Just In
Don't Miss
- News
ಮದರಸಾ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್ನಿಂದ ಸುಟ್ಟ ಮೌಲ್ವಿ
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Lifestyle
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Movies
ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಕ್ರೋಮ್ನಲ್ಲಿದೆ 'ಹಿಡನ್ ರೀಡರ್' ಮೋಡ್!..ಏನಿದು ಅಂತ ಗೊತ್ತಾದ್ರೆ ಹೆಚ್ಚು ಖುಷಿ ಪಡ್ತೀರಾ!
ಸ್ಮಾರ್ಟ್ಫೋನ್ಗಳು ಬಂದ ನಂತರ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನಬಹುದು. ಆದರೆ, ಜನರ ಓದುವ ಆಸೆ ಮಾತ್ರ ಕಡಿಮೆಯಾಗಿರುವುದಿಲ್ಲ. ಈಗ ಯಾವಾಗಲೂ ಕೈನಲ್ಲೇ ಸ್ಮಾರ್ಟ್ಫೋನ್ ಇರುವುದರಿಂದ ಪುಸ್ತಕ ಹಿಡಿಯದೇ ಸ್ಮಾರ್ಟ್ಫೋನಿನಲ್ಲೇ ಓದುವವರ ಸಂಖ್ಯೆ ಹೆಚ್ಚು. ಆದರೆ, ಇಲ್ಲಿ ಸಮಸ್ಯೆ ಎಂದರೆ, ಸ್ಮಾರ್ಟ್ಪೋನಿನಲ್ಲಿ ಓದುವುದು ಪುಸ್ತಕದಲ್ಲಿ ಓದಿದಂತಹ ಅನುಭವ ನೀಡುವುದಿಲ್ಲ ಮತ್ತು ಆ ಅನುಭವ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಬಹುದು.
ಹಾಗೆಂದ ಮಾತ್ರಕ್ಕೆ ಸ್ಮಾರ್ಟ್ಫೋನಿನಲ್ಲಿ ಓದುವಾಗ ಕಿರಿಕಿರಿಯನ್ನು ಸಹಿಸಿಕೊಳ್ಳಬೇಕೆ?. ಖಂಡಿತಾ ಇಲ್ಲ.! ಇತ್ತೀಚೆಗೆ ಗೂಗಲ್ ತನ್ನ ಕ್ರೋಮ್ ವರ್ಷನ್ 75 ಅನ್ನು ಅಪ್ ಡೇಟ್ ಅನ್ನು ರಿಲೀಸ್ ಮಾಡಿರುವ ಬಗ್ಗೆ ತಿಳಿದೇ ಇರುತ್ತದೆ. ಹೊಸ ಅಪ್ಡೇಟ್ ನಲ್ಲಿ ಹಲವು ಉಪಯುಕ್ತ ಫೀಚರ್ಗಳಿವೆ. ಇವುಗಳಲ್ಲಿ ಬಹಳ ಮುಖ್ಯವಾದ ಮತ್ತು ಆಸಕ್ತಿದಾಯಕವಾಗಿರುವ ಫೀಚರ್ ಎಂದರೆ ಅದು 'ಹಿಡನ್ ರೀಡರ್ ಮೋಡ್'. ಏಕೆಂದರೆ, ಇದು ಸ್ಮಾರ್ಟ್ಫೋನ್ ಮತ್ತು ಡೆಸ್ಕ್ಟಾಪ್ ಅನ್ನು ಓದುವಿಕೆಗೆ ಸಜ್ಜುಗೊಳಿಸುತ್ತದೆ.
ಈ ಹಿಡನ್ ರೀಡರ್ ಮೋಡ್ ಬಹಳ ಹ್ಯಾಂಡಿ ಆಗಿರುವ ಗೂಗಲ್ ಕ್ರೋಮ್ ಟೂಲ್ ಆಗಿದ್ದು, ನ್ಯೂಸ್ಗಳ ಸ್ಟೋರಿಯನ್ನು ಸರಳಗೊಳಿಸುತ್ತದೆ ಮತ್ತು ದೊಡ್ಡ ದೊಡ್ಡ ಕಟೆಂಟ್ ಗಳನ್ನು ಕೂಡ ಸುಲಭದಲ್ಲಿ ಓದುವುದಕ್ಕೆ ನೆರವು ನೀಡುತ್ತದೆ. ನೀವು ಭೇಟಿ ನೀಡುವ ವೆಬ್ಸೈಟ್ ನಲ್ಲಿರುವ ಎಲ್ಲಾ ಕ್ಲಟ್ಟರ್ ಗಳನ್ನು ಈ ಸೀಕ್ರೆಟ್ ರೀಡರ್ ಮೋಡ್ ರಿಮೂವ್ ಮಾಡುತ್ತದೆ ಮತ್ತು ನೀವು ಓದಬಯಸುವ ಆರ್ಟಿಕಲ್ ನ ಕಡೆಗೆ ಸಂಪೂರ್ಣ ಗಮನವನ್ನು ಕೇಂದ್ರಿಕರಿಸಿ ನಿಮ್ಮ ಓದುವಿಕೆಗೆ ನೆರವು ನೀಡುತ್ತದೆ.
ಒಂದು ವೇಳೆ ನೀವು ಕೂಡ ಸೀಕ್ರೆಟ್ ರೀಡರ್ ಮೋಡ್ ನ್ನು ಕ್ರೋಮ್ 75 ನಲ್ಲಿ ಆಕ್ಟಿವೇಟ್ ಮಾಡುವುದಕ್ಕೆ ಆಸಕ್ತಿ ವಹಿಸಿದ್ದರೆ ಕೆಲವು ಸರಳವಾಗಿರುವ ಹಂತಗಳನ್ನು ಈ ಕೆಳಗೆ ನಾವು ತಿಳಿಸಿದ್ದೇವೆ. ಅದನ್ನು ಫಾಲೋ ಮಾಡಿ.ಒಂದು ವಿಚಾರ ನೆನಪಿರಲಿ ಈ ಫೀಚರ್ ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ. ಹಾಗಾಗಿ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ನಾವು ನಿರೀಕ್ಷಿಸಬಹುದು. ಹಾಗಾದರೆ, ಪ್ರಸ್ತುತ ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 1.
ಮೊದಲನೆಯದಾಗಿ ನಿಮ್ಮ ಕ್ರೋಮ್ ಬ್ರೌಸರ್ ಅನ್ನು ತೆರೆಯಿರಿ ಮತ್ತು ಮೆನುಗೆ ತೆರಳಿ> ಹೆಲ್ಪ್ > ಅಬೌಟ್ ತೆರೆಯಿರಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ?ಹಂತ 2.
ಅಲ್ಲಿ ನೀವು ಕ್ರೋಮ್ 75 ಅನ್ನೇ ಬಳಸುತ್ತಿದ್ದೀರಾ ಎಂಬುದನ್ನು ಚೆಕ್ ಮಾಡಿ. ಒಂದು ವೇಳೆ ನೀವು ಹಳೆಯ ಕ್ರೋಮ್ ವರ್ಷನ್ ರನ್ ಮಾಡುತ್ತಿದ್ದರೆ ಅದನ್ನು ಅಪ್ಡೇಟ್ ಮಾಡಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 3.
ಕ್ರೋಮ್ 75 ಅಪ್ಡೇಟ್ ಆದ ನಂತರ ಮತ್ತೆ ಕ್ರೋಮ್ ತೆರೆಯಿರಿ. ನಂತರ ಯುಆರ್ಎಲ್ ಬಾರ್ ನಲ್ಲಿ "chrome://flags/#enable-reader-mode" ಎಂದು ಟೈಪಿಸಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 4.
ಮೇಲಿನ ಯುಆರ್ಎಲ್ ನಿಮ್ಮನ್ನ 'Enable Reader Mode' ಆಯ್ಕೆಗೆ ಕರೆದುಕೊಂಡು ಹೋಗುತ್ತದೆ. ಡ್ರಾಪ್ ಡೌನ್ ಮೆನುವಿನಲ್ಲಿ ಅನೇಬಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಿಡನ್ ರೀಡರ್ ಮೋಡ್ ಆಕ್ಟಿವೇಟ್ ಮಾಡುವುದು ಹೇಗೆ? ಹಂತ 5.
ಇದೀಗ 'ರೀಲಾಂಚ್ ನೌ' ಬಟನ್ ಅನ್ನು ಪೇಜಿನ ಕೆಳಭಾಗದಲ್ಲಿ ಪ್ರೆಸ್ ಮಾಡಿ ವೆಬ್ ಬ್ರೌಸರ್ ಅನ್ನು ರೀಸ್ಟಾರ್ಟ್ ಮಾಡಿದಾಗ ರೀಡರ್ ಮೋಡ್ ಎನೇಬಲ್ ಆಗುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790