ನಿಮ್ಮ ರೂಟರ್ ವೈ-ಫೈ ಪಾಸ್‌ವರ್ಡ್ ಬದಲಿಸುವುದು ಹೇಗೆ?

By GizBot Bureau
|

ನಮ್ಮ ಪಾಸ್ ವರ್ಡ್ ಗಳನ್ನು ಎಷ್ಟು ಸುರಕ್ಷಿತವಾಗಿಟ್ಟುಕೊಂಡರೂ ಸಾಕಾಗುವುದಿಲ್ಲ. ಪ್ರತಿದಿನ ಅಂತರ್ಜಾಲ ಸುರಕ್ಷತಾ ಪಡೆಯ ಮಂದಿ, ಅಂತರ್ಜಾಲದಲ್ಲಿ ಭದ್ರತೆ ಒದಗಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದಾರೆ. ಇಂಗ್ಲೀಷಿನಲ್ಲಿ ಒಂದು ಮಾತಿದೆ “ ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್” ಅಂತ.

ಅಂದರೆ ಕಾಯಿಲೆ ಬಂದ ಮೇಲೆ ಗುಣಪಡಿಸುವುದಕ್ಕಿಂತ ಅದನ್ನು ತಡೆಗಟ್ಟಿಕೊಳ್ಳುವುದು ಬಹಳ ಪ್ರಯೋಜನಕಾರಿ ಅನ್ನುವುದು ಈ ಮಾತಿನ ಅರ್ಥ. ಹಾಗಾಗಿ ಅಂತರ್ಜಾಲದಲ್ಲಿ ಯಾಮಾರುವುದಕ್ಕಿಂತ ಮುನ್ನ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಪ್ರಮುಖವಾಗಿ ಅಂತರ್ಜಾಲದಲ್ಲಿ ಎಡವಟ್ಟುಗಳು ನಡೆಯುವುದು ಪಾಸ್ ವರ್ಡ್ ಗಳಿಂದ!

ನಿಮ್ಮ ರೂಟರ್ ವೈ-ಫೈ ಪಾಸ್‌ವರ್ಡ್ ಬದಲಿಸುವುದು ಹೇಗೆ?

ಯಾವುದೇ ಕೆಲಸವಾಗಲಿ ಅಚಾತುರ್ಯ ನಡೆದ ಮೇಲೆ ಸರಿಪಡಿಸುವುದು ಬಹಳ ಕಷ್ಟ ಆದರೆ ಆ ಅಚಾತುರ್ಯ ಆಗದಂತೆ ತಡೆದರೆ ಬಹಳ ಪ್ರಯೋಜನಕಾರಿಯಾಗುತ್ತದೆ. ಹಾಗಾಗಿ ಪಾಸ್ ವರ್ಡ್ ಗಳು ಬಹಳ ಸೆಕ್ಯೂರ್ ಆಗಿರುವುದು ತುಂಬಾ ಮುಖ್ಯ. ಈಗ ರೂಟರ್ ನ ವಿಚಾರಕ್ಕೆ ಬರೋಣ. ನಿಮ್ಮ ರೂಟರ್ ನ ವೈಫೈಯನ್ನು ನೀವು ಮತ್ತು ನಿಮ್ಮವರು ಮಾತ್ರ ಬಳಸುವಂತೆ ಮಾಡಲು ಪಾಸ್ ವರ್ಡ್ ಹಾಕಿರುತ್ತೀರಿ ನಿಜ.

ಆದರೆ ಒಂದು ವೇಳೆ ಆ ಪಾಸ್ ವರ್ಡ್ ಕಳವಾಗಿದೆ ಅಥವಾ ಇನ್ಯಾವುದೇ ಕಾರಣದಿಂದ ಬದಲಿಸಬೇಕು ಎಂದಾದರೆ ಏನು ಮಾಡಬೇಕು? ಹೇಗೆ ಬದಲಿಸಬೇಕು ಎಂಬ ವಿಚಾರವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಯಾಕೆಂದರೆ ರೂಟರ್ ನ ಪಾಸ್ ವರ್ಡ್ ಎಷ್ಟು ಮುಖ್ಯ ಎಂಬುದು ರೂಟರ್ ಬಳಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿಯೇ ಆಗಿದೆ.

ಪಾಸ್ ವರ್ಡ್  ಬದಲಾವಣೆ 

ಪಾಸ್ ವರ್ಡ್  ಬದಲಾವಣೆ 

ಪಾಸ್ ವರ್ಡ್ ಬದಲಾವಣೆ ಮಾಡುವುದರಿಂದ ಅನಗತ್ಯವಾಗಿ ಯಾರೋ ನಿಮ್ಮ ಡಾಟಾವನ್ನು ಬಳಕೆ ಮಾಡುವುದನ್ನು ತಪ್ಪಿಸಬಹುದು ಮತ್ತು ನಿಮ್ಮ ಡಾಟಾಗಳು ಸುರಕ್ಷಿತವಾಗಿರುವಂತೆ ಮಾಡಬಹುದು. ಪಾಸ್ ವರ್ಡ್ ಗಳನ್ನು ನೆನಪಿಟ್ಟುಕೊಳ್ಳಲು ಕೆಲವರು ತಮ್ಮ ಮೊಬೈಲ್ ,ಸ್ಮಾರ್ಟ್ ಟಿವಿ ಮತ್ತು ಇತರೆ ಡಿವೈಸ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಪಾಸ್ ವರ್ಡ್ ಗಳನ್ನು ಸೆಕ್ಯೂರ್ ಆಗಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕಿರುವ ಏಕೈಕ ಮಾರ್ಗವೆಂದರೆ ಆಗಾಗ ಪಾಸ್ ವರ್ಡ್ ಗಳನ್ನು ಬದಲಾವಣೆ ಮಾಡುತ್ತಾ ಇರುವುದು.

ಈಗ ನಿಮಗೆ ರೂಟರ್ ನ ವೈಫೈ ಪಾಸ್ ವರ್ಡ್ ನ್ನು ಸರಳವಾದ ಹಂತಗಳನ್ನು ಬಳಸಿ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ.

ಆದರೆ ಅದಕ್ಕೂ ಮುನ್ನ ಕೆಲವು ವಿಚಾರಗಳನ್ನು ಬಳಕೆದಾರರು ತಿಳಿದುಕೊಂಡಿಕಬೇಕಾಗುತ್ತದೆ.

ಆದರೆ ಅದಕ್ಕೂ ಮುನ್ನ ಕೆಲವು ವಿಚಾರಗಳನ್ನು ಬಳಕೆದಾರರು ತಿಳಿದುಕೊಂಡಿಕಬೇಕಾಗುತ್ತದೆ.

• ರೂಟರ್ ಬ್ರ್ಯಾಂಡ್ ಹೆಸರು ಮತ್ತು ಮಾಡೆಲ್ ಸಂಖ್ಯೆ

• ಕಾನ್ಫಿಗರೇಷನ್ ಪೋರ್ಟಲ್ ರೂಟರ್ ನ ಯುಆರ್ ಎಲ್ ನ್ನು ತಿಳಿದುಕೊಳ್ಳಿ(ಅದಕ್ಕಾಗಿ ಬಳಕೆದಾರರ ಮಾನ್ಯುವಲ್ ನ್ನು ಪರೀಕ್ಷಿಸಿ)

• ಕಾನ್ಫಿಗರೇಷನ್ ಪೋರ್ಟಲ್ ನ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ (ಡಿಫಾಲ್ಟ್ ಯೂಸರ್ ನೇಮ್ ಮತ್ತು ಪಾಸ್ ವರ್ಡ್ "Admin) ಆಗಿರುತ್ತದೆ.

• ನಿಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಒಂದೇ ವೈಫೈ ಕನೆಕ್ಷನ್ ಅಥವಾ ಲ್ಯಾನ್ ಕೇಬಲ್ ನಿಂದ ಲ್ಯಾಪ್ ಟಾಪ್ ಗೆ ಕನೆಕ್ಟ್ ಆದ ರೂಟರ್ ನ್ನು ಹೊಂದಿರಬೇಕು.

ಅನುಸರಿಸಬೇಕಾಗಿರುವ ಹಂತಗಳು:

ಅನುಸರಿಸಬೇಕಾಗಿರುವ ಹಂತಗಳು:

1. ನಿಮ್ಮ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿ ಬ್ರೌಸರ್ ನ್ನು ತೆರೆಯಿರಿ.

2. ಕಾನ್ಫಿಗರೇಷನ್ ಪೋರ್ಟಲ್ ನ ಅಡ್ರೆಸ್ ಬಾರ್ ನಲ್ಲಿ ಯುಆರ್ ಎಲ್ ನ್ನು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ( (TP ಗೆ -ರೂಟರ್ ಲಿಂಕ್ 192.168.1.1)

3.ರೂಟರ್ ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಟೈಪ್ ಮಾಡಿ ಲಾಗಿನ್ ಆಗಿ..

4. ನೀವು ಬಳಸುತ್ತಿರುವ ರೂಯರ್ ಬ್ರ್ಯಾಂಡ್ ಹೊರತಾಗಿಯೂ ವಯರ್ ಲೆಸ್ ಸೆಕ್ಯುರಿಟಿ ಆಯ್ಕೆಯನ್ನು ಪರೀಕ್ಷಿಸಿ.

5. ವಯರ್ ಲೆಸ್ ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಪಿಎಸ್ ಕೆ ಪಾಸ್ಪ್ರೇಸ್ ತೆರಳಿ ಮತ್ತು ನಿಮ್ಮ ಪಾಸ್ ವರ್ಡ್ ನ್ನು ಟೈಪ್ ಮಾಡಿ.

6. ಸೇವ್ ಬಟನ್ ನ್ನು ಒತ್ತಿ ಮತ್ತು ರೂಟರ್ ನ್ನು ರೀಬೂಟ್ ಮಾಡಿ.

ರಕ್ಷಣಾತ್ಮಕವಾಗಿರುವ ಪಾಸ್ ವರ್ಡ್ ಆಯ್ಕೆ ಮಾಡುವ ವಿಧಾನ :

ರಕ್ಷಣಾತ್ಮಕವಾಗಿರುವ ಪಾಸ್ ವರ್ಡ್ ಆಯ್ಕೆ ಮಾಡುವ ವಿಧಾನ :

ಸುಲಭದ ಪಾಸ್ ವರ್ಡ್ ಅಂದಾಜಿಸುವುದು ಬಹಳ ಸುಲಭವಾಗುತ್ತದೆ ಮತ್ತು ಪದೇ ಪದೇ ಪ್ರಯತ್ನಿಸುವ ಮೂಲಕ ಅನಕೃತ ವ್ಯಕ್ತಿಗಳು ನಿಮ್ಮ ಡಾಟಾ ಕನೆಕ್ಷನ್ ನ್ನು ಹಂಚಿಕೊಂಡು ಬಿಡಬಹುದು. ಆದರೆ ಈ ಕೆಳಗಿನ ಕೆಲವು ಸೂಚನೆಗಳನ್ನು ಅನುಸರಿಸುವ ಮುಖಾಂತರ ನೀವು ನಿಮ್ಮ ಹಾಟ್ ಸ್ಪಾಟ್ ಅಥವಾ ವೈಫೈ ಯನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

• ಯಾವಾಗಲೂ ಆಲ್ಫಾ ನ್ಯೂಮರಿಕ್ ಅಂದರೆ ಅಕ್ಷರಗಳು ಮತ್ತು ಸಂಖ್ಯೆಗಳು ಎರಡೂ ಇರುವ ಪಾಸ್ ವರ್ಡ್ ನ್ನು ಆಯ್ಕೆ ಮಾಡಿಕೊಳ್ಳಿ.

• ಸುಲಭದಲ್ಲಿ ಅಂದಾಜಿಸಬಹುದಾದ ಪಾಸ್ ವರ್ಡ್ ಗಳನ್ನು ಆಯ್ಕೆ ಮಾಡಬೇಡಿ. ನಿಮ್ಮ ಸಾಕುಪ್ರಾಣಿಯ ಹೆಸರು, ಹುಟ್ಟಿದ ದಿನಾಂಕ, ಮನೆ ನಂಬರ್, ಬೈಕ್ ಅಥವಾ ಕಾರಿನ ನಂಬರ್, ನಿಮ್ಮ ಫೋನ್ ನಂಬರ್ ಇತ್ಯಾದಿಗಳನ್ನು ಇಟ್ಟುಕೊಳ್ಳದೇ ಇರುವುದು ಒಳಿತು.

• ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಬಳಸುವುದರಿಂದಾಗಿ ಪಾಸ್ ವರ್ಡ್ ಸ್ವಲ್ಪ ಕಠಿಣವಾಗಲಿದೆ.

Most Read Articles
Best Mobiles in India

English summary
How to change the Wi-Fi password of your router. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X