Just In
- 1 hr ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 2 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 3 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
- 4 hrs ago
ಗ್ಯಾಲಕ್ಸಿ ಎ51, ಗ್ಯಾಲಕ್ಸಿ ಎ71 ಸ್ಮಾರ್ಟ್ಫೋನ್ ಲಾಂಚ್ ಮಾಡಿದ ಸ್ಯಾಮ್ಸಂಗ್!
Don't Miss
- Finance
5,000 ರು.ಯಿಂದ 11,000 ಕೋಟಿ ತನಕ ಬಂಡವಾಳ ಬೆಳೆಸಿದ ಝುಂಝುನ್ ವಾಲಾ
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Lifestyle
ರೆಸಿಪಿ: ತುಂಬಾ ಟೇಸ್ಟ್ ಆಗಿದೆ ದಾಸವಾಳದ ಮೊಸರು ಗೊಜ್ಜು
- News
ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಸುರಿಯಲಿದೆ ಭಾರಿ ಮಳೆ
- Automobiles
2020ರ ಆಟೋ ಎಕ್ಸ್ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ
- Movies
'ಮುಗಿಲು ಪೇಟೆ' ಸಂಗೀತದಲ್ಲಿ ಶ್ರೀಧರ್ ಸಂಭ್ರಮಾಚರಣೆ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
- Sports
ಭಾರತದ 4ನೇ ಕ್ರಮಾಂಕಕ್ಕೆ ಅವನಂತ ಬ್ಯಾಟ್ಸ್ಮನ್ ಬೇಕು: ಅನಿಲ್ ಕುಂಬ್ಳೆ
ಎಸ್ಎಂಎಸ್ ಮೂಲಕ ಲೊಕೇಷನ್ ಹಂಚಿಕೆಗೆ ಅವಕಾಶ- ಹೇಗೆ ಶೇರಿಂಗ್ ಮಾಡುವುದು ಗೊತ್ತಾ?
ಕೆಲವು ಸಂದರ್ಬಗಳು ಹೇಗಾಗಿ ಬಿಡುತ್ತೆ ಅಂದರೆ ಅಲ್ಲಿ ಅಂತರ್ಜಾಲದ ಸಂಪರ್ಕ ಲಭ್ಯವಾಗುವುದೇ ಇಲ್ಲ ಆದರೆ ನಿಮ್ಮ ಲೊಕೇಷನ್ ನ್ನು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುತ್ತದೆ. ಇಂಟರ್ನೆಟ್ ಸೌಲಭ್ಯವಿದ್ದಿದ್ದರೆ ಖಂಡಿತ ವಾಟ್ಸ್ ಆಪ್ ಮೂಲಕ ಹಂಚಿಕೊಂಡು ಬಿಡಬಹುದಿತ್ತು.
ಆದರೆ ಈಗ ಹೇಗೆ ಹಂಚಿಕೊಳ್ಳುವುದು? ಅಂತರ್ಜಾಲದ ಸಂಪರ್ಕವಿದ್ದರೆ ಹಲವಾರು ರೀತಿಯಲ್ಲಿ ನಿಮ್ಮ ಲೊಕೇಷನ್ ನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಗೂಗಲ್ ಮ್ಯಾಪ್ ಕೂಡ ಇದಕ್ಕೆ ಅವಕಾಶ ನೀಡುತ್ತದೆ. ಆದರೆ ಕೇವಲ ನೆಟ್ ವರ್ಕ್ ಮಾತ್ರ ಲಭ್ಯವಿದ್ದು ಅಂತರ್ಜಾಲದ ಸಂಪರ್ಕವಿಲ್ಲದೆ ಇದ್ದಾಗ ಹೇಗೆ ಲೊಕೇಷನ್ ವಿವರವನ್ನು ಇತರರೊಡನೆ ಹಂಚಿಕೊಳ್ಳುವುದು?
ಇದೀಗ ಪರಿಚಿತವಾಗಿರುವ ಆರ್ ಸಿಎಸ್(ರಿಚ್ ಕಮ್ಯೂನಿಕೇಷನ್ ಸರ್ವೀಸ್) ಮೂಲಕ ಎಸ್ಎಂಎಸ್ ಸೌಲಭ್ಯವು ಹಲವು ರೀತಿಯ ಮಲ್ಟಿಮೀಡಿಯಾ ಕಂಟೆಂಟ್ ಗಳ ಶೇರಿಂಗ್ ಜೊತೆಗೆ ಲೊಕೇಷನ್ ಶೇರಿಂಗ್ ಗೂ ಕೂಡ ಅವಕಾಶ ನೀಡುತ್ತದೆ.ಎಸ್ಎಂಎಸ್ ಸೌಲಭ್ಯವು ಯಾವುದೇ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದೆಯೂ ಕೂಡ ಕಾರ್ಯ ನಿರ್ವಹಿಸುತ್ತದೆ ಎಂಬುದು ನಿಮಗೆ ಗೊತ್ತಿರುವ ಸಂಗತಿಯೇ ಆಗಿದೆ. ಇದೀಗ ಈ ಎಸ್ಎಂಎಸ್ ಸೌಲಭ್ಯವು ಅಂತರ್ಜಾಲದ ಸೌಲಭ್ಯವಿಲ್ಲದೆ ಲೊಕೇಷನ್ ಹಂಚಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶ ನೀಡುತ್ತದೆ.
ಬಹಳ ದಿನಗಳಿಂದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಮೂಲಕ ಲೊಕೇಷನ್ ಹಂಚಿಕೊಳ್ಳುವುದಕ್ಕೆ ಅವಕಾಶ ಸಿಗಬೇಕು ಎಂಬ ಫೀಚರ್ ಬಗ್ಗೆ ಕಾತುರತೆ ಇದ್ದೇ ಇತ್ತು. ನಾವು ಈ ಲೇಖನದಲ್ಲಿ ಎಸ್ಎಂಎಸ್ ಮೂಲಕ ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಹೇಗೆ ಲೊಕೇಷನ್ ಹಂಚಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಲೊಕೇಷನ್ ಹಂಚಿಕೊಳ್ಳುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
1.ಒಂದು ವೇಳೆ ಇದುವರೆಗೂ ನೀವು ಡೌನ್ ಲೋಡ್ ಮಾಡಿಲ್ಲದೆ ಇದ್ದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಮೆಸೇಜಸ್ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.
2.ಆಪ್ ನ್ನು ಮುಂದುವರಿಸಿರಿ ಮತ್ತು ಅಗತ್ಯವಾಗಿರುವ ಎಲ್ಲಾ ಅನುಮತಿಗಳನ್ನು ಕರುಣಿಸಿ. ಸ್ಮಾರ್ಟ್ ಫೋನಿನ ಡೀಫಾಲ್ಟ್ ಎಸ್ಎಂಎಸ್ ಆಪ್ ಆಗಿ ಸೆಟ್ ಮಾಡುವುದನ್ನು ಮರೆಯಬೇಡಿ.
3.ಸ್ಟಾರ್ಟ್ ಚಾಟ್ ಬಟನ್ ನ್ನು ಟ್ಯಾಪ್ ಮಾಡಿ.
4.ಫೋನ್ ನಂಬರ್ ನ್ನು ಮ್ಯಾನುವಲ್ ಆಗಿ ಎಂಟರ್ ಮಾಡಿ ಅಥವಾ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಆಯ್ಕೆ ಮಾಡಿ.
5.ಇದೀಗ ಚಾಟ್ ವಿಂಡೋದಲ್ಲಿರುವ '+’ ಐಕಾನ್ ನ್ನು ಟ್ಯಾಪ್ ಮಾಡಿ.
6.ಸ್ಕ್ರೋಲ್ ಡೌನ್ ಮಾಡಿ ಮ್ಯಾಪ್ಸ್ ಆಯ್ಕೆಯನ್ನು ಹುಡುಕಾಡಿ ಮತ್ತು ಅದನ್ನು ಟ್ಯಾಪ್ ಮಾಡಿ.
7.ಮುಂದಿನ ಪರದೆಯಲ್ಲಿ, 'ಸೆಂಡ್ ದಿಸ್ ಲೊಕೇಷನ್”’ ನ್ನು ಟ್ಯಾಪ್ ಮಾಡಿದರೆ ನೀವು ಆಯ್ಕೆ ಮಾಡಿರುವ ಕಾಂಟ್ಯಾಕ್ಟ್ ಗೆ ನಿಮ್ಮ ಲೊಕೇಷನ್ ಎಸ್ಎಂಎಸ್ ಮೂಲಕ ಹಂಚಿಕೆಯಾಗುತ್ತದೆ.
ಹೀಗೆ ಅಂತರ್ಜಾಲದ ಸೌಲಭ್ಯವಿಲ್ಲದೆ ಇದ್ದಾಗಲೂ ಕೂಡ ಎಸ್ಎಂಎಸ್ ಮೂಲಕ ನೀವು ನಿಮ್ಮ ಲೊಕೇಷನ್ ನ್ನು ಇತರರೊಡನೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790