ಹೊಸ ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ ?

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ನಲ್ಲಿ ಶಾಪಿಂಗ್‌, ಸರ್ಚಿಂಗ್‌ ಬ್ರೌಸಿಂಗ್‌ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಾಗೇಯೇ ಮೈಕ್ರೋಸಾಫ್ಟ್‌ ಎಡ್ಜ್‌ನಲ್ಲಿಯೂ ಕೂಡ ನೀವು ಬ್ರೌಸ್ ಮಾಡಬಹುದಾಗಿದೆ. ಇನ್ನು ಇದರಲ್ಲಿ ಬ್ರೌಸ್‌ ಮಾಡುವಾಗ, ಸರ್ಚ್‌ ಮಾಡುವಾಗ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಅಥವಾ ಸ್ಟ್ರೀಮ್ ಮಾಡುವಾಗ, ನಿಮ್ಮ ಡೇಟಾವನ್ನು ಬ್ರೌಸರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು ಮತ್ತು ನೀವು ಸೇವ್‌ ಮಾಡುವ ಪಾಸ್‌ವರ್ಡ್‌ಗಳು ಎಲ್ಲವನ್ನು ಸ್ಟೋರ್‌ ಮಾಡುತ್ತದೆ. ಸದ್ಯ ಇದೀಗ ಹೊಸ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಲಭ್ಯವಿದೆ.

ಮೈಕ್ರೋಸಾಫ್ಟ್‌ ಎಡ್ಜ್‌

ಹೌದು, ಮೈಕ್ರೋಸಾಫ್ಟ್‌ ಎಡ್ಜ್‌ ನಲ್ಲಿ ಬ್ರೌಸಿಂಗ್‌ ಮಾಡಿದಾಗ ನಿಮ್ಮ ಎಲ್ಲಾ ಬ್ರೌಸಿಂಗ್‌ ಡೇಟಾವನ್ನು ಸ್ಟೋರೇಜ್ ಮಾಡಲಾಗುತ್ತದೆ. ಪ್ರಸ್ತುತ ಹೊಸ ಮೈಕ್ರೋಸಾಫ್ಟ್‌ ಎಡ್ಜ್‌ ಎಲ್ಲರಿಗೂ ಲಭ್ಯವಾಗಿದೆ. ಇದರಿಂದ ನೀವು ಬ್ರೌಸಿಂಗ್‌ ಮಾಡುವ, ನಿವು ಖಾಸಗಿಯಾಗಿ ವೀಕ್ಷಿಸಲ್ಪಟ್ಟ ವೆಬ್‌ಸೈಟ್‌ಗಳನ್ನು ನಿಮ್ಮ ವಿಂಡೋಸ್ 10 ಅಥವಾ ಮ್ಯಾಕ್‌ನಲ್ಲಿ ಬ್ರೌಸಿಂಗ್ ಹಿಸ್ಟರಿಯಲ್ಲಿ ಕ್ಲಿಯರ್‌ ಮಾಡಬಹುದಾಗಿದೆ. ಹಾಗಾದ್ರೆ ಮೈಕ್ರೋಸಾಫ್ಟ್‌ ಎಡ್ಜ್‌ನಲ್ಲಿ ಬ್ರೌಸಿಂಗ್‌ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಬ್ ಬ್ರೌಸಿಂಗ್ ಹಿಸ್ಟರಿ

ನಿವು ನಿಮ್ಮ ವೆಬ್ ಬ್ರೌಸಿಂಗ್ ಹಿಸ್ಟರಿಯಲ್ಲಿ ಸರ್ಚ್‌ ಮಾಡಿರುವ ವೆಬ್‌ಸೈಟ್‌ ಡಿಟೇಲ್ಸ್‌ ಸ್ಟೋರೇಜ್‌ ಆಗಿರುತ್ತದೆ. ಆದರೆ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನೀವು ಬ್ರೌಸಿಂಗ್ ಡೇಟಾವನ್ನು ತೆರವುಗೊಳಿಸಲು ಬಯಸಿದರೆ ಅದಕ್ಕೂ ಸಹ ಅವಕಾಸವಿದೆ. ಅಷ್ಟೇ ಅಲ್ಲ ನೀವು ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಅಜ್ಞಾತ / ಖಾಸಗಿ ಬ್ರೌಸಿಂಗ್ ಅನ್ನು ಸಹ ಬಳಸಬಹುದು. ಇದರಿಂದ ನೀವು ಬ್ರೌಸರ್‌ನಿಂದ ನಿರ್ಗಮಿಸಿದ ನಂತರ ಬ್ರೌಸಿಂಗ್ ಡೇಟಾವನ್ನು ತೆರವುಗೊಳಿಸಬಹುದು ಅಥವಾ ನೀವು ಬ್ರೌಸರ್ ಅನ್ನು ಸಾಮಾನ್ಯ ಮೋಡ್‌ನಲ್ಲಿ ಬಳಸಿದ್ದರೆ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್‌ ಮಾಡಬಹುದು.

ಬ್ರೌಸಿಂಗ್ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ?

ಬ್ರೌಸಿಂಗ್ ಹಿಸ್ಟರಿ ಕ್ಲಿಯರ್‌ ಮಾಡುವುದು ಹೇಗೆ?

ಹೊಸ ಮೈಕ್ರೋಸಾಫ್ಟ್ ಎಡ್ಜ್ ಗೂಗಲ್ ಕ್ರೋಮ್‌ನಂತೆಯೇ ಕ್ರೋಮಿಯಂ ಅನ್ನು ಆಧರಿಸಿದೆ. ಇದು ಕ್ರೋಮಿಯಂ ಆಧಾರಿತವಾದ್ದರಿಂದ, ಹಲವಾರು ಫೀಚರ್ಸ್‌ಗಳು ಗೂಗಲ್ ಕ್ರೋಮ್‌ಗೆ ಹೋಲುತ್ತವೆ. ಎಡ್ಜ್‌ನಲ್ಲಿ ಬ್ರೌಸಿಂಗ್ ಡೇಟಾವನ್ನು ತೆರವುಗೊಳಿಸಲು, ಸಿಂಕ್ ಆಫ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ, ಸಿಂಕ್ ಮಾಡಿದ ಐಟಂಗಳನ್ನು ಎಲ್ಲಾ ಸಿಂಕ್ ಮಾಡಿದ ಡಿವೈಸ್‌ಗಳಲ್ಲಿ ತೆರವುಗೊಳಿಸಲಾಗುತ್ತದೆ. ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ನಿಮ್ಮ ಬ್ರೌಸಿಂಗ್ ಕ್ಲಿಯರ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಬ್ರೌಸರ್

ಹಂತ:1 ನಿಮ್ಮ ವಿಂಡೋಸ್ ಅಥವಾ ಮ್ಯಾಕ್‌ನಲ್ಲಿ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಅನ್ನು ಪ್ರಾರಂಭಿಸಿ.

ಹಂತ:2 ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ:3 privacy, search ಮತ್ತು servicesಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಬಲಭಾಗದಲ್ಲಿ, ಬ್ರೌಸಿಂಗ್ ಡೇಟಾವನ್ನು ತೆರವುಗೊಳಿಸಲು ಸ್ವಲ್ಪ ಸ್ಕ್ರಾಲ್ ಮಾಡಿ.

ಹಂತ:4 Choose what to clear ಬ್ರೌಸಿಂಗ್ ಡೇಟಾವನ್ನು ಆಯ್ಕೆ ಮಾಡಿ.

ಹಂತ:5 ಎಲ್ಲಿಂದ ಎಲ್ಲಿಯ ತನಕ ಕ್ಲಿಯರ್‌ ಮಾಡಬೇಕು ಎನ್ನುವುದಕ್ಕೆ ಡ್ರಾಪ್-ಡೌನ್ ಮೆನುವಿನಿಂದ ಟೈಂ ರೇಂಜ್‌ ಅನ್ನು ಆರಿಸಿ.

ಹಂತ:6 ನಂತರ ನೀವು ತೆರವುಗೊಳಿಸಲು ಬಯಸುವ ಡೇಟಾದ ಪ್ರಕಾರಗಳಿಗಾಗಿ ಚೆಕ್‌ಬಾಕ್ಸ್ ಅನ್ನು ಗುರುತಿಸಿ. ನೀವು ಕುಕೀಸ್ ಮತ್ತು ಇತರ ಸೈಟ್ ಡೇಟಾ, ಸಂಗ್ರಹಿಸಿದ ಚಿತ್ರಗಳು ಮತ್ತು ಫೈಲ್‌ಗಳು, ಪಾಸ್‌ವರ್ಡ್‌ಗಳು, ಆಟೋಫಿಲ್ ಫಾರ್ಮ್ ಡೇಟಾ ಮತ್ತು ಸೈಟ್ ಅನುಮತಿಗಳನ್ನು ಸಹ ತೆಗೆದುಹಾಕಬಹುದು.

ಹಂತ:7 ಇದೀಗ ನೀವು ಬ್ರೌಸ್ ಮಾಡಿದ ನಂತರ ಏನೂ ಉಳಿದಿಲ್ಲ ಎಂದು ನೀವು ಬಯಸಿದರೆ, ಎಲ್ಲಾ ಬಾಕ್ಸ್‌ಗಳನ್ನು ಪರಿಶೀಲಿಸಿ, ನಂತರ ಕ್ಲಿಯರ್‌ ಅನ್ನು ಕ್ಲಿಕ್ ಮಾಡಿ.

ಇದು ಬ್ರೌಸಿಂಗ್ ಹಿಸ್ಟರಿ ಮತ್ತು ನೀವು ಆಯ್ಕೆ ಮಾಡಿದ ಡೇಟಾವನ್ನು ಕ್ಲಿಯರ್‌ ಮಾಡಲಿದೆ.

Most Read Articles
Best Mobiles in India

English summary
The new Microsoft Edge is based on Chromium just like Google Chrome, and since it’s Chromium-based, several features are identical to Google Chrome.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X