ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?

By Suneel
|

ಪ್ರಪಂಚದ ನಂಬರ್‌ ಒನ್‌ ಮೆಸೇಜ್‌ ಆಪ್‌ 'ವಾಟ್ಸಾಪ್‌' ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಮೊಬೈಲ್‌ನಲ್ಲಿ ಯಾವ ಆಪ್‌ ಬಳಸದಿದ್ದರೂ ಇಂದು ವಾಟ್ಸಾಪ್‌ ಆಪ್‌ ಅನ್ನು ಎಲ್ಲರೂ ಬಳಸುತ್ತಿದ್ದಾರೆ. ಅಂದಹಾಗೆ ಇಂದು ವಾಟ್ಸಾಪ್‌ ಬಗ್ಗೆ ಒಂದು ವಿಶೇಷ ಮಾಹಿತಿಯನ್ನು ನಾವು ನಿಮಗೆ ಹೇಳುತ್ತಿದ್ದೇವೆ.

ಬರ್ತ್‌ಡೇಗೆ ನನ್‌ ಫ್ರೆಂಡ್‌ಗೆ ನಾನೇ ಮೊದ್ಲು ವಿಶ್‌ ಮಾಡಬೇಕು, ನಮ್‌ ಹುಡುಗಿಗೆ/ಹುಡುಗನಿಗೆ ನಾನೆ ಮೊದಲು ಬರ್ತ್‌ಡೇ ವಿಶ್‌ ಮಾಡಬೇಕು, ಅಥವಾ ಇತರ ಹಲವು ಆಚರಣೆಗಳ ಶುಭಾಷಯಗಳನ್ನು ಹಲವರು ಹಲವರಿಗೆ ನಾನೇ ಮೊದ್ಲು ವಿಶ್‌ ಮಾಡಬೇಕು ಅಂತ ಬಹುಸಂಖ್ಯಾತ ವಾಟ್ಸಾಪ್‌ ಬಳಕೆದಾರರು ಅಂದು ಕೊಳ್ತಾರೆ. ಆದರೆ ಏನ್‌ ಮಾಡೋದು ಯಾವುದೇ ಆಚರಣೆಗೆ ವಿಶ್‌ ಮಾಡಬೇಕು ಅಂದ್ರು ಮೊದಲನೇ ವಿಶ್‌ ಅನಿಸಿಕೊಳ್ಳೋದು ರಾತ್ರಿ 12 ಗಂಟೇಲಿ ಮೊಬೈಲ್‌ನಿಂದ ಕರೆಮಾಡಿಯೋ, ವಾಟ್ಸಾಪ್‌ ಮಾಡಿಯೋ, ಸಂದೇಶ ಕಳಿಸಿಯೋ ವಿಶ್‌ ಮಾಡಿದ್ರೆ ಮಾತ್ರ. ಆದ್ರೆ ನಿದ್ರೆ ಕೇಳಬೇಕಲ್ಲ.. ಇನ್ನು ಬಹುಸಂಖ್ಯಾತರಿಗೆ ಬ್ಯುಸಿ ಸೆಡ್ಯೂಲ್‌ನಿಂದ ಪ್ರಮುಖರಿಗೆ ಹಲವು ಶುಭಾಷಯಗಳನ್ನ ಹೇಳೋಲು ಮರೆತೆ ಬಿಡುತ್ತಾರೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ವಿಶ್‌ಗಳನ್ನು , ಸಂದೇಶಗಳನ್ನು ಯಾವ ಟೈಮ್‌ಗೆ ಬೇಕೋ ಆ ಟೈಮ್‌ಗೆ ಶೆಡ್ಯೂಲ್‌ ಮಾಡಿದರೆ ತಕ್ಕ ಟೈಮ್‌ಗೆ ಸಂದೇಶ, ವಿಶ್‌ಗಳು ರವಾನೆಯಾಗುತ್ತವೆ.

ಹೌದು, ವಾಟ್ಸಾಪ್ ಬಳಕೆದಾರರು ಸರಳವಾಗಿ ತಮ್ಮ ಸಂದೇಶಗಳನ್ನು ಯಾವ ಟೈಮ್‌ಗೆ ಬೇಕೋ ಆ ಟೈಮ್‌ಗೆ ಶೆಡ್ಯೂಲ್‌ ಮಾಡಬಹುದಾಗಿದೆ. ಸರಳವಾದ ಹಂತಗಳಿಂದ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ. ನೆನಪಿರಲಿ, ಆಂಡ್ರಾಯ್ಡ್‌ ಡಿವೈಸ್‌ ಬಳಕೆದಾರರು ಮಾತ್ರ ವಾಟ್ಸಾಪ್‌ನಲ್ಲಿ ಮೆಸೇಜ್‌ಗಳನ್ನು ಶೆಡ್ಯೂಲ್‌ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

* ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡಲು ಅಗತ್ಯವಾಗಿ ಆಂಡ್ರಾಯ್ಡ್‌ ಡಿವೈಸ್‌ ಅನ್ನು ರೂಟ್ ಮಾಡಿರಬೇಕು.

ರೂಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

* ವಾಟ್ಸಾಪ್‌ ಶೆಡ್ಯೂಲಿಂಗ್ ಆಪ್‌ ಹೊಂದಬೇಕು

ವಾಟ್ಸಾಪ್‌ ಶೆಡ್ಯೂಲಿಂಗ್‌ ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

ಆಂಡ್ರಾಯ್ಡ್‌ ಮೊಬೈಲ್‌ಗೆ "ವಾಟ್ಸಾಪ್‌ ಶೆಡ್ಯೂಲಿಂಗ್ ಆಪ್‌" ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಲ್‌ ಮಾಡಿ. ಇದಕ್ಕೂ ಮೊದಲು ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ ರೂಟ್‌ ಆಗಿರಬೇಕು.

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

ಅಪ್ಲಿಕೇಶನ್‌ ಇನ್‌ಸ್ಟಾಲ್‌ ಆದ ನಂತರ ಓಪನ್‌ ಮಾಡಿ. ಆಪ್‌ "Superuser Permission" ಕೇಳುತ್ತದೆ. ಅದಕ್ಕೆ OK ನೀಡಿ. ನಂತರ "ಪೆನ್ಸಿಲ್‌ ಐಕಾನ್" ಮೇಲೆ ಕ್ಲಿಕ್‌ ಮಾಡಿ. ನಂತರ ನೀವು ಯಾರಿಗೆ ಅಥವಾ ಯಾವ ಗ್ರೂಪ್‌ಗೆ ಮೆಸೇಜ್‌ ಕಳುಹಿಸಬೇಕೊ ಆ ಸಂಪರ್ಕ ಆಯ್ಕೆ ಮಾಡಿಕೊಳ್ಳಿ. ಸಂದೇಶ ಟೈಪ್‌ ಮಾಡಿದ ನಂತರ ಶೆಡ್ಯೂಲ್‌ ಸಮಯ ಹೊಂದಿಸಿ.

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

ಈ ಹಂತದಲ್ಲಿ Add ಎಂಬಲ್ಲಿ ಕ್ಲಿಕ್‌ ಮಾಡಿ. ನಿಮ್ಮ ಆಸಕ್ತಿಯ ಸಂಪರ್ಕವನ್ನು ನೀಡಿರಿ. ನಂತರ ಮೆಸೇಜ್‌ ಬಾಕ್ಸ್‌ನಲ್ಲಿ ಸಂದೇಶ ಟೈಪಿಸಿ. ಈ ಸಂದೇಶಗಳು Pending messages ಟ್ಯಾಬ್‌ನಲ್ಲಿ ಉಳಿಯುತ್ತವೆ. ನಂತರ ನೀವು ಸೆಟ್‌ ಮಾಡಿದ ಸಮಯಕ್ಕೆ ತಕ್ಕಂತೆ ಮೆಸೇಜ್‌ಗಳು ಸೆಂಟ್‌ ಆಗುತ್ತವೆ. ಚಿತ್ರದಲ್ಲಿನ ಸ್ಕ್ರೀನ್‌ ಶಾಟ್‌ ಅನ್ನು ಸಹ ನೀವು ನೋಡಿ ತಿಳಿಯಬಹುದು.

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

ವಾಟ್ಸಾಪ್‌ ಶೆಡ್ಯೂಲ್‌ ಮೆಸೇಜ್‌ಗಳು ಡಿಲಿವರಿ ಆಗಿವೆಯೇ ಎಂಬುದನ್ನು ನೋಡಲು ಅಪ್ಲಿಕೇಶನ್‌ ಅನ್ನು ನೋಡಬಹುದು. ಹಾಗೂ ಪೆಂಡಿಂಗ್ ಮೆಸೇಜ್‌ಗಳನ್ನು ಸಹ ನೋಡಬಹುದು.

ವಾಟ್ಸಾಪ್‌ನಲ್ಲಿ ಮೆಸೇಜ್‌  ಶೆಡ್ಯೂಲ್‌

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌

ಮೇಲಿನ ಎಲ್ಲಾ ಹಂತಗಳು ಸರಳವಾಗಿದ್ದು, ವಾಟ್ಸಾಪ್‌ ಶೆಡ್ಯೂಲಿಂಗ್‌ ಆಪ್ ಮೂಲಕ ನೀವು ನಿಮ್ಮ ನೆಚ್ಚಿನ ಪ್ರೀತಿ ಪಾತ್ರರಿಗೆ ಸಮಯಕ್ಕೆ ಸರಿಯಾಗಿ, ನೀವು ಯಾವುದೇ ಬ್ಯುಸಿ ಶೆಡ್ಯೂಲ್‌ನಲ್ಲಿದ್ದರು ಸಹ ಯಾವುದೇ ವಿಶ್‌ಗಳನ್ನು ಮಾಡಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ

ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Most Read Articles
Best Mobiles in India

English summary
Today we are going to share an interesting trick on scheduling WhatsApp Messages on Your Android Smartphone, read the full post to know much more about it in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more