ಜಿಯೋ ಕಾಲರ್‌ ಟ್ಯೂನ್ ಸೇವೆಯನ್ನು ನಿಲ್ಲಿಸಬೇಕೆ?..ಹಾಗಿದ್ರೆ ಈ ಕ್ರಮ ಅನುಸರಿಸಿ!

|

ನೀವು ಜಿಯೋ ಕಾಲರ್‌ ಟ್ಯೂನ್ ಸೆಟ್‌ ಮಾಡ ಬಯಸಿದರೇ, ಕಾಲರ್‌ ಟ್ಯೂನ್ ಸೆಟ್‌ ಮಾಡಲು ನಾಲ್ಕು ಮಾರ್ಗಗಳಿವೆ. ರಿಲಯನ್ಸ್ ಜಿಯೋ ಬಳಕೆದಾರರು ಮೈಜಿಯೊ ಅಪ್ಲಿಕೇಶನ್, IVR ಅಥವಾ SMS ಬಳಸಿ ಕಾಲರ್ ಟ್ಯೂನ್ ಹೊಂದಿಸಬಹುದು. ಹಾಗೆಯೇ ಮತ್ತೊಬ್ಬ ಜಿಯೋ ಗ್ರಾಹಕರಿಂದ ಜಿಯೋ ಟ್ಯೂನ್ ಅನ್ನು ನಕಲಿಸಲು ಸಹ ಟೆಲಿಕಾಂ ಅನುಮತಿಸುತ್ತದೆ. ಒಂದು ವೇಳೆ ನೀವು ಮೈಜಿಯೊ ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಹಾಡನ್ನು ಸರ್ಚ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ನಂತರ ನೀವು ಜಿಯೋಸಾವನ್ ಅಪ್ಲಿಕೇಶನ್ ಬಳಸಿ ಕಾಲರ್ ಟ್ಯೂನ್ ಹೊಂದಿಸಲು ಪ್ರಯತ್ನಿಸಬಹುದು. ಹಾಗೆಯೇ ಕಾಲರ್‌ ಟ್ಯೂನ್ ಸೇವೆ ನಿಲ್ಲಿಸಲು ಅವಕಾಶ ನೀಡಲಾಗಿದೆ.

ರಿಲಾಯನ್ಸ್‌

ಹೌದು, ರಿಲಾಯನ್ಸ್‌ ಜಿಯೋ ಕಂಪನಿಯು ತನ್ನ ಜಿಯೋ ಟ್ಯೂನ್ಸ್ ಲೈಬ್ರರಿಯಲ್ಲಿ 4 ಲಕ್ಷ ಜೊತೆಗೆ ಹಾಡುಗಳ ಸಂಗ್ರಹವನ್ನು ಹೊಂದಿದೆ. ಇದರಿಂದ ನಿಮ್ಮ ಜಿಯೋ ಟ್ಯೂನ್ ಅನ್ನು ನೀವು ಆಯ್ಕೆ ಮಾಡಬಹುದು. ಹಾಗೆಯೇ ಹೆಲೋ ಟ್ಯೂನ್ ಸೆಟ್‌ ಮಾಡಿದ ನಂತರ ಈ ಸೇವೆ ಬೇಡವಾದಲ್ಲಿ ತೆಗೆದು ಹಾಕಬಹುದು/ ಸೇವೆಯನ್ನು ನಿಲ್ಲಿಸಬಹುದಾಗಿದೆ. ಹಾಗಾದರೇ ಜಿಯೋದ ಹೆಲೋ/ ಕಾಲರ್ ಟ್ಯೂನ್ ಅನ್ನು ಹೇಗೆ ನಿಲ್ಲಿಸುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಎಸ್‌ಎಮ್‌ಎಸ್‌

ಜಿಯೋ ಕಾಲರ್ ಟ್ಯೂನ್ ಸೇವೆಯನ್ನು ಸ್ಥಗಿತ ಮಾಡಲು ಮೂರು ಆಯ್ಕೆಗಳು ಇವೆ. ಅವುಗಳು ಕ್ರಮವಾಗಿ ಎಸ್‌ಎಮ್‌ಎಸ್‌ ಮೂಲಕ, ಮೈ ಜಿಯೋ ಆಪ್‌ ಮೂಲಕ ಹಾಗೂ IVR ಮೂಲಕ. ಬಳಕೆದಾರರು ಈ ಮೂರು ಆಯ್ಕೆಗಳಲ್ಲಿ ಒಂದು ಅನುಕೂಲಕರ ವಿಧಾನದ ಮೂಲಕ ಕಾಲರ್‌ ಟ್ಯೂನ್ ಸೇವೆ ನಿಲ್ಲಿಸಬಹುದಾಗಿದೆ. ಜಿಯೋ ಕಾಲರ್‌ ಟ್ಯೂನ್ ನಿಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

SMS ವಿಧಾನದ ಮೂಲಕ

SMS ವಿಧಾನದ ಮೂಲಕ

*ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೆಸೇಜ್‌ ಆಪ್‌ ತೆರೆಯಿರಿ.

*ಮೆಸೇಜ್‌ನಲ್ಲಿ ಸ್ಟಾಪ್‌ ಎಂದು ಟೈಪ್ ಮಾಡಿ 56789 ಗೆ ಕಳುಹಿಸಿ.

*ನಿಷ್ಕ್ರಿಯಗೊಳಿಸುವಿಕೆಯನ್ನು ದೃಢೀಕರಿಸಲು 1 ಎಂದು ಪ್ರತ್ಯುತ್ತರಿಸಿ.

*ಇದಾದ ನಂತರ ಜಿಯೋ ಟ್ಯೂನ್ಸ್ ಸೇವೆ ಸ್ಥಗಿತವಾಗುತ್ತದೆ. ಮತ್ತು ನಿಷ್ಕ್ರಿಯದ ಬಗ್ಗೆ ದೃಢೀಕೃತ SMSನ್ನು ಬಳಕೆದಾರರು ಸ್ವೀಕರಿಸುತ್ತಾರೆ.

ಮೈ ಜಿಯೋ ಆಪ್‌ ವಿಧಾನದ ಮೂಲಕ

ಮೈ ಜಿಯೋ ಆಪ್‌ ವಿಧಾನದ ಮೂಲಕ

*ಮೈ ಜಿಯೋ ಆಪ್‌ ತೆರೆಯಿರಿ.

*ಮೆನುವಿನಲ್ಲಿ 'ಜಿಯೋ ಟ್ಯೂನ್ಸ್' ಆಯ್ಕೆಯನ್ನು ಕ್ಲಿಕ್‌ ಮಾಡಿ.

*'ಮೈ ಸಬ್‌ಸ್ಕ್ರೈಬರ್ ಪುಟ'ಕ್ಕೆ ಹೋಗಿ ಮತ್ತು ಕೆಳಭಾಗದಲ್ಲಿರುವ 'ಜಿಯೋ ಟ್ಯೂನ್ ನಿಷ್ಕ್ರಿಯಗೊಳಿಸಿ' ಆಯ್ಕೆ ಟ್ಯಾಪ್ ಮಾಡಿ.

*ದೃಢೀಕರಣ ಪುಟದಲ್ಲಿ 'ಹೌದು' ಎಂಬುದನ್ನು ಟ್ಯಾಪ್ ಮಾಡಿ

IVR ವಿಧಾನದ ಮೂಲಕ

IVR ವಿಧಾನದ ಮೂಲಕ

*ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಲ್‌ ಡಯಲರ್ ಆಪ್‌ ತೆರೆಯಿರಿ

*ಜಿಯೋ ಸಂಖ್ಯೆಯಿಂದ 155223 ಗೆ ಕಾಲ್‌ ಮಾಡಿ

*ಇಂಗ್ಲಿಷ್‌ಗಾಗಿ 1 ಮತ್ತು ಹಿಂದಿಗಾಗಿ 2 ಒತ್ತುವ ಮೂಲಕ ಆದ್ಯತೆಯ ಭಾಷೆ ಆರಿಸಿ.

*ಈಗ, ಐವಿಆರ್ ನಿಮ್ಮ ಜಿಯೋ ಸಂಖ್ಯೆಯಲ್ಲಿರುವ ಎಲ್ಲಾ ಸಕ್ರಿಯ ಮೌಲ್ಯವರ್ಧಿತ ಸೇವೆಗಳನ್ನು ಕೇಳುತ್ತದೆ

ಮೈ ಜಿಯೋ ಆಪ್‌ ಮೂಲಕ ಜಿಯೋ ಕಾಲರ್‌ ಟ್ಯೂನ್ ಆಕ್ಟೀವ್ ಮಾಡಲು ಈ ಕ್ರಮ ಅನುಸರಿಸಿ:

ಮೈ ಜಿಯೋ ಆಪ್‌ ಮೂಲಕ ಜಿಯೋ ಕಾಲರ್‌ ಟ್ಯೂನ್ ಆಕ್ಟೀವ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಮೈಜಿಯೊ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಹಂತ 2: ಮೈಜಿಯೊ ಅಪ್ಲಿಕೇಶನ್ ತೆರೆಯಿರಿ ಮತ್ತು ಉಪಯುಕ್ತ ಲಿಂಕ್‌ಗಳಿಂದ ‘ಜಿಯೋ ಟ್ಯೂನ್ಸ್' ಆಯ್ಕೆಮಾಡಿ.

ಹಂತ 3: ಪೂರ್ವವೀಕ್ಷಣೆ ಆಲಿಸಿ ಮತ್ತು ‘ಜಿಯೋ ಟ್ಯೂನ್ ಆಗಿ ಹೊಂದಿಸಿ' ಆಯ್ಕೆಮಾಡಿ.

ಹಂತ 4: ಸಕ್ರಿಯಗೊಳಿಸುವಿಕೆಯ ನಂತರ ದೃಡೀಕರಣದ ಮಾಹಿತಿ ಮತ್ತು SMS ಪಡೆಯಿರಿ.

Most Read Articles
Best Mobiles in India

Read more about:
English summary
How To Deactivate JioTunes Service: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X