ್‌ಗೆ ಮೊದಲ ಬಾರಿಗೆ ಎಂಟ್ರಿ ನೀಡಿದರೆ ನಿಮ್ಮ ಫೋನ್ ಸಂಖ್ಯೆಯನ್ನು ಬಳಸಿಕೊಂಡು ರಿಜಿಸ್ಟರ್‌ ಮಾಡಿಕೊಳ್ಳಬೇಕಾಗುತ್ತದೆ. ನಂತರ ನೀವು ಪೋರ್ಟಲ್‌ಗೆ ಪ್ರವೇಶಿಸಿದ ನಂತರ, ಡೌನ್‌ಲೋಡ್ ಇ-ಎಪಿಕ್ ಮೇಲೆ ಕ್ಲಿಕ್ ಮಾಡುವ ಮೂಲಕ ವೋಟರ್‌ ಐಡಿ ಡೌನ್‌ಲೋಡ್‌ ಮಾಡಬಹುದು.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ?

ಇನ್ನು ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಪಡೆಯುವುದಕ್ಕೆ Https://voterportal.eci.gov.in/ ಗೆ ಭೇಟಿ ನೀಡುವ ಮೂಲಕ ನಿಮ್ಮ ಇ-ಇಪಿಐಸಿ ಕಾರ್ಡ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಮೊಬೈಲ್ ಅಪ್ಲಿಕೇಶನ್ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

E-EPIC ಮತದಾರರ ಗುರುತಿನ ಚೀಟಿ ಪಿಡಿಎಫ್ ಸ್ವರೂಪದಲ್ಲಿರುತ್ತದೆ, ಮತ್ತು ಆ ಫೈಲ್ ಅನ್ನು ಸುಲಭವಾಗಿ ಹಾಳುಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಡಿಜಿಟಲ್ ಮತದಾರರ ಗುರುತಿನ ಚೀಟಿಯು ಕ್ಯೂಆರ್ ಕೋಡ್, ಮತದಾರರ ಛಾಯಾಚಿತ್ರ ಮತ್ತು ಸರಣಿ ಸಂಖ್ಯೆಯಂತಹ ಕೆಲವು ಭದ್ರತಾ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ?

ಆನ್‌ಲೈನ್‌ ನಿಮ್ಮ ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ?
ಹಂತ:1 ಮೊದಲಿಗೆ ನೀವು www.nvsp.in ನಲ್ಲಿ ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್‌ಗೆ ಲಾಗ್ ಇನ್ ಮಾಡಿ
ಹಂತ:2 ನಂತರ ಹೊಸ ಮತದಾರರ ನೋಂದಣಿ ಅಥವಾ AC ಯಿಂದ AC ಗೆ ವರ್ಗಾವಣೆಗಾಗಿ ಆನ್‌ಲೈನ್ ಅರ್ಜಿಯ ಅಡಿಯಲ್ಲಿ ನೀವು ಫಾರ್ಮ್ 6 ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:3 ನೀವು ಅದೇ ಕ್ಷೇತ್ರದೊಳಗೆ ಒಂದು ನಿವಾಸದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಿದ್ದರೆ, ಫಾರ್ಮ್ 8A ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:4 ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ರಾಜ್ಯ, ಕ್ಷೇತ್ರ, ಪ್ರಸ್ತುತ ಶಾಶ್ವತ ವಿಳಾಸ ಸೇರಿದಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
ಹಂತ:5 ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳು ಐಚ್ಛಿಕವಾಗಿದ್ದು, ನಿಮ್ಮ ಬಳಿಯಿದ್ದರೆ ತುಂಬಿರಿ.
ಹಂತ:6 ಭಾವಚಿತ್ರ, ವಿಳಾಸ ಪುರಾವೆ ಮತ್ತು ವಯಸ್ಸಿನ ಪುರಾವೆ ಸೇರಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ:7 ನಂತರ ಅಪ್‌ಲೋಡ್ ಮಾಡಿದ ಎಲ್ಲಾ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್ಮಿಟ್‌ ಮಾಡಿ.
ಹಂತ:8 ಈಗ, ಡಿಕ್ಲೆರೇಷನ್ ಆಯ್ಕೆಯನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಹಂತ:9 ಇದಾದ ನಂತರ ಎಲ್ಲಾ ವಿವರಗಳನ್ನು ಪರಿಶೀಲಿಸಿ.
ಹಂತ:10 ಎಲ್ಲವನ್ನು ಪರಿಶೀಲಿಸಿದ ನಂತರ ಸಬ್ಮಿಟ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡುವ ಮೂಲಕ ನೀವು ನಿಮ್ಮ ವೋಟರ್‌ ಐಡಿಯ ವಿಳಾಸವನ್ನು ಬದಲಾಯಿಸಬಹುದಾಗಿದೆ.

Best Mobiles in India

English summary
Here's How to download digital voter ID on your mobile

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X