ಜಿಯೋ ಫೈಬರ್‌ ಕನೆಕ್ಷನ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹೀಗೆ ಮಾಡಿ!

|

ದೇಶದ ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಜಿಯೋ ಫೈಬರ್ ಪ್ರಮುಖವಾಗಿ ಗುರುತಿಸಿಕೊಂಡಿದೆ. ಜಿಯೋ ಬ್ರಾಡ್‌ಬ್ಯಾಂಡ್ ಸೇವೆ ಅಥವಾ ಜಿಯೋ ಫೈಬರ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಇದು ಭಾರತದ ವಿವಿಧ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳ ಆಯ್ಕೆ ಅನ್ನು ನೀಡುತ್ತದೆ. ಬ್ರಾಡ್‌ಬ್ಯಾಂಡ್ ಸೇವೆಯು ಆಯ್ಕೆ ಮಾಡಲು 30Mbps ನಿಂದ 1Gbps ವರೆಗೆ ವೇಗದ ಶ್ರೇಣಿಯನ್ನು ಹೊಂದಿದೆ.

ಜಿಯೋ ಫೈಬರ್‌ ಕನೆಕ್ಷನ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹೀಗೆ ಮಾಡಿ!

ಗ್ರಾಹಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಸೂಕ್ತವಾದ ಜಿಯೋಫೈಬರ್ ಯೋಜನೆಯನ್ನು ಆರಿಸಿಕೊಳ್ಳಲು ಅವಕಾಶ ನೀಡುತ್ತದೆ. ಅಧಿಕ ವೇಗದ ಇಂಟರ್ನೆಟ್ ಸಂಪರ್ಕದ ಜೊತೆಗೆ, ಜಿಯೋ ಬ್ರಾಡ್‌ಬ್ಯಾಂಡ್ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ ನಂತಹ ಓವರ್ ದಿ ಟಾಪ್ (OTT) ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಗಳೊಂದಿಗೆ ಬರುತ್ತದೆ. ಇನ್ನು ಜಿಯೋಫೈಬರ್‌ಗೆ ಏರ್‌ಟೆಲ್, ಎಸಿಟಿ ಫೈಬರ್‌ ನೆಟ್, ಮತ್ತು ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಹಾಗದರೆ ಆನ್‌ಲೈನ್‌ ಮೂಲಕ ಜಿಯೋ ಫೈಬರ್‌ಗೆ ಬ್ರಾಡ್‌ಬ್ಯಾಂಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್‌ ಕನೆಕ್ಷನ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹೀಗೆ ಮಾಡಿ!

ಜಿಯೋ ಫೈಬರ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿ:
ಹಂತ:1 ಮೊದಲಿಗೆ ಜಿಯೋ ಫೈಬರ್ ರಿಜಿಸ್ಟರ್‌ ವೇಬ್‌ಪೇಜ್‌ ಗೆ ಭೇಟಿ ನೀಡಿ
ಹಂತ:2 ಇದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಜನರೇಟ್‌ ಒಟಿಪಿ ಕ್ಲಿಕ್ ಮಾಡಿ.
ಹಂತ:3 ನಂತರ ನಿಮ್ಮ ಫೋನ್‌ನಲ್ಲಿ ನೀವು ಸ್ವೀಕರಿಸಿದ ಆರು ಅಂಕಿಯ OTP ಯನ್ನು ನಮೂದಿಸಿ ಮತ್ತು ನಂತರ ಒಟಿಪಿ ವೆರಿಫೈ ಮಾಡಿ.
ಹಂತ:4 ಇದರಲ್ಲಿ ನೀವು ನಿಮಗೆ ಜಿಯೋ ಫೈಬರ್‌ ಕನೆಕ್ಟಿವಿಟಿ ಅಗತ್ಯವಿರುವ ನಿಮ್ಮ ವಿಳಾಸ ವನ್ನು ನಮೂದಿಸಿ.
ಹಂತ:5 ನಂತರ ಸಬ್ಮಿಟ್‌ ಕ್ಲಿಕ್ ಮಾಡಿ.

ವಿವರಗಳನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಜಿಯೋ ದೃಢೀಕರಣ ಸಂದೇಶವನ್ನು ಕಳುಹಿಸುತ್ತದೆ. ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಲು ನೀವು ಮೂಲದಲ್ಲಿ ಅಗತ್ಯವಿರುವ ದಾಖಲೆಗಳನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಸೇವೆಗೆ ನೀವು ಆಧಾರ್ ಕಾರ್ಡ್ ಅಥವಾ ಯಾವುದೇ ಮಾನ್ಯವಾದ ಗುರುತಿನ ಪುರಾವೆ ಮತ್ತು ದೂರಸಂಪರ್ಕ ಇಲಾಖೆ (DoT) ಮಾರ್ಗಸೂಚಿಗಳ ಪ್ರಕಾರ ವಿಳಾಸದ ಪುರಾವೆಗಳನ್ನು ಹೊಂದಿರಬೇಕು.

Most Read Articles
Best Mobiles in India

English summary
How to Apply Online for Jio Broadband (Jio Fiber) Connection?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X