ಹೊಸ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಮೇಲೆ ಭಾರೀ ಡಿಸ್ಕೌಂಟ್‌..!

By Gizbot Bureau
|

ನೀವು ಹೊಸ ಒನ್‌ಪ್ಲಸ್ 7T ಸರಣಿಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ಒಂದು ಶುಭ ಸುದ್ದಿ ಇಲ್ಲಿದೆ. ಹೌದು, ಕಂಪನಿಯು 'ಒನ್‌ಪ್ಲಸ್ ರೆಫರಲ್ ಪ್ರೋಗ್ರಾಂ' ಅನ್ನು ಘೋಷಿಸಿದ್ದು, ಈ ಯೋಜನೆಯಡಿಯಲ್ಲಿ ಖರೀದಿದಾರರು 2,000 ರೂ. ವರೆಗೂ ಹಣ ಉಳಿಸಬಹುದಾಗಿದೆ. ಈ ಕೊಡುಗೆ ಈಗಾಗಲೇ ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್.ಇನ್‌ನಲ್ಲಿ ದೊರೆಯುತ್ತಿದೆ.

8 ಸಾವಿರ ಉಳಿತಾಯ

8 ಸಾವಿರ ಉಳಿತಾಯ

ಇನ್ನು, ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ 3,000 ರೂ.ಗಳವರೆಗೆ ತ್ವರಿತ ರಿಯಾಯಿತಿ ಹಾಗೂ ಹಳೆಯ ಸಾಧನಗಳ ವಿನಿಮಯದ ಮೇಲೆ 3,000 ರೂ. ಕೊಡುಗೆ ದೊರೆಯುತ್ತದೆ. ಈ ಎಲ್ಲಾ ಕೊಡುಗೆಗಳಿಂದ ಒನ್‌ಪ್ಲಸ್ 7T ಸರಣಿ ಫೋನ್‌ಗಳಾದ ಒನ್‌ಪ್ಲಸ್ 7T ಮತ್ತು ಒನ್‌ಪ್ಲಸ್ 7T ಪ್ರೊ ಸ್ಮಾರ್ಟ್‌ಫೋನ್‌ಗಳ ಖರೀದಿಯಲ್ಲಿ ಬರೋಬ್ಬರಿ 8,000 ರೂ.ಗಳವರೆಗೆ ಉಳಿಸಬಹುದಾಗಿದೆ.

ಗ್ರಾಹಕರಿಗೆ ಲಾಭ

ಗ್ರಾಹಕರಿಗೆ ಲಾಭ

ಒನ್‌ಪ್ಲಸ್ 7T ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 39,999 ರೂ. ಆಗಿದ್ದು, 8,000 ರೂ. ರಿಯಾಯಿತಿಯೊಂದಿಗೆ 31,999 ರೂ.ಗೆ ದೊರೆಯುತ್ತದೆ. ಇನ್ನು, ಒನ್‌ಪ್ಲಸ್ 7T ಟಿ ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ 53,999 ರೂ. ಇದ್ದು, ಕೊಡುಗೆಯ ದರವಾಗಿ 45,999 ರೂ.ಗೆ ದೊರೆಯಲಿದ್ದು, ಗ್ರಾಹಕರಿಗೆ ಲಾಭವಾಗಲಿದೆ.

ರೆಫರಲ್‌ ಪ್ರೋಗ್ರಾಂ..?

ರೆಫರಲ್‌ ಪ್ರೋಗ್ರಾಂ..?

'ಒನ್‌ಪ್ಲಸ್‌ನ ರೆಫರಲ್‌ ಪ್ರೋಗ್ರಾಂ'ನಡಿ 2,000 ರೂ. ರಿಯಾಯಿತಿಯನ್ನು ಪಡೆಯಲು ಮುಂದಿನ ಹಂತಗಳನ್ನು ಅನುಸರಿಸಿ. ಮೊದಲಿಗೆ ನಿಮ್ಮ ಸ್ನೇಹಿತನಿಗೆ ಒನ್‌ಪ್ಲಸ್‌ ಕೇರ್‌ ಆಪ್‌ ಡೌನ್‌ಲೋಡ್‌ ಮಾಡಲು ವಿನಂತಿಸಿ. ನಂತರ, ಆ ಆಪ್‌ಗೆ ಸೈನ್ ಅಪ್ ಮಾಡಿ ಮತ್ತು IMEI ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ.

ಲಾಗಿನ್‌ ಆಗಿ

ಲಾಗಿನ್‌ ಆಗಿ

ಒನ್‌ಪ್ಲಸ್‌ ಕೇರ್‌ ಆಪ್‌ನಲ್ಲಿ ಲಾಗಿನ್‌ ಆದ ಖಾತೆಯೊಂದಿಗೆ OnePlus.in ಗೆ ಲಾಗಿನ್ ಮಾಡಲು ಅವರನ್ನು ಕೇಳಿ. ಬಳಿಕ, ಉಲ್ಲೇಖಿತ ಪ್ರೋಗ್ರಾಂ ಪುಟಕ್ಕೆ ಹೋಗಿ ಮತ್ತು ಅದೇ IMEI ಸಂಖ್ಯೆಯನ್ನು ನಮೂದಿಸಿ. ಇದು ಅನನ್ಯ ರೆಫರಲ್‌ ಲಿಂಕ್‌ನ್ನು ರಚಿಸುತ್ತದೆ. ನಿಮ್ಮ ಸ್ನೇಹಿತ ರಚಿಸಿದ ಈ ರೆಫರಲ್‌ ಲಿಂಕ್‌ ಬಳಸಿ ಮತ್ತು OnePlus.in ಗೆ ಲಾಗ್ ಇನ್ ಆಗಿ. ಅಲ್ಲಿ, ರೆಫರಲ್ ಪ್ರೋಗ್ರಾಂ ಪುಟಕ್ಕೆ ಹೋಗಿ ಮತ್ತು ‘ಕ್ಲೈಮ್ ಕೂಪನ್‌ಗಳು' ಆಯ್ಕೆಯನ್ನು ಆಯ್ಕೆಮಾಡಿ.

ಅಮೆಜಾನ್‌ ಗಿಫ್ಟ್‌ ಕೂಪನ್‌

ಅಮೆಜಾನ್‌ ಗಿಫ್ಟ್‌ ಕೂಪನ್‌

ನಿಮ್ಮ ಖಾತೆಗೆ ನೇರವಾಗಿ ಸೇರ್ಪಡೆಗೊಂಡ ಒನ್‌ಪ್ಲಸ್ ಗಿಫ್ಟ್ ಚೀಟಿ ಜೊತೆಗೆ ಇಮೇಲ್ ಮೂಲಕ 2,000 ರೂ ಮೌಲ್ಯದ ಅಮೆಜಾನ್ ಗಿಫ್ಟ್ ಚೀಟಿ ಸಿಗುತ್ತದೆ. ಹೊಸ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7T ಸಾಧನಗಳನ್ನು ಖರೀದಿಸಲು ಇದನ್ನು ಬಳಸಬಹುದು. ನಂತರ, ನಿಮ್ಮ ಹೊಸ ಸಾಧನದಲ್ಲಿ ಒನ್‌ಪ್ಲಸ್ ಕೇರ್ ಸ್ಥಾಪಿಸಿ ಮತ್ತು IMEI ಸಂಖ್ಯೆಯನ್ನು ಪರಿಶೀಲಿಸಿ.

ಸ್ನೇಹಿತನಿಗೂ ಅಂಕ..!

ಸ್ನೇಹಿತನಿಗೂ ಅಂಕ..!

ನಿಮ್ಮನ್ನು ರೆಫರಲ್‌ ಮಾಡಿದ ನಿಮ್ಮ ಸ್ನೇಹಿತನಿಗೂ 30 ದಿನಗಳಲ್ಲಿ ಅವರ ಒನ್‌ಪ್ಲಸ್ ಖಾತೆಗಳಿಗೆ 200 ಒನ್‌ಪ್ಲಸ್ ಅಂಕಗಳನ್ನು ಪಡೆಯುತ್ತಾರೆ. 1,000 ರೂ ಅಮೆಜಾನ್ ಚೀಟಿ ಪಡೆಯಲು ಈ ಅಂಕಗಳನ್ನು ಪಡೆದುಕೊಳ್ಳಿ ಅಥವಾ ಒನ್‌ಪ್ಲಸ್ ಚೀಟಿ ಪಡೆಯಲು ಅದನ್ನು ಬಳಸಿ.

ಹೆಚ್ಚುವರಿ ಪ್ರಯೋಜನ

ಹೆಚ್ಚುವರಿ ಪ್ರಯೋಜನ

ರೆಫರಲ್‌ ಪ್ರೋಗ್ರಾಂನೊಂದಿಗೆ ಒನ್‌ಪ್ಲಸ್ ತನ್ನ ಗ್ರಾಹಕರಿಗೆ ಉಚಿತ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಇವುಗಳಲ್ಲಿ ಒನ್‌ಪ್ಲಸ್ ಸಾಧನಗಳಿಗೆ ಉಚಿತ ಒಂದು ವರ್ಷದ ವಿಸ್ತೃತ ವಾರಂಟಿ ಮತ್ತು ಬ್ಯಾಟರಿ ಬದಲಿಗಾಗಿ ಶೇ.50ರಷ್ಟು ರಿಯಾಯಿತಿ ಪಡೆಯಬಹುದು. ಇದು ನಿಮಗೆ 1,373 ರೂ. ಉಳಿಸುತ್ತದೆ.

Most Read Articles
Best Mobiles in India

Read more about:
English summary
How To Get Flat Rs. 2,000 Discount On OnePlus Smartphones In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X