ನಿಮ್ಮ ಟ್ವಿಟರ್‌ ಖಾತೆಯನ್ನು ಹ್ಯಾಕರ್‌ ದಾಳಿಯಿಂದ ತಪ್ಪಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಅಕೌಂಟ್‌ಗಳನ್ನು ಹ್ಯಾಕ್‌ ಮಾಡಿ ಬ್ಲಾಕ್‌ಮೇಲ್‌ ನಡೆಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲು ಮೈಕ್ರೋಬ್ಲಾಗ್ಲಿಂಗ್‌ ಸೈಟ್‌ ಟ್ವಿಟರ್‌ ಖಾತೆಗಳನ್ನು ಹ್ಯಾಕ್‌ ಮಾಡುವ ಪ್ರಕರಣಗಳು ತುಸು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಪ್ರಮುಖ ಗಣ್ಯ ವ್ಯಕ್ತಿಗಳ ಟ್ವಿಟರ್‌ ಖಾತೆಗಳನ್ನು ಹ್ಯಾಕ್‌ ಮಾಡಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ಸೈಬರ್‌ ಕ್ರಿಮಿನಲ್‌ ಸಾಕಷ್ಟು ಆಕ್ಟಿವ್‌ ಆಗಿದ್ದಾರೆ. ಸಾಮಾನ್ಯವಾಗಿ ತಾವು ಹ್ಯಾಕ್‌ ಮಾಡಿದ ಖಾತೆಯ ಡೇಟಾವನ್ನು ಬ್ಲಾಕ್‌ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಿಬಿಡುತ್ತಾರೆ.

ಟ್ವಿಟರ್‌

ಹೌದು, ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಟ್ವಿಟರ್‌ ಹ್ಯಾಕ್‌ ಮಾಡುವ ಸೈಬರ್‌ ಕ್ರಿಮಿನಲ್‌ಗಳು ನಿಮ್ಮ ಖಾತೆಗಳನ್ನು ಹಣಕಾಸಿನ ಲಾಭಕ್ಕಾಗಿ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದರಿಂದ ನಿಮ್ಮ ಟ್ರವಿಟರ್‌ ಖಾತೆಯನ್ನು ಹ್ಯಾಕರ್‌ಗಳ ದಾಳಿಯಿಂದ ತಡೆಗಟ್ಟಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-IN) ಬಳಕೆದಾರರು ತಮ್ಮ ಖಾತೆಗಳನ್ನು ಹ್ಯಾಕ್ ಮಾಡದಂತೆ ಖಚಿತಪಡಿಸಿಕೊಳ್ಳಲು ಕೈಗೊಳ್ಳಬಹುದಾದ ಹಲವು ಕ್ರಮಗಳನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಟ್ವಿಟರ್‌ ಖಾತೆಯನ್ನು ಹ್ಯಾಕರ್‌ಗಳ ದಾಳಿಯಿಂದ ತಡೆಗಟ್ಟುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌ ಖಾತೆ ಹ್ಯಾಕರ್‌ ದಾಳಿಗೆ ಒಳಗಾಗದಂತೆ ತಡೆಯುವುದು ಹೇಗೆ?

ಟ್ವಿಟರ್‌ ಖಾತೆ ಹ್ಯಾಕರ್‌ ದಾಳಿಗೆ ಒಳಗಾಗದಂತೆ ತಡೆಯುವುದು ಹೇಗೆ?

* ಸ್ಟ್ರಾಂಗ್‌ ಪಾಸ್‌ವರ್ಡ್ ಸೆಟ್‌ಮಾಡಿ
ಟ್ವಿಟರ್‌ ಖಾತೆ ಹ್ಯಾಕರ್‌ಗಳ ದಾಳಿಗೆ ಒಳಗಾಗದಂತೆ ತಡೆಯುವುದಕ್ಕಾಗಿ ಸ್ಟ್ರಾಂಗ್‌ ಪಾಸ್‌ವರ್ಡ್ ಅನ್ನು ಕ್ರಿಯೆಟ್‌ ಮಾಡುವುದು ಉತ್ತಮ. ನೀವು ಬಳಸುವ ಪಾಸ್‌ವರ್ಡ್‌ ಬೇರೆಲ್ಲೂ ಬಳಕೆ ಆಗಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿರಿ. ಸಾಮಾನ್ಯವಾಗಿ ನೀವು ಸೆಟ್‌ ಮಾಡುವ ಪಾಸ್‌ವರ್ಡ್‌ ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಒಳಗೊಂಡಿದ್ದರೆ ಉತ್ತಮ ಎನಿಸಲಿದೆ. ಇದಲ್ಲದೆ ನಿಮ್ಮ ಎಲ್ಲಾ ಲಾಗಿನ್ ಮಾಹಿತಿಯನ್ನು ಸುರಕ್ಷಿತವಾಗಿಡಲು ಪಾಸ್‌ವರ್ಡ್ ಮ್ಯಾನೇಜ್‌ ಸಾಫ್ಟ್‌ವೇರ್ ಅನ್ನು ಬಳಸಬಹುದಾಗಿದೆ.

ಎರಡು ಅಂಶದ ದೃಢೀಕರಣವನ್ನು ಬಳಸಿ

ಎರಡು ಅಂಶದ ದೃಢೀಕರಣವನ್ನು ಬಳಸಿ

ಇನ್ನು ನಿಮ್ಮ ಟ್ವಿಟರ್‌ ಖಾತೆಯನ್ನು ಸುರಕ್ಷಿತವಾಗಿಡಲು ಎರಡು ಅಂಶಗಳ ದೃಢೀಕರಣವನ್ನು ಬಳಸುವುದು ಸೂಕ್ತವಾಗಿದೆ. ದೃಢೀಕರಣದ ಸೆಕ್ಯುರಿಟಿಯನ್ನು ಹೆಚ್ಚಿಸಲು ಪಾಸ್‌ವರ್ಡ್ ಜೊತೆಗೆ ಸೆಕ್ಯುರಿಟಿ ಕೋಡ್ ಅಥವಾ ಸೆಕ್ಯುರಿಟಿ ಕೀಯನ್ನು ಬಳಸಬಹುದು. ಟ್ವಿಟರ್‌ ಬಳಕೆದಾರರು ಸೆಕ್ಯುರಿಟಿ ಸೆಟ್ಟಿಂಗ್‌ಗಳಲ್ಲಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದು. ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರಿಗೆ ದ್ವಿತೀಯ ಲಾಗಿನ್ ವಿಧಾನದೊಂದಿಗೆ ಪಾಸ್‌ವರ್ಡ್ ಅಗತ್ಯವಿರುತ್ತದೆ. ಒಂದು ಕೋಡ್, ಅಪ್ಲಿಕೇಶನ್ ಮೂಲಕ ಲಾಗಿನ್ ದೃಢೀಕರಣವನ್ನು ಬಳಸಬಹುದು.

ಫಿಶಿಂಗ್ ಬಗ್ಗೆ ಎಚ್ಚರಿಕೆ ವಹಿಸಿರಿ.

ಫಿಶಿಂಗ್ ಬಗ್ಗೆ ಎಚ್ಚರಿಕೆ ವಹಿಸಿರಿ.

ಸೈಬರ್‌ ಕ್ರಿಮಿನಲ್‌ಗಳು ಟ್ವಿಟರ್‌ನಲ್ಲಿ ಟ್ವೀಟ್‌ಗಳು, ಇಮೇಲ್‌ಗಳು ಮತ್ತು ಡೈರೆಕ್ಟ್‌ ಮೆಸೇಜ್‌ಗಳನ್ನು ಬಳಸಿಕೊಂಡು ಖಾಸಗಿ ಮಾಹಿತಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಈ ರೀತಿ ನಿಮ್ಮ ಖಾತೆಗೆ ಬರುವ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳಿತು.

* ಸೊಶೀಯಲ್‌ ಇಂಜಿನಿಯರಿಂಗ್ ತಂತ್ರಗಳ ಬಗ್ಗೆ ಎಚ್ಚರದಿಂದಿರಿ.
ಇದಲ್ಲದೆ ನಿಮ್ಮ ಪಾಸ್‌ವರ್ಡ್‌ ಅನ್ನು ವಿಶೇಷವಾಗಿ ನಿಮ್ಮ ಅನುಯಾಯಿಗಳು ಅಥವಾ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಭರವಸೆ ನೀಡುವವರಿಗೆ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಎಂದಿಗೂ ನೀಡಬೇಡಿ.

ಸುರಕ್ಷಿತ ಡಿವೈಸ್‌ಗಳಲ್ಲಿ ಟ್ವಿಟರ್‌ ಬಳಸಿ

ಸುರಕ್ಷಿತ ಡಿವೈಸ್‌ಗಳಲ್ಲಿ ಟ್ವಿಟರ್‌ ಬಳಸಿ

ಇನ್ನು ನೀವು ಟ್ವಿಟರ್‌ ಬಳಸುವ ಡಿವೈಸ್‌ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳು ಮತ್ತು ಆಂಟಿ-ವೈರಸ್ ಸಾಫ್ಟ್‌ವೇರ್‌ ಹೊಂದಿದ್ದರೆ ಉತ್ತಮ.

* ಟ್ವಿಟರ್‌ ಆಲರ್ಟ್‌ಗಳನ್ನು ಪರಿಶೀಲಿಸಿ
ಬಳಕೆದಾರರು ಮೊದಲ ಬಾರಿಗೆ ಹೊಸ ಡಿವೈಸ್‌ನಿಂದ ಟ್ವಿಟರ್‌ ಖಾತೆಗೆ ಲಾಗ್ ಇನ್ ಮಾಡಿದಾಗ, ಭದ್ರತೆಯ ಹೆಚ್ಚುವರಿ ಪದರವಾಗಿ ಬಳಕೆದಾರರಿಗೆ ಪುಶ್ ನೋಟಿಫಿಕೇಶನ್‌ ಅಥವಾ ಇಮೇಲ್ ಅನ್ನು ಕಳುಹಿಸುತ್ತದೆ. ಟ್ವಿಟರ್‌ ಖಾತೆಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸವನ್ನು ಬದಲಾಯಿಸಿದಾಗ, ಟ್ವಿಟರ್‌ ಖಾತೆಯಲ್ಲಿ ಹಿಂದೆ ಬಳಸಿದ ಇಮೇಲ್ ವಿಳಾಸಕ್ಕೆ ಅಧಿಸೂಚನೆಯನ್ನು ಕಳುಹಿಸುತ್ತದೆ. ಇದರಿಂದ ನಿಮ್ಮ ಅಕೌಂಟ್‌ನ ನಿಯಂತ್ರಣವನ್ನು ಮರಳಿ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಲು ಈ ಎಚ್ಚರಿಕೆಗಳು ಸಹಾಯ ಮಾಡುತ್ತವೆ.

Most Read Articles
Best Mobiles in India

English summary
Over the past few months there have been multiple cases of Twitter accounts being hacked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X