ಫೋನ್ ಪೇ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಪ್ರಮುಖ ಅಂಶಗಳು

By Gizbot Bureau
|

ಕರೋನಾ ವೈರಸ್ ಕಾರಣದಿಂದಾಗಿ ದೇಶದಲ್ಲಿ ಇದೀಗ ಡಿಜಿಟಲ್ ವ್ಯವಹಾರ ಅಧಿಕವಾಗಿದೆ. ಹೆಚ್ಚಿನ ಪಾವತಿಗಳಿಗಾಗಿ ಜನರು ಇದೀಗ ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದು ದಿನದಿಂದ ದಿನಕ್ಕೆ ಇದರ ಬಳಕೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. 45.3 ಶೇಕಡಾದಷ್ಟು ಮೊಬೈಲ್ ವ್ಯಾಲೆಟ್ ಮತ್ತು ಪಿಪಿಐ ಕಾರ್ಡ್ ಗಳ ವ್ಯವಹಾರವು ಭಾರತದಲ್ಲಿ ಅಧಿಕವಾಗಿದೆ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ವರದಿಯನ್ನೂ ಕೂಡ ನೀಡಿದೆ.

ಮೊಬೈಲ್ ವ್ಯಾಲೆಟ್

ಮೊಬೈಲ್ ವ್ಯಾಲೆಟ್ ಗಳ ವಿಚಾರಕ್ಕೆ ಬಂದರೆ ಗೂಗಲ್ ಪೇ 7.5 ಕೋಟಿ ಬಳಕೆದಾರರು ವ್ಯವಹಾರವನ್ನು ಮೇ ತಿಂಗಳಲ್ಲಿ ಮಾಡಿದೆ. ಇದೇ ತಿಂಗಳಲ್ಲಿ ಫೋನ್ ಪೇ ಮೂಲಕ 6 ಕೋಟಿ ಬಳಕೆದಾರರು ವ್ಯವಹಾರವನ್ನು ನಡೆಸಿದ್ದಾರೆ. ಇದರರ್ಥ ಈ ಎರಡು ಆಪ್ ಗಳ ನಡುವೆ ದೇಶದಲ್ಲಿ ಅತ್ಯುತ್ತಮ ಸ್ಪರ್ಧೆ ಇದೆ. ಈ ಎರಡೂ ಆಪ್ ಗಳು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಪಾವತಿ ಮಾಡುವುದಕ್ಕೆ ಅವಕಾಶ ನೀಡುತ್ತವೆ.

ಅದೇ ರೀತಿ ಫೋನ್ ಪೇ ನಿಮಗೆ ನಿಮ್ಮ ಮೊಬೈಲ್ ಫೋನ್ ರೀಚಾರ್ಜ್ ಮಾಡುವುದಕ್ಕೆ, ಬಿಲ್ ಪಾವತಿ ಮಾಡುವುದಕ್ಕೆ, ಡಿಟಿಹೆಚ್ ಕನೆಕ್ಷನ್ ಮತ್ತು ಇತ್ಯಾದಿ ಹಲವು ವ್ಯವಹಾರಗಳನ್ನು ನಡೆಸುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಆತನ ಅಥವಾ ಆಕೆಯ ಪಾಸ್ ವರ್ಡ್ ನ್ನು ಯಾರೂ ಕೂಡ ಇತರರೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ಹಾಗೆ ಮಾಡಿದರೆ ಕೂಡಲೇ ಯುಪಿಐ ಪಿನ್ ಸ್ಕ್ಯಾಮ್ ಗೆ ನೀವು ಒಳಗಾಗುತ್ತೀರಿ. ಒಂದು ವೇಳೆ ನೀವು ಪಿನ್ ನಂಬರ್ ನ್ನು ಬದಲಾಯಿಸುವುದಕ್ಕೆ ಆಲೋಚಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಫೋನ್ ಪೇ ಯುಪಿಐ ಪಿನ್ ನ್ನು ಬದಲಾಯಿಸುವುದು ಹೇಗೆ?

ಫೋನ್ ಪೇ ಯುಪಿಐ ಪಿನ್ ನ್ನು ಬದಲಾಯಿಸುವುದು ಹೇಗೆ?

ಹಂತ 1: ಸ್ಕ್ರೀನಿನ ಬಲ ಮೂಲೆಯಲ್ಲಿರುವ ಮೆನುವನ್ನು ಮೊದಲು ತೆರೆಯಿರಿ.

ಹಂತ 2: ನೀವು ಬ್ಯಾಂಕ್ ಅಕೌಂಟ್ ಸೆಗ್ಮೆಂಟ್ ನ್ನು ಕ್ಲಿಕ್ ಮಾಡಬೇಕು. ನಂತರ ವ್ಯಾಲೆಟ್ ಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ವಿವರವನ್ನು ನೀವಲ್ಲಿ ಗಮನಿಸಬಹುದು.

ಹಂತ 3: ಆದಾದ ನಂತರ ಯಾವ ಬ್ಯಾಂಕ್ ಖಾತೆಯ ಪಿನ್ ನಂಬರ್ ನ್ನು ನೀವು ಬದಲಾಯಿಸುವುದಕ್ಕೆ ಬಯಸುತ್ತೀರಿ ಎಂಬುದನ್ನು ಸೆಲೆಕ್ಟ್ ಮಾಡಿ.

ಹಂತ 4: ನಂತರ ಆಪ್ ನಿಮಗೆ ಪಾಸ್ ವರ್ಡ್ ಬದಲಾಯಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ರೀಸೆಟ್ ಬಟನ್ ನ್ನು ನೀವು ಗಮನಿಸಬಹುದು.

ಹಂತ 5:ನಂತರ ಬಟನ್ ನ್ನು ಕ್ಲಿಕ್ಕಿಸಿ ಮತ್ತು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ ಕೊನೆಯ ಡಿಜಿಟ್ ಗಳನ್ನು ಎಂಟರ್ ಮಾಡಬೇಕು ಜೊತೆಗೆ ಕಾರ್ಡ್ ನಲ್ಲಿ ಬರೆಯಲಾಗಿರುವ ಎಕ್ಸ್ ಪೈರಿ ಡೇಟ್ ನ್ನು ನಮೂದಿಸಬೇಕು. ಒಂದು ವೇಳೆ ಯಾವುದೇ ಡೇಟ್ ಇಲ್ಲದೆ ಇದ್ದರೆ 00/49 ಎಂದು ನಮೂದಿಸಿ.

ಹಂತ 6: ಬ್ಯಾಂಕ್ ನಿಂದ ನೀವು ಓಟಿಪಿಯನ್ ಪಡೆಯುತ್ತೀರಿ ನಂತರ ಓಟಿಪಿ ಬರೆದರೆ ಹೊಸ ಪಿನ್ ನಂಬರ್ ನೀವು ಸೆಟ್ ಮಾಡಿ ಪಡೆಯಬಹುದು.

ಫೋನ್ ಪೇಯಲ್ಲಿ ವಿತ್ ಡ್ರಾ ಲಿಮಿಟ್ ಎಷ್ಟು?

ಫೋನ್ ಪೇಯಲ್ಲಿ ವಿತ್ ಡ್ರಾ ಲಿಮಿಟ್ ಎಷ್ಟು?

ಪ್ರತಿ ದಿನ ಬಳಕೆದಾರರು 5,000 ರುಪಾಯಿಯನ್ನು ವಿತ್ ಡ್ರಾ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ಪ್ರತಿ ತಿಂಗಳು 25,000 ರುಪಾಯಿ ವಿತ್ ಡ್ರಾ ಮಾಡಬಹುದು. ವಾರ್ಷಿಕ 3,00,000 ಹಣವನ್ನು ವಿತ್ ಡ್ರಾ ಮಾಡುವುದಕ್ಕೆ ಫೋನ್ ಪೇ ಅವಕಾಶ ನೀಡುತ್ತದೆ.

ಫೋನ್ ಪೇ ಕಸ್ಟಮರ್ ಕೇರ್ ಅಥವಾ ಗ್ರಾಹಕ ಸೇವಾ ಕೇಂದ್ರ

ಫೋನ್ ಪೇ ಕಸ್ಟಮರ್ ಕೇರ್ ಅಥವಾ ಗ್ರಾಹಕ ಸೇವಾ ಕೇಂದ್ರ

ನಿಮ್ಮ ಮಾಹಿತಿಗಾಗಿ ಎರಡು ಪ್ರಮುಖ ನಂಬರ್ ನ್ನು ಕಂಪೆನಿ ಒದಗಿಸುತ್ತದೆ. ಅದುವೇ 080 - 68727374 or 022 - 68727374. ಇದನ್ನು ಹೊರತು ಪಡಿಸಿ ನೀವು ಮೇಲ್ ಮಾಡುವುದಕ್ಕೆ ಅವಕಾಶವಿರುತ್ತದೆ. support.phonepe.com ಗೆ ಮೇಲ್ ಮಾಡಬಹುದು ಮತ್ತು ಮೆಸೇಜ್ ಮೂಲಕ ನಿಮ್ಮ ಬೇಡಿಕೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Most Read Articles
Best Mobiles in India

English summary
How To Change UPI Pin, Transaction Limit Per Day, Customer Care Number Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X