ಡೆಸ್ಕ್‌ಟಾಪ್ ಗೂಗಲ್‌ ಕ್ರೋಮ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

|

ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಡಾರ್ಕ್‌ ಮೋಡ್‌ ಫೀಚರ್ಸ್‌ ಕೆಲ ದಿನಗಳ ಹಿಂದೆ ಗೂಗಲ್‌ ಸರ್ಚ್‌ನಲ್ಲಿಯೂ ಪರಿಚಯಿಸಲಾಗಿದೆ. ಸರ್ಚ್‌ ಇಂಜಿನ್‌ ದೈತ್ಯ ತನ್ನ ಬಳಕೆದಾರರಿಗಾಗಿ ಗೂಗಲ್‌ ಡೆಸ್ಕ್‌ಟಾಪ್‌ ಆವೃತ್ತಿಯ ಸರ್ಚ್‌ನಲ್ಲಿ ಈ ಫಿಚರ್ಸ್‌ ಅನ್ನು ಸೇರಿಸಲಾಗಿದೆ. ಸ್ಮಾರ್ಟ್‌ಫೋನ್‌ ಮಾದರಿಯಲ್ಲಿಯೇ ಬಳಕೆದಾರರ ಕಣ್ಣಿನ ಮೇಲಿನ ಒತ್ತಡ ಕಡಿಮೆ ಮಾಡಲು ಡೆಸ್ಕ್‌ಟಾಪ್‌ಗೆ ಡಾರ್ಕ್‌ ಮೋಡ್‌ ಪರಿಚಯಿಸಿದೆ. ಈ ಡಾರ್ಕ್ ಮೋಡ್ ಅನ್ನು ಮೊದಲು ಮ್ಯಾಕೋಸ್‌ನಲ್ಲಿ ಪರಿಚಯಿಸಲಾಗಿತ್ತು. ಇದೀಗ ಆಂಡ್ರಾಯ್ಡ್, ವಿಂಡೋಸ್ ಮತ್ತು ಐಒಎಸ್‌ಗೆ ಬಿಡುಗಡೆ ಮಾಡಲಾಗಿದೆ.

ಗೂಗಲ್‌

ಹೌದು, ಗೂಗಲ್‌ ಸರ್ಚ್‌ ಡಸ್ಕ್‌ಟಾಪ್‌ ಆವೃತ್ತಿಯಲ್ಲಿಯೂ ಡಾರ್ಕ್‌ಮೋಡ್‌ ಫೀಚರ್ಸ್‌ ಸೇರಿಸಲಾಗಿದೆ. ಇದರಿಂದ ಗೂಗಲ್‌ ಡೆಸ್ಕ್‌ಟಾಪ್‌ ಆವೃತ್ತಿ ಬಳಸುವುದು ಇನ್ಮುಂದೆ ಆರಾಮದಾಯಕ ಎನಿಸಲಿದೆ. ಇದು ಹೊಸ ಸೆಟ್ಟಿಂಗ್‌ಗಳು, ಗೂಗಲ್‌ ಹೋಮ್‌ಪೇಜ್‌, ಸರ್ಚ್‌ ರಿಸಲ್ಟ್‌ ಮತ್ತು ಸೆಟ್ಟಿಂಗ್‌ಗಳಿಗೆ ಅನ್ವಯಿಸುತ್ತದೆ. ಇನ್ನು ನೀವು ಕೂಡ ಡೆಸ್ಕ್‌ಟಾಪ್‌ನಲ್ಲಿ ಗೂಗಲ್‌ ಸರ್ಚ್‌ ಬಳಸುತ್ತಿದ್ದು, ಡಾರ್ಕ್ ಮೋಡ್ ಸೆಟ್ಟಿಂಗ್‌ ಮಾಡಲು ಬಯಸಿದರೆ ಈ ಲೇಖನದಲ್ಲಿ ತಿಳಿಸುವ ಕ್ರಮಗಳನ್ನು ಅನುಸರಿಸಿ.

ಡೆಸ್ಕ್‌ಟಾಪ್‌ನ ಗೂಗಲ್ ಸರ್ಚ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಡೆಸ್ಕ್‌ಟಾಪ್‌ನ ಗೂಗಲ್ ಸರ್ಚ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಹೋಮ್‌ಪೇಜ್‌ಗೆ ಹೋಗಿ ಮತ್ತು 'ಸೆಟ್ಟಿಂಗ್ಸ್' ಸರ್ಚ್‌ ಮಾಡಿ
ಹಂತ:2 ಸೆಟ್ಟಿಂಗ್ಸ್‌ ಮೆನು ತೆರೆಯಿರಿ, ನಂತರ ಸರ್ಚ್‌ ಸೆಟ್ಟಿಂಗ್ಸ್‌ ನ್ಯಾವಿಗೇಟ್ ಮಾಡಿ
ಹಂತ:3 ಇದೀಗ ಗೂಗಲ್ ಸರ್ಚ್ ಥೀಮ್ ಅನ್ನು ನಿಮ್ಮ ಡೆಸ್ಕ್‌ಟಾಪ್ ಮೋಡ್‌ನೊಂದಿಗೆ ಸಿಂಕ್ ಮಾಡಲು ಮೂರು ಆಯ್ಕೆಗಳನ್ನು ಕಾಣಲಿವೆ.
ಹಂತ:4 ಇದರಲ್ಲಿ ನಿಮ್ಮ ಆದ್ಯತೆಗೆ ಅನುಗುಣವಾಗಿ ಆಯ್ಕೆಯನ್ನು ಆರಿಸಿ.

ಆಂಡ್ರಾಯ್ಡ್ ಮೊಬೈಲ್‌ ಕ್ರೋಮ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ

ಆಂಡ್ರಾಯ್ಡ್ ಮೊಬೈಲ್‌ ಕ್ರೋಮ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ

ಹಂತ:1 ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಕ್ರೋಮ್ ತೆರೆಯಿರಿ.
ಹಂತ:2 ನಂತರ ಪರದೆಯ ಮೇಲಿನ ಬಲ ಮೂಲೆಯಿಂದ ಮೂರು-ಡಾಟ್ ಮೆನು ಬಟನ್ ಕಾಣಲಿದೆ.
ಹಂತ:3 ಸೆಟ್ಟಿಂಗ್ಸ್‌ ನ್ಯಾವಿಗೇಟ್ ಮಾಡಿ ಮತ್ತು ನಂತರ ಥೀಮ್‌ಗಳ ಮೇಲೆ ಕ್ಲಿಕ್ ಮಾಡಿ.
ಹಂತ:4 ಇದೀಗ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು ಡಾರ್ಕ್ ಅನ್ನು ಆಯ್ಕೆ ಮಾಡಿ.

ಐಒಎಸ್‌ನಲ್ಲಿ ಕ್ರೋಮ್ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಐಒಎಸ್‌ನಲ್ಲಿ ಕ್ರೋಮ್ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ನಿಮ್ಮ ಐಒಎಸ್ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ
ಹಂತ:2 ನಂತರ 'ಡಿಸ್ಪ್ಲೇ & ಬ್ರೈಟ್ನೆಸ್' ಅಡಿಯಲ್ಲಿ ಡಾರ್ಕ್ ಫೀಚರ್ಸ್‌ ಆಯ್ಕೆ ಮಾಡಿ.
ಹಂತ:3 ಇದಾದ ನಂತರ ಕ್ರೋಮ್ ತೆರೆಯಿರಿ, ಇದರಲ್ಲಿ ನಿಮಗೆ ಡಾರ್ಕ್ ಥೀಮ್ ಕಾಣಲಿದೆ.

ಗೂಗಲ್‌

ಇನ್ನು ಈಗಾಗಲೇ ಗೂಗಲ್‌ ಮ್ಯಾಪ್‌ನಲ್ಲಿಯೂ ಕೂಡ ಡಾರ್ಕ್‌ ಮೋಡ್‌ ಅನ್ನು ಪರಿಚಯಿಸಲಾಗಿದೆ. ಇದು ಗೂಗಲ್ ಮ್ಯಾಪ್‌ನ ಅಧಿಕೃತ ಡಾರ್ಕ್ ಮೋಡ್ ಆಗಿದ್ದು, ಅಪ್ಲಿಕೇಶನ್‌ನ ಥೀಮ್ ಅನ್ನು ಬೆಳಕಿನಿಂದ ಕತ್ತಲಿಗೆ ತಿರುಗಿಸುತ್ತದೆ. ಗೂಗಲ್ ಮ್ಯಾಪ್‌ ಈಗಾಗಲೇ ಸ್ವಲ್ಪ ಗಾಡವಾದ ಮೋಡ್ ಅನ್ನು ಹೊಂದಿದ್ದು, ಅದು ರಾತ್ರಿಯಲ್ಲಿ ಮತ್ತು ಕಡಿಮೆ-ಬೆಳಕಿನ ಪ್ರದೇಶಗಳಲ್ಲಿ ಸಂಚರಿಸುವ ಸಮಯದಲ್ಲಿ ಆನ್ ಆಗುತ್ತದೆ. ಗೂಗಲ್ ಮ್ಯಾಪ್‌ನಲ್ಲಿನ ಡಾರ್ಕ್ ಮೋಡ್ ಅಪ್ಲಿಕೇಶನ್‌ನಲ್ಲಿನ ವಿಭಿನ್ನ ಅಂಶಗಳನ್ನು ಬೂದುಬಣ್ಣದ ವಿವಿಧ ಛಾಯೆಗಳಿಗೆ ತಿರುಗಿಸುತ್ತದೆ. ಅಲ್ಲದೆ ಬೂದು ಬಣ್ಣದ ಹಗುರವಾದ ನೆರಳಿನಲ್ಲಿ ರಸ್ತೆ ಹೆಸರುಗಳನ್ನು ಸಹ ಹೈಲೈಟ್ ಮಾಡಲಾಗುತ್ತೆ.

ಗೂಗಲ್‌ಮ್ಯಾಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡುವುದು ಹೇಗೆ ?

ಗೂಗಲ್‌ಮ್ಯಾಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡುವುದು ಹೇಗೆ ?

ಹಂತ:1 ಗೂಗಲ್‌ಮ್ಯಾಪ್‌ನಲ್ಲಿ ಸೆಟ್ಟಿಂಗ್ಸ್‌ ಮೆನು ತೆರೆಯಿರಿ ಮತ್ತು ‘ಥೀಮ್' ಆಯ್ಕೆ ಮಾಡಲು ಕೆಳಗೆ ಸ್ಕ್ರಾಲ್ ಮಾಡಿ
ಹಂತ:2 ಇಲ್ಲಿ, ಡಾರ್ಕ್ ಮೋಡ್‌ಗೆ ಬದಲಾಯಿಸಲು "Always in Dark Theme" ಆಯ್ಕೆಮಾಡಿ.
ಹಂತ:3 ನೀವು ಪೂರ್ಣಗೊಳಿಸಿದಾಗ ಹಿಂತಿರುಗಲು "Always in Light Theme" ಆಯ್ಕೆ ಮಾಡಬಹುದು.

ಡಾರ್ಕ್ ಮೋಡ್

ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಡಿವೈಸ್‌ನ ಥೀಮ್‌ನಂತೆಯೇ ಡಾರ್ಕ್ ಮೋಡ್ ಅನ್ನು ಹೊಂದಿಸುವ ಆಯ್ಕೆಯೂ ಇದೆ. ನೀವು ಈ ಆಯ್ಕೆಯನ್ನು ಆರಿಸಿದರೆ ನಿಮ್ಮ ಡಿವೈಸ್‌ನ ಸಿಸ್ಟಮ್ ಥೀಮ್ ಅನ್ನು ಡಾರ್ಕ್‌ ಆಗಿ ಹೊಂದಿಸಿದಾಗಲೆಲ್ಲಾ Google ಮ್ಯಾಪ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ ಸಾಧನವು ಬೆಳಕಿನ ಥೀಮ್‌ಗೆ ಹಿಂತಿರುಗಿದಾಗ ಅದು ಸ್ವಯಂಚಾಲಿತವಾಗಿ ಲೈಟ್ ಮೋಡ್‌ಗೆ ಬದಲಾಗುತ್ತದೆ.

Most Read Articles
Best Mobiles in India

English summary
Google’s dark mode (ahem! Darth Vader) has been added to search on desktop last week.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X