ಗೂಗಲ್‌ ಚಾಟ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಬಳಕೆದಾರರಿಗೆ ಅನುಕೂಲಕ್ಕೆ ತಕ್ಕಂತೆ ಹಲವು ಸೇವೆಗಳನ್ನು ಪರಿಚಯಿಸಿಕೊಂಡು ಬಂದಿದೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಮಂದಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿಗಳಿಗೆ ಸ್ಲಾಕ್‌ನಂತಹ ಅಪ್ಲಿಕೇಶನ್‌ಗಳು ರಿಯಲ್‌ ಟೈಂ ಚಾಟ್‌ಗಳಿಗೆ ಸಹಕಾರಿಯಾಗಿವೆ. ಗೂಗಲ್‌ ಕೂಡ ಇದನ್ನು ಗಮನಿಸಿದ್ದು, ತನ್ನ ಕಾರ್ಪೊರೇಟ್ ವರ್ಕ್‌ಸ್ಪೇಸ್‌ ಅಪ್ಲಿಕೇಶನ್ ಸೂಟ್ - ಚಾಟ್ ಅನ್ನು ಪರಿಚಯಿಸಿದೆ. ಇದು ಸ್ಲಾಕ್‌ಗೆ ಪೈಪೋಟಿ ನೀಡುತ್ತಿದೆ.

ಗೂಗಲ್‌

ಹೌದು, ಗೂಗಲ್‌ ಬಳಕೆದಾರರ ಅನುಕೂಲಕ್ಕಾಗಿ ಗೂಗಲ್‌ ಚಾಟ್‌ ಪ್ರಾರಂಭಿಸಿದೆ. ಇದು ಅನೌಪಚಾರಿಕ ಅಥವಾ ಔಪಚಾರಿಕ ಆಧಾರದ ಮೇಲೆ ಸ್ನೇಹಿತರು ಮತ್ತು ಸ್ನೇಹಿತರ ಗುಂಪುಗಳೊಂದಿಗೆ ಚಾಟ್ ಸೆಷನ್‌ಗಳನ್ನು ನಡೆಸಲು ನಿಮಗೆ ಅನುಮತಿಸುತ್ತದೆ. ಔಪಚಾರಿಕ ಚಾಟ್‌ ಅನ್ನು ಗೂಗಲ್ ರೂಮ್ಸ್‌ಎಂದು ಕರೆಯುವ ಪ್ರತ್ಯೇಕ ಸ್ಥಳದ ಮೂಲಕ ಮಾಡಲಾಗುತ್ತದೆ. ಹಾಗಾದ್ರೆ ಗೂಗಲ್‌ ಚಾಟ್‌ ಅನ್ನು ಆಕ್ಟಿವೇಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಪ್ರಕಾರ, ಚಾಟ್ ಕೇವಲ ಎರಡು ಅಥವಾ ಹೆಚ್ಚಿನ ಜನರಿಗೆ ಯಾವುದೇ ಅನೌಪಚಾರಿಕ ಚಾಟ್ ಮಾಡುವ ಒಂದು ಮಾರ್ಗವಾಗಿದೆ. ಹೆಚ್ಚು ದೀರ್ಘಕಾಲೀನ ಸಂಭಾಷಣೆಗಾಗಿ ಗೂಗಲ್‌ ರೂಮ್ಸ್‌ ಅನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇದರಲ್ಲಿ ಪ್ರತಿಯೊಂದು ರೂಮ್ಸ್‌ಗೂ ತನ್ನದೇ ಆದ ಹೆಸರಿದೆ, ಜನರು ಹೊರಹೋಗಲು ಮತ್ತು ಮತ್ತೆ ಸೇರಲು ಲಭ್ಯವಿದೆ,ಅಲ್ಲದೆ ಅಧಿಸೂಚನೆಗಳನ್ನು ಕಳುಹಿಸುತ್ತದೆ ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ಕೆಲಸದ ಯೋಜನೆಗಳು, ವಾರಗಳು ಅಥವಾ ಹೆಚ್ಚಿನ ಅವಧಿಯಲ್ಲಿ ಸಂಭಾಷಣೆಯನ್ನು ಮುಂದುವರಿಸಲು ನೀವು ರೂಮ್ಸ್‌ ಅನ್ನು ಕ್ರಿಯೆಟ್‌ ಮಾಡಬಹುದಾಗಿದೆ.

ಮೊಬೈಲ್ ಅಪ್ಲಿಕೇಶನ್‌ನಲ್ಲಿ ಗೂಗಲ್‌ ಚಾಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಮೊಬೈಲ್ ಅಪ್ಲಿಕೇಶನ್‌ನಲ್ಲಿ ಗೂಗಲ್‌ ಚಾಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಗೂಗಲ್‌ನಲ್ಲಿ ಮೇಲಿನ ಎಡ ಮೂಲೆಯಲ್ಲಿ ಮೂರು ಸಾಲಿನ ಐಕಾನ್ ಟ್ಯಾಪ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ಸೆಟ್ಟಿಂಗ್‌ಗಳು" ಆಯ್ಕೆಮಾಡಿ.
ಹಂತ:2 ನಿಮ್ಮ ಖಾತೆಯನ್ನು ಆಯ್ಕೆಮಾಡಿ
ಹಂತ:3 "ಸಾಮಾನ್ಯ" ಆಯ್ಕೆಮಾಡಿ
ಹಂತ:4 ನೀವು ಆಂಡ್ರಾಯ್ಡ್‌ ಫೋನ್ ಬಳಸುತ್ತಿದ್ದರೆ, "Show the Chat and Rooms tabs" ಅನ್ನು ಪರಿಶೀಲಿಸಿ. ನೀವು ಐಫೋನ್ ಅಥವಾ ಐಪ್ಯಾಡ್ ಬಳಸುತ್ತಿದ್ದರೆ, "Show the chat and rooms tab" ಅನ್ನು ಟಾಗಲ್ ಮಾಡಿ.
ಹಂತ:5 ಗಮನಿಸಿ: ನೀವು ಐಫೋನ್ / ಐಪ್ಯಾಡ್ ಬಳಸುತ್ತಿದ್ದರೆ, ಚಾಟ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ನೀವು ಜಿಮೇಲ್‌ ಅನ್ನು ಹಸ್ತಚಾಲಿತವಾಗಿ ಮುಚ್ಚಬೇಕು ಮತ್ತು ಮತ್ತೆ ತೆರೆಯಬೇಕಾಗುತ್ತದೆ.
ಇದಾದ ನಂತರ ಸ್ಕ್ರೀನ್‌ ಕೆಳಭಾಗದಲ್ಲಿ, ಕೇವಲ ಮೇಲ್ ಮತ್ತು ಮೀಟ್ ಐಕಾನ್‌ಗಳ ಬದಲಿಗೆ, ನೀವು ಈಗ ಚಾಟ್ ಮತ್ತು ರೂಮ್‌ಗಳ ಐಕಾನ್‌ಗಳನ್ನು ಸಹ ಹೊಂದಿರುತ್ತೀರಿ.

ಬ್ರೌಸರ್‌ನಲ್ಲಿ ಚಾಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಬ್ರೌಸರ್‌ನಲ್ಲಿ ಚಾಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಬ್ರೌಸರ್‌ನಲ್ಲಿ ಚಾಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?
ಹಂತ:1 ನಿಮ್ಮ Gmail ಖಾತೆಗೆ ಹೋಗಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ (ಮೇಲಿನ-ಬಲ ಮೂಲೆಯಲ್ಲಿರುವ ಗೇರ್ ಐಕಾನ್)
ಹಂತ:2 "ಎಲ್ಲಾ ಸೆಟ್ಟಿಂಗ್‌ಗಳನ್ನು ವೀಕ್ಷಿಸಿ" ಆಯ್ಕೆಮಾಡಿ
ಹಂತ:3 ಮೇಲಿನ ಮೆನುವಿನಲ್ಲಿ, "ಚಾಟ್ ಮತ್ತು ಮೀಟ್" ಆಯ್ಕೆಮಾಡಿ
ಹಂತ:4 "ಚಾಟ್," "ಕ್ಲಾಸಿಕ್ ಹ್ಯಾಂಗ್‌ ಔಟ್ಸ್‌" ಮತ್ತು "ಆಫ್" ಆಯ್ಕೆ ಮಾಡುವ ಆಯ್ಕೆ ನಿಮಗೆ ಇದೆ. ನೀವು ಚಾಟ್ ಮೇಲೆ ಕ್ಲಿಕ್ ಮಾಡಿ.
ಹಂತ:5 ಸಾಮಾನ್ಯವಾಗಿ, ನಿಮ್ಮ Gmail ಪರದೆಯ ಎಡಭಾಗದಲ್ಲಿ ಚಾಟ್ ಕಾಣಿಸುತ್ತದೆ.
ಹಂತ:6 ನಂತರ "ಚಾಟ್ ಮತ್ತು ಮೀಟ್" ನಿಮಗೆ ಬೇಕಾದಲ್ಲಿ Gmail ನಲ್ಲಿ ಮೀಟ್ ವಿಭಾಗವನ್ನು ಮರೆಮಾಡಲು ಅನುಮತಿಸುತ್ತದೆ
ಹಂತ:7 ಇದಾದ ನಂತರ "ಸೇವ್‌ ಚೇಂಜಸ್‌" ಕ್ಲಿಕ್ ಮಾಡಿ

ಈಗ ನಿಮ್ಮ Gmail ಪರದೆಯು ರಿಫ್ರೆಶ್ ಆಗುತ್ತದೆ, ಮತ್ತು ನೀವು ಬಹುಶಃ "ಹೊಸ ಜಿ-ಮೇಲ್‌" ಗೆ ಸ್ವಾಗತಿಸುವ ಪಾಪ್-ಅಪ್ ಅನ್ನು ನೀವು ಪಡೆಯುತ್ತೀರಿ. ನಿಮ್ಮ ಜಿಮೇಲ್ ಪರದೆಯ ಎಡಭಾಗದಲ್ಲಿರುವ ಮೀಟ್ ಮತ್ತು ಹ್ಯಾಂಗ್‌ ಔಟ್ಸ್‌ ಬಾಕ್ಸ್‌ಗಳ ಬದಲಿಗೆ, ನೀವು ಈಗ ಚಾಟ್ ಬಾಕ್ಸ್, ರೂಮ್ಸ್ ಬಾಕ್ಸ್ ಮತ್ತು ಮೀಟ್ ಬಾಕ್ಸ್ ಅನ್ನು ಹೊಂದಿರುತ್ತೀರಿ.

ಮೊಬೈಲ್ ಅಪ್ಲಿಕೇಶನ್‌ನಲ್ಲಿ ಚಾಟ್ ಪ್ರಾರಂಭಿಸಿ

ಮೊಬೈಲ್ ಅಪ್ಲಿಕೇಶನ್‌ನಲ್ಲಿ ಚಾಟ್ ಪ್ರಾರಂಭಿಸಿ

ಮೊಬೈಲ್‌ನಲ್ಲಿ ಚಾಟ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಕೆಳಗಿನ ಬಲ ಮೂಲೆಯಲ್ಲಿರುವ ಸಣ್ಣ "ನ್ಯೂ ಚಾಟ್" ಪಾಪ್ಅಪ್‌ನಲ್ಲಿ ಟ್ಯಾಪ್ ಮಾಡಿ. ನಂತರ ನೀವು ಇಲ್ಲಿ ವ್ಯಕ್ತಿಯ ಹೆಸರನ್ನು ಟೈಪ್ ಮಾಡಬಹುದು, ಅಥವಾ ನೀವು ಕೋಣೆಯನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಕೊಠಡಿಗಳನ್ನು ಬ್ರೌಸ್ ಮಾಡಬಹುದು. ನೀವು ಗುಂಪು ಸಂಭಾಷಣೆಯನ್ನು ರಚಿಸಲು ಬಯಸಿದರೆ, ಬಯಸುವ ಮೊದಲ ವ್ಯಕ್ತಿಯ ಹೆಸರನ್ನು ಟೈಪ್ ಮಾಡಿ. ನೀವು ನಿಮ್ಮ ಚಾಟ್‌ಗೆ ಆಹ್ವಾನಿಸಲಾದ ಜನರು ಲಿಂಕ್‌ನೊಂದಿಗೆ ಇಮೇಲ್ ಅನ್ನು ಪಡೆಯುತ್ತಾರೆ, ಮತ್ತು ಸಂಭಾಷಣೆಗೆ ಸೇರಲು ಅಥವಾ ಅದನ್ನು ನಿರ್ಬಂಧಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

Most Read Articles
Best Mobiles in India

English summary
The new Chat and Rooms apps are Google’s answer to Slack.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X