Just In
- 48 min ago
ವಿವೋ X60 ಪ್ರೊ ಪ್ಲಸ್ ಸ್ಮಾರ್ಟ್ಫೋನ್ ಲಾಂಚ್!..ಬೆಲೆ ಎಷ್ಟು?..ಫೀಚರ್ಸ್ ಏನು?
- 15 hrs ago
ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಗೋ ಲಾಂಚ್!..ಬೆಲೆ ಎಷ್ಟು?
- 16 hrs ago
ಏರ್ಟೆಲ್ನಿಂದ ಎರಡು ಹೊಸ ರೀಚಾರ್ಜ್ ಪ್ಯಾಕ್ ಲಾಂಚ್!..ಪ್ರಯೋಜನಗಳೆನು?
- 17 hrs ago
ಭಾರತದಲ್ಲಿ JBL C115 ಇಯರ್ಬಡ್ಸ್ ಲಾಂಚ್!..21 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
Don't Miss
- News
ಹಕ್ಕಿ ಜ್ವರ; ಕೋಳಿ ಮಾಂಸ ಸೇವನೆ ಬಗ್ಗೆ FSSAI ಎಚ್ಚರಿಕೆ...
- Sports
ಸ್ಟೀವ್ ಸ್ಮಿತ್ ಮತ್ತೆ ನಾಯಕನಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಇಯಾನ್ ಚಾಪೆಲ್
- Finance
ಎಲ್ ಪಿಜಿ ಸಿಲಿಂಡರ್ ಉಚಿತವಾಗಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
- Automobiles
ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೈಕ್ರೋಸಾಫ್ಟ್ ಟೀಂ ನಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಆಪ್ಗಳು ಭಾರಿ ಜನಪ್ರಿಯತೆಯನ್ನು ಗಳಿಸಿವೆ. ಅದರಲ್ಲೂ ಕೊರೊನಾ ವೈರಸ್ನ ಹಾವಳಿ ಶುರುವಾದ ನಂತರ ಹೆಚ್ಚಿನ ಜನರು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಿಬ್ಬಂದಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸಿಂಗ್ ಆಪ್ ಮೂಲಕ ಮಿಟಿಂಗ್ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ಗಳು ಕಾರ್ಯರೂಪಕ್ಕೆ ಬಂದಿದ್ದು., ಇದರಲ್ಲಿ ಮೈಕ್ರೋಸಾಫ್ಟ್ ಟೀಂ ಕೂಡ ಒಂದಾಗಿದೆ. ಸದ್ಯ ಲಭ್ಯವಿರುವ ಹಲವಾರು ಪ್ಲಾಟ್ಫಾರ್ಮ್ಗಳ ಪೈಕಿ, ಮೈಕ್ರೋಸಾಫ್ಟ್ ಟೀಂ ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ಹೌದು, ಮೈಕ್ರೋಸಾಫ್ಟ್ ಟೀಂ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಬಳಕೆದಾರರ ನೆಚ್ಚಿನ ಆಪ್ಗಳಲ್ಲಿ ಒಂದಾಗಿದೆ. ಇನ್ನು ಮೈಕ್ರೋಸಾಫ್ಟ್ ಟೀಂ ಆಪ್ ಕೂಡ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್ಗಳನ್ನ ಪರಿಚಯಿಸುತ್ತಲೇ ಬಂದಿದ್ದು, ಕುಟುಂಬದ ಜೊತೆ, ಸ್ನೇಹಿತರ ಜೊತೆ, ಆನ್ಲೈನ್ ಕ್ಲಾಸ್, ಆನ್ಲೈನ್ ಮಿಟಿಂಗ್ ಎಲ್ಲದಕ್ಕೂ ಉತ್ತಮ ಪ್ಲಾಟ್ಫಾರ್ಮ್ ಆಗಿದೆ. ಇನ್ನು ಇತರೆ ವಿಡಿಯೋ ಕಾನ್ಫರೆನ್ಸಿಂಗ್ ಆಪ್ಗಳ ಮಾದರಿಯಲ್ಲಿಯೇ ಮೈಕ್ರೋಸಾಫ್ಟ್ ಟೀಂ ನಲ್ಲಿಯೂ ಸಹ ಬ್ಯಾಕ್ಗ್ರೌಂಡ್ ಬದಲಾಯಿಸುವ ಅವಕಾಸವಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಇತರ ಪ್ಲ್ಯಾಟ್ಫಾರ್ಮ್ಗಳಂತೆಯೇ, ಮೈಕ್ರೋಸಾಫ್ಟ್ ಟೀಂ ಕೂಡ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಅನುಮತಿಸುತ್ತದೆ. ಚಾಟ್ ಮತ್ತು ಥ್ರೆಡ್ ಸಂಭಾಷಣೆಗಳ ಆಯ್ಕೆಯ ಹೊರತಾಗಿ, ಇದು ಫೈಲ್ಗಳು, ಪ್ರಸ್ತುತಿಗಳನ್ನು ಹಂಚಿಕೊಳ್ಳಲು ಸಹ ನಿಮಗೆ ಅನುಮತಿಸುತ್ತದೆ. ಅಲ್ಲದೆ ಕಂಪ್ಲೀಟ್ ಸ್ಕ್ರೀನ್ ಅನ್ನು ಸಹ ಶೇರ್ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಹಾಗೇಯೇ ಇದರಲ್ಲೊಇಯೂ ಬ್ಯಾಕ್ಗ್ರೌಂಡ್ ಅನ್ನು ಬದಲಾಯಿಸುವ ಅವಕಶ ಕೂಡ ಲಭ್ಯವಿದೆ. ಮೈಕ್ರೋಸಾಫ್ಟ್ ಟೀಂ ನಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಸಭೆಗೂ ಮೊದಲು ಮೈಕ್ರೋಸಾಫ್ಟ್ ಟೀಂ ಆಪ್ನಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸುವುದು ಹೇಗೆ?
ಸಭೆ ಪ್ರಾರಂಭವಾಗುವ ಮೊದಲು ಅಥವಾ ಸಭೆಯ ಸಮಯದಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸುವ ಆಯ್ಕೆಯನ್ನು ಮೈಕ್ರೋಸಾಫ್ಟ್ ಟೀಂ ಹೊಂದಿದೆ.
ಹಂತ 1: ಬ್ಯಾಕ್ಗ್ರೌಂಡ್ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ನೀವು ಮೈಕ್ರೋಸಾಫ್ಟ್ ಟೀಂ ಗೆ ಪ್ರವೇಶವನ್ನು ಹೊಂದಿರಬೇಕು.
ಹಂತ 2: ಸಭೆಯ ಮೊದಲು ನೀವು ಬ್ಯಾಕ್ಗ್ರೌಂಡ್ ಬದಲಾಯಿಸಲು ಬಯಸಿದರೆ 'ಬ್ಯಾಕ್ಗ್ರೌಂಡ್ ಎಫೆಕ್ಟ್' ಆಯ್ಕೆಯನ್ನು ಆರಿಸಿ. ಯುಐನಲ್ಲಿ ಮೈಕ್ ಬಟನ್ ಪಕ್ಕದಲ್ಲಿ ಇದನ್ನು ಕಾಣಬಹುದಾಗಿದೆ.
ಹಂತ 3: ಬ್ಯಾಕ್ಗ್ರೌಂಡ್ ಮರೆಮಾಡಲು ನೀವು 'ಬ್ಲರ್' ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅಲ್ಲದೆ, ಒಟ್ಟಾರೆ ನೋಟವನ್ನು ಹೆಚ್ಚಿಸಲು ನೀವು ಹೊಸ ಚಿತ್ರವನ್ನು ಒಟ್ಟಿಗೆ ಸೇರಿಸಬಹುದು.
ಹಂತ 4: ಹೊಸ ಚಿತ್ರದೊಂದಿಗೆ ಬ್ಯಾಕ್ಗ್ರೌಂಡ್ ಬದಲಾಯಿಸಲು 'Add new' ಆಯ್ಕೆಯನ್ನು ಆರಿಸಿ. ಈಗ, ನೀವು ಬ್ಯಾಕ್ಗ್ರೌಂಡ್ ಹೊಂದಿಸಲು ಬಯಸುವ ಚಿತ್ರವನ್ನು ಅಪ್ಲೋಡ್ ಮಾಡಿ.

ಸಭೆಯ ಸಮಯದಲ್ಲಿ ಮೈಕ್ರೋಸಾಫ್ಟ್ ಟೀಂನಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸುವುದು ಹೇಗೆ?
ಹಂತ 1: ನಡೆಯುತ್ತಿರುವ ಸಭೆಯಲ್ಲಿ ಬ್ಯಾಕ್ಗ್ರೌಂಡ್ ಬದಲಾಯಿಸಲು ನೀವು 'ಮೋ ಆಕ್ಷನ್ಸ್' ಆಯ್ಕೆಗೆ ಹೋಗಿ 'ಶೋ ಬ್ಯಾಕ್ಗ್ರೌಂಡ್ ಎಫೆಕ್ಟ್ಸ್'ಆಯ್ಕೆಯನ್ನು ಆರಿಸಿ.
ಹಂತ 2: ಈಗ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಹೊಸ ಬ್ಯಾಕ್ಗ್ರೌಂಡ್ ಅನ್ನು 'ಬ್ಲರ್' ಮಾಡಿ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190