ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅವಶ್ಯಕ ಡಿವೈಸ್‌ ಆಗಿದ್ದು, ಪ್ರತಿಯೊಬ್ಬರಿಗೂ ಅತ್ಯಗತ್ಯ. ಆದರೆ ಸ್ಮಾರ್ಟ್‌ಪೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಸರಿಯಾಗಿ ಬರ್ತಿಲ್ಲಾ ಎನ್ನುವುದು ಬಹುತೇಕರ ಗೋಳು. ಸಾಮಾನ್ಯವಾಗಿ ರಾತ್ರಿಯಿಡಿ ಚಾರ್ಜ್‌ಹಾಕಿ ಮಲಗುವವರು ಒಂದೆಡೆಯಾದರೇ, ಮೇಲಿಂದ ಮೇಲೆ ಚಾರ್ಜ್‌ ಮಾಡುವ ಬಳಕೆದಾರರಿಗೆನು ಕಡಿಮೆ ಇಲ್ಲ. ಪೋನ್‌ ಸರಿಯಾದ ಕ್ರಮದಲ್ಲಿ ಚಾರ್ಜ್‌ ಮಾಡುವವರು ತುಂಬಾ ವಿರಳ.

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಹೌದು, ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಖಾಲಿಯಾಗುವುದು ಬಳಕೆದಾರರ ಬಳಕೆಯ ಮೇಲೆ ಅವಲಂಭಿತವಾಗಿದ್ದು, ಆದರೆ ನಿರಂತರ ಇಂಟರ್ನೆಟ್‌ ಆಧಾರಿತ ಆಪ್‌ಗಳ ಬಳಕೆ ಮತ್ತು ಗೇಮ್ಸ್‌ ಆಡುವುದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಾಗಿ ನುಂಗುತ್ತದೆ. ಇದರಿಂದಾಗಿ ಪದೇ ಪದೇ ಚಾರ್ಜ್‌ ಹಾಕಬೇಕಾಗುತ್ತದೆ. ಕೇಲವರಂತು ಪವರ್‌ಬ್ಯಾಂಕ್‌ ಮೋರೆ ಹೋಗುತ್ತಾರೆ. ಚಾರ್ಜ್‌ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಚಾರ್ಜ್‌ ನಿಲ್ಲುತ್ತಿಲ್ಲವೆಂದು ಯಾವಾಗಲೂ ಚಾರ್ಜ್‌ ಮಾಡುತ್ತಲೇ ಇರುವುದು ಒಳ್ಳೆಯದಲ್ಲಾ. ಫೋನ್‌ ಅನ್ನು ಅತೀಯಾಗಿ ಚಾರ್ಜ್‌ ಮಾಡುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಫೋನ್‌ ಚಾರ್ಜಿಂಗ್ ಕುರಿತು ಕೇಲವು ಟಿಪ್ಸ್‌ ನೀಡಲಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಅನುಸರಿಸಬೇಕಾದ ಕೇಲವು ಕ್ರಮಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

ಯಾವಾಗ ಚಾರ್ಜ್‌ ಮಾಡಬೇಕು?

ಸ್ಮಾರ್ಟ್‌ಫೋನ್‌ ಅನ್ನು ಇದೇ ಟೈಮಿನಲ್ಲಿ ಚಾರ್ಜ್‌ ಮಾಡಬೇಕೆಂದು ಯಾವುದೇ ರೂಲ್ಸ್‌ ಇಲ್ಲ. ಆದರೆ ಬ್ಯಾಟರಿ ಸಾಧ್ಯವಾದಷ್ಟು ಶೇ.50% ಟು ಶೇ.100% ಅಡುವಿನ ಅಂತರದಲ್ಲಿರಲಿ. ಅಂದರೇ 50 ಪರ್ಸೆಂಟ್‌ಗಿಂತ ಕಡಿಮೆಯಾದಾಗ ಚಾರ್ಜ್‌ ಮಾಡಬೇಕು ಮತ್ತು ಚಾರ್ಜಿಂಗ್ ಪೂರ್ಣ 100 ಪರ್ಸೆಂಟ್‌ ತಲುಪುವುದಕ್ಕೆ ಬಿಡಬಾರದು. 90ರ ಗಡಿ ದಾಟಿದಾಗ ಅನ್‌ಪ್ಲಗ್‌ ಮಾಡುವುದು ಒಳಿತು. ಇದು ಬ್ಯಾಟರಿಗೆ ದಕ್ಕೆ ಎನಿಸುವುದಿಲ್ಲ.

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?. ಖಂಡಿತಾ ಮಾಡಬೇಡಿ. ಚಾರ್ಜಿಂಗ್ ಪಾಯಿಂಟ್ ನೂರರ ಸನಿಹ ಬಂದಾಗ ಚಾರ್ಜ್‌ ತೆಗೆದುಬಿಡಿ. ಆದರೆ ಎಕ್ಸ್‌ಪರ್ಟ್ಸ್‌ಗಳು ಹೇಳುವ ಪ್ರಕಾರ ತಿಂಗಳಿಗೆಮ್ಮೆ ಸ್ಮಾರ್ಟ್‌ಫೋನ್‌ ಅನ್ನು 0 ದಿಂದ 100 ವರೆಗೂ ಪೂರ್ಣಚಾರ್ಜ್‌ ಮಾಡಬೇಕಂತೆ. ಇದು ಸ್ಮಾರ್ಟ್‌ಫೋನ್‌ ಬ್ಯಾಟರಿಗೆ ರೀಸ್ಟಾರ್ಟ್‌ ಮಾಡಿದಂತೆ.

ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!

ರಾತ್ರಿಯಿಡಿ ಚಾರ್ಜ್‌ ಹಾಕಬಹುದೇ?

ರಾತ್ರಿ ಚಾರ್ಜ್‌ ಹಾಕಬಹುದು ಆದರೆ ಫೋನ್‌ 100 ಪರ್ಸೆಂಟ್‌ ಆಗಿದ್ದರು ಚಾರ್ಜ್‌ ಹಾಗೇ ಇರುತ್ತದೆ. ಆಫ್‌ ಮಅಡುವುದೇ ಇಲ್ಲ. ಇದರಿಂದ ಫೋನ್‌ ಬಿಸಿಯಾಗಿ ಅವಘಡಗಳು ಆಗುವ ಛಾನ್ಸ್‌ ಇರುತ್ತದೆ. ಹೀಗಾಗಿ ರಾತ್ರಿಯಿಡಿ ಚಾರ್ಜ್‌ ಹಾಕುವುದು ಒಳ್ಳೆಯದಲ್ಲ. ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ಚಾರ್ಜ್‌ ಪೂರ್ಣವಾದ ನಂತರ ಚಾರ್ಜಿಂಗ್ ತೆಗೆದುಕೊಳ್ಳುವುದನ್ನು ಸ್ಟಾಪ್ ಮಾಡಿಕೊಳ್ಳುತ್ತವೆ.

ಬೇರೆಫೋನ್‌ ಚಾರ್ಜರ್‌ ಬಳಸಬಹುದೇ?

ನಿಮ್ಮ ಸ್ಮಾರ್ಟ್‌ಫೋನ್‌ಗೆ ಕಂಪನಿಯು ನೀಡಿರುವ ಚಾರ್ಜರ್‌ ಮಾತ್ರ ಬಳಸಿ. ಥರ್ಡ್‌ಪಾರ್ಟಿ ಚಾರ್ಜರ್ ಮತ್ತು ಬೇರೆ ಕಂಪನಿಯ ಚಾರ್ಜರ್‌ಗಳನ್ನು ಬಳಸದಿರಿ. ಅದರಲ್ಲೂ ಕಡಿಮೆ ಬೆಲೆಗೆ ಸೀಗುವ ಚಾರ್ಜರ್‌ಗಳನ್ನು ಬಳಸುವ ಮುನ್ನ ಯೋಚಿಸಿ. ಯಾಕಂದ್ರೆ ಇವುಗಳು ನಿಮ್ಮ ಫೋನ್‌ ಬ್ಯಾಟರಿ ಬಾಳಿಕೆಯನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ.

ಓದಿರಿ : ವಾಟ್ಸಪ್‌ನಲ್ಲಿ ಮತ್ತೆ ಹೊಸ ಫೀಚರ್‌!.ವಿಡಿಯೊ ನೋಡ್ತಾ ಚಾಟ್‌ ಮಾಡಿ!

ಫಾಸ್ಟ್‌ ಚಾರ್ಜಿಂಗ್ ಉತ್ತಮವೇ?

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಚಾರ್ಜರ್‌ ನೀಡುತ್ತಿದ್ದು, ಇದರಿಂದ ಫೋನ್‌ಗಳು ಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತವೆ. ಫೋನ್‌ಗಳ ಬ್ಯಾಟರಿಯಲ್ಲಿ ಪವರ್‌ ಮ್ಯಾನೇಜಮೆಂಟ್‌ ಐಸಿ ಚಿಪ್‌ ಇರುತ್ತದೆ(PMIC). ಫಾಸ್ಟ್‌ಚಾರ್ಜ್‌ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದರೇ, ಫೋನ್‌ಗಳಿಗೆ ಏನು ಸಮಸ್ಯೆ ಇಲ್ಲ.

ಬ್ಯಾಟರಿ ಸ್ಟೋರೇಜ್‌ ಹೇಗೆ?

ಲಿಥೀಯಮ್ ಬ್ಯಾಟರಿಗಳನ್ನು ಬಹಳ ದಿನಗಳ ಕಾಲ ಚಾರ್ಜ್‌ ಮಾಡದೇ ಖಾಲಿಯಾಗಿಡಬೇಡಿ. ನೀವು ಫೋನ್‌ ಬಳಸದಿದ್ದರೂ 50 ಪರ್ಸೆಂಟ್‌ ಆದ್ರೂ ಚಾರ್ಜ್‌ ಇರಬೇಕು. ಇಲ್ಲದಿಂದರೇ ಫೋನ್‌ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆಗ ಪ್ರತಿ ತಿಂಗಳು ಫೋನ್‌ ಬ್ಯಾಟರಿಯು 5-10 ಪರ್ಸೆಂಟ್‌ ಚಾರ್ಜ್‌ನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

Most Read Articles
Best Mobiles in India

English summary
We round up the best battery care tips to keep your smartphone battery healthy for as long as possible. to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more