ಪದೇ ಪದೇ ವಾಟ್ಸಾಪ್‌ನಿಂದ ಫೋನ್ ಮೆಮೊರಿ ಭರ್ತಿ ಆಗದಂತೆ ಮಾಡಲು ಹೀಗೆ ಮಾಡಿ!

|

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಾಪ್‌ ಟೆಕ್ಸ್ಟ್ ಮೆಸೆಜ್ ಜೊತೆಗೆ ಫೋಟೊ, ವಿಡಿಯೊ, ವಾಯಿಸ್‌ ಮೆಸೆಜ್‌ ಹಂಚಿಕೊಳ್ಳಲು ಅತ್ಯುತ್ತಮ ತಾಣವಾಗಿದೆ. ವಾಟ್ಸಾಪ್‌ ಆಪ್‌ ಬರುವ ಮೀಡಿಯಾ ಫೈಲ್‌ಗಳ ಮೆಸೆಜ್‌ ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದನ್ನು ತಡೆಯಲು ಆಯ್ಕೆ ಇದ್ದು, ಆದರೆ ಬಹುತೇಕರು ಈ ಆಯ್ಕೆ ಬಳಸುವುದೇ ಇಲ್ಲ.

ಪದೇ ಪದೇ ವಾಟ್ಸಾಪ್‌ನಿಂದ ಫೋನ್ ಮೆಮೊರಿ ಭರ್ತಿ ಆಗದಂತೆ ಮಾಡಲು ಹೀಗೆ ಮಾಡಿ!

ಹೌದು, ವಾಟ್ಸಾಪ್‌ ಆಪ್‌ನಲ್ಲಿ ಫೋಟೊ, ವಿಡಿಯೊ, ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್‌ ಆಗುವುದನ್ನು ನಿಲ್ಲಿಸಬಹುದಾಗಿದೆ. ಅದಕ್ಕಾಗಿ ವಾಟ್ಸಾಪ್‌ನ ಸೆಟ್ಟಿಂಗ್‌ನಲ್ಲಿ ಆಯ್ಕೆಗಳನ್ನು ನೀಡಿದೆ. ವಾಟ್ಸಾಪ್‌ ಆಪ್‌ನಲ್ಲಿ ಬರುವ ಎಲ್ಲ ಫೋಟೊ ಮತ್ತು ವಿಡಿಯೊಗಳ ಅಗತ್ಯ ಆಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ಒಂದೇ ಫೋಟೊ, ವಿಡಿಯೊ ಬೇರೆ ಬೇರೆ ಗ್ರೂಪ್‌ಗಳಲ್ಲಿ ಬಂದಿರುತ್ತದೆ. ಇವುಗಳು ಆಟೋ ಡೌನ್‌ಲೋಡ್ ಆಗುವುದರಿಂದ ಸುಮ್ಮನೆ ಫೋನ್ ಸ್ಟೋರೇಜ್ ಭರ್ತಿ ಆಗುತ್ತದೆ. ಹೀಗಾಗಿ ಬಳಕೆದಾರರು ಆಟೋಮ್ಯಾಟಿಕ್ ಡೌನ್‌ಲೋಡ್‌ ಆಯ್ಕೆ ಆಫ್‌ ಮಾಡಬಹುದಾಗಿದೆ.

ವಾಟ್ಸಾಪ್‌ ಅಪ್ಲಿಕೇಶನ್ ಆಪ್‌ನಲ್ಲಿ ಸ್ನೇಹಿತರಿಂದ ಹಾಗೂ ಪರಿಚಯಸ್ಥರಿಂದ ಬರುವ ಫೋಟೊ ಮತ್ತು ವಿಡಿಯೊಗಳಿಂದ ನಿಮ್ಮ ಸ್ಮಾರ್ಟ್‌ಫೋನ್ ಸ್ಟೋರೇಜ್ ತುಂಬುವ ಸಾಧ್ಯತೆಗಳಿರುತ್ತವೆ. ಆದರೆ ಆಟೋ ಡೌನ್‌ಲೋಡ್ ಆಫ್ ಮಾಡುವ ಮೂಲಕ ಹೀಗೆ ಅನಗತ್ಯ ಪೋಟೊ, ವಿಡಿಯೊಗಳಿಂದ ಸ್ಮಾರ್ಟ್‌ಫೋನ್‌ ಸ್ಟೋರೇಜ್ ತುಂಬುವುದನ್ನು ತಡೆಯಬಹುದಾಗಿದೆ. ಬಳಕೆದಾರರು ತಮಗೆ ಅಗತ್ಯ ಇದ್ದಾಗ ಮಾತ್ರ ಫೋಟೊ, ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪದೇ ಪದೇ ವಾಟ್ಸಾಪ್‌ನಿಂದ ಫೋನ್ ಮೆಮೊರಿ ಭರ್ತಿ ಆಗದಂತೆ ಮಾಡಲು ಹೀಗೆ ಮಾಡಿ!

ಆಂಡ್ರಾಯ್ಡ್‌ನಲ್ಲಿ ಆಟೋ ಆಫ್‌ ಮಾಡಲು ಈ ಹಂತಗಳನ್ನು ಅನುಸರಿಸಿ:
* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಸೆಲೆಕ್ಟ್ ಮಾಡಿರಿ
* ನಂತರ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಆನಂತರ ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ
* ಕಾಣಿಸುವ ವಿಸಿಬಲಿಟಿ ಆಯ್ಕೆಯನ್ನು ಆಫ್‌ ಮಾಡಿರಿ.

ಐಫೋನ್‌ ಬಳಕೆದಾರರು ಈ ಹಂತಗಳನ್ನು ಅನುಸರಿಸಿ:
* ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ
* ತದ ನಂತರ, ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಬಳಿಕ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ನಂತರ, ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಲುಕ್‌ ಫಾರ್ ಸೇವ್ ಟು ಕ್ಯಾಮೆರಾ ರೋಲ್
* ಅದನ್ನು ಆಫ್‌ ಮಾಡಿರಿ.

ಆಯ್ದ ನಂಬರ್‌ಗಳ ಡೌನ್‌ಲೊಡ್ ತಡೆಯಲು ಹೀಗೆ ಮಾಡಿ:
* ವಾಟ್ಸಾಪ್‌ ಆಪ್‌ ತೆರೆಯಿರಿ
* ನಂತರ, ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಬಳಿಕ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ನಂತರ ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
* ಅಲ್ಲಿ 'ಶೋ ನ್ಯೂಲಿ ಡೌನ್‌ಲೊಡೆಡ್ ಮೀಡಿಯಾ ಫ್ರಾಮ್‌ ದಿಸ್ ಚಾಟ್‌ ಇನ್ ಯೂವರ್ ಪೋನ್‌ ಗ್ಯಾಲರಿ' ಕಾಣಿಸುತ್ತದೆ
* ನಂಬರ್ ಆಯ್ಕೆ ಮಾಡಿ.

Most Read Articles
Best Mobiles in India

English summary
How to Prevent WhatsApp from Eating your Phone's Memory.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X