ವಾಟ್ಸಾಪ್ ಮೂಲಕ ಹತ್ತಿರದ COVID-19 ಲಸಿಕೆ ಕೇಂದ್ರವನ್ನು ಹುಡುಕುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ COVID-19 ವ್ಯಾಕ್ಸಿನೇಷನ್‌ ಅಭಿಯಾನ ಕೂಡ ನಡೆಯುತ್ತಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಕೋರೊನಾ ಲಸಿಕೆ ನೀಡಲಾಗಿದೆ. ಇದೀಗ ಇದೇ ಮೇ 1 ರಿಂದ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ COVID-19 ವ್ಯಾಕ್ಸಿನೇಷನ್‌ ನೀಡುವ ಕಾರ್ಯಕ್ರಮ ಪ್ರಾರಂಭವಾಗಿದೆ. ಇನ್ನು COVID-19 ವ್ಯಾಕ್ಸಿನೇಷನ್‌ ಪಡೆದುಕೊಳ್ಳಲು ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಕೇಂದ್ರವನ್ನು ಸರ್ಚ್‌ ಮಾಡಲು ನಿಮಗೆ ಗೂಗಲ್, ಅಮೆಜಾನ್ ನಂತಹ ಟೆಕ್ ದೈತ್ಯರು ಹಲವು ಹೊಸ ಉಪಕ್ರಮಗಳನ್ನು ಪರಿಚಯಿಸಿವೆ. ಇದೀಗ ಇದೇ ಹಾದಿಯಲ್ಲಿ ವಾಟ್ಸಾಪ್ ಕೂಡ ಹೆಜ್ಜೆಯನ್ನು ಇಟ್ಟಿದೆ.

ಹೌದು, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದದಾರರಿಗೆ ಹತ್ತಿರದಲ್ಲಿರುವ ಕೊರೊನಾ ಲಸಿಕೆ ಕೇಂದ್ರವನ್ನು ಸರ್ಚ್‌ ಮಾಡಲು ಹೊಸ ಅವಕಾಶವನ್ನು ಪರಿಚಯಿಸಿದೆ. ಈ ಮೂಲಕ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೊರೊನಾ ಲಸಿಕೆ ಕೇಂದ್ರ ಎಲ್ಲಿದೆ ಎಂದು ಹುಡುಕಾಡುವ ಅವಶ್ಯಕತೆ ಇಲ್ಲ. ಇಲ್ಲವೇ ಬೇರೆ ಸೈಟ್‌ಗಳಿಗೆ ಬೇಟಿ ಕೊಟ್ಟು ತಡುಕಾಡುವ ಬದಲು ನಿಮ್ಮ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ವಾಟ್ಸಾಪ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ನಿಮ್ಮ ಹತ್ತಿರದ ಕೊರೊನಾ ಲಸಿಕೆ ಕೇದ್ರವನ್ನು ಕಂಡುಹಿಡಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರಿಗೆ ಹತ್ತಿರದ ಕೊರೊನಾ ಲಸಿಕೆ ಕೇಂದ್ರವನ್ನು ಕಂಡುಹಿಡಿಯಲು ಉತ್ತಮ ಆಯ್ಕೆಯನ್ನು ಪರಿಚಯಿಸಿದೆ. ಚಾಟ್‌ಬಾಟ್‌ಗಳ ರೂಪದಲ್ಲಿ ಸಹಾಯವಾಣಿಗಳನ್ನು ನಿರ್ವಹಿಸಲು ಕಂಪನಿಯು ಆರೋಗ್ಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ. MyGov ಕರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರವನ್ನು ಕಂಡುಹಿಡಿಯುವ ಆಯ್ಕೆಯನ್ನು ವಾಟ್ಸಾಪ್ ಸೇರಿಸಿದೆ. ಚಾಟ್‌ಬಾಟ್ ಈಗ ಹತ್ತಿರದ COVID-19 ವ್ಯಾಕ್ಸಿನೇಷನ್ ಕೇಂದ್ರವನ್ನು ತೋರಿಸುವ ಸಾಮರ್ಥ್ಯ ಹೊಂದಿದೆ.

ವಾಟ್ಸಾಪ್ ಮೂಲಕ ಹತ್ತಿರದ COVID-19 ಲಸಿಕೆ ಕೇಂದ್ರವನ್ನು ಹುಡುಕುವುದು ಹೇಗೆ?

ವಾಟ್ಸಾಪ್ ಮೂಲಕ ಹತ್ತಿರದ COVID-19 ಲಸಿಕೆ ಕೇಂದ್ರವನ್ನು ಹುಡುಕುವುದು ಹೇಗೆ?

ಹಂತ: 1 ಮೊದಲು, +91 9013151515 ಸಂಖ್ಯೆಯನ್ನು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಸೇವ್‌ ಮಾಡಿ. ಅದು myGov ಕರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಸೇರಿದೆ.

ಹಂತ: 2 ವಾಟ್ಸಾಪ್‌ಗೆ ಹೋಗಿ ಮತ್ತು ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಈ ಸಂಖ್ಯೆಯನ್ನು ಹುಡುಕಿ.

ಹಂತ: 3 ಟೈಪ್ ನಮಸ್ತೆ

ಹಂತ: 4 ನಂತರ ಸ್ವಯಂಚಾಲಿತ ಪ್ರತಿಕ್ರಿಯೆ ನಿಮ್ಮ ಪಿನ್ ಕೋಡ್ ಅನ್ನು ಕೇಳುತ್ತದೆ. ಅದನ್ನು ನಮೂದಿಸಿ.

ಹಂತ: 5 ನಂತರ ಚಾಟ್‌ಬಾಟ್ ನಿರ್ದಿಷ್ಟ ಸ್ಥಳದಲ್ಲಿ ಲಸಿಕೆ ಕೇಂದ್ರದ ಪಟ್ಟಿಯನ್ನು ಕಳುಹಿಸುತ್ತದೆ.

ಸಂಪರ್ಕ

ಒಂದು ವೇಳೆ ನೀವು myGov ಸಂಪರ್ಕ ಸಂಖ್ಯೆಯನ್ನು ಉಳಿಸಲು ನೀವು ಬಯಸದಿದ್ದರೆ, ನೀವು ಕೇವಲ wa.me/919013151515 ಗೆ ಹೋಗಬಹುದು, ಅದು ಚಾಟ್‌ಬಾಟ್‌ಗೆ ನಿರ್ದೇಶಿಸುತ್ತದೆ. ಬಳಕೆದಾರರು ಚಾಟ್‌ಬಾಟ್‌ಗೆ ಮಾತ್ರ ನಿಜವಾದ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಗಮನಿಸಬೇಕು.

Most Read Articles
Best Mobiles in India

English summary
WhatsApp has introduced an easy way to locate the nearest COVID-19 vaccine center. Here's how you can now find nearest COVID-19 vaccine center via WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X