ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

Written By:

ನ ದಿನದಲ್ಲಿ ಪ್ರತಿಯೊಂದು ವಿಷಯವೂ ಆನ್‌ಲೈನ್ ವಯವಾಗಿದ್ದು, ಇದೆ ಮಾದರಿಯಲ್ಲಿ ನೀವಿನ್ನು ನಿಮ್ಮ ಚಾಲನ ಪರವಾನಗಿಯನ್ನು ಪಡೆದಕೊಳ್ಳಲು ಆನ್‌ಲೈನ್ ವ್ಯವಸ್ಥೆಯ ಸಹಾಯವನ್ನು ಪಡೆಯಬಹುದಾಗಿದೆ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುವುದಲ್ಲದೇ ದಳ್ಳಾಳಿಗಳಿಗೆ ಹೆಚ್ಚಿನ ಹಣವನ್ನು ನೀಡುವ ಅಗತ್ಯವು ಇರುವುದಿಲ್ಲ.

ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಈ ಹಿನ್ನಲೆಯಲ್ಲಿ ತ್ವರಿತಗತಿಯಲ್ಲಿ, ಅದುವೇ ಕಡಿಮೆ ಖರ್ಚಿನಲ್ಲಿ ಡಿಎಲ್ ನೀಡುವ ಸಲುವಾಗಿ ಕೇಂದ್ರ ಸಾರಿಗೆ ಇಲಾಖೆಯೂ ಅರ್ಜಿ ಸಲ್ಲಿಸುವ ಬಗೆಯನ್ನು ತೀರಾ ಸುಲಭಗೊಳಿಸಿದೆ. ಈ ಹಿನ್ನಲೆಯಲ್ಲಿ ಹೇಗೆ ಡಿಎಲ್ ಪಡೆದುಕೊಳ್ಳಬೇಕು, ನೀವು ಎಷ್ಟು ಬಾರಿ ಆರ್‌ಟಿಓ ಕ‍ಚೇರಿಗೆ ಹೋಗಬೇಕು ಎಂಬಿತ್ಯಾದಿ ಮಾಹಿತಿಗಳನ್ನು ನೀಡುವ ಸಲುವಾಗಿಯೇ ಈ ಲೇಖನ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ನೀವು ಡಿಎಲ್ ಪಡೆಯಬೇಕಾದರೆ ಮೊದಲಿಗೆ ಆನ್‌ಲೈನಿನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕಾಗಿ ನೀವು http://www.rto.kar.nic.in ವೆಬ್ ಸೈಟಿಗೆ ಭೇಟಿ ನೀಡಬೇಕಾಗಿದೆ. ಇಲ್ಲಿ ನಿಮಗೆ ಲೈಸೆನ್ಸ್ ಮಾಡಿಸಲು ಕನ್ನಡದಲ್ಲಿಯೇ ಮಾಹಿತಿ ದೊರೆಯಲಿದೆ.

 ಮೊದಲು ಎಲ್ ಎಲ್ ಗೆ ಅರ್ಜಿ ಹಾಕಿ:

ಮೊದಲು ಎಲ್ ಎಲ್ ಗೆ ಅರ್ಜಿ ಹಾಕಿ:

ಡಿಎಲ್ ಪಡೆಯುವ ಮೊದಲು ಚಾಲನಾ ಕಲಿಕೆ ಪತ್ರವನ್ನು ಪಡೆಯುವುದು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಮೊದಲು ಎಲ್ ಎಲ್ ಗೆ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟಿನಲ್ಲಿ (http://www.rto.kar.nic.in) 'ಕಲಿಕಾ/ ಚಾಲನಾ ಅನುಜ್ಞಾಪತ್ರ/ವಾಹನದ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

 ಅರ್ಜಿ ಸಲ್ಲಿಸುವುದು ಹೇಗೆ..?

ಅರ್ಜಿ ಸಲ್ಲಿಸುವುದು ಹೇಗೆ..?

'ಕಲಿಕಾ/ ಚಾಲನಾ ಅನುಜ್ಞಾಪತ್ರ/ವಾಹನದ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರದಲ್ಲಿ ಹೊಸ ಪುಟವೊಂದು ತೆರೆದುಕೊಳ್ಳಲಿದ್ದು, ಅದರಲ್ಲಿ 'ಕಲಿಕಾ ಚಾಲನಾ ಅನುಜ್ಞಾಪತ್ರ' ಆಯ್ಕೆಯನ್ನು ಕ್ಲಿಕ್ ಮಾಡಿ.

ನಂತರದ ಪುಟದಲ್ಲಿ:

ನಂತರದ ಪುಟದಲ್ಲಿ:

ನಂತರದ ಪುಟದಲ್ಲಿ ಕೆಳಗೆ ಸಾರಥಿ- 4 ಆನ್‌ಲೈನ್ ಸೇವೆಗಳು ಎಂಬ ಆಯ್ಕೆ ದೊರೆಯಲಿದ್ದು, ಅಲ್ಲಿ 'ಹೊಸ ಕಲಿಕಾ / ಚಾಲನಾ ಲೈಸೆನ್ಸ್ ಸಾರಥಿ - 4 ಮೂಲಕ (ಬೆಂಗಳೂರಿನ ಅಯ್ದ ಕಛೇರಿಗಳಲ್ಲಿ ಮಾತ್ರ)' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿದೆ. ನಂತರದಲ್ಲಿ ನಿಮ್ಮ ಆರ್‌ಟಿಓ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಅನಂತರ ಅರ್ಜಿ ತುಂಬಿರಿ:

ಅನಂತರ ಅರ್ಜಿ ತುಂಬಿರಿ:

ನಿಮ್ಮ ಆರ್‌ಟಿಓ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಕೇಂದ್ರ ಸರಕಾರದ 'ಮಿನಿಸ್ಟರಿ ಆಫ್ ರೋಡ್ ಟ್ರಾನ್‌ಸಫರ್ ಅಂಡ್ ಹೈವೆ' ವೆಬ್ ತಾಣ ತೆರೆದುಕೊಳ್ಳಲಿದ್ದು, ಅಲ್ಲಿ ಆಪ್ಲೆ ಆನ್‌ಲೈನ್ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.

ಎಲ್ ಎಲ್/ ಡಿಲ್‌ಗಾಗಿ ಅರ್ಜಿ:

ಎಲ್ ಎಲ್/ ಡಿಲ್‌ಗಾಗಿ ಅರ್ಜಿ:

ನೀವು ಹೊಸದಾಗಿ ಎಲ್ ಎಲ್ ಬೇಕಾದ ಸಂದರ್ಭದಲ್ಲಿ 'New Learner's Licence' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದೇ ಮಾದರಿಯಲ್ಲಿ ಡಿಎಲ್ ಮಾಡಿಸಬೇಕಾದಲ್ಲಿ 'New Driving Licence' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

ನಂತರ 5 ಅಂಶಗಳ ಪುಟ ತೆರೆಯಲಿದೆ:

ನಂತರ 5 ಅಂಶಗಳ ಪುಟ ತೆರೆಯಲಿದೆ:

ನಂತರ ನೀವು 5 ಹಂತದಲ್ಲಿ ಅರ್ಜಿ ಭರ್ತಿ ಮಾಡಬೇಕಾಗಿದೆ. ಹಾಗಾಗಿ ಅಲ್ಲಿ ತೆರೆಯುವ ಮುಂದಿನ ಪುಟದಲ್ಲಿ ಕಂಟಿನ್ಯೂ ಆಯ್ಕೆಯನ್ನು ನೀಡಿರಿ.

ನಂತರ ಮಾಹಿತಿ ಭರ್ತಿ ಮಾಡಿ:

ನಂತರ ಮಾಹಿತಿ ಭರ್ತಿ ಮಾಡಿ:

ಅನಂತರದ ಪುಟದಲ್ಲಿ ಕೇಲವು ಮಾಹಿತಿಗಳನ್ನು ನೀಡಬೇಕಾಗಿದ್ದು, ನಿಮ್ಮ ಆಧಾರ್ ಕಾರ್ಡ್ ನಂಬರ್, ನಿಮ್ಮ ಹೆಸರು, ರಾಜ್ಯ, ಯಾವ ಆರ್‌ಟಿಓ, ಮೊಬೈಲ್ ನಂ. ಸೇರಿಂದಂತೆ ಹಲವು ಮಾಹಿತಿಗಳನ್ನು ತುಂಬಲು ಅಲ್ಲಿ ಖಾಲಿ ಜಾಗವನ್ನು ಬಿಟ್ಟಿರಲಾಗುತ್ತದೆ. ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿದೆ.

ಇದಾದ ನಂತರ ನಿಮ್ಮ ವಿಳಾಸ ನೀಡಿರಿ:

ಇದಾದ ನಂತರ ನಿಮ್ಮ ವಿಳಾಸ ನೀಡಿರಿ:

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿದ ನಂತರ ಮುಂದಿನ ಹಂತದಲ್ಲಿ ನಿಮ್ಮ ವಿಳಾಸವನ್ನು ತುಂಬ ಬೇಕಾಗಿದೆ. ಇಲ್ಲಿ ನೀವು ನೀಡುವ ವಿಳಾಸವೇ ಡಿಎಲ್‌ನಲ್ಲಿಯೂ ಬರಲಿದೆ.

 ನಂತರ ಯಾವ ವಾಹನ ಎಂಬುದನ್ನು ಸೆಲೆಕ್ಟ್ ಮಾಡಿರಿ;

ನಂತರ ಯಾವ ವಾಹನ ಎಂಬುದನ್ನು ಸೆಲೆಕ್ಟ್ ಮಾಡಿರಿ;

ನೀವು ಯಾವ ವಾಹನವನ್ನು ಚಲಾಯಿಸ ಬಯಸುತ್ತಿರಾ ಎಂಬ ಆಯ್ಕೆಯೂ ಮುಂದಿನ ಪುಟದಲ್ಲಿ ಇರಲಿದ್ದು, ಅಲ್ಲಿ ನಿಮ್ಮಗೆ ಬೇಕಾದ ವಾಹನದ ಆಯ್ಕೆಯನ್ನು ಮಾಡಿಕೊಳ್ಳಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ.

ನಂತರ ದಾಖಲಾತಿಗಳನ್ನು ಆಪ್‌ಲೋಡ್ ಮಾಡಿ:

ನಂತರ ದಾಖಲಾತಿಗಳನ್ನು ಆಪ್‌ಲೋಡ್ ಮಾಡಿ:

ನೀವು ಡಿಎಲ್ ಪಡೆಯಲು ಬೇಕಾದಂತಹ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ, ನಂತರ ಅವುಗಳನ್ನು ಅಲ್ಲಿ ಕೇಳುವ ಸೈಜ್‌ಗೆ ಸೇವ್ ಮಾಡಿಕೊಳ್ಳಿರಿ. ಅಲ್ಲಿ ಅವುಗಳನ್ನು ಆಪ್‌ ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಬೇಕಾದ ದಾಖಲಾತಿಗಳು:

ಬೇಕಾದ ದಾಖಲಾತಿಗಳು:

ಡಿಎಲ್ ಪಡೆಯುವ ಸಲುವಾಗಿ ನೀವು ವಯಸ್ಸಿನ ದಾಖಲಾತಿ, ಖಾಯಂ ವಿಳಾಸದ ದಾಖಲಾತಿ, ಸ್ಥಳೀಯ ವಿಳಾಸದ ದಾಖಲಾತಿಗಳು ಬೇಕಾಗಿದೆ.

ನಂತರ ಮಾಡುವುದೇನು..?

ನಂತರ ಮಾಡುವುದೇನು..?

ಹೀಗೆ ಭರ್ಜಿ ಮಾಡಿದ ಅರ್ಜಿಯನ್ನು ಪಡೆದು ನಿಮ್ಮ ಆರ್‌ಟಿಓ ಕಛೇರಿಗೆ ಭೇಟಿ ನೀಡಿ, ಅಲ್ಲಿ ನಿಗದಿತ ಪ್ರಮಾಣದ ಶುಲ್ಕವನ್ನು ಪಾವತಿ ಮಾಡಿ, ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಎಲ್‌ಎಲ್‌ಗೆ ಮೌಖಿಕ ಪರೀಕ್ಷೆ ಇರಲಿದ್ದು, ಡಿಎಲ್‌ ಗೆ ವಾಹನ ಚಲಾಯಿಸುವ ಪರೀಕ್ಷೆಯು ಇದರಲಿದೆ. ನೀವು ಇಲ್ಲಿ ತೇರ್ಗಡೆಯಾದರೆ ನಿಮ್ಮ ಎಲ್‌ಎಲ್‌ ಮತ್ತು ಡಿಲ್‌ಗಳು ನಿಮ್ಮ ಕೈಸೆರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
To get permanent driving license , Applicant should have a valid learner licence. He can apply after 30 days and within 180 days from the date of issuance of learnerlicence. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot