ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಆಯ್ಕೆಯ ಭಾಷೆಯನ್ನು ಬದಲಾಯಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ ಕೂಡ ಅತ್ಯಂತ ಜನಪ್ರಿಯ ಆನ್‌ಲೈನ್ ಸ್ಟ್ರೀಮಿಂಗ್ ಸೇವೆಗಳಲ್ಲಿ ಒಂದಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ನೆಚ್ಚಿನ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ವೆಬ್‌ಸಿರೀಸ್‌ಗಳನ್ನು ವೀಕ್ಷಿಸಬಹುದಾಗಿದೆ. ಇನ್ನು ನೆಟ್‌ಫ್ಲಿಕ್ಸ್‌ ಕೂಡ ಮಲ್ಟಿ ಲ್ಯಾಂಗ್ವೇಜ್ ಅನ್ನು ಬೆಂಬಲಿಸಲಿದೆ. ಒಂದು ವೇಳೆ ನೀವು ನಿಮ್ಮ ಆಡಿಯೋ ಲ್ಯಾಂಗ್ವೇಜ್ ಅನ್ನು ಬದಲಾಯಿಸಲು ಬಯಸಿದರೆ, ಅದನ್ನು ಸಹ ಸರಳವಾಗಿ ಮಾಡಬಹುದಾಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಮಲ್ಟಿ ಲ್ಯಾಂಗ್ವೇಜ್ ಅನ್ನು ಬೆಂಬಲಿಸಲಿದೆ. ನೀವು ನಿಮ್ಮ ನೆಚ್ಚಿನ ಭಾಷೆಯ ಕಾರ್ಯಕ್ರಮಗಳನ್ನು ಬಯಸಿದ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ. ನಿಮ್ಮ ನೆಟ್‌ಫ್ಲಿಕ್ಸ್ ಆಡಿಯೋ ಲ್ಯಾಂಗ್ವೇಜ್ ಅನ್ನು ಸರಳ ರೀತಿಯಲ್ಲಿ ಬದಲಾಯಿಸಬಹುದು. ನೆಟ್‌ಫ್ಲಿಕ್ಸ್‌ ಸಾಮಾನ್ಯವಾಗಿ ನೀವು ಬಳಸುವ ಸ್ಥಳವನ್ನು ಆಧರಿಸಿ ಭಾಷೆಯನ್ನು ನಿರ್ಧರಿಸುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಡೆಸ್ಕ್‌ಟಾಪ್ ಅಥವಾ ಮೊಬೈಲ್ ಬಳಸಿ ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಆಡಿಯೋ ಲ್ಯಾಂಗ್ವೇಜ್ ಬದಲಾಯಿಸಹುದು. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಆಡಿಯೋ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌ನಲ್ಲಿ ಆಡಿಯೋ ಭಾಷೆ ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಆಡಿಯೋ ಭಾಷೆ ಬದಲಾಯಿಸುವುದು ಹೇಗೆ?

ಹಂತ 1: ನೀವು ನೆಟ್‌ಫ್ಲಿಕ್ಸ್‌ ಬಳಸುವ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್‌ನಲ್ಲಿ, Netflix.com ಗೆ ಸೈನ್ ಇನ್ ಮಾಡಿ.

ಹಂತ 2: ನಂತರ ನಿಮ್ಮ ಮ್ಯಾನೇಜ್‌ ಪ್ರೊಫೈಲ್ಸ್‌ ಆಯ್ಕೆಯನ್ನು ಆರಿಸಿ.

ಹಂತ 3: ಇದರಲ್ಲಿ ನಿಮ್ಮ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.

ಹಂತ 4: ಇದರಲ್ಲಿ ನೀವು ನಿಮ್ಮ ಆಡಿಯೋ ಲ್ಯಾಂಗ್ವೇಜ್ ಅನ್ನು ಬದಲಾಯಿಸಿ.

ಹಂತ 5: ಇದೀಗ ನಿಮ್ಮ ಕಾರ್ಯಕ್ರಮಗಳನ್ನು ನಿಮ್ಮ ಆದ್ಯತೆಯ ಆಡಿಯೊದೊಂದಿಗೆ ಮತ್ತೆ ಪ್ಲೇ ಮಾಡಲು ಪ್ರಯತ್ನಿಸಿ.

ಒಂದು ವೇಳೆ ನೀವು ಬಯಸಿದ ಕಾರ್ಯಕ್ರಮ ನಿಮ್ಮ ಆದ್ಯತೆಯ ಆಡಿಯೋ ಲ್ಯಾಂಗ್ವೇಜ್ ಅಲ್ಲಿ ಪ್ಲೇ ಆಗದಿದ್ದರೆ, ಅದು ನಿಮ್ಮ ಭಾಷೆಯಲ್ಲಿ ಆ ಕಾರ್ಯಕ್ರಮ ಇಲ್ಲ ಅನ್ನೊದನ್ನ ಗಮನಿಸಬೇಕಾಗುತ್ತದೆ.

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಮೊಬೈಲ್‌ನಲ್ಲಿ Netflix.com ಗೆ ಭೇಟಿ ನೀಡಿ.
ಹಂತ 2: ನಂತರ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
ಹಂತ 3: ಸೈನ್ ಇನ್ ಮಾಡಿದ ನಂತರ, ನಿಮ್ಮ ಅಕೌಂಟ್‌ ಮೇಲೆ ಟ್ಯಾಪ್ ಮಾಡಿ.
ಹಂತ 4: ನಂತರ ಪ್ರೊಫೈಲ್ ಮತ್ತು ಪೇರೇಂಟ್ಸ್‌ ಕಂಟ್ರೋಲ್‌ ಅನ್ನು ಸ್ಕ್ರಾಲ್ ಮಾಡಿ, ಇದರಲ್ಲಿ ನಿಮ್ಮ ಪ್ರೊಫೈಲ್ ಪಕ್ಕದಲ್ಲಿರುವ ಡ್ರಾಪ್-ಡೌನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ 5: ಇದರಲ್ಲಿ ಲ್ಯಾಗ್ವೇಂಜ್‌ ಪಕ್ಕದಲ್ಲಿ ಇರುವ ಚೇಂಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 6: ಹೊಸ ಪೇಜ್‌ನಲ್ಲಿ ಸ್ಮಾಲ್‌ ಸರ್ಕಲ್‌ ಟ್ಯಾಪ್‌ ಮಾಡಿ ಮತ್ತು ನಿಮ್ಮ ಲ್ಯಾಗ್ವೇಂಜ್‌ ಅನ್ನು ಆಯ್ಕೆ ಮಾಡಿ.
ಹಂತ 7: ಭಾಷೆಯನ್ನು ಆಯ್ಕೆ ಮಾಡಿದ ನಂತರ, ಪೇಜ್‌ ಅನ್ನು ಸ್ಕ್ರೋಲ್ ಮಾಡುವ ಮೂಲಕ ಮತ್ತು ಸೇವ್‌ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಲ್ಯಾಗ್ವೇಂಜ್‌ ಬದಲಾಗಲಿದೆ.

ಪ್ರೊಫೈಲ್

ಇದಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಚಲನಚಿತ್ರಗಳ ಭಾಷೆಯನ್ನು ಸಹ ಆಯ್ಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮೊದಲಿಗೆ ಮೊಬೈಲ್ ಬ್ರೌಸರ್‌ನಲ್ಲಿ, Netflix.com ಗೆ ಸೈನ್ ಇನ್ ಮಾಡಿ. ನಿಮ್ಮ ಅಕೌಂಟ್‌ ಆಯ್ಕೆ ಮಾಡಿ. ನಂತರ ಪ್ರೊಫೈಲ್ ಆಯ್ಕೆಮಾಡಿ. ಭಾಷೆಯನ್ನು ಆರಿಸಿ. ನಿಮಗೆ ಸೂಕ್ತ ಎನಿಸುವ ಚಲನಚಿತ್ರಗಳ ಭಾಷೆಯನ್ನು ಆಯ್ಕೆ ಮಾಡಿ.ನಂತರ ಸೇವ್‌ ಆಯ್ಕೆ ಮಾಡಿ. ಇದೀಗ ನೀವು ಆಯ್ಕೆ ಮಾಡಿದ ಭಾಷೆಯ ಚಲನಚಿತ್ರಗಳು, ವೆಬ್‌ಸಿರೀಸ್‌ಗಳ ಪಟ್ಟಿ ಮಾತ್ರ ಕಾಣಿಸಲಿದೆ.

Most Read Articles
Best Mobiles in India

English summary
Check here the step-by-step guide you can follow to change your audio language on Netflix using desktop or mobile.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X