Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಐಫೋನ್ನಲ್ಲಿ ಸ್ಟೋರೇಜ್ ಸ್ಪೇಸ್ ಫ್ರೀ ಮಾಡಲು ಹೀಗೆ ಮಾಡಿ?
ನೀವು ಬಳಸುವ ಫೋನ್ ಸ್ಟೋರೇಜ್ ಸ್ಪೇಸ್ ಫ್ರೀ ಮಾಡುವಂತೆ ಕೇಳಿದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಆಂಡ್ರಾಯ್ಡ್ ಫೋನ್ ಮಾತ್ರವಲ್ಲ ಐಫೋನ್ನಲ್ಲಿಯೂ ಕೂಡ ಆಗಾಗ ಸ್ಟೋರೇಜ್ ಸ್ಪೇಸ್ ಅನ್ನು ಫ್ರೀ ಮಾಡುತ್ತಿರಬೇಕು. ಇಲ್ಲದೆ ಹೋದರೆ ಸ್ಟೋರೇಜ್ ತುಂಬಿ ಹೋದಾಗ ಫೋನ್ ಕಾರ್ಯನಿರ್ವಹಣೆಯ ವೇಗ ಕಡಿಮೆಯಾಗುತ್ತಾ ಬರಲಿದೆ. ಅಲ್ಲದೆ ಯಾವುದೇ ಹೊಸ ಫೈಲ್ ಅನ್ನು ನಿಮ್ಮ ಫೋನ್ನಲ್ಲಿ ಸೇವ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಸ್ಟೋರೇಜ್ ಸ್ಪೇಸ್ ಫ್ರೀ ಮಾಡದೆ ಬೇರೆ ದಾರಿಯೇ ಇಲ್ಲ.

ಹೌದು, ಫೋನ್ಗಳಲ್ಲಿ ಸ್ಟೋರೇಜ್ ಸ್ಪೇಸ್ ಅನ್ನು ಫ್ರೀ ಯಾಗಿಡುವುದಕ್ಕೆ ಎಲ್ಲರೂ ಬಯಸುತ್ತಾರೆ. ಸ್ಟೊರೇಜ್ ಪೂರ್ತಿಯಾಗದಂತೆ ನೋಡಿಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದೆ. ಒಂದು ವೇಳೆ ನಿಮ್ಮ ಐಫೋನ್ ಸ್ಟೋರೇಜ್ ಸ್ಪೇಸ್ ತುಂಬಿ ಹೋದರೆ ಅದನ್ನು ಫ್ರೀ ಮಾಡುವುದಕ್ಕೆ ಕೆಲವು ಟಿಪ್ಸ್ ಅನ್ನು ಫಾಲೋ ಮಾಡಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಐಫೋನ್ನಲ್ಲಿ ಸ್ಪೇಸ್ ಸ್ಟೋರೇಜ್ ಫ್ರೀ ಮಾಡುವುದಕ್ಕೆ ನೀವು ಅನುಸರಿಸಬೇಕಾದ ಟ್ರಿಕ್ಸ್ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್ನಲ್ಲಿ ಸ್ಟೋರೇಜ್ ಸ್ಪೇಸ್ ಎಷ್ಟಿದೆ ಎಂದು ತಿಳಿಯುವುದು ಹೇಗೆ?
ಮೊದಲಿಗೆ ನಿಮ್ಮ ಐಫೋನ್ನಲ್ಲಿ ಸೆಟ್ಟಿಂಗ್ಸ್> ಜನರಲ್ ಹೋಗಿ ಮತ್ತು ನಂತರ ಐಫೋನ್ ಸ್ಟೋರೇಜ್ಅನ್ನು ಟ್ಯಾಪ್ ಮಾಡಿ. ಇದೀಗ ನಿಮ್ಮ ಐಫೋನ್ನಲ್ಲಿ ಎಷ್ಟು ಸ್ಟೋರೇಜ್ ಸ್ಪೇಸ್ ಖಾಲಿಯಿದೆ ಎಂದು ತಿಳಿಯಲಿದೆ. ಅಲ್ಲದೆ ಇದರಲ್ಲಿ ಯಾವ ಅಪ್ಲಿಕೇಶನ್ ಎಷ್ಟು ಪ್ರಮಾಣದ ಸ್ಟೋರೇಜ್ ಪ್ರಮಾಣ ಹೊಂದಿದೆ ಅನ್ನೊದನ್ನ ಸಹ ತಿಳಿಯಬಹುದಾಗಿದೆ. ಹಾಗೆಯೇ ನಿಮ್ಮ ಐಫೋನ್ನಲ್ಲಿರುವ ಡೌನ್ಲೋಡ್ ಡಾಕ್ಯುಮೆಂಟ್ಗಳು, ವೀಡಿಯೊಗಳ ಸ್ಟೊರೇಜ್ ಪ್ರಮಾಣವನ್ನು ಕೂಡ ಪರಿಶೀಲಿಸಬಹುದಾಗಿದೆ.

ಸ್ಟೋರೇಜ್ ಸ್ಪೇಸ್ ಪ್ರೀ ಮಾಡುವುದು ಹೇಗೆ?
ನೀವು ನಿಮ್ಮ ಐಫೋನ್ನಲ್ಲಿನ ಸ್ಟೋರೇಜ್ ಸ್ಪೇಸ್ ಫ್ರೀ ಮಾಡಬೇಕಾದರೆ ಮೊದಲಿಗೆ ನಿಮ್ಮ ವಾಟ್ಸಾಪ್ ನಲ್ಲಿ ಬಂದಿರುವ ಫೋಟೋ, ವೀಡಿಯೊಗಳನ್ನು ತೆರವುಗೊಳಿಸುವುದು ಸೂಕ್ತ. ಒಂದು ವೇಳೆ ಅದು ನಿಮಗೆ ಮುಖ್ಯವಾದವು ಎನಿಸಿದರೆ ನಿಮ್ಮ ಐಕ್ಲೌಡ್ ಸ್ಟೋರೇಜ್ನಲ್ಲಿ ಬ್ಯಾಕಪ್ ಮಾಡಿರಿ. ಇನ್ನು ನಿಮ್ಮ ವಾಟ್ಸಾಪ್ ಎಷ್ಟು ಪ್ರಮಾಣದ ಸ್ಟೋರೇಜ್ ಸ್ಪೇಸ್ ಆಕ್ರಮಿಸಿಕೊಂಡಿದೆ ಅನ್ನೊದನ್ನ ಮೊದಲು ತಿಳಿಯಿರಿ. ಇದಕ್ಕಾಗಿ ನೀವು ವಾಟ್ಸಾಪ್> ಸೆಟ್ಟಿಂಗ್ಗಳು> ಸಂಗ್ರಹಣೆ ಮತ್ತು ಡೇಟಾಗೆ ಹೋಗಿ ಮತ್ತು ಸಂಗ್ರಹಣೆಯನ್ನು ನಿರ್ವಹಿಸಿ. ಇದರಲ್ಲಿ ವಾಟ್ಸಾಪ್ ಸ್ಟೋರೇಜ್ ಸ್ಪೇಸ್ ಎಷ್ಟಿದೆ ಅನ್ನೊದು ಕಾಣಲಿದೆ. ಇದರಲ್ಲಿ ನಿಮಗೆ ಬೇಡವಾದ ಫೈಲ್ಗಳನ್ನು ಡಿಲೀಟ್ ಮಾಡಿರಿ.

ಐಕ್ಲೌಡ್ ಬ್ಯಾಕ್ಅಪ್ ಅನ್ನು ಆನ್ ಮಾಡಿ
ನೀವು ಐಕ್ಲೌಡ್ ಹೊಂದಿಲ್ಲದಿದ್ದರೆ, ಮೊದಲಿಗೆ ಐಕ್ಲೌಡ್ ಆನ್ಲೈನ್ ಸ್ಟೋರೇಜ್ ಅನ್ನು ಪಡೆದುಕೊಳ್ಳುವುದು ಸೂಕ್ತ. ಇದರಿಂದ ಫೋಟೋಗಳು ಮತ್ತು ವೀಡಿಯೊಗಳನ್ನು ಕ್ಲೌಡ್ಗೆ ಬ್ಯಾಕಪ್ ಮಾಡಬಹುದಾಗಿದೆ. ಅಲ್ಲದೆ ಆಪಲ್ ಒನ್ ಪ್ಲಾನ್ ಕೂಡ ಆಪಲ್ ಮ್ಯೂಸಿಕ್, ಆಪಲ್ ಟಿವಿ+, ಆಪಲ್ ಆರ್ಕೇಡ್ ಮತ್ತು ಐಕ್ಲೌಡ್+ ಸ್ಟೋರೇಜ್ ಪ್ರವೇಶದೊಂದಿಗೆ ಬರಲಿದೆ. ಇದರಲ್ಲಿ ಬೇಸ್ ಪ್ಲಾನ್ ತಿಂಗಳಿಗೆ 195ರೂ.ಹೊಂದಿದೆ. ಇದು 50GB ಕ್ಲೌಡ್ ಸ್ಟೋರೇಜ್ ನೀಡಲಿದೆ.

ನೀವು ಬಳಸದ ಅಪ್ಲಿಕೇಶನ್ಗಳನ್ನು ಅನ್ ಇನ್ಸ್ಟಾಲ್ ಮಾಡಿ
ನೀವು ಉಪಯೋಗಿಸದ ಅಪ್ಲಿಕೇಶನ್ ಅನ್ನು ಅನ್ ಇನ್ಸ್ಟಾಲ್ ಮಾಡುವುದು ಸೂಕ್ತ. ಇದರಿಂದ ಸ್ಟೋರೇಜ್ ಸ್ಪೇಸ್ ಉಳಿಯಲಿದೆ. ಇದಲ್ಲದೆ ಅಪ್ಲಿಕೇಶನ್ ಅನ್ನು ಆಫ್ಲೋಡ್ ಕೂಡ ಮಾಡಬಹುದು. ಇದಕ್ಕಾಗಿ ನೀವು ಐಫೋನ್ ಸ್ಟೋರೇಜ್ ಸೆಟ್ಟಿಂಗ್ಗಳಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ ಮತ್ತು ಅಪ್ಲಿಕೇಶನ್ ಅನ್ನು ಆಫ್ಲೋಡ್ ಮಾಡುವ ಆಯ್ಕೆಯನ್ನು ಕಾಣಬಹುದು. ಇದು ಆಪಲ್ ಅಪ್ಲಿಕೇಶನ್ ಬಳಸುವ ಸ್ಟೋರೇಜ್ ಅನ್ನು ಫ್ರೀ ಮಾಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086