ಕೇವಲ ಆಧಾರ್‌ ಕಾರ್ಡ್‌ ನಂಬರ್‌ ಬಳಸಿಕೊಂಡು ಹಣವನ್ನು ಕಳುಹಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ನಿಮ್ಮ ಬಳಿ ಯಾವುದೇ ಕಾರ್ಡ್‌ ಇಲ್ಲದೆ ಹೋದರೂ ಕೂಡ ಯುಪಿಐ ಪಾವತಿ ಮೂಲಕ ಹಣ ಕಳುಹಿಸುವುದು ಸುಲಭ. ಇದೇ ಕಾರಣಕ್ಕೆ ಹೆಚ್ಚಿನ ಜನರು ಯುಪಿಐ ಪಾವತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಒಂದು ವೇಳೆ ನೀವು UPI ಪಾವತಿಯನ್ನು ಹೊಂದಿಲ್ಲದಿದ್ದರೆ, ಆಧಾರ್‌ ಕಾರ್ಡ್‌ ಬಳಸುವ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ. ಡಿಜಿಟಲ್ ಪಾವತಿ ಮಾಡುವುದಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸುವುದಕ್ಕೂ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಆಧಾರ್‌

ಹೌದು, ನೀವು ನಿಮ್ಮ ಆಧಾರ್‌ ಕಾರ್ಡ್‌ ಬಳಸುವ ಮೂಲಕವೂ ಹಣವನ್ನು ಪಾವತಿಸಬಹುದಾಗಿದೆ. ನೀವು BHIM ಅಪ್ಲಿಕೇಶನ್‌ನಲ್ಲಿ ಆಧಾರ್ ಬಳಸಿ ಹಣವನ್ನು ಕಳುಹಿಸುವ ಆಯ್ಕೆಯನ್ನು UIDAI ಒದಗಿಸಿದೆ. ನೀವು ಹಣ ಕಳುಹಿಸುವುದನ್ನು ಸ್ವೀಕರಿಸುವವರು ಯಾವುದೇ ಫೋನ್ ಅಥವಾ UPI ವಿಳಾಸವನ್ನು ಹೊಂದಿಲ್ಲದಿದ್ದರೂ ಸಹ ಈ ಆಯ್ಕೆಯ ಮೂಲಕ ಹಣ ಕಳುಹಿಸಬಹುದು. ಹಾಗಾದ್ರೆ ಆಧಾರ್‌ಕಾರ್ಡ್‌ ಬಳಸಿಕೊಂಡು ಹಣವನ್ನು ಪಾವತಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಡಿಜಿಟಲ್ ಪಾವತಿ ಮಾಡುವುದು ಹೇಗೆ?

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಡಿಜಿಟಲ್ ಪಾವತಿ ಮಾಡುವುದು ಹೇಗೆ?

ಆಧಾರ್‌ ಸಂಖ್ಯೆ ಬಳಸಿಕೊಂಡು ಹಣ ಪಾವತಿಸಲು BHIM ಅಪ್ಲಿಕೇಶನ್‌ ಅವಕಾಶ ನೀಡಿದೆ. ಇದಕ್ಕಾಗಿ ನೀವು ಮೊದಲಿಗೆ BHIM ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನಂತರ, ಬಳಕೆದಾರರು ಫಲಾನುಭವಿಗಳ ಆಯ್ಕೆಗೆ ಹೋಗಬೇಕಾಗುತ್ತದೆ. ಇದರಲ್ಲಿ ನೀವು ಹಣ ಸ್ವೀಕರಿಸುವವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು ಕೇಳಲಾಗುತ್ತದೆ. ಇದಾದ ಮೇಲೆ ಆಧಾರ್ ಲಿಂಕ್ ಮಾಡುವಿಕೆಯನ್ನು ಪರಿಶೀಲಿಸುತ್ತದೆ ಹಾಗೂ ಫಲಾನುಭವಿಯ ವಿಳಾಸವನ್ನು ತುಂಬುತ್ತದೆ. ಇದೆಲ್ಲವೂ ಮುಗಿದ ನಂತರ ನೀವು ಸುಲಭವಾಗಿ ಹಣವನ್ನು ಕಳುಹಿಸಬಹುದಾಗಿದೆ.

ಹಣ ಸ್ವೀಕರಿಸುವವರು ಅನೇಕ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಸಂಪರ್ಕಿಸಿದರೆ ಏನಾಗುತ್ತದೆ?

ಹಣ ಸ್ವೀಕರಿಸುವವರು ಅನೇಕ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಸಂಪರ್ಕಿಸಿದರೆ ಏನಾಗುತ್ತದೆ?

ಒಂದು ವೇಳೆ ನೀವು ಹಣ ಕಳುಹಿಸುವಾಗ ಹಣ ಪಡೆಯುವ ಫಲಾನುಭವಿ ಅನೇಕ ಬ್ಯಾಂಕ್‌ ಖಾತೆಗಳನ್ನು ಆಧಾರ್‌ಗೆ ಕನೆಕ್ಟ್‌ ಮಾಡಿದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಸಹಜ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಏಖೆಂದರೆ ಹಣ ಸ್ವೀಕರಿಸುವ ಫಲಾನುಭವಿ ಆಧಾರ್-ಆಧಾರಿತ ಕ್ರೆಡಿಟ್‌ಗಳನ್ನು ಸ್ವೀಕರಿಸಲು ಯಾವ ಬ್ಯಾಂಕ್‌ ಖಾತೆ ಆಯ್ಕೆ ಮಾಡಿರುತ್ತಾರೋ ಆ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುತ್ತದೆ ಎಂದು UIDAI ದೃಢಪಡಿಸಿದೆ. ಇನ್ನು ಪಾವತಿಗಳನ್ನು ಸ್ವೀಕರಿಸಲು ಆಧಾರ್ ಪೇ ಪಿಒಎಸ್ ಬಳಸುವ ವ್ಯಾಪಾರಿಗಳು ಡಿಜಿಟಲ್ ಪಾವತಿಯನ್ನು ಸ್ವೀಕರಿಸಲು ನಿಮ್ಮ ಆಧಾರ್ ಸಂಖ್ಯೆ ಮತ್ತು ಫಿಂಗರ್‌ಪ್ರಿಂಟ್ ಅನ್ನು ಸಹ ಬಳಸಬಹುದಾಗಿದೆ.

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಏನಾಗುತ್ತದೆ?

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಏನಾಗುತ್ತದೆ?

ಇನ್ನು ನೀವು ಕೂಡ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡಿದ್ದರೆ ನೀವು ಪಾವತಿಸಲು ಬಯಸುವ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡುವ ಆಯ್ಕೆಯನ್ನು ನಿಮಗೆ ನೀಡಲಾಗುತ್ತದೆ. ನೀವು ಅಂತಿಮವಾಗಿ ಬ್ಯಾಂಕ್ ಅನ್ನು ನಿರ್ಧರಿಸುವ ಆಯ್ಕೆ ನಿಮ್ಮದೆ ಆಗಿದೆ. ಆದರಿಂ ಪ್ರತಿ ಬಾರಿ ನೀವು ಈ ವಿಧಾನವನ್ನು ಬಳಸಿಕೊಂಡು ಪಾವತಿಯನ್ನು ಮಾಡಬಹುದಾಗಿದೆ.

ಆಧಾರ್ ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಪರಿಶೀಲಿಸುವುದು ಹೇಗೆ?

ಆಧಾರ್ ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಪರಿಶೀಲಿಸುವುದು ಹೇಗೆ?

ಇನ್ನು ನೀವು ನಿಮ್ಮ ಆಧಾರ್‌ ಕಾರ್ಡ್‌ ಮೂಲಕ ಆದಾಯ ತೆರಿಗೆ ರಿಟರ್ನ್ಸ್‌ ಮಾಡುವುದಕ್ಕೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನೀವು ಅನುಸರಿಸಬೇಕಾದ ನಿಯಮಗಳು ಈ ಕೆಳಗಿನಂತಿವೆ.
ಹಂತ:1 ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ.
ಹಂತ:2 ನಂತರ ಕ್ವಿಕ್‌ ಲಿಂಕ್‌ಗಳ ವಿಭಾಗದಲ್ಲಿ, 'ಲಿಂಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ನೆಕ್ಸ್ಟ್‌ ಪೇಜ್‌ನಲ್ಲಿ , ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ನಿಮ್ಮ ಹೆಸರು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಎಲ್ಲಾ ಬಾಕ್ಸ್‌ಗಳನ್ನು ಪರಿಶೀಲಿಸಿ ಮತ್ತು 'ಲಿಂಕ್ ಆಧಾರ್' ಬಟನ್ ಕ್ಲಿಕ್ ಮಾಡಿ.
ಹಂತ:4 ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು 'ಇ-ವೆರಿಫೈ ರಿಟರ್ನ್' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ನಿಮ್ಮ ಪ್ಯಾನ್, ಮೌಲ್ಯಮಾಪನ ವರ್ಷ, ಐಟಿಆರ್ ಫೈಲಿಂಗ್ ಸಮಯದಲ್ಲಿ ಸ್ವೀಕರಿಸಿದ ಸ್ವೀಕೃತಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ.

ಪರಿಶೀಲನೆ

ಹಂತ:6 ಸ್ಕ್ರೀನ್‌ ಮೇಲಿನ ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ಕೊನೆಯಲ್ಲಿ, ವೆಬ್ ಪೇಜ್‌ ಅಪ್‌ಲೋಡ್ ಮಾಡಿದ ರಿಟರ್ನ್‌ಗಳ ವಿವರಗಳನ್ನು ಪ್ರದರ್ಶಿಸುತ್ತದೆ.
ಹಂತ:7 ಈಗ, ITR ಇ-ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ಪುಟದಲ್ಲಿ ಇ-ವೆರಿಫೈ ಕ್ಲಿಕ್ ಮಾಡಿ.
ಹಂತ:8 ನಂತರ ನಿಮಗೆ ಇ-ಪರಿಶೀಲನೆ ಕೋಡ್ (EVC) ಅನ್ನು ಕ್ರಿಯೆಟ್‌ ಮಾಡಲು ಹಲವು ವಿಧಾನಗಳು ಕಾಣಲಿವೆ. ಈ ಪಟ್ಟಿಯಲ್ಲಿ ನೆಟ್ ಬ್ಯಾಂಕಿಂಗ್, ಪೂರ್ವ ಮೌಲ್ಯೀಕರಿಸಿದ ಬ್ಯಾಂಕ್ ಖಾತೆ, ಪೂರ್ವ ಮೌಲ್ಯೀಕರಿಸಿದ ಡಿಮ್ಯಾಟ್ ಖಾತೆ, ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ ಅಥವಾ ಆಧಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:9 ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ನಿಮ್ಮ ರಿಟರ್ನ್ ಅನ್ನು ಇ-ಪರಿಶೀಲಿಸಲು OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಒತ್ತಿರಿ.

ಒಮ್ಮೆ ನೀವು OTP ಅನ್ನು ಸಲ್ಲಿಸಿದ ನಂತರ, ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ನಂತರ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿ. ಈ ದೃಢೀಕರಣ ಸಂದೇಶವನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿಯೂ ನಿಮಗೆ ಕಳುಹಿಸಲಾಗುತ್ತದೆ. ಈ ಮೂಲಕ ಅಧಾರ್‌ ಕಾರ್ಡ್‌ ಬಳಸಿ ಆದಾಯ ತೆರಿಗೆ ರಿಟರ್ನ್ಸ್‌ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
If you don’t have internet, you can still use UPI, and if you don’t even have UPI, there’s a way where users can just use the Aadhaar card number to send money digitally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X