ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್ ಮೊಜ್ ಆಪ್‌ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಫಿಲ್ಟರ್‌ಗಳು, ಸ್ಟಿಕ್ಕರ್‌ಗಳು ಮತ್ತು ಹೆಚ್ಚಿನ ಫೀಚರ್ಸ್‌ಗಳ ಆಯ್ಕೆಗಳೊಂದಿಗೆ 15 ಸೆಕೆಂಡುಗಳ ವೀಡಿಯೊಗಳನ್ನು ರಚಿಸುವ ಸಾಮರ್ಥ್ಯವನ್ನು ಮೊಜ್ ಅಪ್ಲಿಕೇಶನ್ ಹೊಂದಿದೆ. ಶೇರ್‌ಚಾಟ್ ಒಡೆತನದ ಮೋಜ್‌ ಮೇಡ್ ಇನ್ ಇಂಡಿಯಾ ಅಪ್ಲಿಕೇಶನ್ ಆಗಿದೆ.

ಶಾರ್ಟ್‌ ವಿಡಿಯೋ ಅಪ್ಲಿಕೇಶನ್

ಹೌದು, ಸ್ವದೇಶಿ ಶಾರ್ಟ್‌ ವಿಡಿಯೋ ಅಪ್ಲಿಕೇಶನ್‌ ಮೊಜ್‌ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚಿನ ವಿಡಿಯೋ ಕ್ರಿಯೆಟರ್ಸ್‌ ಇದ್ದಾರೆ ಎಂದು ಮೊಜ್ ಅಪ್ಲಿಕೇಶನ್ ಹೇಳಿಕೊಂಡಿದೆ. ಈ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು ಮತ್ತು ಶೇರ್‌ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಿರುವುದರಿಂದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅಷ್ಟೆ ಅಲ್ಲ ಮೊಜ್‌ ಅಪ್ಲಿಕೇಶನ್‌ ವೀಡಿಯೋಗಳನ್ನ ಡೌನ್‌ಲೋಡ್‌ ಸಹ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಡಿಯೋ

ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆದ ನಂತರ ಹಲವು ಮಾದರಿಯ ಶಾರ್ಟ್‌ ವಿಡಿಯೋ ಅಪ್ಲಿಕೇಶನ್‌ಗಳು ಬಿಡುಗಡೆ ಆಗಿವೆ. ಇದರಲ್ಲಿ ಮೊಜ್‌ ಅಪ್ಲಿಕೇಶನ್‌ ಕೂಡ ಒಂದು. ಇದು ಸ್ವದೇಶಿ ಅಪ್ಲಿಕೇಶನ್‌ ಆಗಿದ್ದು, ಹೆಚ್ಚಿನ ಜನರನ್ನು ಆಕರ್ಷಿಸಿದೆ. ಇನ್ನು ಈ ಅಪ್ಲಿಕೇಶನ್‌ ಬಳಸಿ ವಿಡಿಯೋ ಕ್ರಿಯೆಟ್‌ ಮಾಡುವುದಷ್ಟೇ ಅಲ್ಲ, ವಿಡಿಯೋ ಶೇರ್‌ ಮಾಡುವ ಅವಕಾಶ ಕೂಡ ಇದೆ. ಇದಲ್ಲದೆ ವಿಡಿಯೋ ಡೌನ್‌ಲೋಡ್‌ ಸೌಲಭ್ಯ ಕೂಡ ಇದೆ. ಮೊಜ್‌ ಅಪ್ಲಿಕೇಶನ್‌ನಲ್ಲಿ ನೀವು ರಚಿಸಿರುವ ನಿಮ್ಮ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಬೇಕು ಎನಿಸುವುದು ಸಾಮಾನ್ಯ. ಆದ್ರಿಂದ ಮೊಜ್‌ ಅಪ್ಲಿಕೇಶನ್‌ನಲ್ಲಿ ವಿಡಿಯೋ ಡೌನ್‌ಲೋಡ್‌ ಮಾಡಬೇಕಾದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ಮೊಜ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆ ಮಾಡಿ.

ಹಂತ:2 ನಂತರ ಬಾಣದ ಐಕಾನ್ ಕ್ಲಿಕ್ ಮಾಡಿ, ಅದು ಬಲಭಾಗದಲ್ಲಿ ಕೆಳಭಾಗದಲ್ಲಿ ಗೋಚರಿಸುತ್ತದೆ.

ಹಂತ:3 ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲು ನೀವು ಆರಿಸಬಹುದಾದ ‘ಶೇರ್' ಟ್ಯಾಬ್ ಅನ್ನು ತೆರೆಯಬೇಕು. ಇದರಲ್ಲಿ

"ಡೌನ್‌ಲೋಡ್" ಆಯ್ಕೆಯನ್ನು ಸಹ ತೋರಿಸಲಿದೆ.

ಹಂತ:4 ಇದರ ಮೇಲೆ ಕ್ಲಿಕ್ ಮಾಡಿ, ಅದರ ನಂತರ ಅಪ್ಲಿಕೇಶನ್ ನಿಮ್ಮ ಸಾಧನದಲ್ಲಿ ಫೋಟೋಗಳು, ಮಾಧ್ಯಮ ಮತ್ತು ಫೈಲ್‌ಗಳನ್ನು ಪ್ರವೇಶಿಸಲು "ಅನುಮತಿಸು" ಕ್ಲಿಕ್ ಮಾಡಿ.

ಹಂತ:5 ನಂತರ ನಿಮ್ಮ ಡಿವೈಸ್‌ನಲ್ಲಿ ವೀಡಿಯೊ ಡೌನ್‌ಲೋಡ್ ಮಾಡಲು ಪ್ರಾರಂಭಿಸಲಿದೆ.

ಹಂತ:6 ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ನೀವು "ನಿಮ್ಮ ಫೋನ್ ಗ್ಯಾಲರಿಗೆ ಪೋಸ್ಟ್ ಡೌನ್‌ಲೋಡ್ ಮಾಡಲಾಗಿದೆ" ಎಂದು ಬರೆಯುವ ಅಧಿಸೂಚನೆಯನ್ನು ಪಡೆಯುತ್ತೀರಿ.

ಹಂತ:7 ನಂತರ ವೀಡಿಯೊ ವೀಕ್ಷಿಸಲು, ನಿಮ್ಮ ಫೋನ್‌ನಲ್ಲಿ ಗ್ಯಾಲರಿಯನ್ನು ತೆರೆಯಿರಿ ಮತ್ತು ವೀಡಿಯೊಗಳ ಆಲ್ಬಮ್‌ಗೆ ಹೋಗಿ.

ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ, ಫೋನ್‌ನ ಗ್ಯಾಲರಿಯಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಇದು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನಂತರ ಆಫ್‌ಲೈನ್‌ನಲ್ಲಿ ನೋಡುವುದನ್ನು ಸುಲಭಗೊಳಿಸುತ್ತದೆ.

ಮೊಜ್ ಅಪ್ಲಿಕೇಶನ್

ಇನ್ನು ಮೊಜ್ ಅಪ್ಲಿಕೇಶನ್ ಈಗ 15 ಭಾಷೆಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಪಂಜಾಬಿ, ಪಂಜಾಬಿ, ಮಲಯಾಳಂ, ಬಂಗಾಳಿ ಭಾಷೆಗಳು ಸೇರಿದಂತೆ ಹೆಚ್ಚಿನ ಭಾಷೆಗಳು ಬೆಂಬಲಿಸಲಿವೆ. ಲಿಪ್ ಸಿಂಕ್ ವೀಡಿಯೊಗಳು, ಸಾಮಾನ್ಯ ವೀಡಿಯೊಗಳು, ಸ್ಪೆಷಲ್‌ ಎಫೆಕ್ಟ್‌ ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಎಮೋಟಿಕಾನ್‌ಗಳೊಂದಿಗೆ ಮಾಡಬಹುದು. ಜೊತೆಗೆ ಇದು ಪ್ರಯಾಣದಲ್ಲಿರುವಾಗ ವೀಡಿಯೊಗಳನ್ನು ಎಡಿಟ್‌ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

Most Read Articles
Best Mobiles in India

English summary
Moj app, which is an Indian short video making app lets you download videos as well. Here's how to download Moj app videos on Android and iOS.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X