ಐಫೋನ್‌ನಲ್ಲಿ ಆಪಲ್ ಒನ್ ಸೇವೆಯನ್ನು ಕ್ಯಾನ್ಸಲ್‌ ಮಾಡುವುದು ಹೇಗೆ?

|

ಐಫೋನ್‌ ಬಳಕೆದಾರರು ಹಲವು ಸೇವೆಗಳನ್ನು ಪಡೆಯಲು ಇರುವ ಒಂದು ವೇದಿಕೆ ಅಂದರೆ ಅದು ಆಪಲ್‌ ಒನ್‌ ಸೇವೆ. ಆಪಲ್‌ ಒನ್‌ ಮಾಸಿಕ ಪಾವತಿಯಲ್ಲಿ ಅನೇಕ ಆಪಲ್‌ ಚಂದಾದಾರಿಕೆ ಸೇವೆಗಳನ್ನು ಪಡೆದುಕೊಳ್ಳಬಹುದು. ಇನ್ನು ಆಪಲ್‌ ಒನ್‌ ಪ್ಲ್ಯಾನ್‌ನಲ್ಲಿ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು ಐಕ್ಲೌಡ್ ಸ್ಟೋರೆಜ್‌ ನಂತಹ ಎಲ್ಲಾ ಸೇವೆಗಳನ್ನು ಒಂದೇ ಪ್ಲ್ಯಾನ್‌ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ನೀವು ಆಪಲ್ ಒನ್ ಅನ್ನು ಆರಿಸಿದರೆ ಈ ಸೇವೆಗಳಿಗೆ ನೀವು ಪ್ರತ್ಯೇಕವಾಗಿ ಚಂದಾದಾರಿಕೆಗಳನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ.

ಆಪಲ್‌ ಒನ್‌

ಹೌದು, ಆಪಲ್‌ ಒನ್‌ ಸೇವೆ ಸಬ್‌ಸ್ಕ್ರೈಬ್‌ ಮಾಡಿಕೊಂಡರೆ ಹಲವು ಸೇವೆಗಳು ಒಂದೇ ಸೂರಿನಡಿಯಲ್ಲಿ ಸಿಗುತ್ತವೆ. ಅಲ್ಲದೆ ಇದರಲ್ಲಿ ಆಪಲ್ ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ನಂತಹ ಸೇವೆಗಳು ಕೂಡ ಲಭ್ಯವಾಗಲಿವೆ. ಆದರೂ ನಿಮಗೊಂದು ವೇಳೆ ಈ ಪ್ಲ್ಯಾನ್‌ ಸೂಕ್ತವಲ್ಲದಿದ್ದರೆ, ನಿಮ್ಮ ಐಫೋನ್, ಐಪ್ಯಾಡ್ ಅಥವಾ ಮ್ಯಾಕ್‌ನಲ್ಲಿ ಆಪಲ್ ಒನ್ ಅನ್ನು ರದ್ದುಗೊಳಿಸುವುದು ಸುಲಭ. ಹಾಗಾದ್ರೆ ಐಫೋನ್‌ ಅಥವಾ ಐಪ್ಯಾಡ್‌ನಲ್ಲಿ ಆಪಲ್‌ ಒನ್‌ ಅನ್ನು ಕ್ಯಾನ್ಸಲ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಆಪಲ್ ಒನ್ ಅನ್ನು ರದ್ದು ಮಾಡುವುದು ಹೇಗೆ?

ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಆಪಲ್ ಒನ್ ಅನ್ನು ರದ್ದು ಮಾಡುವುದು ಹೇಗೆ?

ಹಂತ:1 ಐಫೋನ್ ಅಥವಾ ಐಪ್ಯಾಡ್‌ನಲ್ಲಿ ನಿಮ್ಮ ಆಪಲ್ ಒನ್ ಚಂದಾದಾರಿಕೆಯನ್ನು ರದ್ದುಗೊಳಿಸಲು, ನೀವು ಸೆಟ್ಟಿಂಗ್ಸ್‌ಗೆ ಹೋಗಬೇಕಾಗುತ್ತದೆ ಪ್ರಾರಂಭಿಸಬೇಕಾಗುತ್ತದೆ. ಹಾಗೆ ಮಾಡಲು, ಬೂದು "ಗೇರ್" ಐಕಾನ್ ಟ್ಯಾಪ್ ಮಾಡಿ.

ಹಂತ:2 ಸೆಟ್ಟಿಂಗ್ಸ್‌ನಲ್ಲಿ, ನಿಮ್ಮ ಆಪಲ್ ಐಡಿ ಹೆಸರು ಅಥವಾ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ಹಂತ:3 ಆಪಲ್ ಐಡಿ ಸೆಟ್ಟಿಂಗ್‌ಗಳಲ್ಲಿ, "ಚಂದಾದಾರಿಕೆಗಳು" ಟ್ಯಾಪ್ ಮಾಡಿ.

ಹಂತ:4 ನಿಮ್ಮ ಸಕ್ರಿಯ ಚಂದಾದಾರಿಕೆಗಳ ಪಟ್ಟಿಯಲ್ಲಿ, "ಆಪಲ್ ಒನ್"

ಆಪಲ್ ಒನ್

ಹಂತ:5 ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಕ್ಯಾನ್ಸಲ್‌ ಆಪಲ್ ಒನ್ " ಟ್ಯಾಪ್ ಮಾಡಿ.

ಹಂತ:6 ನಂತರ, ದೃಡೀಕರಣವು ಕಾಣಿಸಿಕೊಳ್ಳಲಿದೆ ಇದಾದ ಮೇಲೆ ಮತ್ತೆ "ಕ್ಯಾನ್ಸಲ್‌ ಆಪಲ್ ಒನ್ " ಟ್ಯಾಪ್ ಮಾಡಿ.

ಹಂತ:7 ಎರಡನೇ ಪಾಪ್-ಅಪ್‌ನಲ್ಲಿ, "ದೃಡೀಕರಿಸಿ" ಟ್ಯಾಪ್ ಮಾಡಿ. ಈಗ ನಿಮ್ಮ ಆಪಲ್ ಒನ್ ಚಂದಾದಾರಿಕೆ ಕ್ಯಾನ್ಸಲ್‌ ಆಗಲಿದೆ.

ಮ್ಯಾಕ್‌ನಲ್ಲಿ ಆಪಲ್ ಒನ್ ಅನ್ನು ಕ್ಯಾನ್ಸಲ್‌ ಮಾಡುವುದು ಹೇಗೆ?

ಮ್ಯಾಕ್‌ನಲ್ಲಿ ಆಪಲ್ ಒನ್ ಅನ್ನು ಕ್ಯಾನ್ಸಲ್‌ ಮಾಡುವುದು ಹೇಗೆ?

ಹಂತ:1 ಮ್ಯಾಕ್‌ನಲ್ಲಿ ಆಪಲ್ ಒನ್ ಅನ್ನು ಕ್ಯಾನ್ಸಲ್‌ ಮಾಡಲು, ಆಪ್ ಸ್ಟೋರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ ನಿಮ್ಮ ಆಪಲ್ ಐಡಿ ಪ್ರೊಫೈಲ್ ಹೆಸರನ್ನು ಕ್ಲಿಕ್ ಮಾಡಿ.

ಹಂತ:2 "Account" ಸ್ಕ್ರೀನ್‌ ಕಾಣಿಸಿಕೊಂಡಾಗ, "view information" ಕ್ಲಿಕ್ ಮಾಡಿ.

ಹಂತ:3 "Account information" ವಿಂಡೋದಲ್ಲಿ, "Manage" ವಿಭಾಗವನ್ನು ನೀವು ನೋಡುವ ತನಕ ಕೆಳಗೆ ಸ್ಕ್ರಾಲ್ ಮಾಡಿ.

ಹಂತ:4 "Subscriptions" ಲೇಬಲ್ ಪಕ್ಕದಲ್ಲಿರುವ "Manage" ಬಟನ್ ಕ್ಲಿಕ್ ಮಾಡಿ.

ಆಪಲ್ ಒನ್

ಹಂತ:5 Subscription ಪಟ್ಟಿಯಲ್ಲಿ, "ಆಪಲ್ ಒನ್" ಅನ್ನು ಪತ್ತೆ ಮಾಡಿ ಮತ್ತು ಅದರ ಪಕ್ಕದಲ್ಲಿರುವ "edit" ಬಟನ್ ಕ್ಲಿಕ್ ಮಾಡಿ.

ಹಂತ:5 ನಂತರ ಸ್ಕ್ರೀನ್‌ ನಲ್ಲಿ, "Cancel Subscription" ಕ್ಲಿಕ್ ಮಾಡಿ.

ಹಂತ:6 ವಾರ್ನಿಂಗ್‌ ವಿಂಡೋ ಪಾಪ್ ಅಪ್ ಆದಾಗ, "ಕ್ಯಾನ್ಸಲ್‌ ಆಪಲ್ ಒನ್ " ಕ್ಲಿಕ್ ಮಾಡಿ, ನಂತರ ಕಾಣಿಸಿಕೊಳ್ಳುವ ಎರಡನೇ ವಾರ್ನಿಂಗ್‌ ವಿಂಡೋದಲ್ಲಿ "ದೃಡೀಕರಿಸಿ" ಕ್ಲಿಕ್ ಮಾಡಿ. ಅದರ ನಂತರ, ಆಪಲ್ ಒನ್ ಕ್ಯಾನ್ಸಲ್‌ ಆಗಲಿದೆ.

Most Read Articles
Best Mobiles in India

English summary
Apple One is a handy way to bundle multiple Apple subscription services together for one monthly payment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X