ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ಆಗಿ ಡೌನ್ ಲೋಡ್ ಮಾಡುವುದು ಹೇಗೆ?

By Gizbot Bureau
|

ಮೂವಿ ಟ್ರೈಲರ್ ಗಳನ್ನು ನೋಡಲು, ವಿಶೇಷ ಕಾರ್ಯಕ್ರಮಗಳನ್ನು ನೋಡಲು, ಮ್ಯೂಸಿಕ್, ಗೇಮ್ ಗಳು ಸೇರಿದಂತೆ ಮನರಂಜನೆಯ ವೀಡಿಯೋಗಳಿಂದ ಹಿಡಿದು ಮಾಹಿತಿ ವೀಡಿಯೋಗಳು ಜೊತೆಗೆ ಸುದ್ದಿ ಜಗತ್ತಿನ ಎಲ್ಲಾ ವೀಡಿಯೋಗಳು, ಮಕ್ಕಳ ಆಟ-ಪಾಠ ಇತ್ಯಾದಿ ಎಲ್ಲವನ್ನೂ ಯಾವುದೇ ಸಮಯದಲ್ಲೂ ನೋಡುವುದಕ್ಕೆ ಅವಕಾಶ ನೀಡುವ ವೀಡಿಯೋ ಫ್ಲ್ಯಾಟ್ ಫಾರ್ಮ್ ಎಂದರೆ ಅದು ಯುಟ್ಯೂಬ್. ಆದರೆ ಅಂತರ್ಜಾಲದ ಸಂಪರ್ಕ ಇಲ್ಲದೆ ಇದ್ದಾಗ ಏನು ಮಾಡುವುದು? ಆಫ್ ಲೈನ್ ನಲ್ಲೂ ಯುಟ್ಯೂಬ್ ವೀಡಿಯೋಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ ಎಂಬುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಹೌದು ಲೋಕಲಿ ನೀವು ನಿಮ್ಮ ಡಿವೈಸ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಿ ಸೇವ್ ಮಾಡಿಕೊಳ್ಳುವುದರಿಂದಾಗಿ ಇದನ್ನು ಸಾಧಿಸಬಹುದು.

ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ಆಗಿ ಡೌನ್ ಲೋಡ್ ಮಾಡುವುದು ಹೇಗೆ?

ಯುಟ್ಯೂಬ್ ನಲ್ಲಿ ವೀಡಿಯೋಗಳನ್ನು ಆಫ್ ಲೈನ್ ನಲ್ಲಿ ನೋಡುವುದಕ್ಕಾಗಿ ಡೌನ್ ಲೋಡ್ ಮಾಡಿ ಸೇವ್ ಮಾಡಿ ಇಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಈಗಾಗಲೇ ತಿಳಿಸಿಕೊಟ್ಟಿದ್ದೇವೆ. ಆದರೆ ಈ ಲೇಖನಲ್ಲಿದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದೇವೆ.

ಕೇವಲ ಒಂದೊಂದೇ ವೀಡಿಯೋ ಡೌನ್ ಲೋಡ್ ಮಾಡುತ್ತಾ ಕೂರುವುದು ಬಹಳ ಕಷ್ಟವಲ್ಲವೇ? ಕೆಲವೊಮ್ಮೆ ಹಲವು ವೀಡಿಯೋಗಳನ್ನು ಒಮ್ಮೆಲೆ ಡೌನ್ ಲೋಡ್ ಮಾಡುವುದಕ್ಕೆ ಅವಕಾಶವಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನ್ನಿಸುತ್ತದೆ. ಎಸ್, ಅನೇಕ ಯುಟ್ಯೂಬ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಿ ಯುಟ್ಯೂಬ್ ಪ್ಲೇಲಿಸ್ಟ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

ಮುಂದುವರಿಯುವುದಕ್ಕಿಂತ ಮುಂಚೆ ಯುಟ್ಯೂಬ್ ವೀಡಿಯೋಗಳಿಗೆ ಕ್ರಿಯೇಟರ್ಸ್ ಪರ್ಮಿಷನ್ ಲಭ್ಯವಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಯಾವುದೇ ವೀಡಿಯೋ ಡೌನ್ ಲೋಡ್ ಮಾಡುವುದಕ್ಕಿಂತ ಮುಂಚೆ ನೀವು ಕ್ರಿಯೇಟರ್ ಗಳಿಗೆ ಗೌರವ ನೀಡುವುದು ಬಹಳ ಮುಖ್ಯ.

ಆಪ್ ಮೂಲಕ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ನಲ್ಲಿ ಹೇಗೆ ಡೌನ್ ಲೋಡ್ ಮಾಡುವುದು ?

ಒಂದು ವೇಳೆ ನೀವು ಕಂಪ್ಯೂಟರ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ನಲ್ಲಿ ಡೌನ್ ಲೋಡ್ ಮಾಡುವುದಕ್ಕಾಗಿ ಯಾವುದಾದರೂ ಆಪ್ ಹುಡುಕಾಡುತ್ತಿದ್ದರೆ 4ಕೆ ವೀಡಿಯೋ ಡೌನ್ ಲೋಡರ್ ಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಆದರೆ ಇದೊಂದು ಪಾವತಿ ಮಾಡಬೇಕಿರುವ ಆಪ್ ಆಗಿದೆ. ಇದರ ಉಚಿತ ವರ್ಷನ್ ಜಾಹೀರಾತುಗಳನ್ನು ಬೆಂಬಲಿಸುತ್ತದೆ ಮತ್ತು ಯುಟ್ಯೂಬ್ ಪ್ಲೇಲಿಸ್ಟ್ ಡೌನ್ ಲೋಡ್ ಮಾಡುವುದು ಬಹಳ ಸಮಯ ಹಿಡಿಯುವಂತೆ ಮಾಡುತ್ತದೆ.ವಿಂಡೋಸ್ ಅಥವಾ ಮ್ಯಾಕ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ಆಗಿ ಡೌನ್ ಲೋಡ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. 4ಕೆ ವೀಡಿಯೋ ಡೌನ್ ಲೋಡರ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ ಮತ್ತು ತೆರೆಯಿರಿ.

2. ನಿಮ್ಮ ಕಂಪ್ಯೂಟರ್ ನಲ್ಲಿ ಯಾವುದೇ ಯುಟ್ಯೂಬ್ ಚಾನಲ್ ನ್ನು ತೆರೆಯಿರಿ> Playlists ನ್ನು ಕ್ಲಿಕ್ಕಿಸಿ > ಪ್ಲೇ ಲಿಸ್ಟ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಲಿಂಕ್ ನ್ನು ಕಾಪಿ ಮಾಡಿ.

3. 4ಕೆ ವೀಡಿಯೋ ಡೌನ್ ಲೋಡರ್ ಆಪ್ ಗೆ ಸ್ವಿಚ್ ಆಗಿ ಮತ್ತು ಪೇಸ್ಟ್ ಲಿಂಕ್ ನ್ನು ಹಿಟ್ ಮಾಡಿ.ನಂತರ ಡೌನ್ ಲೋಡ್ ಪ್ಲೇಲಿಸ್ಟ್ ನ್ನು ಕ್ಲಿಕ್ಕಿಸಿ

4. 4ಕೆ ವೀಡಿಯೋ ಡೌನ್ ಲೋಡರ್ ಮಲ್ಟಿಪಲ್ ಫೈಲ್ ಫಾರ್ಮೇಟ್ ನ್ನು ಬೆಂಬಲಿಸುತ್ತದೆ ಮತ್ತು ಇತರೆ ಪ್ರಸಿದ್ಧ ವೀಡಿಯೋ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಗಳಿಂದ ಉದಾಹರಣೆಗೆ ಡೈಲಿಮೋಷನ್, ವಿಮಿಯೋ,ಫೇಸ್ ಬುಕ್ ಇತ್ಯಾದಿಗಳಿಂದಲೂ ಕೂಡ ಡೌನ್ ಲೋಡ್ ಮಾಡುವುದಕ್ಕೆ ಇದು ಬೆಂಬಲ ನೀಡುತ್ತದೆ.

ವೆಬ್ ಸೈಟ್ ಮೂಲಕ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ನಲ್ಲಿ ಡೌನ್ ಲೋಡ್ ಮಾಡುವುದು ಹೇಗೆ?

ಒಂದು ವೇಳೆ ನಿಮ್ಮ ಕಂಪ್ಯೂಟರ್ ನಲ್ಲಿ ಇದನ್ನು ಇನ್ಸ್ಟಾಲ್ ಮಾಡಲು ಸಾಧ್ಯವಾಗದೇ ಇದ್ದರೆ ಯುಟ್ಯೂಬ್ ಪ್ಲೇಲಿಸ್ಟ್ ಮೂಲಕವೂ ಕೂಡ ನೀವು ಯುಟ್ಯೂಬ್ ವೀಡಿಯೋಗಳನ್ನು ಡೌನ್ ಲೋಡ್ ಮಾಡಬಹುದು. ವಿಂಡೋಸ್ ಅಥವಾ ಮ್ಯಾಕ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ಆಗಿ ಡೌನ್ ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನಿಮ್ಮ ಕಂಪ್ಯೂಟರ್ ನಲ್ಲಿ ಯುಟ್ಯೂಬ್ ಚಾನಲ್ ನ್ನು ತೆರೆಯಿರಿ > ಪ್ಲೇಲಿಸ್ಟ್ ನ್ನು ಕ್ಲಿಕ್ಕಿಸಿ > ಪ್ಲೇಲಿಸ್ಟ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಲಿಂಕ್ ನ್ನು ಕಾಪಿ ಮಾಡಿ.

2. ಹೊಸ ಟ್ಯಾಬ್ ನಲ್ಲಿ YouTubePlaylist.cc ಗೆ ಭೇಟಿ ನೀಡಿ ಮತ್ತು ಹೊಸ ಅಕೌಂಟ್ ನ್ನು ಸೃಷ್ಟಿಸಿ.

3. ಒಮ್ಮೆ ಅದು ಮುಗಿದ ನಂತರ ಯುಟ್ಯೂಬ್ ಲಿಂಕ್ ನ್ನು ಯುಟ್ಯೂಬ್ ವೆಬ್ ಸೈಟಿನ ಸರ್ಚ್ ಬಾರ್ ನಲ್ಲಿ ಪೇಸ್ಟ್ ಮಾಡಿ ಮತ್ತು ಎಂಟರ್ ನ್ನು ಹಿಟ್ ಮಾಡಿ.

4. ವೆಬ್ ಸೈಟ್ ಪ್ರೊಸೆಸಿಂಗ್ ನ್ನು ಪೂರ್ಣಗೊಳಿಸಲು ಬಿಡಿ. ನಂತರ, ಎಲ್ಲಾ ಫೈಲ್ ಗಳು ಡೌನ್ ಲೋಡ್ ಮಾಡುವುದಕ್ಕೆ ರೆಡಿಯಾಗುತ್ತದೆ. ಎಲ್ಲಾ ಟೈಟಲ್ ವೀಡಿಯೋಗಳನ್ನು ನೀವು ಟಿಕ್ ಮಾಡಬೇಕಾಗುತ್ತದೆ.

ಇನ್ನು ವೀಡಿಯೋಗಳನ್ನು ಬಲ್ಕ್ ಆಗಿ ಡೌನ್ ಲೋಡ್ ಮಾಡುವಾಗ ವೀಡಿಯೋದ ಕೆಲವು ಸಮಯಗಳನ್ನು ಕಟ್ ಮಾಡಿ ಒಂದೊಂದೇ ವೀಡಿಯೋಗಳನ್ನು ಕೂಡ ಸೆಟ್ ಮಾಡಿ ಅಗತ್ಯವಿರುವಷ್ಟನ್ನೇ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೂ ಕೂಡ ಅವಕಾಶವಿರುತ್ತದೆ. ವಿವಿಧ ಫೈಲ್ ಫಾರ್ಮೇಟ್ ಗಳಲ್ಲಿ YouTubePlaylist.cc ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಆಫ್ ಲೈನ್ ವ್ಯೂವಿಂಗ್ ಮೋಡ್ ನಲ್ಲಿ ಕೂಡ ವೀಡಿಯೋ ಡೌನ್ ಲೋಡ್ ಮಾಡಬಹುದು. ಇತರೆ ಫ್ಲ್ಯಾಟ್ ಫಾರ್ಮ್ ಗಳಿಂದ ಅಂದರೆ ವೀಮಿಯೋ,ಡೈಲಿ ಮೋಷನ್ ಇತ್ಯಾದಿಗಳಿಂದಲೂ ಕೂಡ ಡೌನ್ ಲೋಡ್ ಮಾಡಬಹುದು.

ಆಂಡ್ರಾಯ್ಡ್ ಮೂಲಕ ಯುಟ್ಯೂಬ್ ಪ್ಲೇಲಿಸ್ಟ್ ನ್ನು ಡೌನ್ ಲೋಡ್ ಮಾಡುವುದು ಹೇಗೆ?

ಒಂದು ವೇಳೆ ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಯುಟ್ಯೂಬ್ ಪ್ಲೇಲಿಸ್ಟ್ ಡೌನ್ ಲೋಡ್ ಮಾಡಬಹುದು. ಅದಕ್ಕಾಗಿ ವೀಡಿಯಾರ್ಡರ್ ಆಪ್ ನ್ನು ಬಳಕೆ ಮಾಡಿ.

1. ವೀಡಿಯಾಡರ್ ಆಪ್ ನ್ನು ನಿಮ್ಮ ಫೋನಿನಲ್ಲಿ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

2. ವೀಡಿಯಾಡರ್ ನ್ನು ತೆರೆಯಿರಿ > ಟಾಪ್ ಬಾರ್ ನಲ್ಲಿರುವ ಯುಟ್ಯೂಬ್ ನ್ನು ಟ್ಯಾಪ್ ಮಾಡಿ> ಯಾವುದೇ ಯುಟ್ಯೂಬ್ ಚಾನಲ್ ನ್ನು ತೆರೆಯಿರಿ.

3. ಯುಟ್ಯೂಬ್ ಚಾನಲ್ ಡೌನ್ ಲೋಡ್ ಮಾಡಿದ ನಂತರ ಪ್ಲೇಲಿಸ್ಟ್ ನ್ನು ಟ್ಯಾಪ್ ಮಾಡಿ > ಯಾವುದೇ ಪ್ಲೇಲಿಸ್ಟ್ ನ್ನು ಟ್ಯಾಪ್ ಮಾಡಿ> ಡೌನ್ ಲೋಡ್ ಬಟನ್ ನ್ನು ಹಿಟ್ ಮಾಡಿ > ಡೌನ್ ಲೋಡ್ ನ್ನು ಟ್ಯಾಪ್ ಮಾಡಿ.

4. ಬ್ರೌಸರ್ ಮೂಲಕವೂ ನೀವು ಪ್ಲೇಲಿಸ್ಟ್ ನ್ನು ಕಾಪಿ ಮಾಡಿ ಪಡೆಯಬಹುದು ಅಥವಾ ಯುಟ್ಯಾಬ್ ಆಪ್ ನಲ್ಲೂ ಕೂಡ ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ ವೀಡಿಯಾಡರ್ ನಲ್ಲಿ ಡೌನ್ ಲೋಡ್ ಮಾಡಬಹುದು.

ಐಫೋನ್ ನಲ್ಲಿ ಯುಟ್ಯೂಬ್ ಪ್ಲೇಲಿಸ್ಟ್ ನ್ನು ಡೌನ್ ಲೋಡ್ ಮಾಡುವುದು ಹೇಗೆ?

ಬೇಸರದ ಸಂಗತಿಯೆಂದರೆ ಆಂಡ್ರಾಯ್ಡ್ ನಲ್ಲಿರುವಂತೆ ಐಫೋನಿನಲ್ಲಿ ಯಾವುದೇ ಆಪ್ ಗಳೂ ಕೂಡ ಬಲ್ಕ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಇರುವುದಿಲ್ಲ. ಒಂದು ವೇಳೆ ನೀವು ಐಫೋನ್ ಬಳಕೆದಾರರಾಗಿದ್ದಲ್ಲಿ ಮತ್ತು ಬಲ್ಕ್ ನಲ್ಲಿ ಯುಟ್ಯೂಬ್ ವೀಡಿಯೋಗಳನ್ನು ಬಲ್ಕ್ ನಲ್ಲಿ ಡೌನ್ ಲೋಡ್ ಮಾಡಲು ಇಚ್ಛಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಐಫೋನಿನಲ್ಲಿ ಯುಟ್ಯೂಬ್ ಆಪ್ ಗೆ ತೆರಳಿ ಮತ್ತು ಯಾವುದೇ ಚಾನಲ್ ಗೆ ಭೇಟಿ ನೀಡಿ.

2. ಚಾನಲ್ ಪ್ಲೇಲಿಸ್ಟ್ ಟ್ಯಾಬ್ ಗೆ ತೆರಳಿ> ಯಾವುದೇ ಪ್ಲೇಲಿಸ್ಟ್ ನ್ನು ಟ್ಯಾಪ್ ಮಾಡಿ > ಎಲ್ಲಾ ವೀಡಿಯೋಗಳನ್ನು ಒಮ್ಮೆಲೆ ಸೇವ್ ಮಾಡುವುದಕ್ಕಾಗಿ ಡೌನ್ ಲೋಡ್ ಬಟನ್ ನ್ನು ಹಿಟ್ ಮಾಡಿ. ಈ ವಿಧಾನಆಂಡ್ರಾಯ್ಡ್ ಡಿವೈಸ್ ನಲ್ಲಿಯೂ ಕೂಡ ಕೆಲಸ ಮಾಡುತ್ತದೆ.

ಈ ಮೇಲಿನವು ಕೆಲವು ಸರಳ ವಿಧಾನಗಳಾಗಿದ್ದು ಯುಟ್ಯೂಬ್ ಪ್ಲೇಲಿಸ್ಟ್ ನ್ನು ಆಫ್ ಲೈನ್ ನಲ್ಲಿ ನೋಡುವುದಕ್ಕೆ ನಿಮ್ಮ ಫೋನ್ ಮತ್ತು ಕಂಪ್ಯೂಟರ್ ನಲ್ಲಿ ಹೇಗೆ ಬಲ್ಕ್ ನಲ್ಲಿ ವೀಡಿಯೋ ಡೌನ್ ಲೋಡ್ ಮಾಡಬಹುದು ಎಂಬುದಾಗಿದೆ. ನೀವೂ ಕೂಡ ಟ್ರೈ ಮಾಡಿ ನೋಡಿ.

Most Read Articles
Best Mobiles in India

Read more about:
English summary
How To Download YouTube Videos In Large Number: Step By Step Instructions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X