Just In
Don't Miss
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Movies
ಶಮಂತ್ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ ಗ್ರೂಪ್ಗಳನ್ನು ಸಿಗ್ನಲ್ ಆಪ್ಗೆ ವರ್ಗಾಯಿಸುವುದು ಹೇಗೆ ಗೊತ್ತಾ?
ವಿಶ್ವದ ಜನಪ್ರಿಯ ಇನ್ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಇತ್ತೀಚಿಗಷ್ಟೆ ಹೊಸ ರೂಲ್ಸ್ಗಳನ್ನು ಸ್ವೀಕರಿಸುವಂತೆ ತಿಳಿಸಿದೆ. ಇಲ್ಲದಿದ್ದರೇ ವಾಟ್ಸಾಪ್ ಖಾತೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ. ವಾಟ್ಸಾಪ್ನ ಈ ನೀತಿಯಿಂದ ಬಳಕೆದಾರರು ಅಸಮಾಧಾನ ತೋರುತ್ತಿದ್ದಾರೆ. ಏಕೆಂದರೆ ಮೆಸೇಜಿಂಗ್ ಪ್ಲಾಟ್ಫಾರ್ಮ್ ಇದು ಬಳಕೆದಾರರಿಂದ ಯಾವ ರೀತಿಯ ಡೇಟಾವನ್ನು ಸಂಗ್ರಹಿಸುತ್ತದೆ ಎಂಬುದನ್ನು ವಿವರಗಳಲ್ಲಿ ಬಹಿರಂಗಪಡಿಸಿದೆ. ಹೀಗಾಗಿ ಅತೃಪ್ತ ಬಳಕೆದಾರರು ಈಗ ಸಿಗ್ನಲ್ ಮತ್ತು ಟೆಲಿಗ್ರಾಮ್ನಂತಹ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಿಗೆ ಮುಖ ಮಾಡುತ್ತಿದ್ದಾರೆ.

ಹೌದು, ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ನ ಹೊಸ ಗೌಪ್ಯತೆ ನೀತಿಯನ್ನು ಘೋಷಿಸಿದಾಗಿನಿಂದ, ಬಳಕೆದಾರರು ಸಿಗ್ನಲ್ ಮೆಸೇಜಿಂಗ್ ಆಪ್ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಇತ್ತೀಚಿಗಷ್ಟೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ನಲ್ಲಿ ತನ್ನ ಫಾಲೋವರ್ಸ್ಗಳನ್ನು 'ಸಿಗ್ನಲ್ ಆಪ್ ಬಳಸಿ' ಎಂದು ಕೇಳಿಕೊಂಡರು. ಹೀಗಾಗಿ ಸದ್ಯ ಸಿಗ್ನಲ್ ಆಪ್ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸಿಗ್ನಲ್ ಆಪ್ ಈಗಾಗಲೇ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ಎರಡರಲ್ಲೂ ಹೆಚ್ಚು ಡೌನ್ಲೋಡ್ ಮಾಡಲಾದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಇನ್ನು ವಾಟ್ಸಾಪ್ ಗ್ರೂಪ್ಗಳನ್ನು ಸಿಗ್ನಲ್ ಆಪ್ ನಲ್ಲಿ ಮುಂದುವರಿಸುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಾಟ್ಸಾಪ್ ಗ್ರೂಪ್ ಚಾಟ್ಗಳನ್ನು ಸಿಗ್ನಲ್ ಅಪ್ಲಿಕೇಶನ್ಗೆ ವರ್ಗಾಯಿಸಲು ಈ ಕ್ರಮ ಅನುಸರಿಸಿ:
ಹಂತ 1: ಮೊದಲು ನಿಮ್ಮ ಆಂಡ್ರಾಯ್ಡ್ನಲ್ಲಿ ಸಿಗ್ನಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ಗೂಗಲ್ ಪ್ಲೇ ಸ್ಟೋರ್ನಿಂದ ಐಫೋನ್ ಮತ್ತು ಆಪಲ್ ಆಪ್ ಸ್ಟೋರ್ ಅನ್ನು ಕ್ರಮವಾಗಿ ಡೌನ್ಲೋಡ್ ಮಾಡಿ.
ಹಂತ 2: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ ಸ್ಥಾಪಿಸಿದ ನಂತರ, ಅಪ್ಲಿಕೇಶನ್ ಅನ್ನು ಹೊಂದಿಸಿ. ಪ್ರಕ್ರಿಯೆಯು ತುಂಬಾ ಸುಲಭ, ನಿಮ್ಮ ಸಂಖ್ಯೆಯನ್ನು ಸೇರಿಸಿ, OTP ಮತ್ತು ಹೆಸರು ಮತ್ತು ಇತರ ವಿವರಗಳನ್ನು ನಮೂದಿಸಿ.
ಹಂತ 3: ಆನಂತರ, ಮೇಲಿನ ಬಲ ಭಾಗದಲ್ಲಿರುವ ಮೂರು ಲಂಬ ಚುಕ್ಕೆಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ಕ್ರಿಯೆಯ ಮೆನುವನ್ನು ಆರಿಸಬೇಕಾಗುತ್ತದೆ. ಆನಂತರ ‘ಹೊಸ ಗುಂಪು' ಆಯ್ಕೆಯನ್ನು ಆರಿಸಿ.

ಹಂತ 4: ತದ ನಂತರ, ಗುಂಪನ್ನು ಹೊಂದಿಸಲು ನೀವು ಕಾಂಟ್ಯಾಕ್ಟ್ ಸೇರಿಸುವ ಅಗತ್ಯವಿದೆ.
ಹಂತ 5: ಮುಂದುವರಿಸಲು ನೀವು ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಬೇಕಿರುತ್ತದೆ ಮತ್ತು ನಂತರ ಎರೋ ಗುರುತಿನ ಮೇಲೆ ಟ್ಯಾಪ್ ಮಾಡಿ.
ಹಂತ 6: ಗುಂಪನ್ನು ಹೆಸರಿಸಿ ಮತ್ತು ಕ್ರಿಯೆಟ್ ಆಯ್ಕೆ ಕ್ಲಿಕ್ ಮಾಡಿ.
ಹಂತ 7: ಗುಂಪು ವಿಂಡೋದೊಳಗೆ ಮೇಲಿನ ಬಲ ಭಾಗದಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

ಹಂತ 8: ಆ ನಂತರ, ‘ಗುಂಪು ಸೆಟ್ಟಿಂಗ್ಗಳು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ‘ಗ್ರೂಪ್ ಲಿಂಕ್' ಟ್ಯಾಪ್ ಮಾಡಿ ಮತ್ತು ಆನ್ ಮಾಡಿ.
ಹಂತ 9: - ನಂತರ ಗುಂಪಿಗೆ ಹಂಚಿಕೊಳ್ಳಬಹುದಾದ ಲಿಂಕ್ ಪಡೆಯಲು ‘ಹಂಚಿಕೊಳ್ಳಿ' ಟ್ಯಾಪ್ ಮಾಡಿ.
ಹಂತ 10: ಆಮೇಲೆ ನೀವು ಲಿಂಕ್ ಅನ್ನು ನಕಲಿಸಬಹುದು ಮತ್ತು ಅದನ್ನು ಗುಂಪಿನಲ್ಲಿರುವ WhatsApp ಕಾಂಟ್ಯಾಕ್ಟ್ ಗಳಿಗೆ ಹಂಚಿಕೊಳ್ಳಬಹುದು.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190