ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

|

ಪ್ರಸ್ತುತ ತಂತ್ರಜ್ಞಾನವು ಪ್ರಪಂಚವನ್ನು ಚಿಕ್ಕದಾಗಿಸಿದ್ದು, ಇಲ್ಲಿ ಯಾವುದು ಅಸಾಧ್ಯ ಎನ್ನುವಂತಾಗಿದೆ. ಈ ದೆಸೆಯಲ್ಲಿ ಗೂಗಲ್‌ ಒಡೆತನದ ಯೂಟ್ಯೂಬ್‌ ತಾಣದಲ್ಲಿ ಬಳಕೆದಾರರು ಸ್ವಂತ ಚಾನಲ್ ಶುರು ಮಾಡಬಹುದಾಗಿದ್ದು, ಈ ಮೂಲಕ ತಮ್ಮ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯಿಸಲು ಒಳ್ಳೆಯ ವೇದಿಕೆಯಾಗಿದೆ. ಇದರೊಂದಿಗೆ ಯೂಟ್ಯೂಬ್‌ನಲ್ಲಿ ಹಣವನ್ನು ಗಳಿಸಬಹುದಾಗಿದೆ ಎನ್ನುವುದು ನಿಮಗೆ ಗೊತ್ತಿರುವ ವಿಚಾರವೇ.

ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ಹೌದು, ಸದ್ಯ ಯೂಟ್ಯೂಬ್‌ನಲ್ಲಿ ಅನೇಕ ಬಳಕೆದಾರರು ಚಾನಲ್‌ ಮಾಡಿ, ಜಾಹಿರಾತುಗಳ ಮೂಲಕ ಹಣಗಳಿಸುತ್ತಿದ್ದಾರೆ. ಆದರೆ ಚಾನಲ್ ಶುರು ಮಾಡಿದ ಎಲ್ಲರಿಗೂ ಜಾಹಿರಾತುಗಳು ಬರುವುದಿಲ್ಲ. ಚಾನಲ್‌ನ ವಿಡಿಯೊಗಳು ಹೆಚ್ಚಿನ ವೀಕ್ಷಣೆಯನ್ನು ಪಡೆದಿದ್ದು, ಚಂದಾದಾರರ ಸಂಖ್ಯೆಯು ಹೆಚ್ಚಿದ್ದರೇ ಜಾಹಿರಾತುಗಳು ಬರುತ್ತವೆ. ಆದರೆ ಚಾನಲ್‌ ಪಾಪ್ಯುಲರ್‌ ಇಲ್ಲದ್ದಿದ್ದರೂ ಯೂಟ್ಯೂಬ್‌ನಲ್ಲಿ ಹಣಗಳಿಸಬಹುದಾಗಿದೆ.

ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ಯೂಟ್ಯೂಬ್‌ ಚಾನಲ್‌ ಹಲವರಿಗೆ ಫುಲ್‌ ಟೈಮ್‌ ಜಾಬ್‌ ಆಗಿದ್ದು, ಆದ್ರೆ ಅನೇಕರಿಗೆ ಪಾರ್ಟ್‌ಟೈಮ್‌ ಜಾಬ್‌ ತರಹ ಕೈ ಹಿಡಿದಿದೆ. ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕಾಯ್ದುಕೊಳ್ಳಬೇಕಿದೆ. ಹಾಗಾದರೇ ಯೂಟ್ಯೂಬ್‌ ಮೂಲಕ ಹೇಗೆ ಹಣಗಳಿಸಬಹದು ಮತ್ತು ಜಾಹಿರಾತಿಗಾಗಿ ಯಾವೆಲ್ಲಾ ಮಾರ್ಗಗಳಿವೆ ಎನ್ನುವ ಕುರಿತು ಕಿರು ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಮುಂದೆ ಓದಿರಿ.

ಓದಿರಿ : 'ಬ್ರೆವ್‌' ಬ್ರೌಸರ್‌ ಎಂಟ್ರಿಯಿಂದ 'ಗೂಗಲ್‌ ಕ್ರೋಮ್‌'ಗೆ ಶುರುವಾಗಿದೆ ಕಂಟಕ!

ಚಾನಲ್‌ ಆರಂಭಿಸಿ

ಚಾನಲ್‌ ಆರಂಭಿಸಿ

ಗೂಗಲ್‌ ಮಾಲೀಕತ್ವದ ಯೂಟ್ಯೂಬ್‌ ವಿಡಿಯೊ ತಾಣದಲ್ಲಿ ಯಾರಾದರೂ ಚಾನಲ್ ಆರಂಭಿಸಬಹುದಾಗಿದ್ದು, ಈ ಸೇವೆಯು ಉಚಿತವಾಗಿದೆ. ಡಾನ್ಸ್, ಸಿಂಗಿಂಗ್, ಅಡುಗೆ, ಹಾಸ್ಯ, ಡ್ರಾಯಿಂಗ್, ಮಾಹಿತಿ, ಹೀಗೆ ಕ್ರಿಯೆಟಿವಿಟಿಯ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸದ ಚಾನಲ್ ಶುರು ಮಾಡುವುದು. ಉತ್ತಮ ವಿಡಿಯೊಗಳ ಮೂಲಕ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯ. ಆದರೆ ಯೂಟ್ಯೂಬ್‌ ನಿಯಮಗಳನ್ನು ಪಾಲಿಸಬೇಕು.

ಆಡ್ಸೆನ್ಸ್‌ (AdSense)

ಆಡ್ಸೆನ್ಸ್‌ (AdSense)

ಯೂಟ್ಯೂಬ್‌ನಲ್ಲಿ ಹಣಗಳಿಸಲು ಗೂಗಲ್‌ನ 'ಆಡ್‌ಸೆನ್ಸ್‌' ಒನ್‌ ಸ್ಟಾಪ್‌ ಆಗಿದ್ದು, ಜಾಹಿರಾತು ಪಡೆಯಲು ಈ ತಾಣದ ಅತ್ಯುತ್ತಮ ಎನ್ನಬಹುದಾಗಿದೆ. ಆಡ್‌ಸೆನ್ಸ್‌ ಮೂಲಕ ಜಾಹಿರಾತು ಪಡೆಯಲು ಬಳಕೆದಾರರ ಯೂಟ್ಯೂಬ್‌ ಚಾನಲ್‌ ಜನಪ್ರಿಯವಾಗಿರಬೇಕು. ಆಗ ವಿಡಿಯೊಗಳಲ್ಲಿ ಚಿಕ್ಕಪುಟ್ಟ್ ಜಾಹಿರಾತುಗಳು ನೀಡುತ್ತಾರೆ. ಅದಕ್ಕೂ ಮೊದಲು ಯೂಟ್ಯೂಬ್ ಪಾರ್ಟನರ್‌ ಪ್ರೋಗ್ರಾಂಗೆ ಸೇರಬೇಕು. ಮತ್ತು ಅಡ್‌ಸೆನ್ಸ್‌ನ ನಿಯಮಗಳನ್ನು ಪಾಲಿಸಬೇಕು. ಹೆಚ್ಚಿನ ಮಾಹಿತಿಗೆ YouTube Partner Program policies.

ಓದಿರಿ : ಬರಲಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಫೋನ್‌ 'G8S ThinQ'!..ಅಚ್ಚರಿಯ ಡಿಸ್‌ಪ್ಲೇ!

ಮರ್ಚಂಡೈಸ್ ಶೆಲ್ಫ್ (Merchandise Shelf)

ಮರ್ಚಂಡೈಸ್ ಶೆಲ್ಫ್ (Merchandise Shelf)

ಈ ಮರ್ಚಂಡೈಸ್ ಶೆಲ್ಫ್ ತಾಣವು ಯೂಟ್ಯೂಬ್‌ ಮತ್ತು ಟೀಸ್ಪ್ರಿಂಗ್‌ ಸಂಸ್ಥೆಯ ನಡುವಿನ ಸಂಯೋಜನೆಯಾಗಿದೆ. ಟೀಸ್ಪ್ರಿಂಗ್‌ ಎನ್ನುವುದು ಟೀಶರ್ಟ್, ಕಾಫಿ ಮಗ್‌ ಸೇರಿದಂತೆ ಇತರೆ ವಸ್ತುಗಳ ಮೇಲೆ ಪ್ರೊಮೋಶನಲ್‌ ಜಾಹಿರಾತು ಪ್ರಿಂಟ್‌ ಮಾಡುವ ಸಂಸ್ಥೆಯಾಗಿದೆ. ಇಲ್ಲಿ ಸೇರಲು ಬಳಕೆದಾರರು 10,000 ಚಂದಾದಾರರನ್ನು ಹೊಂದಿರಲೇಬೇಕು ಮತ್ತು ಆಯ್ದ ರಾಷ್ಟ್ರಗಳಿಲ್ಲಿನ ಬಳಕೆದಾರರಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ Community Guideline strikes

ಇತರೆ ಮರ್ಚಂಡೈಸ್ (Other merchandise)

ಇತರೆ ಮರ್ಚಂಡೈಸ್ (Other merchandise)

ಬಳಕೆದಾರರ ಚಂದಾದಾರರ ಸಂಖ್ಯೆ 10000 ದಾಟಿರದಿದ್ದರೂ, ಹಲವಾರು ಬ್ಯ್ರಾಂಡೆಡ್ ಉತ್ಪನ್ನಗಳ ಜಾಹಿರಾತು ಲಭ್ಯವಾಗಲಿದೆ. ಅವುಗಳಲ್ಲಿ ಸ್ಪ್ರೇಡ್‌ಶಾಪ್‌ (Spreadshop) ಆಗಿದ್ದು, ಇವು ಯೂಟ್ಯೂಬ್‌ ಜೊತೆಗೆ ಸಂಯೋಜನೆಗೊಂಡಿರುವುದಿಲ್ಲ. ಬಳಕೆದಾರರು ಲಿಂಕ್‌ ಮೂಲಕ ಕಾಂಟ್ಯಾಂಕ್ಟ್‌ ಮಾಡಿಕೊಳ್ಳಬೇಕು. ಬಳಕೆದಾರರಿಗೆ ಒಂದು ಮಾರುಕಟ್ಟೆ ಒದಗಿಸಿಕೊಡುತ್ತಾರೆ.

ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

ಅಫೀಲೆಟ್‌ ಪ್ರೋಗ್ರಾಂ (Affiliate programs)

ಅಫೀಲೆಟ್‌ ಪ್ರೋಗ್ರಾಂ (Affiliate programs)

ಬಳಕೆದಾರರು ಯೂಟ್ಯೂಬ್‌ ವಿಡಯೊದಲ್ಲಿ ಪ್ಯೂಚರ್‌ ಪ್ರೊಡಕ್ಟ್ಸ್‌ಗಳ (ಉದಾಹರಣೆಗೆ ಮೇಕ್‌ಅಪ್‌ ಟುಟೋರಿಯಲ್) ಬಗ್ಗೆ ಇದ್ದರೇ ಈ ಅಫೀಲೆಟ್‌ ಪ್ರೋಗ್ರಾಂ ಸೇರಬಹುದಾಗಿದೆ. Amazon Affiliates ಬೆಸ್ಟ್‌ ಅಫೀಲೆಟ್‌ ಪ್ರೋಗ್ರಾಂ ಎನಿಸಿದೆ. ಸೇರ್ಪಡೆ ಆದ ಬಳಿಕ ಬಳಕೆದಾರ ಯೂಟ್ಯೂಬ್ ವಿಡಿಯೊದಲ್ಲಿ ಜಾಹಿರಾತು ನೀಡಲಾಗುತ್ತದೆ ಆ ಜಾಹಿರಾತು ವೀಕ್ಷಿಸಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿದರೇ ಅಲ್ಪ ಕಮಿಷನ್ ದೊರೆಯುತ್ತದೆ.

ಓದಿರಿ : ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌!..511GB ಡೇಟಾ ಉಚಿತ!

Most Read Articles
Best Mobiles in India

English summary
Making money from YouTube isn't as hard as you might expect, and there are lots of ways to go about it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more