ವಾಟ್ಸಾಪ್‌ನಲ್ಲಿ ಫ್ರೆಂಡ್‌ಶಿಪ್ ಡೇ 2021 ಸ್ಟಿಕ್ಕರ್‌ ಸೆಂಡ್‌ ಮಾಡುವುದು ಹೇಗೆ?

|

ಗೆಳೆತನ ಅನ್ನೊ ಪದಕ್ಕೆ ಯಾರೂ ಕೂಡ ಸರಿ ಸಾಟಿಯಿಲ್ಲ. ಗೆಳೆಯರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಕೂಡ ಮಧುರ ಅನುಭವವನ್ನು ನೀಡುತ್ತದೆ. ಗೆಳೆತನಕ್ಕೆ ಇಂತಹದ್ದೆ ದಿನವೆಂಬುದಿಲ್ಲ. ಆದರೂ ಸ್ನೇಹಿತರ ದಿನದ ವಿಶೇಷತೆ ಸಾರುವುದಕ್ಕಾಗಿಯೇ ಸ್ನೇಹಿತರ ದಿನಾಚರಣೆ ಮಾಡಲಾಗುತ್ತದೆ. ಸ್ನೇಹಿತರ ದಿನಾಚರಣೆ ಬಂತೆದರೆ ಸಾಕು ಪ್ರತಿಯೊಬ್ಬರಿಗೂ ಸಂಭ್ರಮ. ಅದರಲ್ಲೂ ಸೊಶೀಯಲ್‌ ಮೀಡಿಯಾಗಳಲ್ಲಿ ಸ್ನೇಹಿತರ ದಿನದಂದು ಪರಸ್ಪರ ವಿಶ್‌ ಮಾಡಿ ಸಂಭ್ರಮಿಸುತ್ತಾರೆ.

ಸ್ನೇಹಿತರ

ಹೌದು, ಸ್ನೇಹಿತರ ವಿಶೇಷತೆ ಸಾರುವ ಸ್ನೇಹಿತರ ದಿನವನ್ನು ಆಗಸ್ಟ್‌ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತೆ. ಈ ದಿನ ಹೆಚ್ಚಿನವರಿಗೆ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಸೊಶೀಯಲ್‌ ಮೀಡಿಯಾ ಮೂಲಕ ಪರಸ್ಪರ ವಿಶ್‌ ಮಾಡಿಕೊಳ್ಳುತ್ತಾರೆ. ಇನ್ನು ವಾಟ್ಸಾಪ್‌ ನಲ್ಲೂ ಸಹ ಸ್ನೇಹಿತರ ದಿನದ ಶುಭಾಶಯಗಳನ್ನು ಕಳುಹಿಸಬಹುದು. ವಾಟ್ಸಾಪ್‌ ಕೂಡ ಸ್ನೇಹಿತರ ದಿನ ಪ್ರಯುಕ್ತ ವಿಶೇಷ ಸ್ಟಿಕ್ಕರ್‌ಗಳನ್ನು ಸಹ ಪರಿಚಯಿಸುತ್ತಾ ಬಂದಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ ಹ್ಯಾಪಿ ಫ್ರೆಂಡ್‌ಶಿಪ್ ಡೇ 2021 ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಹ್ಯಾಪಿ ಫ್ರೆಂಡ್‌ಶಿಪ್ ಡೇ 2021 ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?

ಹಂತ 1: ನೀವು ಹ್ಯಾಪಿ ಫ್ರೆಂಡ್‌ಶಿಪ್ ಡೇ 2021 ಸ್ಟಿಕ್ಕರ್ ಕಳುಹಿಸಲು ಬಯಸುವ ವ್ಯಕ್ತಿಯ ವಾಟ್ಸಾಪ್ ಚಾಟ್ ತೆರೆಯಿರಿ.

ಹಂತ 2: ಚಾಟ್‌ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ಒಳಗೆ ಇರುವ ಸ್ಮೈಲಿ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ 3: ಜಿಐಎಫ್ ಆಯ್ಕೆಯ ಪಕ್ಕದಲ್ಲಿರುವ ಸ್ಕ್ವೇರ್‌ ಐಕಾನ್ ಮೇಲೆ ಟ್ಯಾಪ್ ಮಾಡಿ, ನಂತರ ಸ್ಟಿಕ್ಕರ್‌ಗಳ ಪ್ಯಾನಲ್‌ ಅನ್ನು ತೆರೆಯುತ್ತದೆ.

ಹಂತ 4: ಹೆಚ್ಚಿನ ಸ್ಟಿಕ್ಕರ್‌ಗಳನ್ನು ಸೇರಿಸಿ ಪ್ಯಾನಲ್‌ಗೆ ಹೋಗಲು "+" ಚಿಹ್ನೆಯ ಮೇಲೆ ಟ್ಯಾಪ್ ಮಾಡಿ.

ಹಂತ 5: ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ‘ಗೆಟ್‌ ಮೋರ್‌ ಸ್ಟಿಕ್ಕರ್‌' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 6: ಇದು ನಂತರ WAStickerApps ಎಂಬ ಹುಡುಕಾಟ ಪದದೊಂದಿಗೆ ನಿಮ್ಮನ್ನು Google Play Store ಗೆ ಕರೆದೊಯ್ಯುತ್ತದೆ.

ಫ್ರೆಂಡ್ಶಿಪ್

ಹಂತ 7: WAStickerApps ಸರ್ಚ್‌ ನಂತರ ಹ್ಯಾಪಿ ಫ್ರೆಂಡ್ಶಿಪ್ ಡೇ ಸೇರಿಸಿ.

ಹಂತ 8: ನಿಮ್ಮ ಇಚ್ಛೆಯ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್ಲೋಡ್ ಮಾಡಿ ಮತ್ತು ನಂತರ ಅದನ್ನು ತೆರೆಯಿರಿ.

ಹಂತ 9: "ವಾಟ್ಸಾಪ್‌ ಗೆ ಸೇರಿಸಿ" ಬಟನ್ ಅನ್ನು ಟ್ಯಾಪ್ ಮಾಡಿ.

ಹಂತ 10: ಪ್ಯಾಕ್‌ನಲ್ಲಿರುವ ಎಲ್ಲಾ ಸ್ಟಿಕ್ಕರ್‌ಗಳನ್ನು ನಂತರ ವಾಟ್ಸಾಪ್ ಒಳಗೆ ಮೈ ಸ್ಟಿಕರ್ಸ್ ಪ್ರದೇಶದ ಒಳಗೆ ಲಭ್ಯವಾಗುವಂತೆ ಮಾಡಲಾಗುವುದು.

ಹಂತ 11: ಈಗ ನೀವು ನಿಮ್ಮ ಸ್ನೇಹಿತರಿಗೆ ಸ್ಟಿಕ್ಕರ್ ಶುಭಾಶಯಗಳನ್ನು ಆಯ್ಕೆ ಮಾಡಿ ಕಳುಹಿಸಬಹುದು.

ನಿಮ್ಮ ಫೋನ್‌ನಿಂದ ನೀವು ಸ್ಟಿಕ್ಕರ್ ಅಪ್ಲಿಕೇಶನ್ ಅನ್ನು ಅಳಿಸಿದ ನಂತರ, ಈ ಸ್ಟಿಕ್ಕರ್‌ಗಳು ನಿಮ್ಮ ಸ್ಟಿಕ್ಕರ್ ಗ್ಯಾಲರಿಯಿಂದ ಕಣ್ಮರೆಯಾಗುತ್ತವೆ.

ನಿಮ್ಮ ಸ್ವಂತ ಹ್ಯಾಪಿ ಫ್ರೆಂಡ್ಶಿಪ್ ಡೇ 2021 ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಿ?

ನಿಮ್ಮ ಸ್ವಂತ ಹ್ಯಾಪಿ ಫ್ರೆಂಡ್ಶಿಪ್ ಡೇ 2021 ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಿ?

ಹಂತ: 1 ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ 'ಸ್ಟಿಕ್ಕರ್ ಮೇಕರ್' ಆಪ್ ಅನ್ನು ಡೌನ್‌ಲೋಡ್ ಮಾಡಿ.
ಹಂತ: 2 ಇಂಟರ್‌ನೆಟ್‌ನಿಂದ ಬೆಸ್ಟ್‌ ಫ್ರೆಂಡ್ಸ್‌ ಡೇ 2021 ಪೋಸ್ಟರ್ ಚಿತ್ರವನ್ನು ಹುಡುಕಿ ಮತ್ತು ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಫೋನ್‌ಗೆ ಡೌನ್‌ಲೋಡ್ ಮಾಡಿ.
ಹಂತ: 3 ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ "ಹೊಸ ಸ್ಟಿಕ್ಕರ್ ಪ್ಯಾಕ್ ರಚಿಸಿ" ಬಟನ್ ಟ್ಯಾಪ್ ಮಾಡಿ.
ಹಂತ: 4 ನಿಮ್ಮ ಸ್ಟಿಕ್ಕರ್ ಪ್ಯಾಕ್‌ಗೆ ಹೆಸರನ್ನು ನೀಡಿ.
ಹಂತ: 5 "ಸ್ಟಿಕ್ಕರ್ ಸೇರಿಸಿ" ಬಟನ್ ಅನ್ನು ಟ್ಯಾಪ್ ಮಾಡಿ ಮತ್ತು ನಂತರ ನಿಮ್ಮ ಗ್ಯಾಲರಿಯಿಂದ ಡೌನ್ಲೋಡ್ ಮಾಡಿದ ಚಿತ್ರವನ್ನು ಆಯ್ಕೆ ಮಾಡಿ.
ಹಂತ: 6 ನಿಮ್ಮ ಆದ್ಯತೆಗಳಿಗೆ ಅನುಗುಣವಾಗಿ ಚಿತ್ರವನ್ನು ಕಸ್ಟಮೈಸ್ ಮಾಡಿ.
ಹಂತ: 7 ನಂತರ, ನಿಮ್ಮ ವಾಟ್ಸಾಪ್ ಸ್ಟಿಕರ್ ಲೈಬ್ರರಿಗೆ ಕಸ್ಟಮ್ ಸ್ಟಿಕ್ಕರ್ ಪ್ಯಾಕ್ ಅನ್ನು ಸೇರಿಸಲು "ಸ್ಟಿಕ್ಕರ್ ಪ್ಯಾಕ್ ಅನ್ನು ಪ್ರಕಟಿಸಿ" ಬಟನ್ ಅನ್ನು ಟ್ಯಾಪ್ ಮಾಡಿ.

Most Read Articles
Best Mobiles in India

English summary
Here we will be taking a look at how you can send Happy Friendship Day 2021 wishes WhatsApp stickers to your friends.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X