ವಿಂಡೋಸ್ 10 ನಲ್ಲಿ ಫುಲ್‌ ಬ್ಯಾಕಪ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ!

|

ಕಂಪ್ಯೂಟರ್‌ ಇಲ್ಲವೇ ಲ್ಯಾಪ್‌ಟಾಪ್‌ ಬಳಕೆ ಮಾಡುವವರು ಆಗಾಗ ಕಂಪ್ಯೂಟರ್‌ನ ಬ್ಯಾಕಪ್ ಅನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತೀದೆಯಾ ಅನ್ನೊದನ್ನ ಗಮನಿಸುವುದು ಮುಖ್ಯವಾಗಿದೆ. ಇದರಿಂದಾಗಿ ನಿಮ್ಮ ಸಿಸ್ಟಂನಲ್ಲಿ ಏನಾದರೂ ತಪ್ಪಾದಲ್ಲಿ, ನಿಮ್ಮ ಕಂಪ್ಯೂಟರ್ ಅನ್ನು restore to a previous state ಮಾಡುವುದಕ್ಕೆ ನೀವು ಇತ್ತೀಚಿನ ಬ್ಯಾಕಪ್ ಅನ್ನು ಬಳಸಬಹುದಾಗಿರುತ್ತದೆ. ಇದೇ ಕಾರಣಕ್ಕೆ ಕಂಪ್ಯೂಟರ್‌ನಲ್ಲಿ ಬ್ಯಾಕಪ್‌ ಪಡೆದುಕೊಳ್ಳುವುದು ಬಹು ಮುಖ್ಯವಾಗಿದೆ. ಇನ್ನು ವಿಂಡೋಸ್‌ 10 ಆಪರೇಟಿಂಗ್‌ ಸಿಸ್ಟಂನಲ್ಲಿ ಬ್ಯಾಕಪ್‌ ಕ್ರಿಯೆಟ್‌ ಮಾಡಲು ಇಂಟರ್‌ಬಿಲ್ಟ್‌ ಡಿವೈಸ್‌ ಅನ್ನು ಬಳಸಬೇಕಾಗುತ್ತದೆ.

ವಿಂಡೋಸ್‌ 10

ಹೌದು, ಕಂಪ್ಯೂಟರ್‌ನಲ್ಲಿ ಬ್ಯಾಕಪ್‌ ಪಡೆದುಕೊಳ್ಳುವುದು ಮುಖ್ಯವೆನಿಸಿದೆ. ಇದೇ ಕಾರಣಕ್ಕೆ ವಿಂಡೋಸ್‌ 10 ನಲ್ಲಿ ಬ್ಯಾಕಪ್‌ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯಬೇಕಾಗುತ್ತದೆ. ಇನ್ನು ಫುಲ್‌ ಸಿಸ್ಟಮ್ ಬ್ಯಾಕಪ್ ಕ್ರಿಯೆಟ್‌ ಮಾಡುವುದಕ್ಕೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಇಂಟರ್‌ಬಿಲ್ಟ್‌ ಡಿವೈಸ್‌ ಅನ್ನು ಬಳಸಬೇಕಾಗುತ್ತದೆ. ಹಾಗಾದ್ರೆ ಇಂಟರ್‌ಬಿಲ್ಟ್‌ ಡಿವೈಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ 10 ನಲ್ಲಿ ಫುಲ್‌ ಬ್ಯಾಕಪ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ!

ವಿಂಡೋಸ್ 10 ನಲ್ಲಿ ಫುಲ್‌ ಬ್ಯಾಕಪ್‌ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ!

ಹಂತ 1: ಮೊದಲನೆಯದಾಗಿ, ನಿಮ್ಮ ಕಂಪ್ಯೂಟರ್‌ನಲ್ಲಿನ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ. ಇದಕ್ಕಾಗಿ, ನಿಮ್ಮ ಕೀಬೋರ್ಡ್‌ನಲ್ಲಿ ನೀವು ವಿಂಡೋಸ್ + i ಕೀಗಳನ್ನು ಒತ್ತಿ ಮತ್ತು ಸರ್ಚ್‌ ರಿಸಲ್ಟ್‌ನ ಅಪ್ಲಿಕೇಶನ್‌ ಅನ್ನು ಕ್ಲಿಕ್‌ ಮಾಡಿ.

ಹಂತ 2: ಈಗ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ನಲ್ಲಿ, "Update and security" ಕ್ಲಿಕ್ ಮಾಡಿ.

ಹಂತ 3: ಎಡಭಾಗದ ಮೆನುವಿನಲ್ಲಿ, "ಬ್ಯಾಕಪ್" ಆಯ್ಕೆಯನ್ನು ಆರಿಸಿ ಮತ್ತು ಬಲಭಾಗದ ಪ್ಯಾನೆಲ್‌ನಿಂದ "ಬ್ಯಾಕಪ್" ಬಟನ್ ಕ್ಲಿಕ್ ಮಾಡಿ.

Go to Backup

ಹಂತ 4: "Go to Backup and Restore" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಡಿವೈಸ್‌ನಲ್ಲಿ New control panel ವಿಂಡೋವನ್ನು ತೆರೆಯುತ್ತದೆ.

ಹಂತ 5: ಎಡಭಾಗದ ಮೆನುವಿನಿಂದ, "Create a system image" ಕ್ಲಿಕ್ ಮಾಡಿ ತದನಂತರ "ಬ್ಯಾಕಪ್ ಅನ್ನು ಎಲ್ಲಿ ಉಳಿಸಲು ನೀವು ಬಯಸುತ್ತೀರಿ" ಎಂಬ ವಿಭಾಗದಲ್ಲಿ ನೀವು ಚಿತ್ರವನ್ನು ಉಳಿಸಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿ. ನಂತರ, "Next" ಕ್ಲಿಕ್ ಮಾಡಿ.

ಹಂತ 6: ನೀವು ಬ್ಯಾಕಪ್ ಮಾಡಲು ಬಯಸುವ ಡ್ರೈವ್‌ಗಳನ್ನು ಆಯ್ಕೆ ಮಾಡಲು ಈಗ ನಿಮ್ಮನ್ನು ಕೇಳಲಾಗುತ್ತದೆ. ನೀವು ಡ್ರೈವ್‌ಗಳನ್ನು ಆಯ್ಕೆ ಮಾಡಿದ ನಂತರ, "Next" ಬಟನ್ ಕ್ಲಿಕ್ ಮಾಡಿ.

ಸ್ಟಾರ್ಟ್ ಬ್ಯಾಕಪ್

ಹಂತ 7: ಎಲ್ಲವೂ ಮುಗಿದ ನಂತರ, ಪ್ರಕ್ರಿಯೆಯನ್ನು ಪ್ರಾರಂಭಿಸಲು "ಸ್ಟಾರ್ಟ್ ಬ್ಯಾಕಪ್" ಕ್ಲಿಕ್ ಮಾಡಿ. ನಿಮ್ಮ ಡಿವೈಸ್‌ ಆಪ್ಟಿಕಲ್ ಡಿಸ್ಕ್ ಡ್ರೈವ್ ಹೊಂದಿಲ್ಲದಿದ್ದರೆ ನೀವು ಬಿಟ್ಟುಬಿಡಬಹುದಾದ ಹೊಸ ಸಿಸ್ಟಮ್ ರಿಪೇರಿ ಡಿಸ್ಕ್ ಅನ್ನು ಕ್ರಿಯೆಟ್‌ ಮಾಡಲು ನೀವು ಪ್ರಾಂಪ್ಟ್ ಅನ್ನು ಸಹ ಪಡೆಯಬಹುದಾಗಿದೆ.

ಈಗ, ಬ್ಯಾಕಪ್ ಪ್ರಕ್ರಿಯೆಯು ನಡೆಯಲಿದೆ. ನಿಮ್ಮ ಸಿಸ್ಟಂನಲ್ಲಿನ ಡೇಟಾದ ಪ್ರಮಾಣವನ್ನು ಅವಲಂಬಿಸಿ, ಬ್ಯಾಕಪ್‌ ಸಮಯವು ಬದಲಾಗುತ್ತದೆ. ಅಲ್ಲದೆ ಬ್ಯಾಕ್‌ಅಪ್‌ ಪ್ರಕ್ರಿಯೆಯು ಬ್ಯಾಕ್‌ಗ್ರೌಂಡ್‌ನಲ್ಲಿ ನಡೆಯುತ್ತದೆ. ಬ್ಯಾಕಪ್‌ ಸಮಯದಲ್ಲಿಯೂ ನೀವು ನಿಮ್ಮ ಕಂಪ್ಯೂಟರ್ ಅನ್ನು ಬಳಸುತ್ತಿರಬಹುದಾಗಿದೆ.

Most Read Articles
Best Mobiles in India

English summary
It is important to ensure that you take a backup of your computer at regular intervals so that when something goes wrong, you can use a recent backup to restore your computer to the previous state.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X