ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸುವುದು ಹೇಗೆ ?

|

ಟ್ರೂ ಕಾಲರ್‌ ಅಪ್ಲಿಕೇಶನ್‌ ಜನಪ್ರಿಯ ಕಾಲರ್‌ ಐಡಿ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇದು ಬಳಕೆದಾರರಿಗೆ ಜನರನ್ನು, ವಿಶೇಷವಾಗಿ ಸ್ಪ್ಯಾಮರ್‌ಗಳನ್ನು ಗುರುತಿಸುವಲ್ಲಿ ಮತ್ತು ಅವರಿಂದ ದೂರವಿರಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ಕರೆ ಮಾಡುವ ಸಂಖ್ಯೆಯನ್ನು ಬಳಸುವವರ ಹೆಸರನ್ನು ಕೂಡ ಪತ್ತೆ ಮಾಡಬಲ್ಲದು. ಆದರೆ ಹೆಸರು ಸರಿಯಾಗಿಲ್ಲದಿದ್ದರೆ ಅದು ದಾರಿ ತಪ್ಪಿಸುತ್ತದೆ ಎನ್ನಬಹುದಾಗಿದೆ.

ಟ್ರೂ ಕಾಲರ್

ಹೌದು, ಟ್ರೂ ಕಾಲರ್ ಜನಪ್ರಿಯ ಕಾಲರ್‌ ಐಡಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇನ್ನು ನಿಮ್ಮ ಟ್ರೂ ಕಾಲರ್ ಹೆಸರನ್ನು ನೀವು ಸುಲಭವಾಗಿ ಬದಲಾಯಿಸಬಹುದು. ಒಂದು ವೇಳೆ, ನಿಮ್ಮ ಉಪಸ್ಥಿತಿಯನ್ನು ತೋರಿಸಲು ನೀವು ಬಯಸುವುದಿಲ್ಲ, ಜನರ ದೃಷ್ಟಿಯಿಂದ ನಿಮ್ಮ ಹೆಸರನ್ನು ನೀವು ಮರೆ ಮಾಡಲು ಬಯಸಿದರೆ ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಿಂದ ಅನ್ಲಿಸ್ಟ್ ಮಾಡಬಹುದು. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸುವುದು ಹೇಗೆ ?

ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸುವುದು ಹೇಗೆ ?

ಹಂತ 1: ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಫೋನ್‌ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್‌ಗೆ ಹೋಗಿ.

ಹಂತ 2: ಐಒಎಸ್‌ನಲ್ಲಿ, ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ. Android ನಲ್ಲಿ, ಮೇಲಿನ ಬಲ ಮೂಲೆಯಲ್ಲಿರುವ ಮೆನು ಆಯ್ಕೆಯನ್ನು ಆರಿಸಿ.

ಹಂತ 3: ಅಲ್ಲಿ, ನಿಮ್ಮ ಪ್ರೊಫೈಲ್ ಅನ್ನು ಎಡಿಟ್‌ ಆಯ್ಕೆಯೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ನೀವು ಕಾಣಬಹುದು.

ಹಂತ 4: ನಿಮ್ಮ ಪ್ರೊಫೈಲ್ ಎಡಿಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳ ಹಾಳೆ ಕಾಣಿಸುತ್ತದೆ.

ಹಂತ 5: ಈಗ, ಟ್ರೂಕಾಲರ್‌ನಲ್ಲಿ ನೀವು ತೋರಿಸಲು ಬಯಸುವ ಯಾವುದೇ ಹೆಸರಿನಿಂದ ಮೊದಲ ಮತ್ತು ಕೊನೆಯ ಹೆಸರುಗಳ ವಿಭಾಗವನ್ನು ಎಡಿಟ್‌ ಮಾಡಿ. ಇದನ್ನು ಮಾಡಿದ ನಂತರ, ಮೇಲಿನ ಬಲ ಮೂಲೆಯಲ್ಲಿರುವ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ವಿವರಗಳನ್ನು ಸೇವ್‌ ಮಾಡಲಾಗುತ್ತದೆ.

ಡೆಸ್ಕ್‌ಟಾಪ್

ಇದಲ್ಲದೆ ನೀವು ಬಯಸಿದರೆ ಪರ್ಯಾಯವಾಗಿ, ಡೆಸ್ಕ್‌ಟಾಪ್ ಮೂಲಕವೂ ನಿಮ್ಮ ಹೆಸರನ್ನು ಟ್ರೂಕಾಲರ್‌ನಲ್ಲಿ ಬದಲಾಯಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಟ್ರೂಕಾಲರ್ ವೆಬ್‌ಸೈಟ್‌ಗೆ ಹೋಗಿ> ನಿಮ್ಮ ವಿವರಗಳೊಂದಿಗೆ ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡಿ> ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ> ಸೂಚಿಸುವ ಹೆಸರನ್ನು ಆಯ್ಕೆ ಮಾಡಿ> ಹೊಸ ಹೆಸರನ್ನು ಸೇರಿಸಿ ಮತ್ತು ಸೇವ್‌ ಆಯ್ಕೆಯನ್ನು ಟ್ಯಾಪ್‌ ಮಾಡಿರಿ. ನೀವು ಮಾಡಿರುವ ಬದಲಾವಣೆಗಳು ಟ್ರೂಕಾಲರ್‌ನಲ್ಲಿರುವ ಜನರಿಗೆ ಒಂದು ಅಥವಾ ಎರಡು ದಿನಗಳಲ್ಲಿ ಕಾಣಿಸುತ್ತದೆ.

ಟ್ರೂಕಾಲರ್‌ನಿಂದ ನಿಮ್ಮ ಫೋನ್ ಸಂಖ್ಯೆಯನ್ನು ಅನ್‌ಲಿಸ್ಟ್ ಮಾಡುವುದು ಹೇಗೆ?

ಟ್ರೂಕಾಲರ್‌ನಿಂದ ನಿಮ್ಮ ಫೋನ್ ಸಂಖ್ಯೆಯನ್ನು ಅನ್‌ಲಿಸ್ಟ್ ಮಾಡುವುದು ಹೇಗೆ?

ಹಂತ 1: Android ಅಥವಾ iOS ನಲ್ಲಿನ ಟ್ರೂಕಾಲರ್ ಅಪ್ಲಿಕೇಶನ್‌ಗೆ ಹೋಗಿ.

ಹಂತ 2: ಮೋರ್‌ ಆಯ್ಕೆ (ಐಒಎಸ್‌ನಲ್ಲಿ) ಅಥವಾ ಮೆನು (ಆಂಡ್ರಾಯ್ಡ್‌ನಲ್ಲಿ) ಆಯ್ಕೆಮಾಡಿ.

ಹಂತ 3: ಈಗ, ಸೆಟ್ಟಿಂಗ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಅಲ್ಲಿಂದ, ಪ್ರೈವೆಸಿ ಸೆಂಟರ್‌ ಆಯ್ಕೆಯನ್ನು ಆರಿಸಿ.

ಹಂತ 5: ಡಿಆಕ್ಟಿವೇಟ್‌ ಅಕೌಂಟ್‌ ಅನ್ನು ಆರಿಸಿ. ಇದನ್ನು ಅನುಸರಿಸಿ, ನೀವು ಡೇಟಾವನ್ನು ಇರಿಸಿಕೊಳ್ಳಲು ಅಥವಾ ಅಳಿಸಲು ಬಯಸಿದರೆ ಆಯ್ಕೆಮಾಡಿ ಮತ್ತು ಅಂತಿಮವಾಗಿ ಖಾತೆಯನ್ನು ಡಿಆಕ್ಟಿವೇಟ್‌ ಮಾಡಿ.

ಹಂತ 6: ಇದನ್ನು ಮಾಡಿದ ನಂತರ, ಟ್ರೂಕಾಲರ್ ಅನ್‌ಲಿಸ್ಟ್ ಪುಟಕ್ಕೆ ಹೋಗಿ.

ಹಂತ 7: ಈಗ, ದೇಶದ ಕೋಡ್‌ನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 8: ವಿಶ್ಲೇಷಕ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಿಷ್ಕ್ರಿಯಗೊಳಿಸುವಿಕೆ ಅಥವಾ ಅಳಿಸುವಿಕೆಯ ಹಿಂದಿನ ಕಾರಣವನ್ನು ನಮೂದಿಸಿ.

ಹಂತ 9: ಈಗ, ಒದಗಿಸಿದ ಕ್ಯಾಪ್ಚಾವನ್ನು ನಮೂದಿಸಿ, ಮತ್ತು ಅನ್ಲಿಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ. ವಿನಂತಿಯನ್ನು ವರ್ಗಾಯಿಸಿದ 24 ಗಂಟೆಗಳ ಒಳಗೆ ಟ್ರೂಕಾಲರ್‌ನಿಂದ ಸಂಖ್ಯೆಯನ್ನು ಪಟ್ಟಿ ಮಾಡಲಾಗುವುದಿಲ್ಲ.

Most Read Articles
Best Mobiles in India

Read more about:
English summary
If your name is wrongly appearing on the Truecaller app, worry not as you can easily change it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X