ಟೆಲಿಗ್ರಾಮ್‌ನಲ್ಲಿ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವುದು ಹೇಗೆ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಇತ್ತಿಚಿನ ದಿನಗಳಲ್ಲಿ ವಾಟ್ಸಾಪ್‌ ಅನ್ನು ಮೀರಿಸಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ಹಾಗೂ ಸೇವಾ ನಿಯಮದ ವಿವಾದದ ನಂತರ ಹೆಚ್ಚಿನ ಜನರು ಟೆಲಿಗ್ರಾಮ್‌ ಅನ್ನು ಬಳಸಲು ಶುರುಮಾಡಿದ್ದಾರೆ. ಇನ್ನು ಟೆಲಿಗ್ರಾಮ್ ಅಪ್ಲಿಕೇಶನ್‌ ಕೂಡ ಹಲವಾರು ಗೌಪ್ಯತೆ ಆಯ್ಕೆಗಳನ್ನು ಹೊಂದಿದ್ದು, ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಕಡಿಮೆ ಪ್ರೊಫೈಲ್ ಇರಿಸಿಕೊಳ್ಳಲು ಬಯಸಿದರೆ ಇದನ್ನು ಪರಿಗಣಿಸಬಹುದಾಗಿದೆ.

ಟೆಲಿಗ್ರಾಮ್

ಹೌದು, ಟೆಲಿಗ್ರಾಮ್ ಬಳಕೆದಾರರು ತಮ್ಮ ಸಂಪರ್ಕ ಸಂಖ್ಯೆಗಳನ್ನು ಮತ್ತು ಅವರ ಹೆಸರುಗಳನ್ನು ಮರೆಮಾಡಲು ತಮ್ಮ ಪ್ರೊಫೈಲ್ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಇದರಿಂದ ಟೆಲಿಗ್ರಾಮ್‌ನಲ್ಲಿ ತಮ್ಮ ಬಳಕೆದಾರ ಹೆಸರಿನಿಂದ ಕಾಣಿಸಿಕೊಳ್ಳುತ್ತಾರೆ. ಟೆಲಿಗ್ರಾಮ್‌ನಲ್ಲಿ ನೀವು ಸಕ್ರಿಯಗೊಳಿಸಬಹುದಾದ ಹಲವಾರು ಗೌಪ್ಯತೆ ಆಯ್ಕೆಗಳಿವೆ. ಅದರಲ್ಲಿ ಬಳಕೆದಾರರು ತಮ್ಮ ಲಾಸ್ಟ್‌ ಸೀನ್‌ ಅನ್ನು ಹೈಡ್‌ ಮಾಡುವ ಆಯ್ಕೆ ಕೂಡ ಒಂದಾಗಿದೆ. ಅಲ್ಲದೆ ಬಳಕೆದಾರರು ತಮ್ಮ ಸಂಪರ್ಕ ಸಂಖ್ಯೆಯನ್ನು ಇತರ ಬಳಕೆದಾರರಿಗೆ ತೋರಿಸದೆ ಟೆಲಿಗ್ರಾಮ್ ಬಳಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಹಾಗಾದ್ರೆ ಈ ಫೀಚರ್ಸ್‌ಗಳನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್‌

ಟೆಲಿಗ್ರಾಮ್‌ ತನ್ನ ಬಳಕೆದಾರರಿಗೆ ಹಲವು ಗೌಪ್ಯತೆ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಬಯಸಿದರೆ ತಮ್ಮ ಪ್ರೊಫೈಲ್‌ ಅನ್ನು ಹೈಡ್‌ ಮಾಡಬಹುದು, ಅಷ್ಟೇ ಅಲ್ಲ ತಮ್ಮ ಹೆಸರನ್ನು ಕೂಡ ಯಾರಿಗೂ ತಿಳಿಯದಂತೆ ಹೈಡ್‌ ಮಾಡಬಹುದಾಗಿದೆ. ಇದಲ್ಲದೆ ತಮ್ಮ ಲಾಸ್ಟ್‌ ಸೀನ್‌ ಅನ್ನು ಬೇರೆಯವರು ನೋಡದಂತೆ ಕೂಡ ಸೆಟ್ಟಿಂಗ್‌ ಮಾಡುವ ಅವಕಾಶವನ್ನು ಟೆಲಿಗ್ರಾಮ್‌ನಲ್ಲಿ ನೀಡಲಾಗಿದೆ. ಟೆಲಿಗ್ರಾಮ್‌ನಲ್ಲಿ ಪ್ರೊಫೈಲ್‌ ಹೈಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಟೆಲಿಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಹೈಡ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಹೈಡ್‌ ಮಾಡುವುದು ಹೇಗೆ?

ಹಂತ:1 ಟೆಲಿಗ್ರಾಮ್ ತೆರೆಯಿರಿ

ಹಂತ:2 ಗೌಪ್ಯತೆ ಮತ್ತು ಭದ್ರತೆಗೆ ಹೋಗಿ

ಹಂತ:3 ಫೋನ್ ಸಂಖ್ಯೆಯನ್ನು ಆಯ್ಕೆಮಾಡಿ

ಹಂತ:4 ನಿಮ್ಮ ಸಂಪರ್ಕಗಳಿಗೆ ನಿಮ್ಮ ಸಂಖ್ಯೆಯನ್ನು ಪ್ರದರ್ಶಿಸಲು ನೀವು ಬಯಸಿದರೆ My contacts ಅನ್ನು ಆಯ್ಕೆಮಾಡಿ.

ಹಂತ:5 ನಿಮ್ಮ ಸಂಪರ್ಕ ಸಂಖ್ಯೆಯನ್ನು ಸಂಪೂರ್ಣವಾಗಿ ಮರೆಮಾಡಲು ನೀವು ಬಯಸಿದರೆ Nobody ಆಯ್ಕೆ ಮಾಡಿ.

ಟೆಲಿಗ್ರಾಮ್‌ನಲ್ಲಿ ನಿಮ್ಮ ಆನ್‌ಲೈನ್ ಮತ್ತು ಲಾಸ್ಟ್‌ ಸೀನ್‌ ಹೈಡ್‌ ಮಾಡುವುದು ಹೇಗೆ?

ಟೆಲಿಗ್ರಾಮ್‌ನಲ್ಲಿ ನಿಮ್ಮ ಆನ್‌ಲೈನ್ ಮತ್ತು ಲಾಸ್ಟ್‌ ಸೀನ್‌ ಹೈಡ್‌ ಮಾಡುವುದು ಹೇಗೆ?

ಹಂತ:1 ಟೆಲಿಗ್ರಾಮ್ ಅನ್ನು ತೆರೆಯಿರಿ

ಹಂತ:2 ಗೌಪ್ಯತೆ ಮತ್ತು ಸುರಕ್ಷತೆಯನ್ನು ಆಯ್ಕೆಮಾಡಿ

ಹಂತ:4 Nobody ಸೆಲೆಕ್ಟ್‌ ಮಾಡಿ> ಅಪ್ಲೇ ಮಾಡಿ

ಈ ಮೂಲಕ ನೀವು ನಿಮ್ಮ ಲಾಸ್ಟ್‌ ಸೀನ್‌ ಮತ್ತು ಆನ್‌ಲೈನ್‌ ಸೀನ್‌ ಅನ್ನು ಬೇರೆಯವರು ನೋಡದಂತೆ ಹೈಡ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
How To hide your online and last seen status from users on Telegram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X