ಆನ್‌ಲೈನ್‌ ಮೂಲಕ ರೇಷನ್ ಕಾರ್ಡ್‌ನಲ್ಲಿನ ತಿದ್ದುಪಡಿ ಮಾಡುವುದು ಹೇಗೆ?

|

ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ, ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರಿಗೂ ಆಹಾರ ಧಾನ್ಯಗಳನ್ನು ವಿತರಿಸಲು ಪಡಿತರ ಚೀಟಿ ವ್ಯವಸ್ಥೆ ಮಾಡಿದೆ. ಆದ್ರೆ ಪಡಿತರಿ ಚೀಟಿ ಪಡೆಯುವುದು, ತಿದ್ದುಪಡಿ ಮಾಡಿಸಲು ಕಛೇರಿಗೆ ಓಡಾಡುವುದೆಂದರೇ ತಲೆಬಿಸಿಯೇ ಸರಿ. ಆದರೆ ಆನ್‌ಲೈನ್‌ ಮೂಲಕವೇ ಪಡಿತರ ಚೀಟಿ ಪಡೆಯುವುದಕ್ಕೆ ಅವಕಾಶ ನಿಡಲಾಗಿದೆ. ಅದೇ ರೀತಿ ಪಡಿತರ ಚೀಟಿಯಲ್ಲಿ ಏನಾದರೂ ತಿದ್ದುಪಡಿಗಳು ಮಾಡುವುದಿದ್ದರೇ, ಆನ್‌ಲೈನ್‌ ಮೂಲಕ ಮಾಡಲು ಅವಕಾಶ ಒದಗಿಸಲಾಗಿದೆ.

ರೇಷನ್ ಕಾರ್ಡ್‌

ಹೌದು, ರೇಷನ್ ಕಾರ್ಡ್‌ ಆಹಾರ ಧಾನ್ಯಗಳನ್ನು ಪಡೆಯಲು ಅಗತ್ಯ ಇದ್ದು, ಹಾಗೆಯೇ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ರೇಷನ್ ಕಾರ್ಡ್‌ ದಾಖಲೆಯಾಗಿಯೂ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಪಡಿತರ ಚೀಟಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದರೇ ಆನ್‌ಲೈನ್‌ ಮೂಲಕ ಸರಿಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ಇರುವ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದು ಅಥವಾ ಇರುವ ಸದಸ್ಯರನ್ನು ಕಡಿಮೆ ಮಾಡುವುದನ್ನು ಸಹ ಆನ್‌ಲೈನ್‌ ಮೂಲಕ ಮಾಡಬಹುದಾಗಿದೆ.

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ

ಹಂತ 1: ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗುವುದು https://ahara.kar.nic.in/home.aspx

ಹಂತ 2: ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳು ಆಯ್ಕೆ ಕಾಣುವಿರಿ. ಅಲ್ಲಿ ತಿದ್ದುಪಡಿಗೆ ವಿನಂತಿ ಆಯ್ಕೆ ಕಾಣಿಸುತ್ತದೆ.

ಹಂತ 3: ನಂತರ ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ.

ಹಂತ 4

ಹಂತ 4: ಅಲ್ಲಿನ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದು.

ಹಂತ 5: ಆ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡುವುದು.

ಹಂತ 6: ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್‌ಮೀಟ್) ಸಲ್ಲಿಸ ಮಾಡುವುದು.

ಹಂತ 7

ಹಂತ 7: ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ.

ಹಂತ 8: ನೋಂದಣಿ ಸಂಖ್ಯೆ ಮೂಲಕ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.

ಹಂತ 9: ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Most Read Articles
Best Mobiles in India

English summary
Ration card is a mandatory document to every person in India and every state government will maintain a department to manage after all the issues related to the ration card.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X