Just In
Don't Miss
- News
NEP- ತಿಂಗಳ ಬಳಿಕ ರಾಜ್ಯದ ಶಾಲೆಗಳಲ್ಲಿ ಎನ್ಇಪಿ ಜಾರಿ
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಫೋನ್ ಮತ್ತು ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಹೀಗೆ ಮಾಡಿ?
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ದೈನಂದಿನ ಬದುಕಿನ ಅವಶ್ಯ ಡಿವೈಸ್ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ಫೋನ್ ಬಳಸುವುದಕ್ಕೆ ಬಯಸುತ್ತಾರೆ. ಇನ್ನು ಕೆಲವರು ತಮಗೆ ಬರುವ ಪ್ರಮುಖ ಕರೆಗಳನ್ನು ರೆಕಾರ್ಡ್ ಮಾಡಲು ಬಯಸುತ್ತಾರೆ. ಇದಕ್ಕಾಗಿ ಕಾಲ್ ರೆಕಾರ್ಡ್ ಮಾಡುವ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಇನ್ನು ಕೆಲವರು ವಾಟ್ಸಾಪ್ ಕರೆಗಳನ್ನು ಕೂಡ ರೆಕಾರ್ಡ್ ಮಾಡಲು ಬಯಸುತ್ತಾರೆ. ಆದರೆ ವಾಟ್ಸಾಪ್ ಕೂಡ ರೆಕಾರ್ಡಿಂಗ್ ಆಯ್ಕೆಯನ್ನು ಹೊಂದಿಲ್ಲ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸಬೇಕಾಗುತ್ತದೆ.

ಹೌದು, ನೀವು ಫೋನ್ ಕರೆಗಳನ್ನು ರೆಕಾರ್ಡ್ ಮಾಡಬೇಕಾದರೆ ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಸಾಮಾನ್ಯ ಫೋನ್ ಮತ್ತು ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ನೀವು ಹಲವು ವಿಧಾನಗಳನ್ನು ಅನುಸರಿಸಬಹುದಾಗಿದೆ. ಇದರಿಂದ ನಿಮಗೆ ಬರುವ ಕರೆಗಳು, ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಬಹುದು. ನಿಮಗೆ ಅವಶ್ಯಕ ಎನಿಸಿದಾಗ ಕಾಲ್ ರೆಕಾರ್ಡ್ ಅನ್ನು ತೆರೆದು ಕೇಳಬಹುದಾಗಿದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕಾಲ್ ರೆಕಾರ್ಡ್ ಮಾಡಲು ಅನುಸರಿಸಬಹುದಾದ ನಿಯಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊದಲನೇಯ ಹಂತದಲ್ಲಿ ನೋಡುವುದಾದರೆ ಕೆಲವು ಸ್ಮಾರ್ಟ್ಫೋನ್ಗಳು ಕಾಲ್ ರೆಕಾರ್ಡಿಂಗ್ ಫೀಚರ್ಸ್ ಅನ್ನು ಹೊಂದಿವೆ. ಇಂತಹ ಸ್ಮಾರ್ಟ್ಫೋನ್ಗಳಲ್ಲಿ ಕಾಲ್ ರೆಕಾರ್ಡಿಂಗ್ ಮಾಡುವುದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುವ ಅಗತ್ಯ ಬರುವುದಿಲ್ಲ. ಆದರೆ ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ತಿಳಿದುಕೊಂಡಿರಬೇಕು ಅಷ್ಟೇ. ಕಾಲ್ ರೆಕಾರ್ಡಿಂಗ್ ಫೀಚರ್ಸ್ ಒಳಗೊಂಡ ಸ್ಮಾರ್ಟ್ಫೋನ್ಗಳಲ್ಲಿ ನೀವು ಸೆಟ್ಟಿಂಗ್ಸ್ ವಿಭಾಗ > ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಕಾಣಬಹುದು. ಇದರಲ್ಲಿ ನೀವು ಆಟೋ-ರೆಕಾರ್ಡಿಂಗ್ ಅನ್ನು ಹೊಂದಿಸಬಹುದು.

ಇನ್ನು ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲು ಬಯಸದವರು "ಆಟೋ ರೆಕಾರ್ಡಿಂಗ್ ರೇಂಜ್" ವಿಭಾಗದ ಅಡಿಯಲ್ಲಿ "ರೆಕಾರ್ಡಿಂಗ್ ಪೇಜ್ ಸೂಚಿಸಿ" ಆಯ್ಕೆಯನ್ನು ಆಯ್ಕೆ ಮಾಡಬಹುದು. ಇದರಲ್ಲಿ ನೀವು ಯಾವ ಸಂಪರ್ಕಗಳ ಕರೆಯನ್ನು ಕಾಲ್ ರೆಕಾರ್ಡಿಂಗ್ ಮಾಡಬೇಕು ಅನ್ನೊದನ್ನ ಆಯ್ಕೆ ಮಾಡಬಹುದು. ಇನ್ನು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಬಳಕೆದಾರರು ಕಂಪನಿಯ ಸ್ಥಳೀಯ ಫೋನ್ ಅಪ್ಲಿಕೇಶನ್ ಬಳಸಿಕೊಂಡು ಕರೆಗಳನ್ನು ರೆಕಾರ್ಡ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ನಲ್ಲಿ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಲು ಮೂರು-ಚುಕ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ನಂತರ "ರೆಕಾರ್ಡ್ ಕರೆಗಳು" ಅನ್ನು ಟ್ಯಾಪ್ ಮಾಡಿ. ಈಗ, "ಆಟೋ ರೆಕಾರ್ಡ್ ಕರೆಗಳು" ಆನ್ ಮಾಡಬೇಕಾಗುತ್ತದೆ

ಇನ್ನು ಎರಡನೇ ವಿಧಾನ ಎಂದರೆ ಗೂಗಲ್ ಅಪ್ಲಿಕೇಶನ್ ಬಳಸುವುದಾಗಿದೆ. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಗೂಗಲ್ ಫೋನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ನಂತರ ಅಪ್ಲಿಕೇಶನ್ ತೆರೆಯಿರಿ. ಇದರಲ್ಲಿ ಮೂರು-ಚುಕ್ಕೆಗಳ ಐಕಾನ್ ಟ್ಯಾಪ್ ಮಾಡಿ > ಸೆಟ್ಟಿಂಗ್ಸ್ > ಕಾಲ್ ರೆಕಾರ್ಡಿಂಗ್ ಅನ್ನು ಟ್ಯಾಪ್ ಮಾಡಬಹುದು. ಇದಲ್ಲದೆ ನೀವು ನಿಮಗೆ ಬೇಕಾದ ಸಂಪರ್ಕವನ್ನು ಮಾತ್ರ ರೆಕಾರ್ಡಿಂಗ್ ಮಾಡುವುದಾದರೆ ಅದನ್ನು ಕೂಡ ಆಯ್ಕೆ ಮಾಡಬಹುದು. ಆದರೆ ಈ ಅಪ್ಲಿಕೇಶನ್ಗಳನ್ನು ಬಳಸಬೇಕಾದರೆ ನಿಮ್ಮ ಫೋನ್ ಆಂಡ್ರಾಯ್ಡ್ 9 ಆವೃತ್ತಿಗಿಂತ ಹೆಚ್ಚಿನ ಆಯ್ಕೆಯನ್ನು ಬಳಸಬೇಕಾಗುತ್ತದೆ.

ಇದಲ್ಲದೆ ನೀವು ಪ್ಲೇ ಸ್ಟೋರ್ನಿಂದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಬಹುದು. ಇದರಲ್ಲಿ "Cube ACR" ಅಪ್ಲಿಕೇಶನ್ ಕೂಡ ಒಂದಾಗಿದೆ. ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಸಾಮಾನ್ಯ ಫೋನ್ ಮತ್ತು ವಾಟ್ಸಾಪ್ ಕರೆಗಳನ್ನು ಆಟೋಮ್ಯಾಟಿಕ್ ರೆಕಾರ್ಡ್ ಮಾಡಬಹುದು. ಆಡಿಯೊ ಧ್ವನಿಗಳನ್ನು ರೆಕಾರ್ಡ್ ಮಾಡಲು ಇದು ರೆಕಾರ್ಡರ್ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ಆಟೋ-ರೆಕಾರ್ಡಿಂಗ್ ಅನ್ನು ಸೆಟ್ ಮಾಡಬಹುದು. ಕಾಲ್ ರೆಕಾರ್ಡಿಂಗ್ ಅನ್ನು ಹಸ್ತಚಾಲಿತವಾಗಿ ಆನ್ ಮಾಡುವ ಆಯ್ಕೆಯೂ ಇದೆ. ನೀವು ಪ್ರತಿ ಬಾರಿ ಕರೆ ಮಾಡಿದಾಗ ಅಪ್ಲಿಕೇಶನ್ ಕರೆ ರೆಕಾರ್ಡಿಂಗ್ ವಿಜೆಟ್ ಅನ್ನು ಪ್ರದರ್ಶಿಸುತ್ತದೆ. ನಿಮಗೆ ಬೇಕು ಎನಿಸಿದಾಗ ಕಾಲ್ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದರ ಜೊತೆಗೆ, ಆಂಡ್ರಾಯ್ಡ್ 12 ಬಳಕೆದಾರರು ಇತ್ತೀಚೆಗೆ ಎಲ್ಲಾ ಅನುಮತಿಗಳನ್ನು ಬಳಸಿದ ಅಪ್ಲಿಕೇಶನ್ಗಳನ್ನು ಸಹ ಪರಿಶೀಲಿಸಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999