ನೆಟ್‌ಫ್ಲಿಕ್ಸ್‌ನಲ್ಲಿ 'ಡೌನ್‌ಲೋಡ್ಸ್‌ ಫಾರ್ ಯು' ಫೀಚರ್ ಆಕ್ಟಿವ್ ಮಾಡುವುದು ಹೇಗೆ ಗೊತ್ತಾ?

|

ಪ್ರಸ್ತುತ ಓಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಅನೇಕ ಫೀಚರ್‌ಗಳನ್ನು ಒದಗಿಸುತ್ತ ಸಾಗಿದೆ. ಇತ್ತೀಚೆಗೆ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌ 'ಡೌನ್‌ಲೋಡ್ಸ್‌ ಫಾರ್ ಯು'(Downloads For You') ಎಂದು ಹೊಸದೊಂದು ಫೀಚರ್‌ ಅನ್ನು ಘೋಷಿಸಿತು.

ಡೌನ್‌ಲೋಡ್ಸ್‌

ನೆಟ್‌ಫ್ಲಿಕ್ಸ್‌ನ ಡೌನ್‌ಲೋಡ್ಸ್‌ ಫಾರ್ ಯು ಆಯ್ಕೆಯು ಬಳಕೆದಾರರಿಗೆ ಅವರ ವೀಕ್ಷಣೆ ಹಿಸ್ಟರಿ ಪ್ರಕಾರ ಶಿಫಾರಸು ಮಾಡಲಾದ ಶೋಗಳು ಅಥವಾ ಚಲನಚಿತ್ರಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡುತ್ತದೆ. ಈ ಮೊದಲು, ನೆಟ್‌ಫ್ಲಿಕ್ಸ್‌ನ ಸ್ಮಾರ್ಟ್ ಡೌನ್‌ಲೋಡ್ ಫೀಚರ್ ಬಳಕೆದಾರರು ನೋಡಿದ ವೆಬ್ ಅಥವಾ ಟಿವಿ ಸರಣಿ ಸಂಚಿಕೆಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಸೌಲಭ್ಯ ಹೊಂದಿತ್ತು. ಈಗ ಅಪ್‌ಡೇಟ್‌ನೊಂದಿಗೆ ಡೌನ್‌ಲೋಡ್ಸ್‌ ಫಾರ್ ಯು ಲಭ್ಯ ಮಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಡೌನ್‌ಲೋಡ್

ಡೌನ್‌ಲೋಡ್ಸ್‌ ಫಾರ್ ಯು ಆಯ್ಕೆಯನ್ನು ಸಕ್ರಿಯಗೊಳಿಸಲು, ನಿಮ್ಮ ಮೊಬೈಲ್ ಡಿವೈಸ್‌ನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಡೌನ್‌ಲೋಡ್ ವಿಭಾಗಕ್ಕೆ ಟಾಗಲ್ ಮಾಡಿ. ಡೌನ್‌ಲೋಡ್ ಟ್ಯಾಬ್ ಅಡಿಯಲ್ಲಿ, ನೀವು ಡೌನ್‌ಲೋಡ್‌ಗಳಿಗಾಗಿ ನಿಮಗಾಗಿ ಆಯ್ಕೆಯನ್ನು ಕಾಣುತ್ತಿರಿ. ಮುಂದಿನ ಸ್ಕ್ರೀನ್‌ನಲ್ಲಿ, ನಿಮ್ಮ ಡಿವೈಸ್‌ನಲ್ಲಿ ಸ್ಟೋರ್ ಮಾಡುವ ಕುರಿತು ಆಯ್ಕೆಯನ್ನು ನೀವು ಪಡೆಯುತ್ತೀರಿ. 1GB ಯಿಂದ 5GB ವರೆಗೆ ಆಯ್ಕೆ ಮಾಡಬಹುದು. 12 ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ 3GB ಸ್ಟೋರೇಜ್‌ ಸಾಕಾಗುತ್ತದೆ ಎಂದು ನೆಟ್‌ಫ್ಲಿಕ್ಸ್ ಶಿಫಾರಸು ಮಾಡುತ್ತದೆ. ಸ್ಟೋರೇಜ್ ಆಯ್ಕೆ ಸೆಲೆಕ್ಟ್ ಮಾಡಿದ ನಂತರ, ‘ಟರ್ನ್ ಆನ್' ಬಟನ್ ಟ್ಯಾಪ್ ಮಾಡಿರಿ.

ಅಪ್ಲಿಕೇಶನ್

ಇನ್ನು ಈ ಫೀಚರ್‌ ಬಗ್ಗೆ ಇಷ್ಟವಾಗದಿದ್ದರೇ ಅಥವಾ ಫೋನಿನಲ್ಲಿ ಸ್ಟೋರೇಗೆ ಸ್ಥಳಾವಕಾಶದ ಕೊರತೆ ಇದ್ದರೇ, ಯಾವಾಗ ಬೇಕಾದರೂ ‘ಡೌನ್‌ಲೋಡ್ಸ್‌ ಫಾರ್ ಯು ' ಆಯ್ಕೆಯನ್ನು ಆಫ್ ಮಾಡಬಹುದು. ಇನ್ನು ಈ ಫೀಚರ್‌ ಅನ್ನು ನಿಷ್ಕ್ರಿಯಗೊಳಿಸಲು, ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಡೌನ್‌ಲೋಡ್ ವಿಭಾಗದ ಅಡಿಯಲ್ಲಿ ಪಟ್ಟಿ ಮಾಡಲಾದ ಫೀಚರ್‌ ಅನ್ನು ಆಫ್ ಮಾಡಿ. ಬಹು ಚಲನಚಿತ್ರಗಳು ಅಥವಾ ಟಿವಿ ಕಾರ್ಯಕ್ರಮಗಳ ಶಿಫಾರಸುಗಳನ್ನು ಪಡೆಯಲು ನೀವು ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ಬ್ರೌಸಿಂಗ್

ಬಳಕೆದಾರರಿಗೆ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ನೆಟ್‌ಫ್ಲಿಕ್ಸ್‌ನ ಡೌನ್‌ಲೋಡ್ಸ್‌ ಫಾರ್ ಯು ಫೀಚರ್‌ ಅನ್ನು ಪರಿಚಯಿಸಲಾಗಿದೆ. ಈ ಹೊಸ ಫೀಚರ್ ಪ್ರಸ್ತುತ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಿದೆ ಮತ್ತು ಐಒಎಸ್ ಡಿವೈಸ್‌ಗಳಿಗಾಗಿ ಪರೀಕ್ಷಾ ಕ್ರಮದಲ್ಲಿದೆ. ಅಲ್ಲದೆ, ನೆಟ್‌ಫ್ಲಿಕ್ಸ್‌ನ ಡೌನ್‌ಲೋಡ್ ಫಾರ್ ಯು ಫೀಚರ್‌ ಮೊಬೈಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

Most Read Articles
Best Mobiles in India

English summary
Netflix’s Downloads For You Feature will recommend that 3GB storage will be sufficient for 12 movies and TV shows.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X