Just In
Don't Miss
- Finance
ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ
- Sports
ಬಾಂಗ್ಲಾದೇಶ vs ಶ್ರೀಲಂಕಾ 2nd ಟೆಸ್ಟ್: ಗೆಲುವಿನ ಸನಿಹದಲ್ಲಿ ಲಂಕಾ: ಸೋಲಿನಿಂತ ತಪ್ಪಿಸಿಕೊಳ್ಳುತ್ತಾ ಬಾಂಗ್ಲಾ?
- News
ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Movies
'ವಿಕ್ರಾಂತ್ ರೋಣ'ನಿಗೆ ಅಂಜಿದ ಅಜಯ್ ದೇವಗನ್ ಸಿನಿಮಾ ಬಿಡುಗಡೆ ಮುಂದೂಡಿಕೆ!
- Automobiles
ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋನಿನಲ್ಲಿ ತ್ವರಿತವಾಗಿ ಯೂಟ್ಯೂಬ್ ವಿಡಿಯೋ ಡೌನ್ಲೋಡ್ ಮಾಡಲು ಹೀಗೆ ಮಾಡಿ!
ಟೆಕ್ ದೊಡ್ಡಣ್ಣ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಅತ್ಯುತ್ತಮ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿದೆ. ಯೂಟ್ಯೂಬ್ ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಆಯ್ಕೆಗಳನ್ನು ಪರಿಚಯಿಸಿದೆ. ಬಳಕೆದಾರರು ಯೂಟ್ಯೂಬ್ ವಿಡಿಯೋಗಳನ್ನು ಡೌನ್ಲೋಡ್ ಸಹ ಮಾಡಬಹುದಾಗಿದೆ. ಯೂಟ್ಯೂಬ್ ವಿಡಿಯೋ ಆಫ್ಲೈನ್ ವೀಕ್ಷಣೆ ಮಾಡಲು, ವೀಡಿಯೊಗಳನ್ನು ಡೌನ್ಲೋಡ್ ಮಾಡಲು ಎರಡು ಮಾರ್ಗಗಳ ಆಯ್ಕೆ ಇದೆ.

ಹೌದು, ಯೂಟ್ಯೂಬ್ ಎಲ್ಲ ಬಗೆಯ ವಿಡಿಯೋಗಳನ್ನು ಸುಲಭವಾಗಿ ನೋಡವ ಅವಕಾಶವನ್ನು ಒದಗಿಸಿಕೊಟ್ಟಿದೆ. ಯೂಟ್ಯೂಬ್ ವಿಡಿಯೋಗಳನ್ನು ಸೇವ್ ಮಾಡಿಕೊಂಡು ಆಫ್ಲೈನ್ನಲ್ಲಿ ವೀಕ್ಷಿಸಬಹುದಾದ ಆಯ್ಕೆ ಇದೆ. ಹಾಗೆಯೇ ವಿಡಿಯೋಗಳನ್ನು ಸ್ಮಾರ್ಟ್ಫೋನ್ಗೆ ಡೌನಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ತ್ವರಿತವಾಗಿ ಯೂಟ್ಯೂಬ್ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈ ಕ್ರಮ ಅನುಸರಿಸಿ:
ಹಂತ 1: ಸ್ಮಾರ್ಟ್ಫೋನ್ನಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್ಲೋಡ್ ಮಾಡಲು ಬಯಸುವ ವೀಡಿಯೊವನ್ನು ಸರ್ಚ್ ಮಾಡಿ.
ಹಂತ 2: ಯೂಟ್ಯೂಬ್ ಈಗ ವೀಡಿಯೊದ ಪೂರ್ವವೀಕ್ಷಣೆಯನ್ನು ತೋರಿಸುತ್ತದೆ. ಈಗ, ವೀಡಿಯೊದ ಕೆಳಭಾಗದಲ್ಲಿ ಗೋಚರಿಸುವ ಮೂರು ಚುಕ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ 3: ಡ್ರಾಪ್-ಡೌನ್ ಮೆನು ಡೌನ್ಲೋಡ್ ವೀಡಿಯೊ ಆಯ್ಕೆಯನ್ನು ತೋರಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ವೀಡಿಯೊ ಡೌನ್ಲೋಡ್ ಆಗುತ್ತದೆ. ಅಪ್ಲಿಕೇಶನ್ನ ಲೈಬ್ರರಿ ವಿಭಾಗದಲ್ಲಿ ನೀವು ಇದನ್ನು ಕಾಣಬಹುದು. > ಡೌನ್ಲೋಡ್ಗಳು.

ಆಪ್ ಮೂಲಕ ಯೂಟ್ಯೂಬ್ ವಿಡಿಯೊಗಳನ್ನು ಬಲ್ಕ್ ಡೌನ್ಲೋಡ್ ಮಾಡಲು ಈ ಕ್ರಮ ಅನುಸರಿಸಿ:
* 4K ವಿಡಿಯೋ ಡೌನ್ಲೋಡರ್ ಆಪ್ ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಹಾಗೂ ಆಪ್ ಅನ್ನು ತೆರೆಯಿರಿ.
* ಈಗ ನಿಮ್ಮ ಕಂಪ್ಯೂಟರ್ನಲ್ಲಿ ಯಾವುದೇ ಯೂಟ್ಯೂಬ್ ಚಾನಲ್ ತೆರೆಯಿರಿ > ಪ್ಲೇ ಲಿಸ್ಟ್ ಕ್ಲಿಕ್ ಮಾಡಿ > ಯಾವುದೇ ಪ್ಲೇ ಲಿಸ್ಟ್ಸ್ ಬಲಭಾಗ ಕ್ಲಿಕ್ ಮಾಡಿ ಮತ್ತು ಲಿಂಕ್ ಕಾಪಿ ಮಾಡಿ ಕ್ಲಿಕ್ ಮಾಡಿ.
* 4K ವಿಡಿಯೋ ಡೌನ್ಲೋಡರ್ ಅಪ್ಲಿಕೇಶನ್ಗೆ ಬದಲಾಯಿಸಿ ಮತ್ತು ಪೇಸ್ಟ್ ಲಿಂಕ್ ಅನ್ನು ಒತ್ತಿರಿ. ನಂತರ ಡೌನ್ಲೋಡ್ ಪ್ಲೇ ಲಿಸ್ಟ್ಸ್ ಕ್ಲಿಕ್ ಮಾಡಿ.

ವಿಡಿಯೋ ವಿಡಿಯೋ ಡೌನ್ಲೋಡ್ ಮಾಡಲು ಇತರೆ ಥರ್ಡ್ ಪಾರ್ಟಿ ಆಪ್ಗಳು:
KeepVid ಅಪ್ಲಿಕೇಶನ್
ಆಪ್ ಈ ಆಪ್ ಸಹ ವಿಡಿಯೊ ಡೌನ್ಲೋಡ್ ಮಾಡಲು ಬೆಸ್ಟ್ ಆಗಿದ್ದು, ವಿಡಿಯೊಗಳನ್ನು ವೇಗವಾಗಿ ಡೌನ್ಲೋಡ್ ಮಾಡಲು ಬೆಂಬಲ ನೀಡುತ್ತದೆ. ಇತರೆ ಸಾಮಾಜಿಕ ತಾಣಗಳ ವಿಡಿಯೊಗಳನ್ನು ಸಹ ಡೌನ್ಲೋಡ್ ಮಾಡಲು ಈ ಆಪ್ ಸಫೋರ್ಟ್ ಮಾಡುತ್ತದೆ. ಎಂಪಿ3, ಎಂಪಿ4 ಫಾರ್ಮೇಟ್ ಆಯ್ಕೆಗಳು ಸಹ ಇವೆ.

Snaptube ಅಪ್ಲಿಕೇಶನ್
ಸ್ನ್ಯಾಪ್ಟ್ಯೂಬ್ ಆಪ್ ಬಳಕೆದಾರ ಸ್ನೇಹಿ ಅನಿಸಲಿದ್ದು, ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಲು ಸಹ ಉತ್ತಮ ಅನಿಸಲಿದೆ. ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಜನಪ್ರಿಯ ಸಾಮಾಜಿಕ ಜಾಲತಾಣಗಳ ವಿಡಿಯೊಗಳನ್ನು ಸಹ ಡೌನ್ಲೋಡ್ ಮಾಡಲು ನೆರವು ನೀಡಲಿದೆ.

Videoder ಅಪ್ಲಿಕೇಶನ್
ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Videoder ಅಪ್ಲಿಕೇಶನ್ ಒಂದು ಉತ್ತಮ ತಾಣವಾಗಿದೆ. ಹಾಗೆಯೇ ಈ ಆಪ್ ಫೇಸ್ಬುಕ್, ಇನ್ಸ್ಟಾಗ್ರಾಂ, ಸೇರಿದಂತೆ ಇತರೆ ಸೋಶಿಯಲದ ತಾಣಗಳಲ್ಲಿನ ವಿಡಿಯೊಗಳನ್ನು ಡೌನ್ಲೋಡ್ ಮಾಡಲು ಸಹಕಾರಿಯಾಗಿದೆ.

InsTube ಅಪ್ಲಿಕೇಶನ್
ಇನ್ಸ್ಟ್ಯೂಬ್ ಸಹ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಒಂದು ಅತ್ಯುತ್ತಮ ಪ್ಲಾಟ್ಫಾರ್ಮ್ ಆಗಿದೆ. ಫಾಸ್ಟ್ ಡೌನ್ಲೋಡ್ ಆಯ್ಕೆಯು ಈ ಆಪ್ನಲ್ಲಿ ಕಾಣಿಸಿಲಿದೆ. ಅದರೊಂದಿಗೆ ಸಾಕಷ್ಟು ಹೊಸ ಆಯ್ಕೆಗಳು ಸಹ ಈ ಆಪ್ನಲ್ಲಿ ಕಾಣಬಹುದಾಗಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999