12 ತಿಂಗಳು ಉಚಿತ ಜಿಯೋಫೈಬರ್ ಸೇವೆ ಪಡೆಯಲು ಹೀಗೆ ಮಾಡಿ!

|

ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಮುಖ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಸಂಸ್ಥೆಗಳ ಪೈಕಿ ರಿಲಯನ್ಸ್ ಜಿಯೋ ಸಹ ಒಂದಾಗಿದೆ. ಜಿಯೋ ಸಂಸ್ಥೆಯು ಆಕರ್ಷಕ ದರಗಳಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅದಾಗ್ಯೂ ಹೊಸ ಗ್ರಾಹಕರನ್ನು ಸೆಳೆಯಲು ಜಿಯೋ ಸಂಸ್ಥೆಯು ಪ್ರಯತ್ನಗಳನ್ನು ಮುಂದುವರೆಸಿದೆ. ಈ ನಿಟ್ಟಿನಲ್ಲಿ ಜಿಯೋ ಒಂದು ತಿಂಗಳು ಉಚಿತ ಸೇವೆಯ ಪ್ರಯೋಜನ ನೀಡುತ್ತಲಿದೆ. ಆದರೆ ಗ್ರಾಹಕರು ಒಂದು ವರ್ಷದ ವರೆಗೂ ಉಚಿತ ಸೇವೆ ಪಡೆಯಬಹುದು.

ಗ್ರಾಹಕರು

ಹೌದು, ಟೆಲಿಕಾಂ ದೈತ್ಯ ಎಂದು ಗುರುತಿಸಿಕೊಂಡಿರುವ ಜಿಯೋ ತನ್ನ ಹೊಸ ಜಿಯೋ ಫೈಬರ್ ಗ್ರಾಹಕರಿಗೆ ಅಧಿಕೃತವಾಗಿ 30 ದಿನಗಳ ಉಚಿತ ಟ್ರಾಯಲ್ ಅವಧಿಯನ್ನು ನೀಡುತ್ತದೆ. ಜಿಯೋ ಫೈಬರ್‌ನ ಎಲ್ಲಾ ಹೊಸ ಗ್ರಾಹಕರು ಮೊದಲ ಒಂದು ತಿಂಗಳ ಸೇವೆಯನ್ನು ಉಚಿತವಾಗಿ ಪಡೆಯುತ್ತಾರೆ. ನೀವು ಕೇವಲ ಡೇಟಾವನ್ನು ಬಯಸಿದರೆ, ಜಿಯೋ ನಿಮಗೆ 1500 ರೂ.ಗಳ ಮರುಪಾವತಿಸಬಹುದಾದ ಮೊತ್ತವನ್ನು ವಿಧಿಸುತ್ತದೆ. ಇದರಲ್ಲಿ 150mbps ವೇಗ, ಡೇಟಾ ಮಿತಿ ಇಲ್ಲ, ಅನಿಯಮಿತ ವಾಯಿಸ್‌ ಕರೆಗಳು ಮತ್ತು ವೈಫೈ ONT ಮೋಡೆಮ್ ಲಭ್ಯವಾಗಲಿವೆ.

ಒಟಿಟಿ

ಬ್ರಾಡ್‌ಬ್ಯಾಂಡ್ ಸಂಪರ್ಕದ ಜೊತೆಗೆ ಕೆಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನೀವು ಚಂದಾದಾರಿಕೆ ಬಯಸಿದರೆ, ಜಿಯೋ 2,500 ರೂ ಮರುಪಾವತಿಸಬಹುದಾದ ಠೇವಣಿ ವಿಧಿಸುತ್ತದೆ. ಹೊಸ ಗ್ರಾಹಕರಿಗೆ ಇದು ಕೂಡ ಒಂದು ತಿಂಗಳು ಉಚಿತವಾಗಿರುತ್ತದೆ. ಆಫರ್ ಅಡಿಯಲ್ಲಿ, ಬಳಕೆದಾರರು 150Mbps ವೇಗ, ಯಾವುದೇ ಡೇಟಾ ಮಿತಿ, ಅನಿಯಮಿತ ವಾಯಿಸ್ ಕರೆಗಳು, 4K ಸೆಟ್-ಟಾಪ್ ಬಾಕ್ಸ್, ವೈಫೈ ONT ಮೋಡೆಮ್, ಡಿಸ್ನಿ + ಹಾಟ್ಸ್ಟಾರ್, ಸೋನಿ LIV, ಜೀ5 ಸೇರಿದಂತೆ 13 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಟ್ರಾಯಲ್

ಜಿಯೋ 150Mbps ಡೇಟಾ ವೇಗವನ್ನು 30 ದಿನಗಳ ಉಚಿತ ಟ್ರಾಯಲ್ ಅವಧಿಯಲ್ಲಿ ಮಾತ್ರ ನೀಡಲಾಗುತ್ತದೆ ಎಂದು ಗಮನಿಸಬೇಕು. ಚಂದಾದಾರಿಕೆ ಯೋಜನೆಯ ಪ್ರಕಾರ ವೇಗ ಮತ್ತು ಪ್ರಯೋಜನಗಳನ್ನು ನೀಡಲಾಗುತ್ತದೆ. 30 ದಿನಗಳ ಉಚಿತ ಟ್ರಾಯಲ್ ಅವಧಿ ನಂತರವೂ, ಉಚಿತ ಸೇವೆ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್ ಒಂದು ವರ್ಷ ಉಚಿತ ಪಡೆಯುವುದು ಹೇಗೆ?

ಜಿಯೋ ಫೈಬರ್ ಒಂದು ವರ್ಷ ಉಚಿತ ಪಡೆಯುವುದು ಹೇಗೆ?

ಪ್ರಚಾರದ ಕೊಡುಗೆಯ ಭಾಗವಾಗಿ, ಹೊಸ reference ನೀಡುವ ಬಳಕೆದಾರರಿಗೆ ಜಿಯೋ ಒಂದು ತಿಂಗಳ ಹೆಚ್ಚುವರಿ ಜಿಯೋಫೈಬರ್ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಸ್ನೇಹಿತ ನಿಮ್ಮ reference ಮೂಲಕ ಹೊಸ ಜಿಯೋ ಫೈಬರ್ ಸಂಪರ್ಕವನ್ನು ತೆಗೆದುಕೊಂಡರೆ, ನೀವು ಮತ್ತು ನಿಮ್ಮ ಸ್ನೇಹಿತ ಇಬ್ಬರೂ ಒಂದು ತಿಂಗಳ ಉಚಿತ ಸೇವೆಯನ್ನು ಪಡೆಯುತ್ತೀರಿ.

reference

ಪ್ರಚಾರದ ಪ್ರಸ್ತಾಪವನ್ನು ಒಂದು ವರ್ಷದೊಳಗೆ ನಿಮಗೆ ಬೇಕಾದಷ್ಟು ಬಾರಿ ಅನ್ವಯಿಸಬಹುದು. ಉದಾಹರಣೆಗೆ, ನಿಮ್ಮ reference ಮೂಲಕ 12 ಜನರು ಹೊಸ ಜಿಯೋ ಫೈಬರ್ ಸಂಪರ್ಕಕ್ಕೆ ಚಂದಾದಾರರಾಗಿದ್ದರೆ, ನೀವು 12 ತಿಂಗಳು ಅಥವಾ ಒಂದು ವರ್ಷದವರೆಗೆ ಉಚಿತ ಸೇವೆಯನ್ನು ಪಡೆಯುತ್ತೀರಿ.

ರಿಲಯನ್ಸ್ ಜಿಯೋ ಫೈಬರ್ ಪ್ಲ್ಯಾನ್‌ಗಳು

ರಿಲಯನ್ಸ್ ಜಿಯೋ ಫೈಬರ್ ಪ್ಲ್ಯಾನ್‌ಗಳು

ಜಿಯೋ ಸಂಸ್ಥೆಯು ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಫೈಬರ್ ಯೋಜನೆಗಳನ್ನು ಪರಿಚಯಿಸಿದೆ. ಮುಖ್ಯವಾಗಿ 999ರೂ, 699ರೂ, 399ರೂ, 1499ರೂ, 3999ರೂ ಮತ್ತು 8499ರೂ ಸೇರಿದಂತೆ ಹಲವಾರು ಜಿಯೋ ಫೈಬರ್ ಯೋಜನೆಗಳು ಗಮನ ಸೆಳೆದಿವೆ.

Most Read Articles
Best Mobiles in India

English summary
How to get Jio Fiber Free For 12 Months: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X