ಮೈಕ್ರೋಸಾಫ್ಟ್ ಟೀಂನಲ್ಲಿ ಮೆಸೇಜ್ ಪ್ರಿವ್ಯೂ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

|

ಜನಪ್ರಿಯ ವೀಡಿಯೊ ಕಾನ್ಫರೆನ್ಸಿಂಗ್ ಆಪ್‌ಗಳಲ್ಲಿ ಮೈಕ್ರೋಸಾಫ್ಟ್‌ ಟೀಮ್‌ ಕೂಡ ಒಂದಾಗಿದೆ. ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಮೈಕ್ರೋಸಾಫ್ಟ್‌ ಟೀಂ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಟೋಸ್ಟ್ ಅಧಿಸೂಚನೆಗಳನ್ನು ನೀಡುತ್ತದೆ. ಸಂದೇಶಗಳಿಂದ ಹಿಡಿದು ಪೋಸ್ಟ್‌ಗಳವರೆಗೆ ಬಹುತೇಕ ಎಲ್ಲದಕ್ಕೂ ನೀಡುತ್ತದೆ.ಸದ್ಯ ಇದೀಗ ಮೈಕ್ರೋಸಾಫ್ಟ್‌ ಕಂಪನಿಯು ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಮೆಸೇಜ್ ಪ್ರಿವ್ಯೂ ಅನ್ನು ನಿಷ್ಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ತನ್ನ ಮೈಕ್ರೋಸಾಪ್ಟ್‌ ಟೀಂ ಅಪ್ಲಿಕೇಶನ್‌ನಲ್ಲಿ ಮೆಸೇಜ್ ಪ್ರಿವ್ಯೂ ಅನ್ನು ಆಫ್‌ ಮಾಡಿಉವ ಅವಕಾಶವನ್ನು ನೀಡಿದೆ. ಈ ಹೊಸ ಅಪ್‌ಡೇಟ್‌ಗೆ ಮೊದಲು, ಬಳಕೆದಾರರು ಯಾವ ಅಧಿಸೂಚನೆಗಳನ್ನು ಬೇಕಾದರೂ ಸ್ವೀಕರಿಸಬಹುದಾಗಿದೆ. ಆದರೆ ಇದನ್ನು ನಿಯಂತ್ರಿಸಲು ಕಂಪನಿಯು ಬಳಕೆದಾರರಿಗೆ ಇದೀಗ ಅವಕಾಶ ಮಾಡಿಕೊಟ್ಟಿದೆ. ನೊಟೀಫಿಕೇಷನ್‌ಗಳ ಗೋಚರತೆಯನ್ನು ಮತ್ತು ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯಲು ಇದು ಅವಕಾಶ ನೀಡಲಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಬಳಕೆದಾರರು ಎಲ್ಲದಕ್ಕೂ ಟೋಸ್ಟ್ ಅಧಿಸೂಚನೆಗಳಿಗಾಗಿ ಮೆಸೇಜ್ ಪ್ರಿವ್ಯೂ ಅನ್ನು ಆಫ್ ಮಾಡಬಹುದಾಗಿದೆ. ಇದರಿಮದ ನೀವು ಯಾವುದೇ ನೊಟೀಫೀಕೇಷನ್‌ಗೂ ಮುನ್ನ ಮೆಸೇಜ್ ಪ್ರಿವ್ಯೂ ಮಾಡುವ ಅವಶ್ಯಕತೆ ಇರುವುದಿಲ್ಲ. ಅಷ್ಟಕ್ಕು ಮೈಕ್ರೋ ಸಾಫ್ಟ್‌ ಟೀಂನಲ್ಲಿ ಮೆಸೇಜ್ ಪ್ರಿವ್ಯೂ ಅನ್ನು ಆಫ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ಮೈಕ್ರೋಸಾಫ್ಟ್ ಟೀಂನಲ್ಲಿ ಮೆಸೇಜ್ ಪ್ರಿವ್ಯೂ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಮೈಕ್ರೋಸಾಫ್ಟ್ ಟೀಂನಲ್ಲಿ ಮೆಸೇಜ್ ಪ್ರಿವ್ಯೂ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ 1: ನಿಮ್ಮ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಟೀಂ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಈಗ, ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ ಮತ್ತು ಆಯ್ಕೆಗಳಿಂದ, ಸೆಟ್ಟಿಂಗ್ಸ್‌ಅನ್ನು ಆರಿಸಿ.

ಹಂತ 3: ಸೆಟ್ಟಿಂಗ್ಸ್‌ ಪೇಜ್‌ನಲ್ಲಿ, ಎಡಗೈ ಮೆನುವಿನಿಂದ ಅಧಿಸೂಚನೆಗಳನ್ನು ಕ್ಲಿಕ್ ಮಾಡಿ.

ಹಂತ 4: ಗೋಚರತೆ ಮತ್ತು ಧ್ವನಿ ವಿಭಾಗದ ಅಡಿಯಲ್ಲಿ, "ಶೋ ಮೆಸೇಜ್ ಪ್ರಿವ್ಯೂ " ಆಯ್ಕೆಗಾಗಿ ಟಾಗಲ್ ಆಫ್ ಮಾಡಿ.

ಮೆಸೇಜ್ ಪ್ರಿವ್ಯೂ

ಈ ಮೂಲಕ ಟೋಸ್ಟ್ ಅಧಿಸೂಚನೆಗಳಲ್ಲಿ ನೀವು ಮೆಸೇಜ್ ಪ್ರಿವ್ಯೂ ಆಫ್ ಮಾಡಿದಾಗ, ಟೀಂ ಮೀಟಿಂಗ್‌ನಲ್ಲಿ ಸ್ಕ್ರೀನ್‌ ಶೇರ್‌ಮಾಡುವಾಗ ಗೋಚರಿಸುವ ಪಾಪ್-ಅಪ್ ಅನ್ನು ಸಹ ಇದು ನಿಷ್ಕ್ರಿಯಗೊಳಿಸುತ್ತದೆ. ಜೊತೆಗೆ ಮೆಸೇಜ್ ಪ್ರಿವ್ಯೂ ಆಯ್ಕೆಯನ್ನು ಆಫ್ ಮಾಡಿದ ನಂತರ, ಅದು ಎಲ್ಲಾ ಅಧಿಸೂಚನೆಗಳು ಮತ್ತು ಪೂರ್ವವೀಕ್ಷಣೆಗಳನ್ನು ಮರೆಮಾಡುತ್ತದೆ.

Most Read Articles
Best Mobiles in India

Read more about:
English summary
Microsoft Teams offers toast notifications on Windows 10 operating system for almost everything,from messages to reaction to posts.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X